ವಾಚಕರಿಂದ ಪ್ರಶ್ನೆಗಳು
ಆದಿ ಆಡಳಿತ ಮಂಡಳಿಗಾಗಿ ಎಲ್ಲಾ ಯೆಹೂದ್ಯರಾಗಿದ್ದ ಪುರುಷರನ್ನು, ಹೀಗೆ ಒಂದೇ ಜಾತಿ ಮತ್ತು ರಾಷ್ಟ್ರೀಯ ಹಿನ್ನೆಲೆಯಿದ್ದವರನ್ನು ಆರಿಸುವ ಮೂಲಕ ದೇವರು ಪಕ್ಷಪಾತಿಯಾಗಿದ್ದನೋ?
ಇಲ್ಲ, ಖಂಡಿತವಾಗಿಯೂ ಅವನು ಪಕ್ಷಪಾತಿಯಾಗಿರಲಿಲ್ಲ. ಯೇಸು ಪ್ರಥಮವಾಗಿ ತನ್ನ ಶಿಷ್ಯರಾಗಿ ಕರೆದವರೆಲ್ಲರೂ ಯೆಹೂದ್ಯರಾಗಿದ್ದರು. ಅನಂತರ, ಸಾ.ಶ. 33ರ ಪಂಚಾಶತ್ತಮದಲ್ಲಿ ಯೆಹೂದ್ಯರು ಮತ್ತು ಯೆಹೂದಿ ಮತಾಂತರಿಗಳು ಪವಿತ್ರಾತ್ಮದಿಂದ ಅಭಿಷಿಕ್ತರಾದವರಲ್ಲಿ ಮೊದಲಿಗರಾದರು ಮತ್ತು ಹೀಗೆ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲು ಅರ್ಹರಾದರು. ತದನಂತರವೇ ಸಮಾರ್ಯದವರು ಮತ್ತು ಸುನ್ನತಿಯಾಗಿರದ ಅನ್ಯಜನಾಂಗದ ಮತಾಂತರಿಗಳು ಸೇರಿಸಲ್ಪಟ್ಟರು. ಈ ಕಾರಣದಿಂದ, ಆ ಅವಧಿಯಲ್ಲಿದ್ದ ಆಡಳಿತ ಮಂಡಳಿಯು, ಅ. ಕೃತ್ಯಗಳು 15:2 ರಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಕಾರ ಯೆಹೂದ್ಯರಿಂದ, “ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯ” ರಿಂದ ರಚಿಸಲ್ಪಟ್ಟಿತ್ತೆಂಬುದು ಗ್ರಾಹ್ಯ. ಶಾಸ್ತ್ರೀಯ ಜ್ಞಾನದ ಹೆಚ್ಚು ಆಳವಾದ ತಿಳಿವಳಿಕೆ ಮತ್ತು ಸತ್ಯಾರಾಧನೆಯಲ್ಲಿ ಹಲವಾರು ವರ್ಷಗಳ ಅನುಭವವಿದ್ದ ಪುರುಷರು ಇವರಾಗಿದ್ದರು, ಮತ್ತು ಪ್ರೌಢ ಕ್ರೈಸ್ತ ಹಿರಿಯರಾಗಿ ವಿಕಸಿಸಲು ಅವರಿಗೆ ಹೆಚ್ಚಿನ ಸಮಯವಿದ್ದಿತ್ತು.—ರೋಮಾಪುರ 3:1, 2ನ್ನು ಹೋಲಿಸಿರಿ.
