ಪಟ್ಟುಹಿಡಿಯುವಿಕೆಯ ಪ್ರತಿಫಲಗಳು
ಆಕೆ ಸಾ.ಶ. 32 ನೆಯ ಇಸವಿಯಲ್ಲಿ ಫೋನಿಷಿಯದಲ್ಲಿ ಜೀವಿಸುತ್ತಿದ್ದ ಗ್ರೀಕ್ ಸ್ತ್ರೀಯಾಗಿದ್ದಳು. ಆಕೆಯ ಮಗಳು ವಿಪರೀತ ಅಸ್ವಸ್ಥಳಾಗಿದಳ್ದು ಮತ್ತು ಮಗಳ ರೋಗವಾಸಿಗಾಗಿ ಆ ಸ್ತ್ರೀಯು ಹತಾಶಳಾಗಿದ್ದಳು. ಅಸ್ವಸ್ಥರನ್ನು ಗುಣಪಡಿಸುವ ಶಕಿಯ್ತಿತ್ತೆಂಬ ಪ್ರಖ್ಯಾತಿಯನ್ನು ಹೊಂದಿದ್ದ ಒಬ್ಬ ವಿದೇಶೀಯನು, ತನ್ನ ಪ್ರಾಂತಕ್ಕೆ ಭೇಟಿ ನೀಡುತ್ತಿರುವುದರ ಕುರಿತು ಕೇಳುತ್ತಾ, ಆಕೆ ಅವನನ್ನು ಕಾಣಲು ಮತ್ತು ಅವನ ಸಹಾಯವನ್ನು ಯಾಚಿಸಲು ನಿಶ್ಚಯಿಸಿದಳು.
ಅವನನ್ನು ಕಂಡೊಡನೆ ಆಕೆ ಮೊಣಕಾಲೂರಿ ಬೇಡಿಕೊಂಡದ್ದು: “ಸ್ವಾಮೀ, ದಾವೀದನ ಕುಮಾರನೇ, ನನ್ನನ್ನು ಕರುಣಿಸು. ನನ್ನ ಮಗಳಿಗೆ ದೆವ್ವದ ಕಾಟ ಬಹಳವಾಗಿದೆ.” ಆ ರೀತಿಯಲ್ಲಿ, ತನ್ನ ಮಗಳನ್ನು ಗುಣಪಡಿಸುವಂತೆ ಆ ಗ್ರೀಕ್ ಸ್ತ್ರೀಯು ಯೇಸುವನ್ನು ಬೇಡಿಕೊಂಡಳು.
ಇದನ್ನು ಮಾಡಲು ಆಕೆಯ ವತಿಯಿಂದ ಅವಶ್ಯವಾಗಿದ್ದ ಧೈರ್ಯ ಮತ್ತು ದೈನ್ಯವನ್ನು ನೀವು ಊಹಿಸಬಲ್ಲಿರೊ? ಯೇಸು ಒಂದಿಷ್ಟು ಶಕ್ತಿ ಮತ್ತು ಪ್ರಖ್ಯಾತಿಯನ್ನು ಹೊಂದಿದ್ದ ಒಬ್ಬ ಗಣ್ಯ ಪುರುಷನಾಗಿದ್ದನು, ಮತ್ತು ತಾನಿರುವ ಸ್ಥಳದ ಬಗ್ಗೆ ಯಾರೂ ಅರಿಯಬಾರದೆಂದು ತಾನು ಬಯಸಿದೆನೆಂದು ಅವನು ಈ ಮೊದಲೇ ತಿಳಿಯಪಡಿಸಿದ್ದನು. ತನ್ನ ಅಪೊಸ್ತಲರನ್ನು ಅವನು ಫೋನಿಷಿಯಕ್ಕೆ, ಅನ್ಯ ಅವಿಶ್ವಾಸಿಗಳ ಮಧ್ಯದಲ್ಲಿ ಕೆಲಸ ಮಾಡಲು ಅಲ್ಲ, ಬಹಳಷ್ಟು ಅಗತ್ಯವಾಗಿದ್ದ ಸ್ವಲ್ಪ ವಿರಾಮವನ್ನು ಪಡೆಯಲು ಕರೆದುಕೊಂಡು ಹೋಗಿದ್ದನು. ಇನ್ನೂ ಹೆಚ್ಚಾಗಿ, ಯೇಸು ಒಬ್ಬ ಯೆಹೂದ್ಯನಾಗಿದ್ದನು ಮತ್ತು ಆಕೆ ಒಬ್ಬ ಅನ್ಯ ಜನಾಂಗದವಳು, ಮತ್ತು ಕಡೆಗಣಿಸಲ್ಪಟ್ಟ ಅನ್ಯ ಜನಾಂಗದವರೊಂದಿಗಿನ ಸಹವಾಸಕ್ಕೆ ಯೆಹೂದಿ ಹೇವರಿಕೆಯ ಕುರಿತು ಆಕೆಗೆ ನಿಸ್ಸಂದೇಹವಾಗಿ ಗೊತ್ತಿತ್ತು. ಆದರೂ ತನ್ನ ಮಗುವಿಗಾಗಿ ವಾಸಿಯನ್ನು ಪಡೆಯುವ ಆಕೆಯ ನಿರ್ಧಾರದ ಕುರಿತು ಆಕೆ ದೃಢವಾಗಿದ್ದಳು.
ಆ ಸಮಯದಲ್ಲಿ ಸಹಾಯವನ್ನು ಕೋರುವುದರಿಂದ ಆ ಸ್ತ್ರೀಯನ್ನು ತಡೆಯಲು, ಯೇಸು ಮತ್ತು ಅವನ ಅಪೊಸ್ತಲರು ಪ್ರಯತ್ನಿಸಿದರು. ಆರಂಭದಲ್ಲಿ ಯೇಸು ಆಕೆಯೊಂದಿಗೆ ಮಾತನಾಡಲಿಲ್ಲ. ಅನಂತರ, ಆಕೆಯ ಸತತವಾದ ಪಟ್ಟುಹಿಡಿದ ಕೂಗುಗಳಿಂದ ಅಪೊಸ್ತಲರು ಉದ್ರೇಕಗೊಂಡು ಯೇಸುವಿಗೆ ಹೇಳಿದ್ದು: “ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ; ಆಕೆಯನ್ನು ಕಳುಹಿಸಿಬಿಡು.”
