ಅಲ್ಪ ಸ್ವಾತಂತ್ರ್ಯದ ಒಂದು ವಿಶಾಲ ಹಾದಿ
ಆಸ್ಟ್ರೇಲಿಯದ ಸಿಡ್ನಿಯಲ್ಲಿ, ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡಾಗ, ಮೂರು ಜನರ ಒಂದು ಕುಟುಂಬ—ತಂದೆ, ತಾಯಿ ಮತ್ತು ಸಣ್ಣ ಮಗಳು—ವು ಮನೆಯಲ್ಲಿತ್ತು. ಕಿಟಕಿಗಳ ಮೂಲಕ ಹೊರಗೆ ನೆಗೆಯಲು ಅವರು ಪ್ರಯತ್ನಿಸಿದರು, ಆದರೆ ಅವು ಕಂಬಿಗಳಿಂದ ಆವೃತವಾಗಿದ್ದವು. ಭದ್ರತಾ ಕಂಬಿಗಳ ಕಾರಣದಿಂದಾಗಿ ಬೆಂಕಿ ಆರಿಸುವವರು ಅವರನ್ನು ಕಾಪಾಡಲು ಸಾಧ್ಯವಾಗಲಿಲ್ಲ. ತಾಯಿ ಮತ್ತು ತಂದೆ ಹೊಗೆ ಹಾಗೂ ಜ್ವಾಲೆಗಳಲ್ಲಿ ಸತ್ತುಹೋದರು. ಮಗಳು ಬಳಿಕ ಆಸ್ಪತ್ರೆಯಲ್ಲಿ ಸತ್ತಳು.
ಅವರನ್ನು ಸಂರಕ್ಷಿಸಬೇಕಾಗಿದ್ದ ಭದ್ರತಾ ಅಳವಡಿಸುವಿಕೆಗಳ ಕಾರಣದಿಂದ ಈ ಕುಟುಂಬವು ಸತ್ತದ್ದು ಎಷ್ಟು ದುಃಖಕರವಾಗಿತ್ತು! ತನ್ನ ಮನೆಯನ್ನು ಕಂಬಿಗಳು ಮತ್ತು ಭದ್ರತಾ ಬೀಗಗಳಿಂದ ರಕ್ಷಣೆ ಮಾಡಿರುವುದರಲ್ಲಿ ಈ ಕುಟುಂಬವೊಂದೇ ಅಪೂರ್ವವಾಗಿಲ್ಲವೆಂಬುದು ನಮ್ಮ ಸಮಯಗಳ ಕುರಿತಾದ ಒಂದು ಹೇಳಿಕೆ. ನೆರೆಯವರಲ್ಲಿ ಅನೇಕರಿಗೆ ಕೋಟೆಗಳನ್ನು ಹೋಲುವ ಮನೆಗಳು ಮತ್ತು ಸ್ವತ್ತುಗಳು ಸಹ ಇವೆ. ಏಕೆ? ಅವರು ಭದ್ರತೆ ಮತ್ತು ಮನಶ್ಶಾಂತಿಯನ್ನು ಹುಡುಕುತ್ತಿದ್ದಾರೆ. ತಮ್ಮ ಸ್ವಂತ ಮನೆಗಳಲ್ಲಿ ಸೆರೆವಾಸಿಗಳಂತೆ ಬಂಧನದಲಿಡ್ಲಲ್ಪಟ್ಟಾಗ ಮಾತ್ರವೇ ಜನರಿಗೆ ಸುರಕ್ಷಿತವಾದ ಅನಿಸಿಕೆಯಾಗುವ “ಸ್ವತಂತ್ರ” ಸಮಾಜವೊಂದರ ಮೇಲೆ ಎಂತಹ ಒಂದು ವಿಘಾತ! ಬೆಳೆಯುತ್ತಿರುವ ಅನೇಕ ನೆರೆಹೊರೆಗಳಲ್ಲಿ, ಮಕ್ಕಳು ಇನ್ನುಮುಂದೆ ಸುರಕ್ಷಿತವಾಗಿ ಹತ್ತಿರದ ಉದ್ಯಾನವನವೊಂದರಲ್ಲಿ ಆಡಲಾರರು ಅಥವಾ ಹೆತ್ತವರೊಬ್ಬರ ಅಥವಾ ಬೇರೆ ಯಾರಾದರೂ ವಯಸ್ಕರ ಬೆಂಗಾವಲಿಲ್ಲದೆ ಶಾಲೆಗೆ ಹೋಗಲಾರರು. ಜೀವಿತದ ಅನೇಕ ಕ್ಷೇತ್ರಗಳಲ್ಲಿ, ಸ್ವಾತಂತ್ರ್ಯವು ಬೆಳಗ್ಗಿನ ಇಬ್ಬನಿಯಂತೆ ಅದೃಶ್ಯವಾಗುತ್ತಿದೆ.
