“ಚಿಕ್ಕ ಹಿಂಡೇ, ಹೆದರಬೇಡ”
“ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.”—ಲೂಕ 12:32.
1. “ಚಿಕ್ಕ ಹಿಂಡೇ, ಹೆದರಬೇಡ” ಎಂಬ ಯೇಸುವಿನ ಮಾತುಗಳ ಆಧಾರವು ಏನಾಗಿತ್ತು?
ಯೇಸುವು, “[ದೇವರ] ರಾಜ್ಯವನ್ನು ಎಡೆಬಿಡದೆ ಹುಡುಕಿರಿ,” ಎಂಬ ಈ ಮಾತುಗಳನ್ನು ತನ್ನ ಶಿಷ್ಯರಿಗೆ ಹೇಳಿದಾಗ, ಆತನ ದಿನಗಳಿಂದ ನಮ್ಮ ದಿನಗಳ ತನಕದ ಕ್ರೈಸ್ತರ ಯೋಚನೆಯನ್ನು ಮಾರ್ಗದರ್ಶಿಸಿದ ಒಂದು ತತ್ವವನ್ನು ಆತನು ವ್ಯಕ್ತಪಡಿಸಿದನು. (ಲೂಕ 12:31, NW) ದೇವರ ರಾಜ್ಯವು ನಮ್ಮ ಜೀವನದಲ್ಲಿ ಅತಿ ಪ್ರಥಮ ಸ್ಥಾನವನ್ನು ತೆಗೆದುಕೊಳ್ಳಬೇಕು. (ಮತ್ತಾಯ 6:33) ಲೂಕನ ವೃತ್ತಾಂತದಲ್ಲಾದರೊ, ಕ್ರೈಸ್ತರ ಒಂದು ವಿಶೇಷ ಗುಂಪಿಗೆ ಯೇಸು ಅಕ್ಕರೆಯ ಮತ್ತು ಪುನರಾಶ್ವಾಸನೆಯ ಮಾತುಗಳನ್ನಾಡುತ್ತಾ ಹೋದನು. ಆತನಂದದ್ದು: “ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.” (ಲೂಕ 12:32) ತನ್ನ ಅತ್ಯಾಪ್ತ ಶಿಷ್ಯರಿಗೆ ಮುಂದಕ್ಕೆ ಸಂಕಷ್ಟದ ಸಮಯಗಳು ಇರುವುವು ಎಂದು ಒಳ್ಳೇ ಕುರುಬನಾದ ಯೇಸುವಿಗೆ ತಿಳಿದಿತ್ತು. ಆದರೆ ಅವರು ದೇವರ ರಾಜ್ಯವನ್ನು ಹುಡುಕುತ್ತಾ ಹೋದರೆ ಅವರಿಗೆ ಹೆದರುವ ಕಾರಣವಿದ್ದಿಲ್ಲ. ಆದಕಾರಣ ಯೇಸುವಿನ ಬುದ್ಧಿವಾದವು ಒಂದು ಕಠಿನವಾದ ಆಜ್ಞೆಯಲ್ಲ. ಬದಲಾಗಿ, ಭರವಸೆ ಮತ್ತು ಧೈರ್ಯವನ್ನು ಪ್ರೇರಿಸಲು ಸಾಧನವಾದ ಪ್ರೀತಿಯ ಒಂದು ವಾಗ್ದಾನವಾಗಿತ್ತು.
2. ಚಿಕ್ಕ ಹಿಂಡಿನಲ್ಲಿ ಯಾರು ಸೇರಿರುತ್ತಾರೆ ಮತ್ತು ಅವರು ವಿಶೇಷ ಸುಯೋಗವುಳ್ಳವರೇಕೆ?
2 ಯೇಸು ತನ್ನ ಶಿಷ್ಯರೊಂದಿಗೆ ಮಾತಾಡುತ್ತಿದ್ದನು, ಮತ್ತು ಅವನು ಅವರನ್ನು ಒಂದು “ಚಿಕ್ಕ ಹಿಂಡು” ಎಂದು ಕರೆದನು. ಯಾರಿಗೆ ಯೆಹೋವನು ‘ರಾಜ್ಯವನ್ನು ಕೊಡುವನೊ’ ಅವರೊಂದಿಗೂ ಅವನು ಮಾತಾಡುತ್ತಿದ್ದನು. ತರುವಾಯದ ಸಮಯದಲ್ಲಿ ಯೇಸುವನ್ನು ಸ್ವೀಕರಿಸಲಿದ್ದ ಜನಸಮುದಾಯದೊಂದಿಗೆ ತುಲನಾತ್ಮಕವಾಗಿ, ಈ ಗುಂಪು ಸಂಖ್ಯೆಯಲ್ಲಿ ನಿಶ್ಚಯವಾಗಿ ಚಿಕ್ಕದಾಗಿತ್ತು. ಅವರನ್ನು ಅಮೂಲ್ಯರೆಂದೂ ಪರಿಗಣಿಸಲಾಗಿದೆ ಯಾಕಂದರೆ ಅವರೊಂದು ವಿಶೇಷ ರೀತಿಯ ಭವಿಷ್ಯಕ್ಕೆ, ರಾಜಯೋಗ್ಯ ಸೇವೆಯಲ್ಲಿ ಬಳಸಲ್ಪಡಲು ಆಯ್ಕೆಹೊಂದಿದ್ದಾರೆ. ಅವರ ತಂದೆ, ಮಹಾ ಕುರುಬನಾದ ಯೆಹೋವನು, ಕ್ರಿಸ್ತನ ಮೆಸ್ಸೀಯ ಸಂಬಂಧಿತ ರಾಜ್ಯದ ಸಂಬಂಧದಲ್ಲಿ ಅವರು ಸ್ವರ್ಗೀಯ ಸ್ವಾಸ್ಥ್ಯವೊಂದನ್ನು ಪಡೆಯುವ ನೋಟದಲ್ಲಿ ಅವರನ್ನು ಚಿಕ್ಕ ಹಿಂಡು ಎಂದು ಕರೆಯುತ್ತಾನೆ.
ಚಿಕ್ಕ ಹಿಂಡು
3. ಚಿಕ್ಕ ಹಿಂಡಿನ ಯಾವ ಮಹಿಮಾಭರಿತ ದರ್ಶನವನ್ನು ಯೋಹಾನನು ಕಂಡನು?