ಆದರೆ ಒಂದು ನಕಾರಾತ್ಮಕ ಉತ್ತರವನ್ನು ಆಕೆ ಸ್ವೀಕರಿಸುವಂತಹವಳಲ್ಲ. ಬದಲಿಗೆ ಯೇಸುವಿನ ಪಾದಕ್ಕೆ ಅಡಬ್ಡಿದ್ದು, “ಸ್ವಾಮೀ, ನನಗೆ ಅನುಗ್ರಹ ಮಾಡಬೇಕು” ಎಂದು ಹೇಳಿದಳು.
ಇಸ್ರಾಯೇಲಿನ ಪುತ್ರರ ಕಡೆಗೆ ತನ್ನ ಪ್ರಧಾನ ಜವಾಬ್ದಾರಿಯನ್ನು ಸೂಚಿಸುತ್ತಾ ಮತ್ತು ಅದೇ ಸಮಯದಲ್ಲಿ, ಆಕೆಯ ನಂಬಿಕೆ ಮತ್ತು ದೃಢಸಂಕಲ್ಪವನ್ನು ಪರೀಕ್ಷಿಸುತ್ತಾ, ಯೇಸು ಕನಿಕರದಿಂದ ಆಕೆಗೆ ವಿವರಿಸಿದ್ದು: “[ಇಸ್ರಾಯೇಲಿನ] ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ [ಅನ್ಯ ಜನಾಂಗದವರಿಗೆ] ಹಾಕುವದು ಸರಿಯಲ್ಲ.”
ತನ್ನ ಕುಲಕ್ಕೆ ಮಾಡಲಾದ ನಕಾರಾತ್ಮಕ ಉಲ್ಲೇಖದಿಂದ ಕೋಪಗೊಳ್ಳುವ ಬದಲಿಗೆ, ಹೀಗೆ ಉತ್ತರಿಸುವ ಮೂಲಕ ಆಕೆ ತನ್ನ ವಿಚಾರಣೆಯಲ್ಲಿ ದೈನ್ಯವಾಗಿ ಪಟ್ಟುಹಿಡಿದಳು: “ಸ್ವಾಮೀ, ಆ ಮಾತು ನಿಜವೇ; ನಾಯಿಮರಿಗಳಂತೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ.”
ಆಕೆಯ ನಂಬಿಕೆಯನ್ನು ಪ್ರಶಂಸಿಸುವ ಮತ್ತು ಆಕೆಯ ಕೋರಿಕೆಗಳನುಸಾರ ಅನುಕೂಲಕರವಾಗಿ ಕ್ರಿಯೆಗೈಯುವ ಮೂಲಕ ಯೇಸು ಆ ಗ್ರೀಕ್ ಸ್ತ್ರೀಯ ಪಟ್ಟುಹಿಡಿಯುವಿಕೆಗೆ ಪ್ರತಿಫಲವನ್ನು ನೀಡಿದನು. ಆಕೆ ಮನೆಗೆ ಹಿಂದಿರುಗಿ ತನ್ನ ಮಗಳು ಸಂಪೂರ್ಣವಾಗಿ ಗುಣಹೊಂದಿರುವುದನ್ನು ಕಂಡಾಗ, ಆಕೆಗಾದ ಆನಂದವನ್ನು ಊಹಿಸಿರಿ!—ಮತ್ತಾಯ 15:21-28; ಮಾರ್ಕ 7:24-30.
ಪ್ರಥಮ ಶತಮಾನದ ಆ ಸ್ತ್ರೀಯಂತೆ, ಯೆಹೋವನನ್ನು ಮೆಚ್ಚಿಸಲು ಮತ್ತು ಆತನ ಅನುಗ್ರಹವನ್ನು ಗಳಿಸಲು ನಮ್ಮ ಪ್ರಯತ್ನಗಳಲ್ಲಿ ನಾವು ಪಟ್ಟುಹಿಡಿಯುವವರಾಗಿರಬೇಕು. ಆ ಗ್ರೀಕ್ ಸ್ತ್ರೀಯ ವಿಷಯದಲ್ಲಾದಂತೆ, “ಒಳ್ಳೇದನ್ನು ಮಾಡುವದರಲ್ಲಿ” ನಮ್ಮ ಪಟ್ಟುಹಿಡಿಯುವಿಕೆಯು ಒಳ್ಳೆಯ ಪ್ರತಿಫಲವನ್ನು ಪಡೆಯುವುದೆಂದು ಬೈಬಲ್ ನಮಗೆ ಆಶ್ವಾಸನೆ ಕೊಡುತ್ತದೆ.—ಗಲಾತ್ಯ 6:9.
ಪಟ್ಟುಹಿಡಿಯುವಿಕೆಯು ಏನಾಗಿದೆ? ಅದರ ಅಗತ್ಯವಿದೆ ಏಕೆ? ಈ ಗುಣವನ್ನು ನಾವು ಕಳೆದುಕೊಳ್ಳುವಂತೆ ಅಥವಾ ತೊರೆದುಬಿಡುವಂತೆ ಯಾವ ಅಂಶಗಳು ಕಾರಣವಾಗಬಹುದು? ನಾವು ಈಗ ನಮ್ಮ ಸೃಷ್ಟಿಕರ್ತನೂ ತಂದೆಯೂ ಆದ ಯೆಹೋವನನ್ನು ಸೇವಿಸುವುದರಲ್ಲಿ ಪಟ್ಟುಹಿಡಿಯುವಿಕೆಯನ್ನು ಅಭ್ಯಸಿಸುವುದಾದರೆ, ಯಾವ ಪ್ರತಿಫಲಗಳನ್ನು ಪಡೆಯಲು ನಾವು ನಿರೀಕ್ಷಿಸಬಲ್ಲೆವು?