ಜೀವಿತದ ಬದಲಾದ ಒಂದು ರೀತಿ
ನಮ್ಮ ಅಜ್ಜಅಜಿಯ್ಜರ ದಿನಗಳು ಭಿನ್ನವಾಗಿದ್ದವು. ಮಕ್ಕಳೋಪಾದಿ, ಸಾಮಾನ್ಯವಾಗಿ ಅವರು ತಮಗೆ ಎಲ್ಲಿ ಇಷ್ಟವಾಗುತ್ತಿತ್ತೋ ಅಲ್ಲಿ ಭಯವಿಲ್ಲದೆ ಆಡಸಾಧ್ಯವಿತ್ತು. ವಯಸ್ಕರೋಪಾದಿ, ಬೀಗಗಳು ಮತ್ತು ಕಂಬಿಗಳೊಂದಿಗಿನ ಗೀಳು ಅವರಿಗಿರಲಿಲ್ಲ. ಸ್ವತಂತ್ರರೆಂದು ಅವರಿಗನಿಸುತ್ತಿತ್ತು, ಮತ್ತು ಸ್ವಲ್ಪಮಟ್ಟಿಗೆ ಅವರು ಸ್ವತಂತ್ರರಾಗಿದ್ದರು. ಆದರೆ ತಮ್ಮ ಜೀವಮಾನದಲ್ಲಿ ಸಮಾಜದ ಮನೋಭಾವವು ಬದಲಾಗುವುದನ್ನು ನಮ್ಮ ಅಜ್ಜಅಜ್ಜಿಯರು ನೋಡಿದ್ದಾರೆ. ಅದು ಹೆಚ್ಚು ಭಾವಶೂನ್ಯವೂ, ಹೆಚ್ಚು ಸ್ವಾರ್ಥದ್ದೂ ಆಗಿ ಪರಿಣಮಿಸಿದೆ; ಅನೇಕ ಸ್ಥಳಗಳಲ್ಲಿ ನೆರೆಯವರ ಪ್ರೀತಿಯು, ಮೇಲೆ ಪ್ರಸ್ತಾಪಿಸಲ್ಪಟ್ಟಿರುವ ದುರಂತಮಯ ಘಟನೆಗೆ ಕಾರಣವಾದ ನೆರೆಯವರ ಭಯದಿಂದ ಸ್ಥಾನಪಲ್ಲಟ ಮಾಡಲ್ಪಟ್ಟಿದೆ. ವೃದ್ಧಿಯಾಗುತ್ತಿರುವ ಸ್ವಾತಂತ್ರ್ಯದ ಈ ಕೊರತೆಯೊಂದಿಗೆ ನೈತಿಕ ಮೌಲ್ಯಗಳ ಏಕಪ್ರಕಾರದ ಅವನತಿಯು ಸಂಭವಿಸುತ್ತಿದೆ. ಸಮಾಜವು ಒಂದು “ನವ ನೈತಿಕತೆ” ಯಿಂದ ಮೋಹಿತವಾಗಿದೆ, ಆದರೆ ವಾಸ್ತವದಲ್ಲಿ, ಯಾವುದೇ ನೈತಿಕತೆಯನ್ನು ಕಾಣುವುದು ಕಷ್ಟಕರವಾಗಿರುವಂತಹ ಮಟ್ಟಕ್ಕೆ ಸನ್ನಿವೇಶವು ಈಗ ತಲಪಿದೆ.