3 ಹಾಗಾದರೆ, ಅಂತಹ ಒಂದು ಆಶ್ಚರ್ಯಕರ ಪ್ರತೀಕ್ಷೆಯುಳ್ಳ ಈ ಚಿಕ್ಕ ಹಿಂಡಿನಲ್ಲಿ ಯಾರಿದ್ದಾರೆ? ಪವಿತ್ರಾತ್ಮದ ಅಭಿಷೇಕವನ್ನು ಪಡೆಯುವ ಯೇಸು ಕ್ರಿಸ್ತನ ಹಿಂಬಾಲಕರೇ. (ಅ. ಕೃತ್ಯಗಳು 2:1-4) ಕೈಗಳಲ್ಲಿ ವೀಣೆಗಳನ್ನು ಹಿಡಿದುಕೊಂಡ ಸ್ವರ್ಗೀಯ ಗಾಯಕರಾಗಿ ಅವರನ್ನು ನೋಡುತ್ತಾ, ಅಪೊಸ್ತಲ ಯೋಹಾನನು ಬರೆದದ್ದು: “ನಾನು ನೋಡಲಾಗಿ ಯಜ್ಞದ ಕುರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು. ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ; ಇವರು ಕನ್ಯೆಯರಂತೆ ನಿಷ್ಕಳಂಕರು. ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು. ಇವರು ಮನುಷ್ಯರೊಳಗಿಂದ ಸಕ್ವೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮಫಲದಂತಾದರು. ಇವರ ಬಾಯಲ್ಲಿ ಸುಳ್ಳುಸಿಕ್ಕಲಿಲ್ಲ; ಇವರು ನಿರ್ದೋಷಿಗಳಾಗಿದ್ದಾರೆ.”—ಪ್ರಕಟನೆ 14:1, 4, 5.
4. ಇಂದು ಭೂಮಿಯಲ್ಲಿ ಚಿಕ್ಕ ಹಿಂಡಿಗೆ ಯಾವ ಸ್ಥಾನವು ಇದೆ?
4 ಸಾ.ಶ. 33ರ ಪಂಚಾಶತ್ತಮದಿಂದ, ಈ ಆತ್ಮ ಜನಿತ ಅಭಿಷಿಕ್ತರು ಭೂಮಿಯಲ್ಲಿ ಕ್ರಿಸ್ತನ ರಾಯಭಾರಿಗಳಾಗಿ ಕಾರ್ಯನಡಿಸಿದ್ದಾರೆ. (2 ಕೊರಿಂಥ 5:20) ಇಂದು, ಅವರಲ್ಲಿ ಉಳಿಕೆಯವರು ಮಾತ್ರ ಉಳಿದಿದ್ದು, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವಾಗಿ ಒಂದುಗೂಡಿ ಕಾರ್ಯನಡಿಸುತ್ತಿದ್ದಾರೆ. (ಮತ್ತಾಯ 24:45; ಪ್ರಕಟನೆ 12:17) ವಿಶಿಷ್ಟವಾಗಿ 1935ರ ವರ್ಷದಿಂದ, ಈಗ ಲಕ್ಷಾಂತರ ಸಂಖ್ಯೆಯಲ್ಲಿರುವ ಭೂನಿರೀಕ್ಷೆಯುಳ್ಳ ಕ್ರೈಸ್ತರಾದ “ಬೇರೆ ಕುರಿ” ಗಳಿಂದ ಅವರು ಜತೆಗೂಡಲ್ಪಟ್ಟಿದ್ದಾರೆ. ಇವರು ಭೂಮಿಯಲ್ಲೆಲ್ಲ ಸುವಾರ್ತೆಯನ್ನು ಸಾರುವುದರಲ್ಲಿ ನೆರವಾಗುತ್ತಾರೆ.
5. ಚಿಕ್ಕ ಹಿಂಡಿನಲ್ಲಿ ಉಳಿದವರ ಮನೋಭಾವವು ಏನಾಗಿದೆ, ಮತ್ತು ಅವರಿಗೆ ಹೆದರುವ ಅಗತ್ಯವಿಲ್ಲವೇಕೆ?
5 ಭೂಮಿಯ ಮೇಲೆ ಇನ್ನೂ ಇರುವ ಈ ಚಿಕ್ಕ ಹಿಂಡಿನ ಸದಸ್ಯರ ಮನೋಭಾವವೇನು? ‘ಕದಲಿಸಲಾರದ ರಾಜ್ಯ’ ವೊಂದನ್ನು ತಾವು ಪಡೆಯಲಿರುತ್ತೇವೆಂದು ಅರಿತವರಾಗಿ, ದಿವ್ಯ ಭಯ ಮತ್ತು ಭಯಭಕ್ತಿಯಿಂದ ಅವರು ತಮ್ಮ ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೆ. (ಇಬ್ರಿಯ 12:28) ಅಪರಿಮಿತ ಆನಂದವನ್ನು ಫಲಿಸುವ, ಅಮೂಲ್ಯವಾದ ಸುಯೋಗವು ತಮ್ಮದೆಂದು ಅವರು ನಮ್ರತೆಯಿಂದ ಗ್ರಹಿಸುತ್ತಾರೆ. ರಾಜ್ಯದ ಕುರಿತು ಮಾತನಾಡಿದಾಗ ಯೇಸುವಿನಿಂದ ನಿರ್ದೇಶಿಸಲ್ಪಟ್ಟ “ಬಹುಬೆಲೆಯುಳ್ಳ ಒಂದು ಮುತ್ತನ್ನು” ಅವರು ಕಂಡುಕೊಂಡಿದ್ದಾರೆ. (ಮತ್ತಾಯ 13:46) ಮಹಾ ಸಂಕಟವು ಸಮೀಪಿಸುತ್ತಾ ಇರುವಾಗ, ದೇವರ ಅಭಿಷಿಕ್ತರು ನಿರ್ಭಯವಾಗಿ ನಿಲ್ಲುವರು. “ಕರ್ತನ [ಯೆಹೋವನ, NW] ಆಗಮನದ ಗಂಭೀರವಾದ ಮಹಾ ದಿನ” ದಲ್ಲಿ ಮಾನವಕುಲದ ಲೋಕದ ಮೇಲೆ ಏನೇ ಬರಲಿ, ಅವರಿಗೆ ಭವಿಷ್ಯದ ಯಾವುದೆ ವಿಕಾರವಾದ ಭೀತಿ ಇಲ್ಲ. (ಅ. ಕೃತ್ಯಗಳು 2:19-21) ಅವರು ಯಾಕೆ ಭಯಪಡಬೇಕು?
ಸಂಖ್ಯೆ ಕಡಿಮೆಯಾಗುತ್ತಿದೆ
6, 7. (ಎ) ಇಂದು ಇನ್ನೂ ಭೂಮಿಯಲ್ಲಿರುವ ಚಿಕ್ಕ ಹಿಂಡಿನ ಸಂಖ್ಯೆಯು ತೀರ ಚಿಕ್ಕದಾಗಿದೆಯೇಕೆ? (ಬಿ) ಪ್ರತಿಯೊಬ್ಬನು ವ್ಯಕ್ತಿಶಃ ತನಗಿರುವ ನಿರೀಕ್ಷೆಯನ್ನು ಹೇಗೆ ವೀಕ್ಷಿಸಬೇಕು?
