ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 8/15 ಪು. 4-7
  • ಭಯವು ಎಂದು ಕೊನೆಗೊಳ್ಳುವುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭಯವು ಎಂದು ಕೊನೆಗೊಳ್ಳುವುದು?
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ನೂತನ ಲೋಕದಲ್ಲಿ ಸುರಕ್ಷೆ
  • ಕಳ್ಳರಿಲ್ಲದ ಒಂದು ಲೋಕ
    ಕಾವಲಿನಬುರುಜು—1993
  • ಪಾತಕದ ಅಂತ್ಯ ಈಗ ಸಮೀಪ!
    ಕಾವಲಿನಬುರುಜು—1990
  • ಅಪರಾಧಗಳ ಸಮಸ್ಯೆಗೆ ಪರಿಹಾರವಿದೆಯೋ?
    ಎಚ್ಚರ!—2008
  • ಶಸ್ತ್ರಧಾರಿ ಕಳ್ಳರು ಆಕ್ರಮಿಸುವಾಗ
    ಕಾವಲಿನಬುರುಜು—1998
ಇನ್ನಷ್ಟು
ಕಾವಲಿನಬುರುಜು—1995
w95 8/15 ಪು. 4-7

ಭಯವು ಎಂದು ಕೊನೆಗೊಳ್ಳುವುದು?

ನಿಜ ಸುರಕ್ಷೆಯು, 2,000 ವರ್ಷಗಳ ಹಿಂದೆ ಜೀವಿಸಿದ್ದ ಒಬ್ಬ ಮನುಷ್ಯನೊಂದಿಗೆ ಜತೆಗೂಡಿದೆಯೆಂದು ತಿಳಿಯಲು ನಿಮಗೆ ಆಶ್ಚರ್ಯವಾಗುವುದೊ? ಪ್ರೀತಿಯ ಆವಶ್ಯಕತೆಯನ್ನು ತೋರಿಸುತ್ತಾ, ಯೇಸು ಕ್ರಿಸ್ತನು ಒಂದು ಗಮನಾರ್ಹ ಸಾಮ್ಯವನ್ನು ಹೇಳಿದನು: “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು.” ಇಬ್ಬರು ಪ್ರಯಾಣಿಕರು ಆ ಗಾಯಗೊಂಡವನನ್ನು ಅಲಕ್ಷಿಸಿದರೂ, ಒಬ್ಬ ದಯಾಪರ ಸಮಾರ್ಯದವನು ಕರುಣೆ ತೋರಿಸಿದನು. ಆದರೂ, ಪಾತಕದ ಬಲಿಗಳಿಗೆ ಇಂದು ಯಾರು ಚಿಂತೆ ತೋರಿಸುತ್ತಾರೆ? ಭಯದಿಂದ ಯಾವ ಬಿಡುಗಡೆಯನ್ನು ನಾವು ನಿರೀಕ್ಷಿಸಬಲ್ಲೆವು?—ಲೂಕ 10:30-37.