ಕ್ವೀನ್ಸ್ಲ್ಯಾಂಡ್ನ ವಿಶ್ವವಿದ್ಯಾನಿಲಯದಲ್ಲಿನ ಶಿಕ್ಷಣದ ಒಬ್ಬ ಮಾಜಿ ಉಪನ್ಯಾಸಕರಾದ, ಡಾ. ರೂಪರ್ಟ್ ಗುಡ್ಮನ್ ಬರೆಯುವುದು: “ಯುವಜನರು ಈಗ ವಿಭಿನ್ನವಾದ ಒಂದು ಸೌಖ್ಯತತ್ವವಿಚಾರದ . . . ಜೀವನಶೈಲಿಗೆ ಒಡ್ಡಲ್ಪಡುತ್ತಿದ್ದು, ‘ಸ್ವಾರ್ಥ’ವು ಕೇಂದ್ರವಾಗಿದೆ: ವಿಷಯಲೋಲುಪತೆ, ಸ್ವಪ್ರಜ್ಞೆ, ಸ್ವಸಾಫಲ್ಯ, ಸ್ವಹಿತ.” ಅವರು ಇನ್ನೂ ಹೇಳುವುದು: “ಸ್ವನಿಯಂತ್ರಣ, ಸ್ವತ್ಯಾಗ, ಕಷ್ಟದ ಕೆಲಸ, ಮಿತವ್ಯಯ, ಅಧಿಕಾರಕ್ಕೆ ಗೌರವ, ಹೆತ್ತವರ ಪ್ರೀತಿ ಮತ್ತು ಮಾನ್ಯತೆ . . . ಅನೇಕರಿಗೆ ಅಪರಿಚಿತವಾದ ಕಲ್ಪನೆಗಳಾಗಿವೆ.”
ನಿಜವಾಗಿಯೂ ಒಂದು ವಿಶಾಲವಾದ ಹಾದಿ
ಬೈಬಲ್ ಪ್ರವಾದನೆಯೊಂದಿಗೆ ಪರಿಚಿತರಾಗಿರುವವರು ಈ ವ್ಯಾಪಕವಾದ ಸ್ವವಿಚಾರಾಸಕ್ತಿಯಿಂದ ಆಶ್ಚರ್ಯಗೊಳ್ಳುವುದಿಲ್ಲ, ಏಕೆಂದರೆ ಯೇಸು ಕ್ರಿಸ್ತನು ತನ್ನ ಕೇಳುಗರಿಗೆ ಎಚ್ಚರಿಕೆ ನೀಡಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ಅನೇಕ ಪ್ರಯಾಣಿಕರಿಗೆ ಯಥೇಷ್ಟ ಸ್ಥಳವಿರುವುದರಿಂದ, ಮೊದಲನೆಯ ಹಾದಿಯು “ಅಗಲ” ವಾಗಿದೆ, ಏಕೆಂದರೆ ಇದು ನೈತಿಕತೆ ಮತ್ತು ಪ್ರತಿದಿನದ ಜೀವನವನ್ನು ಆಳುವ ಬೈಬಲ್ ಮೂಲತತ್ವಗಳಿಂದ ನಿರ್ಬಂಧಿಸಲ್ಪಡುವುದಿಲ್ಲ. ನಿಯಮಗಳಿಲ್ಲದೆ, ಬದ್ಧತೆಗಳಿಲ್ಲದೆ, ತಮಗೆ ಇಷ್ಟಬಂದಂತೆ ಜೀವಿಸಲು ಮತ್ತು ತಮಗೆ ಇಷ್ಟಬಂದಂತೆ ಯೋಚಿಸಲು ಬಯಸುವವರಿಗೆ ಇದು ಹಿಡಿಸುತ್ತದೆ.
ಅಗಲವಾದ ದಾರಿಯನ್ನು ಆರಿಸಿಕೊಂಡಿರುವವರು ತಮ್ಮ ಸ್ವಾತಂತ್ರ್ಯವನ್ನು ಅನುಭೋಗಿಸುತ್ತಿರುವುದಾಗಿ ಹೇಳಿಕೆ ನೀಡುತ್ತಾರೆ ನಿಜ. ಆದರೆ ಅವರಲ್ಲಿ ಅಧಿಕಾಂಶ ಮಂದಿ ಸ್ವಾರ್ಥದ ಸಾಮಾನ್ಯವಾದ ಒಂದು ಮನೋಭಾವದಿಂದ ಪ್ರಚೋದಿಸಲ್ಪಡುತ್ತಾರೆ. ಅವರು “ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮ” ದಿಂದ ಪ್ರಭಾವಿಸಲ್ಪಡುತ್ತಾರೆಂದು ಬೈಬಲು ಹೇಳುತ್ತದೆ. ಅದು ಅನೈತಿಕತೆಯಾಗಿರಲಿ, ಅಮಲೌಷಧಗಳ ದುರುಪಯೋಗವಾಗಿರಲಿ, ಐಶ್ವರ್ಯ, ಗೌರವ, ಅಥವಾ ಅಧಿಕಾರದ ನಿರ್ದಾಕ್ಷಿಣ್ಯ ಬೆನ್ನಟ್ಟುವಿಕೆಯಾಗಿರಲಿ, ಈ ಆತ್ಮವು ಅವರನ್ನು “ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ” ಜೀವಿಸುವಂತೆ ಪ್ರಚೋದಿಸುತ್ತದೆ.—ಎಫೆಸ 2:2, 3.