6 ಭೂಮಿಯಲ್ಲಿ ಇನ್ನೂ ಇರುವ ಚಿಕ್ಕ ಹಿಂಡಿನ ಸಂಖ್ಯೆಯು ಇತ್ತೀಚಿನ ವರ್ಷಗಳಲ್ಲಿ ತೀರ ಚಿಕ್ಕದ್ದಾಗಿದೆ. ಇದು 1994ರ ಸ್ಮಾರಕ ವರದಿಯಿಂದ ಸ್ವಷ್ಟವಾಗುತ್ತಿದೆ. ಜಗದ್ವ್ಯಾಪಕವಾಗಿ ಇರುವ ಯೆಹೋವನ ಜನರ ಸುಮಾರು 75,000 ಸಭೆಗಳಲ್ಲಿ ಕೇವಲ 8,617 ಮಂದಿ ಮಾತ್ರ, ತಾವು ಉಳಿಕೆಯವರ ಸದಸ್ಯರೆಂದು ಹೇಳುವ ದ್ಯೋತಕಗಳಲ್ಲಿ ಪಾಲು ತೆಗೆದುಕೊಳ್ಳುವ ಮೂಲಕ ಪ್ರದರ್ಶಿಸಿದರು. (ಮತ್ತಾಯ 26:26-30) ತುಲನಾತ್ಮಕವಾಗಿ, ಒಟ್ಟು ಉಪಸ್ಥಿತಿಯು 1,22,88,917 ಆಗಿತ್ತು. ಇದನ್ನು ನಿರೀಕ್ಷಿಸಲಾಗುತ್ತದೆಂದು ಅಭಿಷಿಕ್ತ ಕ್ರೈಸ್ತರು ತಿಳಿದಿದ್ದಾರೆ. ಚಿಕ್ಕ ಹಿಂಡಿನಲ್ಲಿ ಒಂದು ಸೀಮಿತ ಸಂಖ್ಯೆಯಾದ 1,44,000 ಮಂದಿ ಇರುವಂತೆ ಯೆಹೋವನು ಏರ್ಪಡಿಸಿದ್ದಾನೆ, ಮತ್ತು ಸಾ.ಶ. 33ರ ಪಂಚಾಶತ್ತಮದಿಂದ ಆತನು ಅದನ್ನು ಒಟ್ಟುಗೂಡಿಸುತಲ್ತಿದ್ದಾನೆ. ತರ್ಕಬದ್ಧವಾಗಿ, ಚಿಕ್ಕ ಹಿಂಡಿಗಾಗಿ ಕರೆಯು ಅದರ ಸಂಖ್ಯೆಯು ಪೂರ್ತಿಗೊಳ್ಳಲು ಹತ್ತಿರವಾಗುವಾಗ ಕೊನೆಗೊಳ್ಳುವುದು, ಪ್ರತ್ಯಕ್ಷವಾಗಿ, ಈ ವಿಶೇಷ ಆಶೀರ್ವದಿತರ ಸಾಮಾನ್ಯ ಒಟ್ಟುಗೂಡಿಸುವಿಕೆ 1935 ರಲ್ಲಿ ಮುಗಿಯಿತೆಂಬುದು ಸುವ್ಯಕ್ತ. ಆದರೂ, ಅಂತ್ಯಕಾಲದಲ್ಲಿ ಬೇರೆ ಕುರಿಗಳು ‘ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿರುವ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ’ ವಾಗಿ ಬೆಳೆಯುವರೆಂದು ಪ್ರವಾದಿಸಲ್ಪಟ್ಟಿದ್ದಾರೆ. ಯೆಹೋವನಿಂದ 1935 ರಿಂದ ಸಾಮಾನ್ಯ ಒಟ್ಟುಗೂಡಿಸುವಿಕೆಯು, ಭೂಪ್ರಮೋದವನದಲ್ಲಿ ನಿತ್ಯಜೀವದ ನಿರೀಕ್ಷೆಯಿರುವ ಈ ಮಹಾ ಸಮೂಹದವರದ್ದಾಗಿದೆ.—ಪ್ರಕಟನೆ 7:9; 14:15, 16; ಕೀರ್ತನೆ 37:29.
7 ಇನ್ನೂ ಭೂಮಿಯಲ್ಲಿರುವ ಚಿಕ್ಕ ಹಿಂಡಿನವರಾದ ಹೆಚ್ಚಿನವರು ಈಗ ತಮ್ಮ 70ರ 80ರ ಮತ್ತು 90ರ ವಯಸ್ಸಿನಲ್ಲಿದ್ದಾರೆ. ಕೆಲವರು ತಮ್ಮ ಜೀವನದ 100 ನೆಯ ವರ್ಷವನ್ನೂ ದಾಟಿರುತ್ತಾರೆ. ಅವರ ವಯಸ್ಸು ಎಷ್ಟೇ ಇರಲಿ, ಇವರೆಲ್ಲರಿಗೆ ತಿಳಿದದೆ ಏನಂದರೆ ಒಂದು ಸ್ವರ್ಗೀಯ ಪುನರುತ್ಥಾನದ ಮೂಲಕ ಕಟ್ಟಕಡೆಗೆ ಅವರು ಕ್ರಿಸ್ತನೊಂದಿಗೆ ಐಕ್ಯರಾಗಿ ಅವನ ಮಹಿಮೆಯುಳ್ಳ ರಾಜ್ಯದಲ್ಲಿ ಅವನೊಂದಿಗೆ ಆಳುವರು. ಮಹಾ ಸಮೂಹದವರು ಅರಸನಾದ ಕ್ರಿಸ್ತನ ಐಹಿಕ ಪ್ರಜೆಗಳಾಗಿ ಇರುವರು. ಆತನನ್ನು ಪ್ರೀತಿಸುವವರಿಗಾಗಿ ಯೆಹೋವನು ಏನನ್ನು ಕಾದಿರಿಸಿದ್ದಾನೊ ಅದರಲ್ಲಿ ಪ್ರತಿಯೊಬ್ಬನು ಉಲ್ಲಾಸಪಡಲಿ. ಯಾವ ನಿರೀಕ್ಷೆಯು ನಮ್ಮದೆಂದು ಆರಿಸಿಕೊಳ್ಳುವುದು ನಮಗೆ ಸೇರಿದುದಲ್ಲ. ಅದನ್ನು ನಿರ್ಧರಿಸುವಾತನು ಯೆಹೋವನು. ಅದು ಸ್ವರ್ಗೀಯ ರಾಜ್ಯದಲ್ಲಿರಲಿ ಇಲ್ಲವೆ ಆ ರಾಜ್ಯದ ಕೆಳಗಣ ಭೂಪ್ರಮೋದವನದಲ್ಲಿರಲಿ, ಎರಡೂ ಗುಂಪುಗಳು ತಮ್ಮ ಸಂತೋಷದ ಭವಿಷ್ಯದ ನಿರೀಕ್ಷೆಯಲ್ಲಿ, ಪುಳಕಿತಗೊಳ್ಳಬಲ್ಲವು.—ಯೋಹಾನ 6:44, 65; ಎಫೆಸ 1:17, 18.