ಅನೇಕರು ದೇವರನ್ನು ನಂಬುತ್ತೇವೆಂದು ಹೇಳಿಕೊಳ್ಳುವಾಗಲೂ, ನಿಯಮ ಮತ್ತು ಕ್ರಮವು ಮನುಷ್ಯನಿಂದಲೇ ಜಾರಿಗೆ ತರಲ್ಪಡಬೇಕೆಂದು ನೆನಸುತ್ತಾರೆ. ಆದರೆ ಹೆಚ್ಚು ಕಠಿನವಾದ ಜೈಲು ಸಜೆಗಳು ಅಥವಾ ಹೆಚ್ಚು ಒಳ್ಳೆಯ ವೇತನದ ಮತ್ತು ಹೆಚ್ಚು ಸಂಖ್ಯೆಯ ಪೊಲೀಸ್‌ ಪಡೆಯು, ಕ್ರೂರ ಪಾತಕವನ್ನು ಕೊನೆಗೊಳಿಸುವುದೊ? ನ್ಯಾಯವಿಧಾಯಕ ಕಾರ್ಯಭಾರಿಗಳು, ಸ್ವಲ್ಪ ಮಟ್ಟಿನ ಸುರಕ್ಷೆಯನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಾರಾದರೂ, ಅಮಲೌಷಧದ ಅಪಪ್ರಯೋಗ, ಸಂಘಟಿತ ಪಾತಕ ಮತ್ತು ಬಡತನವನ್ನು ನಿರ್ಮೂಲಗೊಳಿಸುವರೆಂದು ನೀವು ನಿಜವಾಗಿ ನಂಬುತ್ತೀರೊ? ಆದರೂ, ನೀತಿಗಾಗಿ ನಮ್ಮ ಹಸಿವು ಮತ್ತು ಬಾಯಾರಿಕೆಗಳು ವ್ಯರ್ಥವಾಗಿ ಹೋಗುವ ಅಗತ್ಯವಿಲ್ಲ.—ಮತ್ತಾಯ 5:6.

ಕೀರ್ತನೆ 46:1 ಹೇಳುವುದು: “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು.” ಈ ಮಾತುಗಳು ಕೇವಲ ಅಂದವಾದ ಕವಿತೆಯಾಗಿಲ್ಲವೆಂಬುದನ್ನು ನಾವು ನೋಡುವೆವು.

ನಿಮಗೆ ತಿಳಿದಿರುವಂತೆ, ವಾರ್ತಾಮಾಧ್ಯಮಗಳು ದಿನದಿನವೂ ಒಳಯುದ್ಧಗಳಲ್ಲಿ ಮತ್ತು ಭಯೋತ್ಪಾದಕರ ಆಕ್ರಮಣಗಳಲ್ಲಿ ನಡೆಯುವ ಸ್ವೇಚ್ಛಾಚಾರದ ಕೊಲೆಗಳನ್ನು ವರದಿಸುತ್ತವೆ. ಜಗತ್ತಿನ ಕೆಲವು ಭಾಗಗಳಲ್ಲಿ, ಅನಿಚ್ಛಿತ ಯುವಕರನ್ನು ಅಥವಾ ಪ್ರತ್ಯಕ್ಷ ಸಾಕ್ಷಿಗಳನ್ನು ನಿರ್ಮೂಲಗೊಳಿಸುವುದು ಸರ್ವಸಾಮಾನ್ಯವಾದ ಸಂಗತಿ. ಜೀವವು ಅಷ್ಟು ತುಚ್ಛವಾಗಿರುವುದೇಕೆ? ಅಂತಹ ಹಿಂಸಾಚಾರಕ್ಕೆ ವಿಭಿನ್ನ ಕಾರಣಗಳಿರಬಹುದಾಗ್ಯೂ, ನಾವು ಅಲಕ್ಷಿಸಬಾರದಾದ ಒಂದು ಕಾರಣವಿದೆ.

ದೇವರ ವಾಕ್ಯವಾದ ಬೈಬಲಿಗೆ ಅನುಸಾರವಾಗಿ, “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” (1 ಯೋಹಾನ 5:19) ವಾಸ್ತವದಲ್ಲಿ, ಯೇಸು ಕ್ರಿಸ್ತನು ಪಿಶಾಚನಾದ ಸೈತಾನನನ್ನು ಕೇವಲ ಸುಳ್ಳುಗಾರನೆಂದು ಮಾತ್ರವಲ್ಲ “ಕೊಲೆಗಾರ” ನೆಂದೂ ಗುರುತಿಸಿದನು. (ಯೋಹಾನ 8:44) ಮನುಷ್ಯ ಜಾತಿಯನ್ನು ವಿಭಿನ್ನ ರೀತಿಯಲ್ಲಿ ಪ್ರಭಾವಿಸುತ್ತಾ, ಈ ಬಲಾಢ್ಯ ಆತ್ಮ ಜೀವಿಯು ಇಂದಿನ ಹಿಂಸಾತ್ಮಕ ಕೃತ್ಯಗಳನ್ನು ಪ್ರವರ್ಧಿಸುತ್ತಿದ್ದಾನೆ. “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ,” ಎಂದು ಪ್ರಕಟನೆ 12:12 ಹೇಳುತ್ತದೆ. ಆದರೂ ಸಂತೋಷಕರವಾಗಿಯೆ, ಈ ದುಷ್ಟ ವ್ಯವಸ್ಥೆಯ “ನೂತನಾಕಾಶಮಂಡಲ . . . ನೂತನಭೂಮಂಡಲ” ದಿಂದ ಭರ್ತಿಹೊಂದಲಿದೆ. “ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.