ಅಗಲವಾದ ದಾರಿಯು ವಿಪತ್ತಿಗೆ ನಡಿಸುತ್ತದೆ
ಅಗಲವಾದ ದಾರಿಯಲ್ಲಿ ಪ್ರಯಾಣಿಸುತ್ತಿರುವವರು ‘ಮನಸ್ಸಿಗೆ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸು’ ವಂತೆ ಪ್ರಚೋದಿಸಲ್ಪಡುತ್ತಾರೆಂಬುದನ್ನು ಗಮನಿಸಿರಿ. ಅವರು ಕಿಂಚಿತ್ತೂ ಸ್ವತಂತ್ರರಾಗಿಲ್ಲ, ಅವರಿಗೆ ಒಬ್ಬ ಯಜಮಾನನಿದ್ದಾನೆಂದು ಇದು ತೋರಿಸುತ್ತದೆ. ಅವರು ಶರೀರದ ದಾಸರಾಗಿದ್ದಾರೆ. ಮತ್ತು ಈ ಯಜಮಾನನನ್ನು ಸೇವಿಸುವುದು ಅನೇಕ ಸಮಸ್ಯೆಗಳಿಗೆ ನಡೆಸಬಲ್ಲದು—ರತಿರವಾನಿತ ರೋಗಗಳ ವ್ಯಾಧಿಗಳು, ಒಡೆದ ಕುಟುಂಬಗಳು, ಅಮಲೌಷಧ ಮತ್ತು ಮದ್ಯಪಾನದ ದುರುಪಯೋಗದಿಂದ ಅಸ್ವಸ್ಥವಾಗಿರುವ ದೇಹಗಳು ಮತ್ತು ಮನಸ್ಸುಗಳು, ಈ ಪಟ್ಟಿಯಲ್ಲಿ ಕೇವಲ ಕೆಲವಾಗಿವೆ. ಹಿಂಸಾಕೃತ್ಯಗಳು, ಕನ್ನಗಳ್ಳತನ, ಮತ್ತು ಬಲಾತ್ಕಾರ ಸಂಭೋಗಗಳು ಸಹ, ಅನುಮತಿಕೊಡುವ ಅಗಲ ಹಾದಿಯ ಮೇಲೆ ಪೋಷಿಸಲ್ಪಡುವ ಸ್ವವಿಚಾರಾಸಕ್ತಿಯ ಆಲೋಚನೆಯಲ್ಲಿ ತಮ್ಮ ಮೂಲಗಳನ್ನು ಕಂಡುಕೊಂಡಿವೆ. ಮತ್ತು ಈ “ನಾಶಕ್ಕೆ ಹೋಗುವ ಬಾಗಲು” ಅಸ್ತಿತ್ವದಲ್ಲಿರುತ್ತಾ ಮುಂದುವರಿಯುವಾಗ, ಇದರ ಫಲಗಳು ಎಂದಿಗಿಂತಲೂ ಹೆಚ್ಚು ನೋವನ್ನುಂಟುಮಾಡುವವುಗಳಾಗಿ ಪರಿಣಮಿಸುವವು.—ಜ್ಞಾನೋಕ್ತಿ 1:22, 23; ಗಲಾತ್ಯ 5:19-21; 6:7.
