ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 9/15 ಪು. 7
  • ಅಸೂಯೆಯುಳ್ಳ ಮನುಷ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಸೂಯೆಯುಳ್ಳ ಮನುಷ್ಯ
  • ಕಾವಲಿನಬುರುಜು—1995
  • ಅನುರೂಪ ಮಾಹಿತಿ
  • ಹೊಟ್ಟೆಕಿಚ್ಚು ಹೊಡೆದೋಡಿಸಿ, ಶಾಂತಿ ಸ್ಥಾಪಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಮನಸ್ಸನ್ನು ವಿಷಪೂರಿತಗೊಳಿಸುವ ಅಸೂಯೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಈರ್ಷ್ಯೆಯ—ಕುರಿತು ನೀವು ತಿಳಿದಿರಬೇಕಾದ ವಿಷಯ
    ಕಾವಲಿನಬುರುಜು—1995
  • ನೀವು ನಿಮ್ಮನ್ನು ಇತರರೊಂದಿಗೆ ಹೋಲಿಸಿನೋಡುತ್ತೀರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಕಾವಲಿನಬುರುಜು—1995
w95 9/15 ಪು. 7

ಅಸೂಯೆಯುಳ್ಳ ಮನುಷ್ಯ

ಹೀಬ್ರು ಭಾಷೆಯಲ್ಲಿ “ಈರ್ಷ್ಯೆ”ಗೆ ಒಂದೇ ಒಂದು ಮೂಲ ಶಬ್ದವಿದೆ. ಪಾಪಪೂರ್ಣ ಮನುಷ್ಯರಿಗೆ ಸೂಚಿಸುವಾಗ ಆ ಹೀಬ್ರು ಶಬ್ದವನ್ನು “ಅಸೂಯೆ” ಅಥವಾ “ಪ್ರತಿಸ್ಪರ್ಧೆ” ಎಂಬುದಾಗಿ ಭಾಷಾಂತರಿಸಬಹುದು. (ಆದಿಕಾಂಡ 26:14; ಪ್ರಸಂಗಿ 4:4) ಗ್ರೀಕ್‌ ಭಾಷೆಯಲ್ಲಾದರೋ “ಈರ್ಷ್ಯೆ”ಗೆ ಒಂದಕ್ಕಿಂತ ಹೆಚ್ಚು ಪದಗಳಿವೆ. ಸೆಲಸ್‌ ಎಂಬ ಶಬ್ದವನ್ನು, ಅದರ ಹೀಬ್ರು ಸಮಾನಾರ್ಥಕ ಪದದಂತೆ, ನೀತಿಯ ಈರ್ಷ್ಯೆ ಮತ್ತು ಪಾಪಪೂರ್ಣ ಈರ್ಷ್ಯೆ ಇವೆರಡಕ್ಕೂ ನಿರ್ದೇಶಿಸಬಹುದು. ಇನ್ನೊಂದು ಗ್ರೀಕ್‌ ಶಬ್ದವಾದ ಫ್ತೋನಾಸ್‌, ಪಾಪಪೂರ್ಣ ಈರ್ಷ್ಯೆಯನ್ನು ಮಾತ್ರ ಸೂಚಿಸುತ್ತದೆ. ಇದು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ನಲ್ಲಿ ಯಾವಾಗಲೂ “ಅಸೂಯೆ” (envy) ಎಂದೇ ಭಾಷಾಂತರಿಸಲ್ಪಟ್ಟಿದೆ.

ಪುರಾತನ ಗ್ರೀಕ್‌ ಭಾಷೆಯಲ್ಲಿ ಫ್ತೋನಾಸ್‌ ಶಬ್ದವು ಹೇಗೆ ಬಳಸಲ್ಪಟ್ಟಿತ್ತು? ದಿ ಆ್ಯಂಕರ್‌ ಬೈಬಲ್‌ ಡಿಕ್‌ಷನರಿ ಹೇಳುವುದು: “ಲೋಭಿ ಮನುಷ್ಯನಿಗೆ ಅಸದೃಶವಾಗಿ, ಫ್ತೋನಾಸ್‌ ನಿಂದ ಬಾಧಿಸಲ್ಪಟ್ಟ ವ್ಯಕ್ತಿಯಾದರೊ ಇನ್ನೊಬ್ಬನಲ್ಲಿರುವ ವಸ್ತುಗಳಿಗಾಗಿ ಅಸಮಾಧಾನಗೊಂಡರೂ ಅವನ್ನು ಪಡೆಯುವುದಕ್ಕೆ ಬಯಸುವುದಿಲ್ಲ; ಬೇರೆಯವರಲ್ಲಿ ಆ ವಸ್ತುಗಳು ಇರಬಾರದೆಂದೇ ಅವನ ಬಯಕೆ. ಸ್ಪರ್ಧಿಸುವ ಮನುಷ್ಯನಿಗಿಂತ ಅವನು ಭಿನ್ನನಾಗಿದ್ದಾನೆ ಹೇಗಂದರೆ, ಪ್ರತಿಸ್ಪರ್ಧಿಯಂತೆ ಅವನ ಹೇತುವು ಗೆಲ್ಲುವುದಲ್ಲ, ಬದಲಾಗಿ ಗೆಲ್ಲುವುದರಿಂದ ಬೇರೆಯವರನ್ನು ತಡೆಯುವುದೇ.”