ಒಂದು ನೂತನ ಲೋಕದ ಈ ಆಶ್ಚರ್ಯಕರ ನಿರೀಕ್ಷೆಯು ಮಾತ್ರವಲ್ಲದೆ, ಇದೀಗ ನಮಗಿರುವ ಸಹಾಯವು ಯಾವುದು?

ಅದಕ್ಕೆ ಸಕಾರಾತ್ಮಕ ಉತ್ತರವನ್ನು ನೋಡುವ ಮೊದಲು, ಯಥಾರ್ಥ ಕ್ರೈಸ್ತರಿಗೂ ತಾವು ಪಾತಕದಿಂದ ರಕ್ಷಿಸಲ್ಪಡುತ್ತೇವೆಂಬ ಯಾವ ಖಾತರಿಯೂ ಇಲ್ಲವೆಂಬುದನ್ನು ಜ್ಞಾಪಕದಲ್ಲಿಡುವುದು ಒಳ್ಳೆಯದು. ತಾನು ವೈಯಕ್ತಿಕವಾಗಿ ಎದುರಿಸಿದ ಕೆಲವು ಕೇಡುಗಳನ್ನು ಅಪೊಸ್ತಲ ಪೌಲನು ವರ್ಣಿಸಿದ್ದಾನೆ: ಅವನನ್ನು “ನದಿಗಳ ಅಪಾಯಗಳೂ ಕಳ್ಳರ ಅಪಾಯಗಳೂ [ತನ್ನ] ಸ್ವಂತಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯಗಳೂ ಸಮುದ್ರದಲ್ಲಿ ಅಪಾಯಗಳೂ” ಎದುರಾಗಿದ್ದವು. (2 ಕೊರಿಂಥ 11:26) ಆದರೂ ಈ ಅಪಾಯಗಳನ್ನು ಪೌಲನು ಪಾರಾದನು. ಇಂದು ಸಂಗತಿಯು ಹಾಗೆಯೆ ಇದೆ; ಜಾಗ್ರತೆಯಿಂದಿರುವ ಮೂಲಕ, ನಾವು ಇನ್ನೂ ನಮ್ಮ ಕೆಲಸಗಳನ್ನು ಸಾಧ್ಯವಾದಷ್ಟು ಯಥಾರೀತಿಯಲ್ಲಿ ನಿರ್ವಹಿಸಬಲ್ಲೆವು. ಸಹಾಯ ನೀಡುವ ಕೆಲವು ವಿಷಯಗಳನ್ನು ನಾವು ಪರಿಗಣಿಸೋಣ.