ಆಸ್ಟ್ರೇಲಿಯದ ನಿಜ-ಜೀವನದ ಎರಡು ಉದಾಹರಣೆಗಳನ್ನು ಪರಿಗಣಿಸಿರಿ. ವ್ಯಸನಕಾರಿ ಅಮಲೌಷಧಗಳ ದುರುಪಯೋಗ ಮಾಡುವ ಹಾಗೂ ಅನೈತಿಕತೆಯನ್ನು ನಡಿಸುವ ಮೂಲಕ, ಮೇರಿ ಶೋಧನೆಗೆ ವಶವಾದಳು.a ಆದರೆ ಅವಳು ಆಶ್ರಯಿಸಿದಂತಹ ಸಂತೋಷವು ಅವಳ ಹಿಡಿತಕ್ಕೆ ಸಿಗಲಿಲ್ಲ. ಎರಡು ಮಕ್ಕಳಾದ ಬಳಿಕ ಸಹ ಅವಳ ಜೀವಿತವು ಶೂನ್ಯವಾಗಿ ಭಾಸವಾಯಿತು. ತಾನು ಏಯ್ಡ್ಸ್ ರೋಗವನ್ನು ಹತ್ತಿಸಿಕೊಂಡಿದ್ದೇನೆಂದು ಅವಳಿಗೆ ತಿಳಿದಾಗ ಅವಳು ತನ್ನ ಅತ್ಯಂತ ಹೀನ ಹಂತಕ್ಕೆ ತಲಪಿದಳು.
ಟಾಮ್ ಭಿನ್ನವಾದೊಂದು ರೀತಿಯಲ್ಲಿ ವೇದನೆಗೊಂಡಿದ್ದನು. “ಉತ್ತರ ಕ್ವೀನ್ಸ್ಲ್ಯಾಂಡ್ನಲ್ಲಿ ಚರ್ಚಿನ ಕ್ರೈಸ್ತ ಧರ್ಮ ಪ್ರಚಾರಕ ಮಂಡಲಿಯಲ್ಲಿ ನಾನು ಬೆಳೆದೆ” ಎಂದು ಅವನು ಬರೆಯುತ್ತಾನೆ. “16ರ ಪ್ರಾಯದಲ್ಲಿ ನಾನು ವಿಪರೀತವಾಗಿ ಕುಡಿಯಲಾರಂಭಿಸಿದೆ. ನನ್ನ ತಂದೆ, ಅಂಕಲ್ಗಳು, ಮತ್ತು ಸ್ನೇಹಿತರೆಲ್ಲರೂ ಭಾರಿ ಕುಡುಕರಾಗಿದುದ್ದರಿಂದ ಕುಡಿಯುವುದು ಸಹಜ ವಿಷಯವಾಗಿ ತೋರಿತು. ಬಿಯರ್ನಿಂದ ಹಿಡಿದು ಮೆತಿಲ್ ಬೆರಸಿದ ಮದ್ಯಸಾರಗಳ ವರೆಗೆ, ಏನನ್ನಾದರೂ ಕುಡಿಯುವಂತಹ ಒಂದು ಮಟ್ಟಕ್ಕೆ ನಾನು ತಲಪಿದೆ. ಕೆಲವೊಮ್ಮೆ ಕಷ್ಟದಿಂದ ಸಂಪಾದಿಸಿದ ನನ್ನ ಸಂಬಳಗಳಲ್ಲಿ ಅಧಿಕಾಂಶವನ್ನು ಕಳೆದುಕೊಳ್ಳುತ್ತಾ, ಕುದುರೆಗಳ ಮೇಲೆ ಪಣವೊಡ್ಡಲೂ ನಾನು ಆರಂಭಿಸಿದೆ. ಇದು ದೊಡ್ಡ ಮೊತ್ತದ ಹಣವಾಗಿತ್ತು, ಏಕೆಂದರೆ ಕಬ್ಬಿನ ಕಟಾವು ಮಾಡುವ ನನ್ನ ಕೆಲಸಕ್ಕೆ ಬಹಳ ಒಳ್ಳೆಯ ಸಂಬಳವು ದೊರೆಯುತ್ತಿತ್ತು.