8. 1,44,000 ಮಂದಿಯ ಮುದ್ರೆ ಒತ್ತುವಿಕೆಯು ಎಷ್ಟರ ಮಟ್ಟಿಗೆ ಮುಂದುವರಿದಿದೆ? ಮತ್ತು ಅದು ಮುಗಿಯುವಾಗ ಏನು ಸಂಭವಿಸುವುದು?
8 ಈ ಚಿಕ್ಕ ಹಿಂಡಿನ 1,44,000 ಮಂದಿಯ ತಂಡವು “ದೇವರ ಇಸ್ರಾಯೇಲ್” ಆಗಿದ್ದು, ದೇವರ ಉದ್ದೇಶಗಳಲ್ಲಿ ಮಾಂಸಿಕ ಇಸ್ರಾಯೇಲನ್ನು ಸ್ಥಾನಪಲ್ಲಟಗೊಳಿಸಿದೆ. (ಗಲಾತ್ಯ 6:16) ಆದುದರಿಂದ, ಉಳಿಕೆಯವರು ಭೂಮಿಯ ಮೇಲೆ ಇನ್ನೂ ಇರುವ ಆ ಆತ್ಮಿಕ ಇಸ್ರಾಯೇಲಿನಲ್ಲಿ ಉಳಿದವರು. ಅಂತಹ ಉಳಿದವರಿಗೆ ಯೆಹೋವನ ಕೊನೆಯ ಒಪ್ಪಿಗೆಗಾಗಿ ಮುದ್ರೆ ಒತಲ್ತಾಗುತ್ತಿದೆ. ಇದು ಸಂಭವಿಸುವುದನ್ನು ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ ಕಂಡು, ವರದಿಸಿದ್ದು: “ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡುಕೊಂಡು ಮೂಡಣದಿಕ್ಕಿನಿಂದ ಏರಿಬರುವದನ್ನು ಕಂಡೆನು. ಅವನು ಭೂಮಿಯನ್ನೂ ಸಮುದ್ರವನ್ನೂ ಕೆಡಿಸುವದಕ್ಕೆ ಅಧಿಕಾರಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ—ನಾವು ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ಮುದ್ರೆ ಒತ್ತುವತನಕ ಭೂಮಿಯನ್ನಾಗಲಿ ಸಮುದ್ರವನ್ನಾಗಲಿ ಮರಗಳನ್ನಾಗಲಿ ಕೆಡಿಸಬೇಡಿರಿ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು. ಮುದ್ರೆಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ನಾನು ಕೇಳಿದೆನು. [ಆತ್ಮಿಕ] ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಒತ್ತಿಸಿಕೊಂಡರು. ಅವರ ಸಂಖ್ಯೆ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ.” (ಪ್ರಕಟನೆ 7:2-4) ಆತ್ಮಿಕ ಇಸ್ರಾಯೇಲಿನ ಈ ಮುದ್ರೆ ಒತ್ತುವ ಕಾರ್ಯವು ಪ್ರತ್ಯಕ್ಷವಾಗಿ ಅದರ ಕೊನೆಯನ್ನು ಸಮೀಪಿಸುತ್ತಿರುವುದರಿಂದ, ಬೇಗನೆ ಸಂಭವಿಸುವ ಉತ್ತೇಜಕ ಘಟನೆಗಳು ಮುಂದೋರುತ್ತಿವೆ. ಒಂದು ಸಂಗತಿಯೇನಂದರೆ, ಭೂಮಿಯ ಮೇಲೆ ನಾಶನದ ಚತುರ್ದಿಕ್ಕುಗಳ ಗಾಳಿಗಳನ್ನು ಬಿಡುಗಡೆಗೊಳಿಸುವಾಗ, “ಮಹಾ ಸಂಕಟವು” ಅತಿ ಹತ್ತಿರವಾಗಿರಲೇಬೇಕು.—ಪ್ರಕಟನೆ 7:14.
9. ಮಹಾ ಸಮೂಹದ ಸಂಖ್ಯಾಭಿವೃದ್ಧಿಯನ್ನು ಚಿಕ್ಕ ಹಿಂಡು ಹೇಗೆ ವೀಕ್ಷಿಸುತ್ತದೆ?
9 ಮಹಾ ಸಮೂಹದವರು ಈವಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಒಟ್ಟುಗೂಡಿಸಲ್ಪಟ್ಟಿದ್ದಾರೆ. ಇದು ಉಳಿಕೆಯವರ ಹೃದಯಗಳನ್ನು ಎಷ್ಟು ಮುದಗೊಳಿಸುತ್ತದೆ! ಭೂಮಿಯಲ್ಲಿ ಇನ್ನೂ ಇರುವ ಚಿಕ್ಕ ಹಿಂಡಿನವರು ಸಂಖ್ಯೆಯಲ್ಲಿ ಕಡಮೆಯಾಗುತ್ತಾ ಬರುತ್ತಾರಾದರೂ, ದೇವರ ವಿಸ್ತರಿಸುತ್ತಿರುವ ಐಹಿಕ ಸಂಸ್ಥೆಯ ಸಂಬಂಧದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಲು ಮಹಾ ಸಮೂಹದ ಯೋಗ್ಯತೆಯುಳ್ಳ ಪುರುಷರನ್ನು ಅವರು ತರಬೇತು ಮಾಡಿ, ಸಿದ್ಧಗೊಳಿಸಿದ್ದಾರೆ. (ಯೆಶಾಯ 61:5) ಯೇಸು ಸೂಚಿಸಿದಂತೆ, ಮಹಾ ಸಂಕಟದಿಂದ ಪಾರಾಗುವವರು ಇರುವರು.—ಮತ್ತಾಯ 24:22.
“ಹೆದರಬೇಡ”
10. (ಎ) ದೇವರ ಜನರ ಮೇಲೆ ಯಾವ ಆಕ್ರಮಣವು ಬೀಳಲಿಕ್ಕಿದೆ, ಮತ್ತು ಅದು ಯಾವುದಕ್ಕೆ ನಡಿಸುವುದು? (ಬಿ) ನಮ್ಮಲ್ಲಿ ಪ್ರತಿಯೊಬ್ಬರಿಗೆ ಯಾವ ಪ್ರಶ್ನೆಗಳು ಕೇಳಲಾಗಿವೆ?