ಜನರು ಇತರರನ್ನು ನಿಕಟವಾಗಿ ಅವಲೋಕಿಸುವುದರಿಂದ, ಒಬ್ಬನು ಒಂದು ಅಪಾಯಕರ ನೆರೆಹೊರೆಯಲ್ಲಿ ವಾಸಿಸುವಲ್ಲಿ, ಅವನ ಸ್ವದರ್ತನೆಯು ಒಂದು ಭದ್ರತೆಯಾಗಿರಬಲ್ಲದು. ಯಾಕೆಂದರೆ ಜನರು ಇತರರನ್ನು ನಿಕಟವಾಗಿ ಅವಲೋಕಿಸುತ್ತಾರೆ. ಕಳ್ಳರು ಪಾತಕಗಳನ್ನು ಯೋಜಿಸಿ, ನಿರ್ವಹಿಸುತ್ತಾರಾದರೂ, ಅನೇಕರು ತಮ್ಮನ್ನು ಸಾಧಾರಣ ಜನರಾಗಿ ಪರಿಗಣಿಸಿಕೊಳ್ಳುತ್ತಾರೆ. ಅವರು ಏನನ್ನು ಮಾಡುತ್ತಾರೊ ಅದನ್ನು ಟೀಕಿಸುವುದನ್ನು ವರ್ಜಿಸಿರಿ, ಮತ್ತು ಅವರು ಯಾವುದರಲ್ಲಿ ಒಳಗೂಡಿದ್ದಾರೆಂಬುದನ್ನು ಕಂಡುಹಿಡಿಯಲು ಪ್ರಯತ್ನಿಸದಿರಿ. ಹೀಗೆ, ಪ್ರತೀಕಾರಕ್ಕೆ ನಿಮ್ಮನ್ನು ಗುರಿಪಡಿಸುವ ಶಕ್ಯತೆಯನ್ನು ನೀವು ಕಡಿಮೆಗೊಳಿಸಬಲ್ಲಿರಿ. ಹೊಸ ವಸ್ತುವನ್ನು ಯಾರು ಖರೀದಿಸಿದ್ದಾರೆ ಅಥವಾ ಯಾರು ರಜೆಯಲ್ಲಿ ಹೋಗುವ ಕಾರಣ ತಮ್ಮ ಮನೆಯಿಂದ ದೂರವಿರುತ್ತಾರೆಂದು ಕಂಡುಕೊಳ್ಳಲು ಕಳ್ಳರು ಪ್ರಯತ್ನಿಸುತ್ತಾರೆಂಬುದನ್ನು ನೆನಪಿನಲ್ಲಿಡಿರಿ, ಆದುದರಿಂದ ನೀವು ಇತರರಿಗೆ ಏನನ್ನು ಪ್ರಕಟಿಸುತ್ತೀರೊ ಅದರ ಕುರಿತು ಜಾಗ್ರತೆಯಿಂದಿರಿ.

ಅನೇಕ ಯೆಹೋವನ ಸಾಕ್ಷಿಗಳು ಶುಶ್ರೂಷಕರೋಪಾದಿ ತಮ್ಮ ಸತ್ಕೀರ್ತಿಯು ತಮಗೆ ವಿಶಿಷ್ಟ ಪ್ರಮಾಣದ ಸುರಕ್ಷೆಯನ್ನು ನೀಡಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಸಮಾಜದ ಜನರಿಗೆ ಸಹಾಯ ಮಾಡುವುದರಲ್ಲಿ ನಿಷ್ಪಕ್ಷಪಾತದಿಂದ ತಮ್ಮನ್ನು ಕೊಟ್ಟುಕೊಳ್ಳುವ ಅಂತಹ ಕ್ರೈಸ್ತರನ್ನು ತಾವು ಗೌರವಿಸುತ್ತೇವೆಂದು ಪಾತಕಿಗಳು ಅನೇಕಸಲ ತೋರಿಸಿದ್ದಾರೆ. ಸಾಕ್ಷಿಗಳು ಸ್ವತಃ ಕೊಲೆಗಾರರಲ್ಲ ಅಥವಾ ಕಳ್ಳರಲ್ಲ, ‘ಪರರ ಕಾರ್ಯಗಳಲ್ಲಿ ತಲೆಹಾಕುವವರೂ’ ಅವರಲ್ಲ, ಆದುದರಿಂದ ಅವರೊಂದು ಬೆದರಿಕೆಯಾಗಿಲ್ಲ.—1 ಪೇತ್ರ 4:15.