“ಪಟ್ಟುಹಿಡಿ” ಎಂಬ ಕ್ರಿಯಾಪದವನ್ನು ಒಂದು ಶಬ್ದಕೋಶವು ಹೀಗೆ ವಿಶದೀಕರಿಸುತ್ತದೆ, “ಅಡಚಣೆಗಳು, ಎಚ್ಚರಿಕೆಗಳು, ಅಥವಾ ತಡೆಗಳ ಹೊರತೂ ಯಾವುದೊ ಉದ್ದೇಶ, ಸ್ಥಿತಿ, ಅಥವಾ ಒಪ್ಪಿಕೊಂಡ ಕಾರ್ಯಕ್ಕೆ ದೃಢವಾಗಿಯೂ ಸ್ಥಿರವಾಗಿಯೂ ಹಿಡಿದುಕೊಳ್ಳುವುದು. . . . ಅಸ್ತಿತ್ವದಲ್ಲಿ ಮುಂದುವರಿ; ಜೀವದಿಂದಿರು.”
ಆತನ ಚಿತ್ತವನ್ನು ಮಾಡುವುದರಲ್ಲಿ ಪಟ್ಟುಹಿಡಿಯುವಂತೆ ಬೈಬಲ್ ಸತತವಾಗಿ ಯೆಹೋವನ ಸೇವಕರನ್ನು ಪ್ರೋತ್ಸಾಹಿಸುತ್ತದೆ. ಉದಾಹರಣೆಗೆ, ನಾವು “ಮೊದಲಾಗಿ ದೇವರ ರಾಜ್ಯಕ್ಕಾಗಿಯೂ . . . ತವಕ” ಪಡುವಂತೆ, “ಒಳ್ಳೇದನ್ನೇ ಭದ್ರವಾಗಿ ಹಿಡಿದು” ಕೊಳ್ಳುವಂತೆ, “ಬೇಸರಗೊಳ್ಳದೆ ಪ್ರಾರ್ಥನೆ” ಮಾಡುವಂತೆ, ಮತ್ತು ಒಳ್ಳೆಯದನ್ನು ಮಾಡುವುದರಲ್ಲಿ “ಬೇಸರಗೊಳ್ಳದೆ” ಇರುವಂತೆ ಹೇಳಲ್ಪಟ್ಟಿದ್ದೇವೆ.—ಮತ್ತಾಯ 6:33; 1 ಥೆಸಲೊನೀಕ 5:21; ರೋಮಾಪುರ 12:12; ಗಲಾತ್ಯ 6:9.
ಅನುದಿನದ ಜೀವಿತದಲ್ಲಿ, ಬದುಕಿ ಉಳಿಯುವ ಸಲುವಾಗಿ ನಾವೆಲ್ಲರೂ ಪಡೆದಿರಬೇಕಾದ ಮತ್ತು ವಿಕಸಿಸಬೇಕಾದ ಒಂದು ಗುಣ ಪಟ್ಟುಹಿಡಿಯುವಿಕೆಯಾಗಿದೆ. ಅದಿಲ್ಲದೆ ನಿಜವಾದ, ಶಾಶ್ವತ ಮೌಲ್ಯದ ಏನನ್ನೂ ಸಾಧಿಸಲು ನಮಗೆ ಸಾಧ್ಯವಿಲ್ಲ. ಎದ್ದು ನಿಲ್ಲಲು ಮತ್ತು ಅದರ ತೂಗಾಟದ ಪ್ರಥಮ ಹೆಜ್ಜೆಗಳನ್ನಿಡಲು ಪ್ರಯತ್ನಿಸುತ್ತಿರುವ ಒಂದು ಮಗುವಿನ ಉದಾಹರಣೆಯನ್ನು ಪರಿಗಣಿಸಿರಿ. ಒಂದೇ ದಿನದಲ್ಲಿ ನಿಲ್ಲಲು ಮತ್ತು ಸರಳವಾಗಿ ನಡೆದಾಡಲು ಕಲಿಯುವುದು, ಒಂದು ಶಿಶುವಿಗೆ ಬಹಳ ಅಸಾಮಾನ್ಯವಾಗಿರುವುದು. ಶಿಶುಗಳೋಪಾದಿ ನಾವೆಲ್ಲರೂ ನಡೆಯುವುದರಲ್ಲಿ ಒಂದಿಷ್ಟು ಯಶಸ್ಸನ್ನು ಅಂತಿಮವಾಗಿ ಗಳಿಸುವ ಮುಂಚೆ, ಪ್ರಾಯಶಃ ನಾವು ಅನೇಕ ಸಲ ಪ್ರಯತ್ನಿಸಿ ವಿಫಲರಾಗಿದ್ದೇವೆ. ಒಂದುವೇಳೆ ಪ್ರಥಮ ಸಲ ನಾವು ವಿಫಲರಾದಾಗ ಪ್ರಯತ್ನಿಸುವುದನ್ನು ನಿಲ್ಲಿಸಲು ನಿರ್ಧರಿಸಿದ್ದರೆ ಏನು ಸಂಭವಿಸುತ್ತಿತ್ತು? ನಮ್ಮ ಕೈಗಳು ಮತ್ತು ಮೊಣಕಾಲುಗಳ ಸಹಾಯದಿಂದ ನಾವು ಇನ್ನೂ ಅಂಬೆಗಾಲಿಡುತ್ತಾ ಇರುತ್ತಿದೆವ್ದು! ಸಾರ್ಥಕ ಗುರಿಗಳನ್ನು ಸಾಧಿಸಲು ಮತ್ತು ಕೌಶಲಗಳಲ್ಲಿ ಹಾಗೂ ಸ್ವಗೌರವದಲ್ಲಿ ಅನುಗುಣವಾದ ಏಳಿಗೆಯನ್ನು ಪಡೆಯಲು ಪಟ್ಟುಹಿಡಿಯುವಿಕೆ ಆವಶ್ಯಕ. ಒಂದು ಜನಪ್ರಿಯ ಗಾದೆಯು ಹೇಳುವುದು, “ಗೆಲ್ಲುವವರು ಎಂದೂ ಹಿಂಜರಿಯುವುದಿಲ್ಲ, ಹಿಂಜರಿಯುವವರು ಎಂದೂ ಗೆಲ್ಲುವುದಿಲ್ಲ.”