10 ಸೈತಾನನು ಮತ್ತು ಆತನ ದೆವ್ವಗಳು ಭೂಮಿಯ ಪರಿಸರಕ್ಕೆ ದೊಬ್ಬಲ್ಪಟ್ಟಿದ್ದಾರೆ. ಅವನು ಮತ್ತು ಅವನ ಪಡೆಗಳು ಯೆಹೋವನ ಜನರ ಮೇಲೆ ಸರ್ವ ಶಕ್ತಿಯನ್ನುಪಯೋಗಿಸಿ ತಮ್ಮ ದಾಳಿಯನ್ನು ಮಾಡುವಂತೆ ಚಲಾಯಿಸಲ್ಪಡುತ್ತಿವೆ. ಬೈಬಲಿನಲ್ಲಿ ಮುಂತಿಳಿಸಲ್ಪಟ್ಟ ಈ ಆಕ್ರಮಣವನ್ನು, ಮಾಗೋಗದ ಗೋಗನ ಆಕ್ರಮಣವೆಂದು ವರ್ಣಿಸಲಾಗುತ್ತದೆ. ಪಿಶಾಚನು ತನ್ನ ಆಕ್ರಮಣವನ್ನು ವಿಶೇಷವಾಗಿ ಯಾರ ಮೇಲೆ ಕೇಂದ್ರೀಕರಿಸುವನು? ಅದು “ಭೂಮಿಯ ನಟ್ಟನಡುವೆ” ಸಮಾಧಾನದಿಂದ ವಾಸಿಸುತ್ತಿರುವ, ಚಿಕ್ಕಹಿಂಡಿನ ಕೊನೆಯ ಸದಸ್ಯರಾದ ದೇವರ ಆತ್ಮಿಕ ಇಸ್ರಾಯೇಲಿನ ಮೇಲೆಯೆ ಆಗಿದೆಯಲ್ಲವೇ? (ಯೆಹೆಜ್ಕೇಲ 38:1-12) ಹೌದು, ಆದರೆ ನಂಬಿಗಸ್ತ ಅಭಿಷಿಕ್ತ ವರ್ಗದವರ ಉಳಿಕೆಯವರು ತಮ್ಮ ನಿಷ್ಠೆಯ ಸಂಗಾತಿಗಳಾದ ಬೇರೆ ಕುರಿಗಳೊಂದಿಗೆ, ಸೈತಾನನ ಆಕ್ರಮಣವು ಯೆಹೋವ ದೇವರಿಂದ ಒಂದು ನಾಟಕೀಯ ಪ್ರತಿಕ್ರಿಯೆಯನ್ನು ಹೇಗೆ ತರ್ವೆಗೊಳಿಸುತ್ತದೆಂಬುದನ್ನು ಕಣ್ಣಾರೆಕಾಣುವರು. ಆತನು ತನ್ನ ಜನರ ರಕ್ಷಣೆಗಾಗಿ ಹಸ್ತಕ್ಷೇಪಮಾಡುವನು ಮತ್ತು ಇದು “ಯೆಹೋವನ ಆಗಮನದ ಭಯಂಕರವಾದ ಮಹಾದಿನ”ದ ತಲೆದೋರುವಿಕೆಯನ್ನು ಆರಂಭಿಸುವುದು. (ಯೋವೇಲ 2:31) ಇಂದು, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಬರಲಿರುವ ಯೆಹೋವನ ಈ ಹಸ್ತಕ್ಷೇಪದ ಕುರಿತು ಎಚ್ಚರಿಕೆಯನ್ನು ನೀಡುತ್ತಾ ಒಂದು ಮಹತ್ತಾದ ಜೀವರಕ್ಷಕ ಕಾರ್ಯವನ್ನು ಪೂರೈಸುತ್ತಿದ್ದಾನೆ. (ಮಲಾಕಿಯ 4:5; 1 ತಿಮೊಥೆಯ 4:16) ಯೆಹೋವನ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಪಾಲಿಗರಾಗುವ ಮೂಲಕ ನೀವು ಆ ಸೇವೆಯನ್ನು ಕ್ರಿಯಾಶೀಲವಾಗಿ ಬೆಂಬಲಿಸುತ್ತಿದ್ದೀರೋ? ನಿರ್ಭೀತ ರಾಜ್ಯ ಘೋಷಕರೋಪಾದಿ ಹಾಗೆ ಮಾಡುವುದನ್ನು ನೀವು ಮುಂದುವರಿಸುವಿರೋ?
11. ಧೀರ ಮನೋಭಾವವು ಇಂದು ಪ್ರಾಮುಖ್ಯವಾಗಿದೆಯೇಕೆ?
11 ಲೋಕದ ಇಂದಿನ ಸನ್ನಿವೇಶದ ನೋಟದಲ್ಲಿ, “ಚಿಕ್ಕ ಹಿಂಡೇ, ಹೆದರಬೇಡ” ಎಂದು ಯೇಸು ಅವರಿಗೆ ಸಂಬೋಧಿಸಿ ನುಡಿದ ಮಾತುಗಳನ್ನು ಪಾಲಿಸುವುದು ಚಿಕ್ಕ ಹಿಂಡಿಗೆ ಅದೆಷ್ಟು ಸಮಯೋಚಿತವಾಗಿದೆ! ಯೆಹೋವನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಪೂರೈಸಲ್ಪಡುವ ಎಲ್ಲವುಗಳ ನೋಟದಲ್ಲಿ ಅಂತಹ ಧೀರ ಮನೋಭಾವವು ಅತ್ಯಾವಶ್ಯಕ. ವ್ಯಕ್ತಿಶಃ, ಚಿಕ್ಕ ಹಿಂಡಿನ ಪ್ರತಿಯೊಬ್ಬನು ಕೊನೆಯ ತನಕ ತಾಳುವ ಆವಶ್ಯಕತೆಯನ್ನು ಗ್ರಹಿಸಿಕೊಳ್ಳುತ್ತಾನೆ. (ಲೂಕ 21:19) ಚಿಕ್ಕ ಹಿಂಡಿನ ಕರ್ತನೂ, ಧಣಿಯೂ ಆಗಿರುವ ಯೇಸು ಕ್ರಿಸ್ತನು ತನ್ನ ಐಹಿಕ ಜೀವಿತದ ಕೊನೆಯ ತನಕ ತಾಳಿಕೊಂಡು ನಂಬಿಗಸ್ತನಾಗಿ ರುಜುವಾದಂತೆ, ಉಳಿಕೆಯವರಲ್ಲಿ ಪ್ರತಿಯೊಬ್ಬನು ತಾಳಿಕೊಳ್ಳಬೇಕು ಮತ್ತು ನಂಬಿಗಸ್ತನೆಂದು ರುಜುವಾಗಬೇಕು.—ಇಬ್ರಿಯ 12:1, 2.