ಅಸೂಯಾಪರ ವ್ಯಕ್ತಿಗೆ ತನ್ನ ಸಮಸ್ಯೆಗಳ ಮುಖ್ಯ ಕಾರಣವು ತನ್ನ ಸ್ವಂತ ಮನೋಭಾವವೆಂದು ಅನೇಕವೇಳೆ ತಿಳಿದಿರುವುದಿಲ್ಲ. ಅದೇ ಡಿಕ್‌ಷನರಿ ವಿವರಿಸುವುದು: “ಫ್ತೋನಾಸ್‌ನ ವಿಲಕ್ಷಣಗಳಲ್ಲಿ ಒಂದು, ಸ್ವಂತ ಅರಿವಿನ ಕೊರತೆಯೇ. ಫ್ತೋನೆರಾಸ್‌ ವ್ಯಕ್ತಿಗೆ, ಅವನು ತನ್ನ ನಡವಳಿಕೆಯ ಸಮರ್ಥನೆ ಮಾಡುವಂತೆ ಕೇಳಲ್ಪಟ್ಟಲ್ಲಿ, ಅವನು ಯಾವಾಗಲೂ ತನಗೆ ಮತ್ತು ಇತರರಿಗೆ ಹೇಳುವುದೇನಂದರೆ, ತಾನು ಯಾರನ್ನು ಆಕ್ರಮಿಸುತ್ತೇನೋ ಅವರು ಅದಕ್ಕೆ ಅರ್ಹರು ಮತ್ತು ಸನ್ನಿವೇಶದ ಅನ್ಯಾಯವು ಅವರನ್ನು ಟೀಕಿಸುವಂತೆ ಅವನನ್ನು ಪ್ರೇರಿಸುತ್ತದೆ. ಒಬ್ಬ ಮಿತ್ರನ ಕುರಿತು ಅವನು ಆ ರೀತಿಯಲ್ಲಿ ಹೇಗೆ ಮಾತಾಡಸಾಧ್ಯವೆಂದು ಪ್ರಶ್ನಿಸಿದಲ್ಲಿ, ತನ್ನ ಟೀಕೆಗಳು ಮುಖ್ಯವಾಗಿ ತನ್ನ ಮಿತ್ರನ ಪ್ರಯೋಜನಕ್ಕಾಗಿಯೇ ಇವೆಯೆಂದು ಅವನು ಹೇಳುವನು.”

ಯೇಸುವನ್ನು ಕೊಲ್ಲುವುದಕ್ಕೆ ಜವಾಬ್ದಾರರಾದವರ ಹೇತುವನ್ನು ವರ್ಣಿಸುವುದಕ್ಕಾಗಿ ಸುವಾರ್ತೆಯ ಲೇಖಕರಾದ ಮತ್ತಾಯ ಮತ್ತು ಮಾರ್ಕರು ಗ್ರೀಕ್‌ ಶಬ್ದ ಫ್ತೋನಾಸ್‌ ಅನ್ನು ಬಳಸುತ್ತಾರೆ. (ಮತ್ತಾಯ 27:18; ಮಾರ್ಕ 15:10) ಹೌದು, ಅವರು ಅಸೂಯೆಯಿಂದ ಪ್ರೇರಿಸಲ್ಪಟ್ಟರು. ಇದೇ ಹಾನಿಕಾರಕ ಭಾವೋದ್ರೇಕವು ಧರ್ಮಭ್ರಷ್ಟರನ್ನು ತಮ್ಮ ಹಿಂದಣ ಸಹೋದರರ ತೀಕ್ಷ್ಣ ದ್ವೇಷಕರನ್ನಾಗಿ ಪರಿವರ್ತಿಸಿದೆ. (1 ತಿಮೊಥೆಯ 6:3-5) ಅಸೂಯಾಪರರಾದ ವ್ಯಕ್ತಿಗಳು ದೇವರ ರಾಜ್ಯವನ್ನು ಪ್ರವೇಶಿಸಲು ತಡೆಯಲ್ಪಡುವುದರಲ್ಲಿ ಆಶ್ಚರ್ಯವೇನಿಲ್ಲ! ಯಾರು “ಅಸೂಯಾಭರಿತರಾಗಿ” ಮುಂದುವರಿಯುತ್ತಾರೋ ಅವರೆಲ್ಲರು “ಮರಣಕ್ಕೆ ಅರ್ಹರಾಗಿದ್ದಾರೆ,” ಎಂದು ಯೆಹೋವ ದೇವರು ವಿಧಿಸಿದ್ದಾನೆ.—ರೋಮಾಪುರ 1:29, 32, NW; ಗಲಾತ್ಯ 5:21.

[ಪುಟ 7 ರಲ್ಲಿರುವ ಚಿತ್ರಗಳು]

ಅಸೂಯೆಯು ನಿಮ್ಮ ಜೀವನವನ್ನು ಹಾಳುಮಾಡುವಂತೆ ಬಿಡಬೇಡಿರಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