ವಿಶೇಷ ಸಾಮರ್ಥ್ಯಗಳು ಅಥವಾ ಮೇಧಾ ಶಕ್ತಿಗಳು ಸಫಲತೆಯ ಖಾತರಿ ಕೊಡುವುದಿಲ್ಲವೆಂದು ದೀರ್ಘಸಮಯದ ಪಯನೀಯರರು ಗ್ರಹಿಸುತ್ತಾರೆ. ಅದು ಪಟ್ಟುಹಿಡಿಯುವುದನ್ನು, ಯೆಹೋವನ ಚಿತ್ತವನ್ನು ಪೂರ್ಣವಾಗಿ ಮಾಡುವ ಒಂದು ದೃಢಸಂಕಲ್ಪವನ್ನು, ಮತ್ತು ತಾತ್ಕಾಲಿಕ ತಡೆಗಳ—ಖಿನ್ನತೆ—ಎದುರಿನಲ್ಲಿಯೂ ಧೈರ್ಯವನ್ನು ಕೇಳಿಕೊಳ್ಳುತ್ತದೆ. ಅನಂತವಾಗಿ ದೇವರ ಆಶೀರ್ವಾದಗಳಲ್ಲಿ ಪಾಲ್ಗೊಳ್ಳುವ ಗುರಿಯನ್ನು ಸ್ಪಷ್ಟವಾಗಿಗಿ ಕೇಂದ್ರಬಿಂದುವಾಗಿಡಬೇಕು.
ಯೆಹೋವನ ಅನುಗ್ರಹವನ್ನು ಪಡೆಯಲು ಮತ್ತು ಜೀವನದೋಟದಲ್ಲಿ ಜಯಶಾಲಿಗಳಾಗಲು ಪ್ರಯತ್ನಿಸುವ ನಮ್ಮೆಲ್ಲರಿಗೆ ಪಟ್ಟುಹಿಡಿಯುವಿಕೆ, ಅವಿರತ ಪ್ರಯತ್ನ, ಮತ್ತು ಸಹನೆ ಅಗತ್ಯ. ಈ ಗುಣಗಳಿಲ್ಲದೆ ನಾವು ಯೆಹೋವನ ಅನುಗ್ರಹವನ್ನು ಮತ್ತು ನಿಜ ಜೀವನದ ಪ್ರತಿಫಲವನ್ನು ಬಹುಶಃ ಕಳೆದುಕೊಳ್ಳಬಹುದು.—ಕೀರ್ತನೆ 18:20; ಮತ್ತಾಯ 24:13; 1 ತಿಮೊಥೆಯ 6:18, 19.
ಒಬ್ಬ ಕ್ರೈಸ್ತನಿಗೆ ತನ್ನ ಇತರ ಕರ್ತವ್ಯಗಳಿಗಿಂತ ಆತ್ಮಿಕ ಚಟುವಟಿಕೆಗಳಲ್ಲಿ ಪಟ್ಟುಹಿಡಿದಿರುವುದು, ಅನೇಕವೇಳೆ ಹೆಚ್ಚು ಕಷ್ಟಕರವಾಗಿರುತ್ತದೆ. ತನ್ನ ಕುಟುಂಬದ ಶಾರೀರಿಕ ಆವಶ್ಯಕತೆಗಳ ಕಾಳಜಿವಹಿಸಲು ಒಬ್ಬ ಮನುಷ್ಯನು ಐಹಿಕ ಕೆಲಸದಲ್ಲಿ ಕಷ್ಟಪಟ್ಟು ಕೆಲಸಮಾಡುತ್ತಾ ಇರಬಹುದಾದರೂ, ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಕ್ರಮವಾದೊಂದು ಬೈಬಲ್ ಅಧ್ಯಯನವನ್ನು ನಡೆಸಲು ಅವನು ‘ತೀರ ಬಳಲಿ’ ಹೋಗಿರಬಹುದು. ಅನೇಕರಿಗೆ ಕ್ರೈಸ್ತ ಕಾರ್ಯಗಳಲ್ಲಿ ಪಟ್ಟುಹಿಡಿಯುವುದನ್ನು ಇಷ್ಟು ಕಷ್ಟಕರವಾಗಿ ಮಾಡುವ ಅಂಶಗಳಾವುವು?
ಒಂದು ಅಂಶವು, ನಮ್ಮ ಸ್ವಂತ ವೈಯಕ್ತಿಕ ಕುಂದುಗಳಿಂದ ಮತ್ತು ಬಲಹೀನತೆಗಳಿಂದ ಬರುವ ನಿರುತ್ಸಾಹವಾಗಿದೆ. ನಮ್ಮ ತಪ್ಪುಗಳ ಕುರಿತು ನಾವು ಯಾವಾಗಲೂ ನಕಾರಾತ್ಮಕವಾಗಿ ಯೋಚಿಸುವುದಾದರೆ, ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಲು ಯೆಹೋವನಿಗೆ ಎಂದೂ ಸಾಧ್ಯವಿಲ್ಲವೆಂದು ಎಣಿಸುತ್ತಾ, ನಾವು ಹತಾಶರಾಗಿ ಬಿಟ್ಟುಬಿಡಬಹುದು.
ಇನ್ನೊಂದು ಅಂಶವು, ಅನೈತಿಕತೆ, ಭ್ರಷ್ಟತೆ, ಮತ್ತು ದ್ವೇಷದ ಲೌಕಿಕ ವಾತಾವರಣವಾಗಿದೆ. (1 ಯೋಹಾನ 2:15, 16) ಲೌಕಿಕ ಪ್ರಭಾವವು ಕೆಡಿಸಬಲ್ಲ ಅಥವಾ ಹಾನಿಗೊಳಿಸಬಲ್ಲ “ಸದಾಚಾರ” ಗಳಲ್ಲಿ ಒಂದು, ಕ್ರೈಸ್ತ ಪಟ್ಟುಹಿಡಿಯುವಿಕೆಯಾಗಿದೆ.—1 ಕೊರಿಂಥ 15:33.