12. ಯೇಸುವಿನಂತೆ, ಪೌಲನು, ಅಭಿಷಿಕ್ತ ಕ್ರೈಸ್ತರು ಹೆದರದಿರುವಂತೆ ಹೇಗೆ ಬುದ್ಧಿವಾದವನ್ನಿತನ್ತು?
12 ಅಪೊಸ್ತಲ ಪೌಲನಲ್ಲಿದ್ದ ಅದೇ ಹೊರನೋಟವು ಅಭಿಷಿಕ್ತರೆಲ್ಲರಲ್ಲಿ ಇರಬೇಕು. ಕ್ರಿಸ್ತನೊಂದಿಗೆ ರಾಜ್ಯದಲ್ಲಿ ಆಳಲು ಪುನರುತ್ಥಾನದ ಅಭಿಷಿಕ್ತ ಬಹಿರಂಗ ಘೋಷಕನೋಪಾದಿ ಅವನ ಮಾತುಗಳು, ಹೆದರಬೇಡಿರೆಂಬ ಯೇಸುವಿನ ಪ್ರಬೋಧನೆಯೊಂದಿಗೆ ಹೇಗೆ ಹೊಂದಿಕೆಯಲ್ಲಿವೆಯೆಂಬದನ್ನು ಗಮನಿಸಿರಿ. ಪೌಲನು ಬರೆದದ್ದು: “ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ; ಇದೇ ನಾನು ಸಾರುವ ಸುವಾರ್ತೆ. ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. ಆದಕಾರಣ ದೇವರಾರಿಸಿಕೊಂಡವರು ನನ್ನ ಕೂಡ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯಪ್ರಭಾವಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ತಾಳಿಕೊಳ್ಳುತ್ತೇನೆ. ಈ ಮಾತು ನಂಬತಕ್ಕದ್ದಾಗಿದೆ, ಏನಂದರೆ—ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ಜೀವಿಸುವೆವು; ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು; ನಾವು ಯೇಸುವಿನವರಲ್ಲವೆಂದು ಹೇಳಿದರೆ ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು. ನಾವು ಅಪನಂಬಿಗಸ್ತರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು; ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಏನೂ ಮಾಡಲಾರನು.”—2 ತಿಮೊಥೆಯ 2:8-13.
13. ಯಾವ ಆಳವಾದ ಮನವರಿಕೆಗಳನ್ನು ಚಿಕ್ಕ ಹಿಂಡಿನ ಸದಸ್ಯರು ಇಟ್ಟುಕೊಳ್ಳುತ್ತಾರೆ, ಮತ್ತು ಇದು ಅವರನ್ನು ಏನು ಮಾಡುವಂತೆ ಪ್ರೇರಿಸುತ್ತದೆ?
13 ಅಪೊಸ್ತಲ ಪೌಲನಂತೆ, ಅಭಿಷಿಕ್ತ ಚಿಕ್ಕ ಹಿಂಡಿನ ಉಳಿದ ಸದಸ್ಯರು ದೇವರ ವಾಕ್ಯದಲ್ಲಿ ನಮೂದಿಸಿರುವ ಬಲವಾದ ಸಂದೇಶವನ್ನು ಘೋಷಿಸುತ್ತಿರುವಾಗ, ಕಷ್ಟಗಳನ್ನು ಸಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. ರಕ್ಷಣೆಯ ದೈವಿಕ ವಾಗ್ದಾನಗಳಲ್ಲಿ ಮತ್ತು ಮರಣದ ತನಕ ನಂಬಿಗಸ್ತರಾಗಿ ಉಳಿದರೆ ಅವರಿಗೆ ಕೊಡಲ್ಪಡುವ “ಜೀವವೆಂಬ ಜಯಮಾಲೆ” ಯಲ್ಲಿ ಅವರು ಸತತವಾಗಿ ಭರವಸವಿಡುವಾಗ, ಅವರ ದೃಢನಿಶ್ಚಯಗಳು ಆಳವಾಗಿ ಬೇರೂರುತ್ತವೆ. (ಪ್ರಕಟನೆ 2:10) ಒಂದು ತತ್‌ಕ್ಷಣದ ಪುನರುತ್ಥಾನ ಮತ್ತು ಮಾರ್ಪಡುವಿಕೆಯನ್ನು ಅನುಭವಿಸುವುದರ ಮೂಲಕ, ಅವರು ಅರಸರೋಪಾದಿ ಕ್ರಿಸ್ತನೊಂದಿಗೆ ಆಳಲು ಅವನ ಐಕ್ಯಕ್ಕೆ ತರಲ್ಪಡುವರು. ಲೋಕ ವಿಜೇತರೋಪಾದಿ ಅವರ ಸಮಗ್ರತೆ ಪಾಲನೆಯ ಮಾರ್ಗಕ್ಕಾಗಿ ಎಂತಹ ವಿಜಯ!—1 ಯೋಹಾನ 5:3, 4.
ಒಂದು ಅಪೂರ್ವ ನಿರೀಕ್ಷೆ
14, 15. ಚಿಕ್ಕ ಹಿಂಡಿನ ಪುನರುತ್ಥಾನದ ನಿರೀಕ್ಷೆಯು ಹೇಗೆ ಅಪೂರ್ವವಾಗಿದೆ?