ಅ. ಕೃತ್ಯಗಳು ಅಧ್ಯಾಯ 15 ರಲ್ಲಿ ವಿವರಿಸಲ್ಪಟ್ಟಿರುವ ಆಡಳಿತ ಮಂಡಳಿಯ ಕೂಟದ ಸಮಯದೊಳಗೆ, ಅನ್ಯಜನಾಂಗದವರಲ್ಲಿ ಅನೇಕರು ಕ್ರೈಸ್ತರಾಗಿದ್ದರು. ಇವರಲ್ಲಿ ಆಫ್ರಿಕನರು, ಯೂರೋಪಿಯನರು, ಮತ್ತು ಇತರ ಪ್ರದೇಶಗಳಿಂದ ಬಂದ ಜನರು ಸೇರಿದ್ದರು. ಆದರೂ, ಯೆಹೂದ್ಯೇತರರಿಗೆ ಕ್ರೈಸ್ತತ್ವವನ್ನು ಆಕರ್ಷಕವನ್ನಾಗಿ ಮಾಡಲು ಅಂತಹ ಅನ್ಯಜನಾಂಗದವರಲ್ಲಿ ಯಾರೂ ಆಡಳಿತ ಮಂಡಳಿಗೆ ಸೇರಿಸಲ್ಪಟ್ಟಿರುವ ಯಾವುದೇ ದಾಖಲೆಯಿಲ್ಲ. ಈ ಹೊಸತಾಗಿ ಪರಿವರ್ತಿತರಾಗಿದ್ದ ಅನ್ಯಜನಾಂಗದ ಕ್ರೈಸ್ತರು “ದೇವರ ಇಸ್ರಾಯೇಲಿ” ನಲ್ಲಿ ಸಮಾನ ಸದಸ್ಯರಾಗಿದ್ದರೂ, ಅವರು ಆ ಸಮಯದಲ್ಲಿ ಆಡಳಿತ ಮಂಡಳಿಯ ಭಾಗವಾಗಿದ್ದ ಅಪೊಸ್ತಲರಂತಹ, ಯೊಹೂದಿ ಕ್ರೈಸ್ತರ ಪ್ರೌಢತೆ ಮತ್ತು ಹೆಚ್ಚಿನ ಅನುಭವವನ್ನು ಗೌರವಿಸುತ್ತಿದ್ದಿರಬಹುದು. (ಗಲಾತ್ಯ 6:16) ಅಂತಹ ಅನುಭವವು ಎಷ್ಟು ಉಚ್ಚವಾಗಿ ಗೌರವಿಸಲ್ಪಟ್ಟಿತೆಂಬದನ್ನು ಅ. ಕೃತ್ಯಗಳು 1:21, 22 ರಲ್ಲಿ ಗಮನಿಸಿರಿ.—ಇಬ್ರಿಯ 2:3; 2 ಪೇತ್ರ 1:18; 1 ಯೋಹಾನ 1:1-3.
ಯಾವ ಜನಾಂಗದಿಂದ ಯೇಸು ತನ್ನ ಅಪೊಸ್ತಲರನ್ನು ಆರಿಸಿದನೊ, ಆ ಇಸ್ರಾಯೇಲ್ ಜನಾಂಗದೊಂದಿಗೆ ದೇವರು ಅನೇಕ ಶತಮಾನಗಳಿಂದ ವಿಶೇಷವಾದೊಂದು ರೀತಿಯಲ್ಲಿ ವ್ಯವಹರಿಸಿದ್ದನು. ಈಗ ದಕ್ಷಿಣ ಅಮೆರಿಕ ಅಥವಾ ಆಫ್ರಿಕ ಅಥವಾ ತೀರ ಪೂರ್ವ ದೇಶಗಳಾಗಿರುವವುಗಳಿಂದ ಯಾವ ಅಪೊಸ್ತಲರೂ ಬಂದಿರದಿದ್ದದ್ದು ಒಂದು ತಪ್ಪು ಅಥವಾ ಅನ್ಯಾಯವಾಗಿರಲಿಲ್ಲ. ಸಮಯಾನಂತರ ಆ ಸ್ಥಳಗಳಿಂದ ಬಂದಿದ್ದ ಪುರುಷರು ಮತ್ತು ಸ್ತ್ರೀಯರಿಗೆ, ಭೂಮಿಯ ಮೇಲೆ ಒಬ್ಬ ಅಪೊಸ್ತಲನಾಗಿರುವ, ಪ್ರಥಮ ಶತಮಾನದ ಆಡಳಿತ ಮಂಡಳಿಯ ಒಬ್ಬ ಸದಸ್ಯನಾಗಿರುವ ಅಥವಾ ದೇವರ ಜನರೊಳಗೆ ಬೇರೆ ಯಾವುದೇ ನೇಮಕವನ್ನು ಇಂದು ಹೊಂದಿರುವದಕ್ಕಿಂತ ಹೆಚ್ಚು ಭವ್ಯವಾಗಿರುವ ಸುಯೋಗಗಳನ್ನು ಪಡೆಯುವ ಒಂದು ಅವಕಾಶವಿರಲಿತ್ತು.—ಗಲಾತ್ಯ 3:27-29.
“ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು” ಹೇಳಲು ಒಬ್ಬ ಅಪೊಸ್ತಲನು ಪ್ರಚೋದಿಸಲ್ಪಟ್ಟನು. (ಅ. ಕೃತ್ಯಗಳು 10:34, 35) ಹೌದು, ಕ್ರಿಸ್ತನ ಪ್ರಾಯಶ್ಚಿತದ್ತ ಪ್ರಯೋಜನಗಳು ಎಲ್ಲರಿಗೆ, ಯಾವುದೇ ಪಕ್ಷಪಾತವಿಲ್ಲದೇ ಲಭ್ಯವಿವೆ. ಮತ್ತು ಪ್ರತಿಯೊಂದು ಕುಲ ಮತ್ತು ಭಾಷೆ ಮತ್ತು ಜನಾಂಗದ ವ್ಯಕ್ತಿಗಳು ಸ್ವರ್ಗೀಯ ರಾಜ್ಯದಲ್ಲಿ ಮತ್ತು ಭೂಮಿಯ ಮೇಲೆ ಸದಾಕಾಲ ಜೀವಿಸಲಿರುವ ಮಹಾ ಸಮೂಹದಲ್ಲಿ ಸೇರಿಸಲ್ಪಡುವರು.