ಸಾರುವ ಕೆಲಸದಲ್ಲಿ ನಮ್ಮ ಪಟ್ಟುಹಿಡಿಯುವಿಕೆಯು, ನಮ್ಮ ಪವಿತ್ರ ಸೇವೆಗೆ ಸಾರ್ವಜನಿಕರ ವಿರೋಧ ಅಥವಾ ಔದಾಸೀನ್ಯದ ಮೂಲಕ ಬಲಹೀನಗೊಳಿಸಲ್ಪಡಸಾಧ್ಯವಿದೆ. ಆಶಾಭಂಗದ ಕಾರಣ ನಮ್ಮ ಟೆರಿಟೊರಿಯಲ್ಲಿರುವ ಜನರು ಸತ್ಯವನ್ನು ಬಯಸುವುದೇ ಇಲ್ಲವೆಂದು ನಾವು ತೀರ್ಮಾನಿಸಬಹುದು. ಇದು ಶುಶ್ರೂಷಾ ಸೇವೆಯ ನಮ್ಮ ವಿಶೇಷ ಸುಯೋಗವನ್ನು ನಾವು ತೊರೆಯುವಂತೆ ಮತ್ತು ‘ಪ್ರಯೋಜನವೇನು?’ ಎಂದು ಕೇಳುವಂತೆ ಮಾಡಬಲ್ಲದು.
ನಾವು ಲೋಕದ ಆತ್ಮವಾದ, ವಿಷಯಲೋಲುಪತೆಯಿಂದ ಸಹ ಪ್ರಭಾವಿತರಾಗಬಲ್ಲೆವು. ಬೇರೆಯವರೆಲ್ಲರೂ ಸುಖಾನುಭವಿಸುವಾಗ ಅಥವಾ ತೊಂದರೆ ತೆಗೆದುಕೊಳ್ಳದೆ ಇರುವಂತೆ ತೋರುವಾಗ ನಾವು ಯಾಕೆ ಇಷ್ಟೊಂದು ಪ್ರಯಾಸಪಟ್ಟು ತ್ಯಾಗಗಳನ್ನು ಮಾಡಬೇಕು?—ಹೋಲಿಸಿ ಮತ್ತಾಯ 16:23, 24.
ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಪಟ್ಟುಹಿಡಿದಿರಲು, ಕ್ರೈಸ್ತೋಚಿತವಾದ ವ್ಯಕ್ತಿತ್ವವನ್ನು ಧರಿಸಿಕೊಳ್ಳುವ ಮತ್ತು ಶರೀರಭಾವಕ್ಕನುಸಾರವಾಗಿ ನಡೆಯದೆ, ಆತ್ಮಕ್ಕನುಸಾರವಾಗಿ ಜೀವಿಸುವ ಅಗತ್ಯ ನಮಗಿದೆ. (ರೋಮಾಪುರ 8:4-8; ಕೊಲೊಸ್ಸೆ 3:10, 12, 14) ವಿಷಯದ ಮೇಲೆ ಯೆಹೋವನ ದೃಷ್ಟಿಕೋನವನ್ನು ಪಡೆದಿರುವುದು, ನಮ್ಮ ಪ್ರಮುಖ ಆತ್ಮಿಕ ಚಟುವಟಿಕೆಗಳನ್ನು ಪೂರೈಸಲು ನಮ್ಮನ್ನು ಶಕ್ತರನ್ನಾಗಿ ಮಾಡುವುದು.—1 ಕೊರಿಂಥ 16:13.
ಪಟ್ಟುಹಿಡಿಯುವಿಕೆಯ ಉದಾಹರಣೆಗಳು
ಅನೇಕ ತೀವ್ರ ಪರೀಕ್ಷೆಗಳ ಮಧ್ಯದಲ್ಲಿಯೂ ಯೆಹೋವನಿಗೆ ನಿಷ್ಠಾವಂತರೂ ನಂಬಿಗಸ್ತರೂ ಆಗಿ ಉಳಿದ ಸೇವಕರ ಅನೇಕ ಚೇತನಗೊಳಿಸುವ ಉದಾಹರಣೆಗಳನ್ನು ಆತನು ನಮಗೆ ಒದಗಿಸಿದ್ದಾನೆ. ಅವುಗಳನ್ನು ಪರಿಗಣಿಸುವ ಮೂಲಕ ನಾವು ಕ್ರೈಸ್ತ ಪಟ್ಟುಹಿಡಿಯುವಿಕೆಯನ್ನು ಹೇಗೆ ವಿಕಸಿಸಬಲ್ಲೆವು ಮತ್ತು ಅಭ್ಯಸಿಸಬಲೆವ್ಲೆಂದು ಮತ್ತು ಅದು ಯಾಕೆ ಅಷ್ಟು ಅಮೂಲ್ಯವೆಂದು ನಾವು ನೋಡುತ್ತೇವೆ.
ಯೆಹೋವನ ನಾಮವನ್ನು ಮಹಿಮೆಪಡಿಸಲು ಅಷ್ಟೊಂದು ಕಷ್ಟಾನುಭವಿಸಿದ ಯೇಸು, ಅತ್ಯಂತ ಮಹಾನ್ ಉದಾಹರಣೆ ಆಗಿದ್ದಾನೆ. ಅವನ ಪಟ್ಟುಹಿಡಿದ ಭಕ್ತಿಯ ಕ್ರಿಯೆಗಳನ್ನು ಲಕ್ಷ್ಯಕೊಟ್ಟು ಅಭ್ಯಸಿಸುವಂತೆ ಬೈಬಲ್ ನಮಗೆ ಉತ್ತೇಜನ ನೀಡುತ್ತದೆ: “ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ. ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.”—ಇಬ್ರಿಯ 12:1-3.
