ರಾಜ್ಯ ಘೋಷಕರು ವರದಿ ಮಾಡುತ್ತಾರೆ
ರಾಜ್ಯದ ಸುವಾರ್ತೆಯು ಸಾರಲಾಗುವದು
ಹಲವಾರು ಶತಮಾನಗಳಿಂದ ದೇವರ ಮುಖ್ಯ ಶತ್ರುವಾದ, ಪಿಶಾಚನಾದ ಸೈತಾನನು, ಸತ್ಯ ಕ್ರೈಸ್ತತ್ವದ ಹರಡುವಿಕೆಯನ್ನು ತಡೆಯುವ ಆತನ ಪ್ರಯತ್ನಗಳಲ್ಲಿ ರಾಜಕೀಯ ಸರಕಾರಗಳನ್ನು ಮತ್ತು ಸುಳ್ಳು ಧರ್ಮವನ್ನು ಕುಯುಕ್ತಿಯಿಂದ ಉಪಯೋಗಿಸಿದ್ದಾನೆ. ಆದರೆ ಈ ವಿಧಾನಗಳು ವಿಫಲವಾಗುವವು. “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು [“ಸಾರಲ್ಪಡಬಹುದು” ಅಥವಾ, “ಸಾರಲ್ಪಡುವ ಸಾಧ್ಯತೆಯಿದೆ” ಎಂದಲ್ಲ].”—ಮತ್ತಾಯ 24:14.
ಸೈತಾನನ ಅಪಜಯವು ಗ್ರೀಸ್ನಲ್ಲಿ ವ್ಯಕ್ತವಾಗಿದೆ. ಆ ದೇಶದಲ್ಲಿ ಗ್ರೀಕ್ ಆರ್ತೊಡಾಕ್ಸ್ ಚರ್ಚು ಯೆಹೋವನ ಸಾಕ್ಷಿಗಳು ರಾಜ್ಯದ ಸುವಾರ್ತೆಯನ್ನು ಸಾರುವದರಿಂದ ನಿರ್ಬಂಧಿಸಲು ಪ್ರಯತ್ನಿಸಿದೆ. ಆದರೆ ಮುಂದಿನ ಅನುಭವದಿಂದ ಎತ್ತಿತೋರಿಸಲಾದಂತೆ, ವಿರೋಧದ ಹೊರತೂ ಬೈಬಲ್ ಸತ್ಯಗಳು ಕಟ್ಟಕಡೆಗೆ ಪ್ರಾಮಾಣಿಕ ಹೃದಯದ ಜನರನ್ನು ತಲಪುತ್ತವೆ.
ಸುಮಾರು 30 ವರ್ಷಗಳ ಹಿಂದೆ, ಒಬ್ಬ ಗ್ರೀಕ್ ಆರ್ತೊಡಾಕ್ಸ್ ಪಾದ್ರಿ ಸುವಾರ್ತೆಯನ್ನು ಸ್ವೀಕರಿಸಿದನು ಮತ್ತು ಒಬ್ಬ ಯೆಹೋವನ ಸಾಕ್ಷಿಯಾಗುವ ಆಶೆಯನ್ನು ಸಹ ವ್ಯಕ್ತಪಡಿಸಿದನು. ಆದಾಗಲೂ, ಆತನ ಸಂಬಂಧಿಕರು ಈ ಹೆಜ್ಜೆಯನ್ನು ಬಲವಾಗಿ ವಿರೋಧಿಸಿದರು ಮತ್ತು ಸಾಕ್ಷಿಗಳೊಂದಿಗಿನ ಅವನ ಸಹವಾಸವನ್ನು ತೊರೆಯಲು ಒತ್ತಡ ಹಾಕಿದರು. ತನ್ನ ಕುಟುಂಬವನ್ನು ಸಂತೋಷಪಡಿಸಲು, ಒಬ್ಬ ಪಾದ್ರಿಯಾಗಿ ತನ್ನ ಜೀವನೋದ್ಯೊಗದ ಬೆನ್ನಟ್ಟುವಿಕೆಯನ್ನು ಆತನು ಮುಂದುವರಿಸಿದನು; ಆದರೂ, ಯೆಹೋವನ ಸಾಕ್ಷಿಗಳು ತನಗೆ ಸತ್ಯವನ್ನು ಕಲಿಯಲು ಸಹಾಯ ಮಾಡಿದ್ದರು ಮತ್ತು ತಾನು ಆದನ್ನು ಸುಳ್ಳು ಧರ್ಮವೊಂದರಲ್ಲಿ ಪ್ರತಿಷ್ಠಿತ ಸ್ಥಾನಕ್ಕೆ ಬದಲಾಗಿ ಬಿಟ್ಟುಕೊಟ್ಟಿದ್ದೆ ಎಂಬದನ್ನು ಅವನು ಯಾವಾಗಲು ಅಂಗೀಕರಿಸಿದನು.