“ಬಳಿಕ ನಾನು ವಿವಾಹವಾದೆ ಮತ್ತು ನಮಗೆ ಮಕ್ಕಳಾದವು. ನನ್ನ ಜವಾಬ್ದಾರಿಗಳನ್ನು ಎದುರಿಸುವುದಕ್ಕೆ ಬದಲಾಗಿ, ನನ್ನ ಸ್ನೇಹಿತರು ಏನು ಮಾಡಿದರೋ ಅದನ್ನೇ ನಾನು ಮಾಡಿದೆ—ಕುಡಿ, ಜೂಜಾಡು, ಮತ್ತು ಹೋರಾಡು. ನಾನು ಅನೇಕವೇಳೆ ಸ್ಥಳೀಯ ಸೆರೆಮನೆಯಲ್ಲಿ ಬಂಧಿಸಲ್ಪಟ್ಟೆ. ಆದರೆ ಇದು ಸಹ ನನ್ನ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ. ನನ್ನ ಜೀವಿತವು ದುಃಸ್ಥಿತಿಗೆ ಇಳಿಯುತ್ತಿತ್ತು. ಅದು ಸಮಸ್ಯೆಗಳಿಂದ ತುಂಬಿತ್ತು.”
ಹೌದು, ತಪ್ಪಾದ ಬಯಕೆಗಳಿಗೆ ಬಿಟ್ಟುಕೊಡುವ ಮೂಲಕ, ಟಾಮ್ ಮತ್ತು ಮೇರಿ ತಮಗೆ ಮಾತ್ರವಲ್ಲ, ತಮ್ಮ ಕುಟುಂಬಗಳಿಗೆ ಸಹ ನೋವನ್ನುಂಟುಮಾಡಿದರು. ದುಃಖಕರವಾಗಿಯೇ, ಇತರ ಅನೇಕ ಯುವಜನರು, ಹಿಡಿತವಿಲ್ಲದ, ಅಗಲವಾದ ಹಾದಿಯ ಮೇಲೆ ಒದಗಿಸಲ್ಪಡುವ ಸ್ವಾತಂತ್ರ್ಯದ ತಪ್ಪು ಮಾರ್ಗದರ್ಶಿತ ಮನೋಭಾವದಿಂದ, ತಪ್ಪುದಾರಿಗೆಳೆಯಲ್ಪಡುವ ಪ್ರವೃತ್ತಯುಳ್ಳವರಾಗಿರುತ್ತಾರೆ. ಈ ಸ್ವಾತಂತ್ರ್ಯದ ಮೋಸಕರ ತೋರಿಕೆಯನ್ನು, ಹೊರನಯವನ್ನು ಎಳೆಯರು ಗ್ರಹಿಸುತ್ತಿದ್ದರೆ. ಅಗಲವಾದ ದಾರಿಯ ವಾಸ್ತವಿಕತೆಗಳನ್ನು, ಅದರ ಮೇಲೆ ಪ್ರಯಾಣಿಸುತ್ತಿರುವವರೆಲ್ಲರೂ ಕ್ರಮೇಣವಾಗಿ ತೆರಬೇಕಾದ ಕಠೋರ ತೆರಿಗೆಗಳನ್ನು ಅವರು ನೋಡುತ್ತಿದ್ದರೆ. ಅದು ಅಗಲವೂ ಪ್ರವೇಶಿಸಲು ಸುಲಭವೂ ಆದದ್ದಾಗಿದೆ ನಿಜ. ಆದರೆ ಅದರ ವಿಸ್ತಾರ್ಯವು ತಾನೇ ಅದರ ಶಾಪವಾಗಿದೆ. “ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು” ಎಂಬ ನಿರಾಕರಿಸಲಸಾಧ್ಯವಾದ ವಾಸ್ತವಾಂಶವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ವಿವೇಕದ ಮಾರ್ಗವಾಗಿದೆ.—ಗಲಾತ್ಯ 6:8.
ಆದಾಗಲೂ, ಹೆಚ್ಚು ಉತ್ತಮವಾದ ಒಂದು ಆಯ್ಕೆ ಇದೆ. ಅದು ಇಕ್ಕಟ್ಟಾದ ಹಾದಿ. ಆದರೆ ಈ ಹಾದಿಯು ಎಷ್ಟು ನಿರ್ಬಂಧಿತವೂ, ತಡೆಯನ್ನುಂಟುಮಾಡುವಂತಹದ್ದೂ, ಇಕ್ಕಟ್ಟಾದದ್ದೂ ಆಗಿದೆ? ಮತ್ತು ಅದು ಎಲ್ಲಿಗೆ ನಡೆಸುತ್ತದೆ?
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳು ಬದಲಾಯಿಸಲ್ಪಟ್ಟಿವೆ.