ಜೀವನದೋಟವು ಸ್ವಲ್ಪ ದೂರದ್ದಲ್ಲ, ಬಹು ದೂರದ ಓಟವಾಗಿದೆ. ಅದಕ್ಕಾಗಿಯೇ ನಮಗೆ ಕ್ರಿಸ್ತನಂತಹ ಪಟ್ಟುಹಿಡಿಯುವಿಕೆಯ ಅಗತ್ಯವಿದೆ. ಓಟದ ಹೆಚ್ಚಿನ ಭಾಗದ ವರೆಗೆ ಗುರಿ, ಕೊನೆಯ ಗೆರೆ ಅಗೋಚರವಾಗಿರಬಹುದು. ವಿಶೇಷ ಪ್ರಯತ್ನವನ್ನು ಕೋರುವ ಇಡೀ ಮಾರ್ಗದ ಉದ್ದಕ್ಕೂ, ನಾವು ಅದನ್ನು ಮಾನಸಿಕವಾಗಿ ತಲಪಸಾಧ್ಯವಾಗುವಂತೆ ಗುರಿಯು ನಮ್ಮ ಮನೋದೃಷ್ಟಿಯಲ್ಲಿ ಸ್ಪಷ್ಟವಾಗಿಗಿರಬೇಕು. ಯೇಸುವಿಗೆ ತನ್ನ ಮುಂದೆ ಅಂತಹ ಒಂದು ಮಾನಸಿಕ ಬಿಂಬವಿತ್ತು, ಅದು ಯಾವುದೆಂದರೆ, “ತನ್ನ ಮುಂದೆ ಇಟ್ಟಿದ್ದ ಸಂತೋಷ.”
ಇಂದು ಕ್ರೈಸ್ತರಿಗೆ ಈ ಆನಂದದಲ್ಲಿ ಏನು ಒಳಗೊಂಡಿದೆ? ಒಂದು ವಿಷಯವೇನೆಂದರೆ, ಕೆಲವರಿಗೆ ಸ್ವರ್ಗದಲ್ಲಿ ಅಮರ ಜೀವನದ ಪ್ರತಿಫಲ ಮತ್ತು ಅನೇಕರಿಗೆ ಭೂಮಿಯ ಮೇಲೆ ಸದಾಕಾಲದ ಜೀವನ. ಮತ್ತು ಅದು, ಒಬ್ಬನು ಯೆಹೋವನ ಹೃದಯಕ್ಕೆ ಆನಂದವನ್ನು ತಂದಿದ್ದಾನೆ ಮತ್ತು ದೇವರ ನಾಮದ ನಿರ್ದೋಷೀಕರಣದಲ್ಲಿ ಪಾತ್ರ ವಹಿಸಿದ್ದಾನೆ ಎಂದು ತಿಳಿಯುವುದರಿಂದ ಬರುವ ತೃಪ್ತಿಯ ಅನಿಸಿಕೆಯಾಗಿದೆ.—ಜ್ಞಾನೋಕ್ತಿ 27:11; ಯೋಹಾನ 17:4.
ಈ ಆನಂದದಲ್ಲಿ, ಯೆಹೋವನೊಂದಿಗೆ ಒಂದು ಆಪ್ತ, ಹರ್ಷಭರಿತ ಸಂಬಂಧವೂ ಸೇರಿದೆ. (ಕೀರ್ತನೆ 40:8; ಯೋಹಾನ 4:34) ಅಂತಹ ಒಂದು ಸಂಬಂಧವು, ಓಟವನ್ನು ಸೈರಣೆಯಿಂದ ಓಡುವಂತೆ ಮತ್ತು ಬಿಟ್ಟುಬಿಡದಂತೆ ಒಬ್ಬನಿಗೆ ಬಲವನ್ನು ಕೊಡುತ್ತಾ, ಚೇತನದಾಯಕವೂ ಜೀವ ಪೋಷಕವೂ ಆಗಿದೆ. ಇನ್ನೂ ಹೆಚ್ಚಾಗಿ, ತನ್ನ ಸೇವಕರ ಮೇಲೆ ಪವಿತ್ರಾತ್ಮವನ್ನು ಸುರಿಸುವ ಮೂಲಕ ಯೆಹೋವನು ಆ ಸಂಬಂಧವನ್ನು ಆಶೀರ್ವದಿಸುತ್ತಾನೆ. ಇದು ಆನಂದದ ವೃದ್ಧಿ ಮತ್ತು ಆನಂದಭರಿತ ಚಟುವಟಿಕೆಯಲ್ಲಿ ಫಲಿಸುತ್ತದೆ.—ರೋಮಾಪುರ 12:11; ಗಲಾತ್ಯ 5:22.
ಯೋಬನ ಪಟ್ಟುಹಿಡಿದ ನಂಬಿಕೆಯ ಉದಾಹರಣೆಯನ್ನು ಪರಿಗಣಿಸುವುದು ಪ್ರಯೋಜನಕರ. ಅವನು ಅಪರಿಪೂರ್ಣನೂ ತನ್ನ ಸನ್ನಿವೇಶದ ಸೀಮಿತ ಜ್ಞಾನವನ್ನು ಹೊಂದಿದವನೂ ಆಗಿದ್ದನು. ಆದುದರಿಂದ ಕೆಲವೊಮ್ಮೆ, ಅವನು ಆತ್ಮಸಮರ್ಥನೆ ಹಾಗೂ ನಿರಾಶೆಯ ಮಾನಸಿಕ ಮನೋಭಾವದೊಳಗೆ ಜಾರಿಹೋದನು. ಹಾಗಿದ್ದರೂ, ಯೆಹೋವನಿಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಎಂದಿಗೂ ಆತನ ಕೈಬಿಡದಿರಲು, ಸುಸಂಗತವಾಗಿ ಅವನು ಒಂದು ದೃಢ ನಿರ್ಧಾರವನ್ನು ಪ್ರದರ್ಶಿಸಿದನು. (ಯೋಬ 1:20-22; 2:9, 10; 27:2-6) ಅವನಿಗೆ ಆತ್ಮಿಕ ಹಾಗೂ ಪ್ರಾಪಂಚಿಕ ಆಶೀರ್ವಾದಗಳನ್ನು ಮತ್ತು ಅನಂತ ಜೀವನದ ನಿರೀಕ್ಷೆಯನ್ನು ಕೊಡುತ್ತಾ, ಯೆಹೋವನು ಯೋಬನನ್ನು ಅವನ ಪಟ್ಟುಹಿಡಿದ ಭಕ್ತಿಗಾಗಿ ಬಹುಮಾನಿಸಿದನು. (ಯೋಬ 42:10-17; ಯಾಕೋಬ 5:10, 11) ಯೋಬನಂತೆ ಈಗ ನಮ್ಮ ಜೀವಿತದಲ್ಲಿ ನಾವು ಹೆಚ್ಚಿನ ಕಷ್ಟಾನುಭವ ಮತ್ತು ನಷ್ಟವನ್ನು ಅನುಭವಿಸಬಹುದಾದರೂ, ನಮ್ಮ ನಂಬಿಗಸ್ತ ಸೈರಣೆಯ ಮೇಲೂ ಯೆಹೋವನ ಆಶೀರ್ವಾದದ ಆಶ್ವಾಸನೆಯನ್ನು ನಾವು ಪಡೆದಿರಬಲ್ಲೆವು.—ಇಬ್ರಿಯ 6:10-12.