14 ಚಿಕ್ಕ ಹಿಂಡಿನವರು ಇಟ್ಟುಕೊಂಡಿರುವ ಪುನರುತ್ಥಾನದ ನಿರೀಕ್ಷೆಯು ಅಪೂರ್ವವಾಗಿದೆ. ಯಾವ ವಿಧಗಳಲ್ಲಿ? ಒಂದು ಸಂಗತಿಯೇನಂದರೆ, ಅದು “ನೀತಿವಂತರಿಗೂ ಅನೀತಿವಂತರಿಗೂ” ಆಗುವ ಸಾಮಾನ್ಯ ಪುನರುತ್ಥಾನಕ್ಕಿಂತ ಮುಂಚೆ ಆಗುತ್ತದೆ. (ಅ. ಕೃತ್ಯಗಳು 24:15) ವಾಸ್ತವದಲ್ಲಿ, ಅಭಿಷಿಕ್ತರ ಪುನರುತ್ಥಾನವು, 1 ಕೊರಿಂಥ 15:20, 23 ರಲ್ಲಿ ಕಂಡುಬರುವ ಮಾತುಗಳಿಂದ ಸ್ಪಷ್ಟವಾಗಿಗಿ ಸ್ಥಾಪಿಸಲ್ಪಟ್ಟ ಪ್ರಕಾರ, ಪ್ರಮುಖತೆಯ ಒಂದು ನಿರ್ದಿಷ್ಟ ತರಗತಿಗೆ ಬೀಳುತ್ತದೆ: “ಕ್ರಿಸ್ತನು ಸತ್ತವರೊಳಗಿಂದ ಎದ್ದುಬಂದೇ ಇದ್ದಾನೆ; ನಿದ್ರೆಹೋದವರಲ್ಲಿ ಪ್ರಥಮಫಲವಾದನು. ಆದರೆ ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿರುವನು. ಕ್ರಿಸ್ತನು ಪ್ರಥಮಫಲ; ತರುವಾಯ ಕ್ರಿಸ್ತನ ಪ್ರತ್ಯಕ್ಷತೆಯಲ್ಲಿ ಆತನವರು ಎದ್ದುಬರುವರು.” ಯೇಸು ಪ್ರದರ್ಶಿಸಿದಂತಹ ತಾಳ್ಮೆ ಮತ್ತು ನಂಬಿಕೆಯನ್ನು ಚಿಕ್ಕ ಹಿಂಡು ಹೊಂದಿರುವ ಮೂಲಕ, ತಮ್ಮ ಭೂಯಾತ್ರೆಯನ್ನು ಮುಗಿಸುವಾಗ ತಮಗೇನು ಕಾದಿದೆ ಎಂಬುದನ್ನು, ವಿಶೇಷವಾಗಿ ಸತ್ಯ ಕರ್ತನು 1918 ರಲ್ಲಿ ತೀರ್ಪಿಗಾಗಿ ತನ್ನ ಆಲಯಕ್ಕೆ ಬಂದಂದಿನಿಂದ ತಿಳಿದಿದ್ದಾರೆ.—ಮಲಾಕಿಯ 3:1.
15 ಈ ಪುನರುತ್ಥಾನವು ಅಪೂರ್ವವಾಗಿದೆಯೆಂದು ವೀಕ್ಷಿಸಲು ಪೌಲನು ಇನ್ನೊಂದು ಹೆಚ್ಚಿನ ಕಾರಣವನ್ನು ನಮಗೆ ಕೊಡುತ್ತಾನೆ. 1 ಕೊರಿಂಥ 15:51-53 ರಲ್ಲಿ ದಾಖಲಿಸಲ್ಪಟ್ಟಂತೆ, ಅವನು ಬರೆದದ್ದು: “ಕೇಳಿರಿ, ಇದು ವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ—ನಾವೆಲ್ಲರೂ ನಿದ್ರೆಹೋಗುವದಿಲ್ಲ; ಆದರೆ ಕಡೇ ತುತೂರಿಯ ಧ್ವನಿಯಾಗುವಾಗ ನಾವೆಲ್ಲರು ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ ಮಾರ್ಪಡುವೆವು. . . . ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ.” ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಸಾಯುವ ಚಿಕ್ಕ ಹಿಂಡಿನವರಿಗೆ ಈ ಮಾತುಗಳು ಅನ್ವಯಿಸುತ್ತವೆ. ಮರಣದಲ್ಲಿ ಒಂದು ದೀರ್ಘಾವಧಿಯ ತನಕ ನಿದ್ರಿಸಲು ಇರದೆ, ಅವರು ಅಮರತ್ವವನ್ನು “ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ” ಧರಿಸುತ್ತಾರೆ.
16, 17. ಅವರ ಪುನರುತ್ಥಾನದ ನಿರೀಕ್ಷೆಯ ಸಂಬಂಧದಲ್ಲಿ, ಅಭಿಷಿಕ್ತ ಕ್ರೈಸ್ತರು ಇಂದು ಹೇಗೆ ವಿಶೇಷವಾಗಿ ಆಶೀರ್ವದಿಸಲ್ಪಟ್ಟಿದ್ದಾರೆ?
16 ಈ ತಿಳಿವಳಿಕೆಯ ಪ್ರಕಾಶದಲ್ಲಿ, ಪ್ರಕಟನೆ 14:12, 13 ರಲ್ಲಿ ಕಂಡುಬರುವ ಅಪೊಸ್ತಲ ಯೋಹಾನನ ಮಾತುಗಳ ಅರ್ಥವನ್ನು ನಾವು ಗ್ರಹಿಸಬಲ್ಲೆವು. ಅವನು ಬರೆದದ್ದು: “ಇದರಲ್ಲಿ ದೇವರ ಆಜ್ಞೆಗಳನ್ನೂ ಯೇಸುವಿನ ಮೇಲಣ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ತೋರಿಬರುತ್ತದೆ. ಪರಲೋಕದಿಂದ ಒಂದು ಶಬ್ದವು ನನಗೆ ಕೇಳಿಸಿತು. ಅದು—ಇಂದಿನಿಂದ ಕರ್ತನ ಭಕ್ತರಾಗಿ ಸಾಯುವವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು—ಹೌದು, ಅವರು ಧನ್ಯರೇ; ಅವರ ಕಷ್ಟ ತೀರಿತು, ಅವರಿಗೆ ವಿಶ್ರಾಂತಿಯಾಗುವದು; ಅವರ ಸುಕೃತ್ಯಗಳು ಅವರೊಡನೆ ಬರುವವು ಎಂದು ಹೇಳುತ್ತಾನೆ.”
17 ಚಿಕ್ಕ ಹಿಂಡಿನ ಉಳಿಕೆಯವರಿಗೆ ಎಂತಹ ಒಂದು ಅಪೂರ್ವ ಬಹುಮಾನವು ಕಾದಿದೆ! ಅವರ ಪುನರುತ್ಥಾನವು ಶೀಘ್ರವಾಗಿ, ಮರಣದಲ್ಲಿ ಅವರು ನಿದ್ರಿಸಿದ ಕ್ಷಣವೇ ಆಗುವುದು. ಆತ್ಮಿಕ ಕ್ಷೇತ್ರದಲ್ಲಿ ತಮ್ಮ ನೇಮಕಗಳನ್ನು ಅವರು ತೆಗೆದುಕೊಳ್ಳುವಾಗ ಎಂತಹ ವಿಶೇಷ ರೀತಿಯ ಮಾರ್ಪಾಟನ್ನು ಅವರು ಅನುಭವಿಸುವರು! ಚಿಕ್ಕ ಹಿಂಡಿನ ಅಂತಹ ವೈಭವಾತಿಶಯವೊಂದು ಕಾರ್ಯಗತಿಯಲ್ಲಿರುವಾಗ ಮತ್ತು ಬೈಬಲಿನ ಪ್ರಮುಖ ಪ್ರವಾದನೆಗಳ ನೆರವೇರಿಕೆಯು ಹತ್ತಿರಗೊಳ್ಳುವಾಗ, ಚಿಕ್ಕ ಹಿಂಡಿನ ಕೊನೆಯ ಉಳಿದಿರುವ ಸದಸ್ಯರು ನಿಜವಾಗಿಯೂ ‘ಹೆದರದೆ’ ಇರುವ ಅಗತ್ಯವಿದೆ. ಮತ್ತು ಅವರ ನಿರ್ಭೀತಿಯು ಮಹಾ ಸಮೂಹದವರನ್ನು ಉತ್ತೇಜಿಸಲು ಕಾರ್ಯನಡಿಸುತ್ತದೆ, ಅವರು, ಭೂಮಿಯು ಇಂದಿನ ತನಕ ತಿಳಿದಿರದ ಸಂಕಟದ ಮಹಾ ಸಮಯದಲ್ಲಿ ಬಿಡುಗಡೆಯನ್ನು ನಿರೀಕ್ಷಿಸುವಾಗ, ಅವರೂ ನಿರ್ಭೀತಿಯ ಇದೇ ಮನೋಭಾವವನ್ನು ಬೆಳೆಸತಕ್ಕದ್ದು.