ದೇವರ ನೂತನ ಲೋಕದಲ್ಲಿ ಸುರಕ್ಷೆ

ಯೇಸು ಕ್ರಿಸ್ತನಿಂದ ಮುಂತಿಳಿಸಲ್ಪಟ್ಟ ‘ಅಧರ್ಮದ ವೃದ್ಧಿಯನ್ನು’ ನಾವು ಹೇಸುತ್ತೇವೆ, ಆದರೆ ಅತಿವ್ಯಾಕುಲಗೊಳ್ಳುವ ಬದಲಿಗೆ, ದೇವರು ಈ ದುಷ್ಟ ವ್ಯವಸ್ಥೆಯನ್ನು ಬೇಗನೆ ತೊಡೆದುಹಾಕುವನೆಂಬ ವಿಷಯದಲ್ಲಿ ನಾವು ಭರವಸೆಯಿಂದಿರಬಲ್ಲೆವು. ಯೇಸು, “ಪರಲೋಕರಾಜ್ಯದ ಈ ಸುವಾರ್ತೆಯ” ಒಂದು ಜಗದ್ವ್ಯಾಪಕ ಸಾರುವಿಕೆಯನ್ನು ಮುಂತಿಳಿಸಿದ್ದಲ್ಲದೆ, ತನ್ನ ಹಿಂಬಾಲಕರಿಗೆ ಈ ಜ್ಞಾಪಕವನ್ನೂ ಕೊಟ್ಟನು: “ಆದರೆ ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.”—ಮತ್ತಾಯ 24:12-14.

ಯಾರು ಇತರರನ್ನು, ಕೆಲವುಸಲ ನಂಬಲಶಕ್ಯವಾದ ಕ್ರೌರ್ಯದಿಂದ ಕೊಳ್ಳೆಹೊಡೆಯುತ್ತಾರೊ ಅವರು, ನಿರ್ಮೂಲಗೊಳಿಸಲ್ಪಡುವರೆಂಬ ಖಾತ್ರಿಯು ನಮಗಿರಬಲ್ಲದು. ಜ್ಞಾನೋಕ್ತಿ 22:22, 23 ಹೇಳುವುದು: “ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆಮಾಡಬೇಡ; ನ್ಯಾಯಸ್ಥಾನದಲ್ಲಿ ದರಿದ್ರರನ್ನು ತುಳಿಯದಿರು. ಯೆಹೋವನೇ ಅವರ ವ್ಯಾಜ್ಯವನ್ನು ನಡಿಸಿ ಸೂರೆಮಾಡಿದವರ ಜೀವವನ್ನು ಸೂರೆಮಾಡುವನು.” ಕಳ್ಳರು, ಕೊಲೆಪಾತಕರು, ಮತ್ತು ವಿಕೃತ ಕಾಮಿಗಳಂತಹ ದುಷ್ಕರ್ಮಿಗಳನ್ನು ಯೆಹೋವನು ನಾಶಗೊಳಿಸುವನು. ಅದಲ್ಲದೆ, ಅಂತಹ ಪಾತಕಕ್ಕೆ ಬಲಿಯಾದವರನ್ನೂ ಆತನು ಅಸಡ್ಡೆಮಾಡನು. ಅವನು ಅವರ ನಷ್ಟಗಳನ್ನು ಭರ್ತಿಮಾಡಿ ಅವರ ಆರೋಗ್ಯವನ್ನು ಪೂರ್ಣವಾಗಿ ಪುನಃಸ್ಥಾಪಿಸುವನು.