ಆಧುನಿಕ ಸಮಯಗಳಲ್ಲಿ, ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಯೆಹೋವನ ಸಾಕ್ಷಿಗಳು ಸಾಮೂಹಿಕವಾಗಿ ಕ್ರೈಸ್ತ ಪಟ್ಟುಹಿಡಿಯುವಿಕೆಯನ್ನು ಪ್ರದರ್ಶಿಸಿದ್ದಾರೆ. ಉದಾಹರಣೆಗೆ, ಅವರ ಪಟ್ಟುಹಿಡಿದ ಮನೆಯಿಂದ ಮನೆಯ ಕೆಲಸ ಮತ್ತು ಇತರ ಸಾರ್ವಜನಿಕ ಸಾರುವಿಕೆಯು, ಅವರಿಗೂ ಅವರ ಸಂದೇಶಕ್ಕೂ ಜಗದ್ವ್ಯಾಪಕ ಗಮನವನ್ನು ತಂದಿದೆ. ವಿರೋಧ ಮತ್ತು ಪರೀಕ್ಷೆಗಳ ಹೊರತೂ ಸುವಾರ್ತೆಯನ್ನು ಸಾರಲು ಅವರಿಗಿರುವ ಹುರುಪು ಮತ್ತು ದೃಢಸಂಕಲ್ಪದ ಕುರಿತು, ಮಾಧ್ಯಮವು ಹಲವಾರು ಉಲ್ಲೇಖಗಳನ್ನು ಮಾಡಿದೆ. ಈ ವ್ಯಂಗ್ಯ ಚಿತ್ರಗಳಲ್ಲಿ ಒಂದು, “ಯೆಹೋವನ ಸಾಕ್ಷಿಗಳಿಂದ ಯಾರೂ ತಪ್ಪಿಸಿಕೊಳ್ಳಲಾರರು” ಎಂಬ ಹೇಳಿಕೆಯನ್ನು ಸಹ ಪ್ರದರ್ಶಿಸಿತು!—ಮತ್ತಾಯ 5:16.
ಶುಶ್ರೂಷೆಯಲ್ಲಿ ಹೆಚ್ಚಾದ ಫಲದಿಂದ ಯೆಹೋವನು ತನ್ನ ಸಾಕ್ಷಿಗಳ ಪಟ್ಟುಹಿಡಿದ ಪ್ರಯತ್ನಗಳನ್ನು ಆಶೀರ್ವದಿಸಿದ್ದಾನೆ. 5,30,00,000 ಕ್ಕಿಂತಲೂ ಹೆಚ್ಚು ಜನರಿದ್ದ ಒಂದು ರಾಷ್ಟ್ರಕ್ಕೆ ಸುಮಾರು 10,000 ಸಾಕ್ಷಿಗಳು ಸಾರುತ್ತಿದ್ದಾಗ, ಹಿಂದೆ 1960 ರಲ್ಲಿ ಇಟಲಿಯಲ್ಲಿದ್ದ ಕೆಲವು ಬುದ್ಧಿವಂತ ಸಾಕ್ಷಿಗಳ ಅನುಭವವನ್ನು ಗಮನಿಸಿರಿ. 6,000 ಜನರಿದ್ದ ಒಂದು ಪಟ್ಟಣದಲ್ಲಿ ಸಾಕ್ಷಿಗಳೇ ಇರಲಿಲ್ಲ. ಭೇಟಿನೀಡುತ್ತಿದ್ದ ಸಹೋದರರು ತಮ್ಮ ಶುಶ್ರೂಷೆಗೆ ಹಗೆಯ ಪ್ರತಿಕ್ರಿಯೆಯನ್ನು ಪಡೆದರು.