ಆದರೂ, ಸಂದರ್ಭವೆದ್ದಂತೆ, ಅವನು ಕೆಲವೊಮ್ಮೆ ಯೆಹೋವನ ಸಾಕ್ಷಿಗಳ ಪರವಾಗಿ ಮಾತಾಡುತ್ತಿದ್ದನು. ಅವರು ಬೈಬಲ್ ಸತ್ಯಗಳನ್ನು ಕಲಿಯಲು ಬಯಸುವದಾದರೆ, ಅವರು ಸಾಕ್ಷಿಗಳೊಂದಿಗೆ ಅಭ್ಯಾಸಿಸಬೇಕೆಂದು ಆತನು ಅನೇಕ ಸಂದರ್ಭಗಳಲ್ಲಿ ಜನರಿಗೆ ಬುದ್ಧಿಹೇಳುತ್ತಿದ್ದನು. ವರ್ಷಗಳು ಸಂದಂತೆ ಕೆಲವರು ಆತನ ಶಿಫಾರಸ್ಸನ್ನು ನಿಜವಾಗಿ ಅನುಸರಿಸಿದರು.
ಇತ್ತೀಚೆಗೆ ಪಾದ್ರಿಯು ತುಂಬ ಅಸ್ವಸ್ಥನಾದನು ಮತ್ತು ತಾನು ಬೇಗನೇ ಸಾಯುವೆನೆಂದು ಗ್ರಹಿಸಿದನು. ಆಸ್ಪತ್ರೆಯಲ್ಲಿದ್ದಾಗ, ಆತನು ತನ್ನ ಮಕ್ಕಳನ್ನು ಕರೆದನು ಮತ್ತು ಅವರೆಲ್ಲರೂ ಆತನ ಮಂಚದ ಬಳಿ ಒಟ್ಟುಗೂಡಿದರು.a ಆಗ, ಆತನು ಸತ್ತರೂ, ಅವರು ಆತನನ್ನು ಪುನಃ ಭೇಟಿಯಾಗಬಹುದೆಂದು ಅವನು ಆವರಿಗೆ ವಿವರಿಸಿದನು. ಭೂಮಿಯ ಮೇಲೆ ಒಂದು ಪ್ರಮೋದವನದಲ್ಲಿ ಜೀವಿಸಲು ಮಾನವರು ಯೆಹೋವನಿಂದ ಪುನರುತ್ಥಾನಗೊಳಿಸಲ್ಪಡುವ ಬೈಬಲಿನ ಬೋಧನೆಯ ಕುರಿತಾಗಿ ಅವರೊಂದಿಗೆ ಮಾತಾಡಿದನು, ಆದರೆ ಅದು ಸಂಭವಿಸುವದನ್ನು ಅವರು ನಿಜವಾಗಿ ನೋಡಲು ಬಯಸುವದಾದರೆ ಅವರು ಬೈಬಲಿನಿಂದ ಸತ್ಯವನ್ನು ಕಲಿತು ಸುಳ್ಳು ಧರ್ಮದಿಂದ ತಮ್ಮನ್ನು ಬೇರ್ಪಡಿಸಿಕೊಳ್ಳಲೇಬೇಕು. ಯೆಹೋವನ ಸಾಕ್ಷಿಗಳೊಂದಿಗೆ ಸಹವಸಿಸಿ ಯಥಾರ್ಥ ಕ್ರೈಸ್ತರಾಗುವದು ಹೇಗೆಂಬದನ್ನು ಅವರಿಂದ ಕಲಿಯುವಂತೆ ಆತನು ಅವರನ್ನು ಬೇಡಿಕೊಂಡನು.