18, 19. (ಎ) ನಾವು ಜೀವಿಸುವ ಸಮಯವು ಜರೂರಿಯದ್ದಾಗಿದೆಯೇಕೆ? (ಬಿ) ಅಭಿಷಿಕ್ತರು ಮತ್ತು ಬೇರೆ ಕುರಿಗಳು ಇಬ್ಬರೂ ಹೆದರದೆ ಇರಬೇಕು ಏಕೆ?
18 ಚಿಕ್ಕ ಹಿಂಡಿನ ಕಾರ್ಯಗಳ ಸವಿವರವು ಅವರನ್ನು ಮತ್ತು ಮಹಾ ಸಮೂಹದವರನ್ನು ಸತ್ಯ ದೇವರಿಗೆ ಭಯಪಡುತ್ತಾ ಮುಂದುವರಿಯುವಂತೆ ಶಕ್ಯರನ್ನಾಗಿ ಮಾಡುತ್ತದೆ. ಆತನಿಂದ ನ್ಯಾಯತೀರ್ಪಿನ ಗಳಿಗೆಯು ಆಗಮಿಸಿದೆ, ಮತ್ತು ಉಳಿದಿರುವ ಪ್ರಸನ್ನತೆಯ ಸಮಯವು ಸೀಮಿತವಾಗಿರುವುದರಿಂದ, ಅಮೂಲ್ಯವಾಗಿದೆ. ಇತರರಿಗೆ ಕ್ರಿಯೆಗೈಯಲು ಇರುವ ಸಮಯವು ಸೀಮಿತವೆಂಬುದು ಖಂಡಿತ. ನಾವಾದರೊ ದೇವರ ಉದ್ದೇಶವು ನಿಷ್ಫಲಗೊಳ್ಳುವುದು ಎಂದು ಹೆದರುವುದಿಲ್ಲ. ಅದು ಖಂಡಿತವಾಗಿಯೂ ಯಶಸ್ವಿಯಾಗುವುದು!
19 ಈವಾಗಲೆ ಸ್ವರ್ಗೀಯ ಧ್ವನಿಗಳು ಗಟ್ಟಿಯಾಗಿ ಹೀಗನ್ನುವುದು ಕೇಳಿಸಲ್ಪಟ್ಟಿದೆ: “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು.” (ಪ್ರಕಟನೆ 11:15) ನಿಶ್ಚಯವಾಗಿಯೂ, ಮಹಾ ಕುರುಬನಾದ ಯೆಹೋವನು, ಆತನ ಎಲ್ಲಾ ಕುರಿಗಳನ್ನು “ತನ್ನ ಹೆಸರಿಗೆ ತಕ್ಕಂತೆ ನೀತಿಮಾರ್ಗದಲ್ಲಿ” ನಡಿಸುತ್ತಾನೆ. (ಕೀರ್ತನೆ 23:3) ಚಿಕ್ಕ ಹಿಂಡು ತಮ್ಮ ಸ್ವರ್ಗೀಯ ಬಹುಮಾನಕ್ಕೆ ತಪ್ಪಿಹೋಗದ ರೀತಿಯಲ್ಲಿ ನಡಿಸಲ್ಪಡುತ್ತಿದೆ. ಮತ್ತು ಬೇರೆ ಕುರಿಗಳು ಕ್ರಿಸ್ತ ಯೇಸುವಿನ ಆಳಿಕೆಯ ಕೆಳಗೆ ದೇವರ ಮಹಿಮಾಭರಿತ ರಾಜ್ಯದ ಐಹಿಕ ಕ್ಷೇತ್ರದಲ್ಲಿ ಅನಂತ ಜೀವವನ್ನು ಆನಂದಿಸಲು ಮಹಾ ಸಂಕಟದಿಂದ ಸುರಕ್ಷಿತವಾಗಿ ಪಾರುಗೊಳಿಸಲ್ಪಡುವರು. ಆದಕಾರಣ, ಯೇಸುವಿನ ಮಾತುಗಳು ಚಿಕ್ಕ ಹಿಂಡಿಗೆ ಸಂಬೋಧಿಸಲ್ಪಟ್ಟರೂ, “ಹೆದರಬೇಡ” ಎಂಬ ಆತನ ಮಾತುಗಳಿಗೆ ಕಿವಿಗೊಡಲು ಭೂಮಿಯಲ್ಲಿರುವ ದೇವರ ಸೇವಕರೆಲ್ಲರಿಗೆ ನಿಶ್ಚಯವಾಗಿಯೂ ಸಕಾರಣವಿದೆ.
ನೀವು ವಿವರಿಸಬಲ್ಲಿರೊ?
◻ ಚಿಕ್ಕ ಹಿಂಡಿನಲ್ಲಿ ಉಳಿದವರ ಸಂಖ್ಯೆಯು ಕಡಿಮೆಯಾಗುವದನ್ನು ನಾವು ಏಕೆ ನಿರೀಕ್ಷಿಸಬೇಕು?
◻ ಇಂದು ಅಭಿಷಿಕ್ತ ಉಳಿಕೆಯವರ ಸನ್ನಿವೇಶವೇನಾಗಿದೆ?
◻ ಮಾಗೋಗದ ಗೋಗನ ಆಕ್ರಮಣವು ಸಮೀಪಿಸುತ್ತಿದ್ದಾಗ್ಯೂ, ಕ್ರೈಸ್ತರು ಹೆದರಬಾರದೇಕೆ?
◻ ವಿಶೇಷವಾಗಿ ಇಂದು, 1,44,000 ಮಂದಿಯ ಪುನರುತ್ಥಾನದ ನಿರೀಕ್ಷೆಯು ಅಪೂರ್ವವೇಕೆ?