ಅನೇಕ ಮಾನವರು ಜಾತಿ, ಭಾಷೆ ಅಥವಾ ರಾಷ್ಟ್ರೀಯ ಹಿನ್ನೆಲೆಗಳ ಕುರಿತಾಗಿ ಸಂವೇದನಾಶೀಲರಾಗುತ್ತಾರೆ. ಗ್ರೀಕ್ ಭಾಷೆ ಮಾತಾಡುತ್ತಿದ್ದ ಮತ್ತು ಹೀಬ್ರು ಭಾಷೆ ಮಾತಾಡುತ್ತಿದ್ದ ಕ್ರೈಸ್ತರ ನಡುವೆ ಗುಣುಗುಟುವ್ಟಿಕೆಯನ್ನು ಉಂಟುಮಾಡಿದ ಒಂದು ವಿವಾದದ ಕುರಿತಾಗಿ ಅ. ಕೃತ್ಯಗಳು 6:1 ರಲ್ಲಿ ನಾವು ಓದುವಂತಹ ವಿಷಯದಿಂದ ಇದು ದೃಷ್ಟಾಂತಿಸಲ್ಪಟ್ಟಿದೆ. ನಾವು ಭಾಷೆ, ಜಾತಿ, ಕುಲಸಂಬಂಧವಾದ ಹಿನ್ನೆಲೆ ಅಥವಾ ಲಿಂಗದ ಕುರಿತಾದ ಒಂದು ಪ್ರಚಲಿತ ಸೂಕ್ಷವೇದಿ ಭಾವನೆಗಳೊಂದಿಗೆ ಬೆಳೆಸಲ್ಪಟ್ಟಿರಬಹುದು ಅಥವಾ ಅವನ್ನು ಹೀರಿಕೊಂಡಿರಬಹುದು. ಆ ತೀರ ನೈಜ ಸಾಧ್ಯತೆಯ ನೋಟದಲ್ಲಿ, ನಮ್ಮ ಹೊರ ತೋರಿಕೆಯು ಏನೇ ಆಗಿರಲಿ ಎಲ್ಲಾ ಮಾನವರು ಅವನ ಮುಂದೆ ಸಮವಾಗಿದ್ದಾರೆಂಬ ದೇವರ ನೋಟದಿಂದ ನಮ್ಮ ಅನಿಸಿಕೆಗಳು ಹಾಗೂ ಪ್ರತಿವರ್ತನೆಗಳು ರೂಪಿಸಲ್ಪಡುವಂತೆ ನಾವು ಒಂದು ನಿರ್ಧರಿತ ಪ್ರಯತ್ನವನ್ನು ಮಾಡುವುದು ಒಳ್ಳೆಯದು. ಹಿರಿಯರು ಮತ್ತು ಶುಶ್ರೂಷಕ ಸೇವಕರಿಗಾಗಿ ಅರ್ಹತೆಗಳನ್ನು ದೇವರು ದಾಖಲಿಸಿದಾಗ, ಅವನು ಜಾತಿ ಮತ್ತು ರಾಷ್ಟ್ರೀಯ ಹಿನ್ನೆಲೆಯ ಯಾವ ಪ್ರಸ್ತಾಪವನ್ನು ಮಾಡಲಿಲ್ಲ. ಇಲ್ಲ, ಸೇವೆ ಸಲ್ಲಿಸಲು ಲಭ್ಯವಿರುವವರ ಆತ್ಮಿಕ ಅರ್ಹತೆಗಳ ಮೇಲೆ ಅವನು ಕೇಂದ್ರೀಕರಿಸಿದನು. ಪ್ರಥಮ ಶತಮಾನದಲ್ಲಿದ್ದ ಆಡಳಿತ ಮಂಡಳಿಯ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ಇಂದು ಸ್ಥಳಿಕ ಹಿರಿಯರು, ಸಂಚರಣ ಮೇಲ್ವಿಚಾರಕರು, ಮತ್ತು ಶಾಖಾ ಸಿಬ್ಬಂದಿಗಳ ವಿಷಯದಲ್ಲಿ ಅದು ಸತ್ಯವಾಗಿದೆ.