ಸ್ವಲ್ಪ ಸಮಯಾನಂತರ ಪಾದ್ರಿಯು ಸತ್ತನು. ಆದಾಗಲೂ, ಆತನು ಬೀಳ್ಕೊಡುವಾಗ ತನ್ನ ಮಕ್ಕಳಿಗೆ ಕೊಟ್ಟ ಬುದ್ಧಿವಾದವು ಒಳ್ಳೆಯ ಪರಿಣಾಮಗಳನ್ನು ಕೊಯ್ಯಿತು. ಅವನ ಮಗಳು, ಆತನ ಹೆಚ್ಚಿನ ಸಂಬಂಧಿಕರಂತೆ, ಯೆಹೋವನ ಸಾಕ್ಷಿಗಳು ಮತ್ತು ಅವರ ಕೆಲಸಕ್ಕೆ ತುಂಬಾ ವಿರೋಧವಾಗಿದ್ದಳು. ಆದರೆ ತನ್ನ ಸಾಯುತ್ತಿರುವ ತಂದೆಯ ಪ್ರಾಮಾಣಿಕ ಬೇಡಿಕೆಯನ್ನು ಅವಳು ಅಲಕ್ಷಿಸಲಾರದಾದಳು, ಆದುದರಿಂದ ಅವಳು ಬೇಗನೇ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿದಳು ಮತ್ತು ಬೈಬಲನ್ನು ಅಭ್ಯಾಸಿಸಲಾರಂಭಿಸಿದಳು. ಯೆಹೋವ ದೇವರಿಗೆ ತನ್ನ ಜೀವವನ್ನು ಸಮರ್ಪಿಸಿ ಅವಳ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದಿಂದ ಸೂಚಿಸುವ ಮೂಲಕ, ಇತ್ತೀಚೆಗೆ ಆಕೆ ಸ್ವತಃ ಒಬ್ಬ ಸಾಕ್ಷಿಯಾದಳು.
ಗ್ರೀಸ್ನಲ್ಲಿ ಮತ್ತು ಇನ್ನಿತರ 230 ಕ್ಕಿಂತ ಹೆಚ್ಚಿನ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳು ದೇವರ ಪವಿತ್ರಾತ್ಮದ ಶಕ್ತಿಯ ಮೇಲೆ ಆತುಕೊಳ್ಳುತ್ತಾರೆ. ಪವಿತ್ರಾತ್ಮದ ಪೂರ್ಣ ಬೆಂಬಲದೊಂದಿಗೆ ಅವರು ಯೇಸುವಿನ ಈ ಪ್ರವಾದನೆಯ ನೆರವೇರಿಕೆಯಲ್ಲಿ ಪಾಲುಗಾರರಾಗುತ್ತಾರೆ: “ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.”—ಅ. ಕೃತ್ಯಗಳು 1:8.
[ಅಧ್ಯಯನ ಪ್ರಶ್ನೆಗಳು]
a ಗ್ರೀಕ್ ಆರ್ತೊಡಾಕ್ಸ್ ಚರ್ಚ್ ತನ್ನ ಪಾದ್ರಿಗಳು ವಿವಾಹವಾಗಲು ಅನುಮತಿಸುತ್ತದೆ.