ಪ್ರತಿ ಸಲ ಸಾರಲು ಅಲ್ಲಿಗೆ ಸಹೋದರರು ಹೋದಾಗ, ಪಟ್ಟಣದ ಹೆಂಗಸರಲ್ಲಿ ಅನೇಕರು ಮತ್ತು ಗಂಡಸರು ಸಹ ಹುಡುಗರನ್ನು ಒಟ್ಟುಗೂಡಿಸಿ, ಸಾಕ್ಷಿಗಳನ್ನು ಹಿಂಬಾಲಿಸುವಂತೆ, ಅವರನ್ನು ನೋಡಿ ಸಿಳ್ಳು ಹಾಕುವಂತೆ ಮತ್ತು ಬಹಳಷ್ಟು ಸದ್ದುಮಾಡುವಂತೆ ಅವರನ್ನು ಉತ್ತೇಜಿಸಿದರು. ಈ ನಡವಳಿಕೆಯ ಕೊಂಚ ನಿಮಿಷಗಳ ಬಳಿಕ, ಆ ಸ್ಥಳವನ್ನು ಬಿಟ್ಟು ಮತ್ತೊಂದು ಪಟ್ಟಣಕ್ಕೆ ಹೋಗುವಂತೆ ಸಹೋದರರು ಒತ್ತಾಯಿಸಲ್ಪಟ್ಟರು. ಈ ಪಟ್ಟಣದ ಎಲ್ಲ ನಿವಾಸಿಗಳಿಗೆ ಕಡಿಮೆಪಕ್ಷ ಒಂದು ಪೂರ್ಣ ಸಾಕ್ಷಿಯನ್ನಾದರೂ ಕೊಡುವ ಪ್ರಯತ್ನದಲ್ಲಿ, ತಾವು ಎಳೆಯ ಹುಡುಗರಿಂದ ಪೀಡಿಸಲ್ಪಡರೆಂಬ ನಿರೀಕ್ಷೆಯಿಂದ ಹೆಚ್ಚು ಮಳೆ ಬೀಳುತ್ತಿರುವ ದಿನಗಳಂದು ಮಾತ್ರ ಅಲ್ಲಿ ಸಾರಲು ಸಹೋದರರು ನಿರ್ಧರಿಸಿದರು. ಕೇವಲ ಪ್ರಚಾರಕರನ್ನು ತೊಂದರೆಪಡಿಸುವ ಸಲುವಾಗಿ ತಾವು ನೆನೆಯಲು ಪಟ್ಟಣದ ಜನರು ಇಷ್ಟಪಡಲಿಲ್ಲವೆಂದು ಅವರು ಗಮನಿಸಿದರು. ಈ ರೀತಿಯಲ್ಲಿ ಒಂದು ಒಳ್ಳೆಯ ಸಾಕ್ಷಿಯು ಕೊಡಲ್ಪಟ್ಟಿತು. ಆಸಕ್ತ ಜನರನ್ನು ಕಂಡುಕೊಳ್ಳಲಾಯಿತು. ಹೊಸ ಬೈಬಲ್ ಅಧ್ಯಯನಗಳು ಆರಂಭಿಸಲ್ಪಟ್ಟವು. ಫಲಸ್ವರೂಪವಾಗಿ, ಆ ಚಿಕ್ಕ ಪಟ್ಟಣದಲ್ಲಿ ಏಳಿಗೆ ಹೊಂದುವ ಒಂದು ಸಭೆಯು ಸ್ಥಾಪಿಸಲ್ಪಟ್ಟಿತು ಮಾತ್ರವಲ್ಲ, ಸಾರುವ ಕಾರ್ಯವು ಬಿಸಿಲಿನ ದಿನಗಳಲ್ಲಿಯೂ ಮಾಡಲ್ಪಡಲು ಆರಂಭವಾಯಿತು. ಆ ಪ್ರದೇಶದಲ್ಲಿ ಮತ್ತು ಇಟಲಿಯ ಸಾದ್ಯಂತವಾಗಿ ತನ್ನ ಸಾಕ್ಷಿಗಳ ಪಟ್ಟುಹಿಡಿಯುವಿಕೆಯನ್ನು ಆಶೀರ್ವದಿಸಲು ಯೆಹೋವನು ಮುಂದುವರಿದಿದ್ದಾನೆ. ಆ ದೇಶದಲ್ಲಿ ಈಗ 2,00,000 ಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳಿದ್ದಾರೆ.
ಸರಿಯಾದದ್ದನ್ನು ಮಾಡುವುದರಲ್ಲಿ ಪಟ್ಟುಹಿಡಿಯುವಿಕೆಯ ಪ್ರತಿಫಲಗಳು ಮಹತ್ತರವಾಗಿವೆ. ದೇವರ ಆತ್ಮದ ಶಕಿಯ್ತಿಂದ ಯೆಹೋವನ ಸಾಕ್ಷಿಗಳು, ಲಕ್ಷಾಂತರ ಜನರಿಗೆ ಮನೆಬಾಗಿಲುಗಳಲ್ಲಿ ಮತ್ತು ಬೇರೆ ರೀತಿಗಳಲ್ಲಿ ರಾಜ್ಯದ ಸುವಾರ್ತೆಯನ್ನು ಸಾರುವ ಒಂದು ಅಭೂತಪೂರ್ವ ಸಾಹಸಕಾರ್ಯವನ್ನು ಮಾನವ ಇತಿಹಾಸದಲ್ಲಿ ಸಾಧಿಸಲು ಶಕ್ತರಾಗಿದ್ದಾರೆ. (ಜೆಕರ್ಯ 4:6) ಯೆಹೋವನ ಭೂಸಂಸ್ಥೆಯ ಆಶ್ಚರ್ಯಕರ ಬೆಳವಣಿಗೆ ಮತ್ತು ಜೀವಶಕ್ತಿಯಲ್ಲಿ ನೆರವೇರಿದ ಬೈಬಲ್ ಪ್ರವಾದನೆಯನ್ನು ಅವರು ಆನಂದಪೂರ್ಣರಾಗಿ ಕಂಡಿದ್ದಾರೆ. (ಯೆಶಾಯ 54:2; 60:22) ದೇವರ ಎದುರಿನಲ್ಲಿ ಅವರಿಗೆ ಒಂದು ಶುದ್ಧ ಮನಸ್ಸಾಕ್ಷಿಯಿದೆ ಮತ್ತು ಅವರು ಅನಂತ ಕಾಲದ ಜೀವನದ ನಿರೀಕ್ಷೆಯಲ್ಲಿ ಹರ್ಷಿಸುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಅವರು ಸೃಷ್ಟಿಕರ್ತನಾದ ಯೆಹೋವ ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಅನುಭವಿಸುತ್ತಾರೆ.—ಕೀರ್ತನೆ 11:7.
[ಪುಟ 25 ರಲ್ಲಿರುವ ಚಿತ್ರಗಳು]
ಈ ಗ್ರೀಕ್ ಸ್ತ್ರೀಯ ದೀನ ಪಟ್ಟುಹಿಡಿಯುವಿಕೆಗೆ ಯೇಸು ಪ್ರತಿಫಲ ನೀಡಿದನು
[ಪುಟ 26 ರಲ್ಲಿರುವ ಚಿತ್ರ]
ಇಂದು ಕ್ರೈಸ್ತರ ಮುಂದಿಡಲ್ಪಟ್ಟಿರುವ ಆನಂದದಲ್ಲಿ, ಪ್ರಮೋದವನದಲ್ಲಿನ ಜೀವನ ಸೇರಿದೆ