ನಿಶ್ಚಯವಾಗಿಯೂ, ಯಾರು “ಕೆಟ್ಟದ್ದಕ್ಕೆ ಹೋಗದೆ ಒಳ್ಳೇಯದನ್ನೇ ಮಾಡು” ತಾರ್ತೋ ಅವರು ನಿತ್ಯಜೀವವನ್ನು—ಬರಲಿರುವ ಮಹಾ ಸಂಕಟದಿಂದ ಪಾರಾಗುವ ಮೂಲಕವಾಗಿ, ಇಲ್ಲವೇ ಸತ್ತವರೊಳಗಿಂದ ಪುನರುತ್ಥಾನಗೊಳಿಸಲ್ಪಡುವ ಮುಖಾಂತರ—ಹೊಂದುವರು. “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:27-29) ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೂಲಕವಾಗಿ ಅಂತಹ ಪ್ರಯೋಜನಗಳು ಲಭ್ಯವಾಗಿರುವವು. (ಯೋಹಾನ 3:16) ಆದರೆ ಪುನಃಸ್ಥಾಪಿತ ಪ್ರಮೋದವನದಲ್ಲಿ ಜೀವನವು ಎಂತಹದ್ದಾಗಲಿದೆ?

ದೇವರ ರಾಜ್ಯದ ಕೆಳಗಿನ ಜೀವನವು ನಿಜವಾಗಿಯೂ ಉಲ್ಲಾಸಕರವಾಗಿರುವುದು. ಯೆಹೋವನು ಮುಂತಿಳಿಸುವುದು: “ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” (ಯೆಶಾಯ 32:18) ನಿತ್ಯಜೀವವನ್ನು ಪಡೆಯುವ ಎಲ್ಲರು ತಮ್ಮ ವ್ಯಕ್ತಿತ್ವವನ್ನು ಆ ಮೊದಲೇ ಕ್ರಮಪಡಿಸಿಕೊಂಡವರಾಗಿ ಇರುವರು. ಯಾರೊಬ್ಬನೂ ದುಷ್ಟನಾಗಿ ಅಥವಾ ಅನ್ಯಾಯವಂತನಾಗಿ ಇರನು, ಯಾರೂ ಅಂತಹ ವ್ಯಕ್ತಿಯ ಸಂಭಾವ್ಯ ಬಲಿಯಾಗಿ ಇರನು. ಪ್ರವಾದಿ ಮೀಕನು ಹೇಳುವುದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.” (ಮೀಕ 4:4; ಯೆಹೆಜ್ಕೇಲ 34:28) ಇಂದಿನ ಅಪಾಯಕರ ನೆರೆಹೊರೆಗಳಿಗೆ ಎಂತಹ ಒಂದು ವೈದೃಶ್ಯ!

[ಪುಟ 6 ರಲ್ಲಿರುವ ಚೌಕ]

ಎಚ್ಚರಿಕೆಯಿಂದಿರಿ

ಹೆಚ್ಚಿನ ಪಾತಕಿಗಳು ಪಾತಕವನ್ನು ತಮ್ಮ ಕಸಬನ್ನಾಗಿ ಮಾಡುತ್ತಾ ಪೂರ್ಣಸಮಯ ಕೆಲಸಮಾಡುತ್ತಾರೆ. ಪಿಸ್ತೂಲನ್ನು ನಿಮಗೆ ಗುರಿಯಿಟ್ಟವನು ಒಬ್ಬನೇ ಆದರೂ, ಅವರು ಇಬ್ಬರು ಅಥವಾ ಮೂವರ ಗುಂಪುಗಳಾಗಿ ಕೆಲಸಮಾಡಾರು. ಪಾತಕಿಯು ಎಷ್ಟು ಎಳೆಯನೊ ಅಷ್ಟು ಹೆಚ್ಚು ಅಪಾಯಕರನೆಂದು ಹೆಚ್ಚೆಚ್ಚಾಗಿ ಸ್ಪಷ್ಟವಾಗಿಗುತ್ತಿದೆ. ನೀವೊಂದು ಬಲಿಯಾಗಿರುವಲ್ಲಿ ಏನು ಮಾಡಬಲ್ಲಿರಿ?

ಕಳ್ಳನು ಗಾಬರಿಗೊಳ್ಳುವಂತೆ ಮಾಡದಿರಲು ನೀವು ಶಾಂತರಾಗಿರಿ, ಅವನ ಅನನುಭವವು ನಿಮ್ಮನ್ನು ಕೊಂದೀತು. ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವುದಾದರೆ, ನಿಮ್ಮನ್ನು ಹಾಗೆಂದು ಗುರುತಿಸಿಕೊಳ್ಳಿರಿ. ಆದರೂ, ಕಳ್ಳನಿಗೆ ಏನು ಬೇಕೋ ಅದನ್ನು ಕೊಟ್ಟುಬಿಡಲು ಸಿದ್ಧರಾಗಿರಿ. ವಿಳಂಬಿಸಿದಲ್ಲಿ, ಅಪಾಯವು ಹೆಚ್ಚುತ್ತದೆ. ತದನಂತರ, ನಿಮ್ಮ ಗುರುತು ಪತ್ರಗಳನ್ನು ಯಾ ಬಸ್ಸಿಗಾಗಿ ಹಣವನ್ನು ಹಿಂದಿರುಗಿಸುವಂತೆ ಕೇಳುವುದು ನಿರಪಾಯಕರವೆಂದು ನಿಮಗನಿಸಬಹುದು.

ಅನೇಕವೇಳೆ ಪಾತಕಿ ಯಾರೆಂಬುದನ್ನು ನೀವು ವಿವೇಚಿಸಶಕ್ತರಾಗಿರುವುದಿಲ್ಲ. ಕೆಲವು ಕಳ್ಳರು ಅಮಲೌಷಧ ವ್ಯಸನಿಗಳು ಅಥವಾ ಕಸಬುದಾರ ಪಾತಕಿಗಳಾಗಿದ್ದಾರೆ, ಇತರರಿಗಾದರೊ ಕೇವಲ ತಿನ್ನಲಿಕ್ಕಾಗಿ ಹಣವು ಬೇಕಾಗಿದೆ. ಯಾವುದೇ ಪ್ರಸಂಗದಲ್ಲಿ ತುಂಬಾ ಹಣವನ್ನು ಸಂಗಡ ಒಯ್ಯಬೇಡಿ. ಆಭರಣಗಳನ್ನು, ಚಿನ್ನದ ಉಂಗುರಗಳನ್ನು, ಅಥವಾ ದುಬಾರಿ ಕೈಗಡಿಯಾರಗಳನ್ನು ಪ್ರದರ್ಶಿಸುವುದನ್ನು ವರ್ಜಿಸಿರಿ. ಯಾವ ಭಯವನ್ನೂ ತೋರಿಸದೆ ಸಹಜ ರೀತಿಯಲ್ಲಿ ನಡೆಯಿರಿ ಮತ್ತು ಪ್ರಯಾಣಿಸಿರಿ. ವ್ಯಕ್ತಿಗಳನ್ನು ಗುರುತಿಸಲು ಬಯಸುತ್ತೀರೊ ಎಂಬಂತೆ ಅವರನ್ನು ಎವೆಯಿಕ್ಕದೆ ನೋಡದಿರ್ರಿ. ದಾರಿಯಲ್ಲಿ ಗುಂಡೇಟುಗಳಾದರೆ ನೆಲದಲ್ಲಿ ಬಿದ್ದುಬಿಡಿರಿ; ಉಡುಪುಗಳನ್ನು ಅನಂತರ ಶುಚಿಗೊಳಿಸಬಹುದು.—ರೀಯೊ ಡೆ ಸನೆರೋದಲ್ಲಿನ ಮಾಜಿ ಪೊಲೀಸ್‌.

[ಪುಟ 5 ರಲ್ಲಿರುವ ಚಿತ್ರ]

ಶಾಂತರಾಗಿ ಉಳಿದು ಕಳ್ಳನಿಗೆ ಏನು ಬೇಕೋ ಅದನ್ನು ಕೊಟ್ಟುಬಿಡಿರಿ. ನೀವು ವಿಳಂಬಿಸಿದಲ್ಲಿ, ಅಪಾಯವು ಹೆಚ್ಚುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