ಕೊಡುವಿಕೆ—ಅದು ನಿರೀಕ್ಷಿಸಲ್ಪಡುತದ್ತೊ?
ಉಡುಗೊರೆಗಳ ಕೊಡುವಿಕೆಯು ಅನೇಕ ವೇಳೆ ಪದ್ಧತಿಯಿಂದ ವಿಧಿಸಲ್ಪಟ್ಟಿದೆಯೆಂಬುದು ನಿಮಗೆ ಚೆನ್ನಾಗಿ ತಿಳಿದಿರಬಹುದು. ಹೆಚ್ಚಿನ ಸಂಸ್ಕೃತಿಗಳಲ್ಲಿ, ಕೊಡುಗೆಗಳು ನಿರೀಕ್ಷಿಸಲ್ಪಡುವ ಸಂದರ್ಭಗಳು ಇವೆ. ಅಂತಹ ಕೊಡುಗೆಗಳು ಗೌರವದ ಕುರುಹುಗಳಾಗಿ ಅಥವಾ ಪ್ರೀತಿಯ ಅಭಿವ್ಯಕ್ತಿಗಳಾಗಿ ಅರ್ಥೈಸಲ್ಪಡಬಹುದು. ಅವುಗಳಲ್ಲಿ ಹೆಚ್ಚಿನವು ಗ್ರಾಹಕನಿಂದ ಎಂದೂ ಉಪಯೋಗಿಸಲ್ಪಡುವುದಿಲ್ಲ; ಇತರ ಕೊಡುಗೆಗಳು ನಿಜವಾದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತವೆ ಮತ್ತು ಆಳವಾಗಿ ಗಣ್ಯಮಾಡಲ್ಪಡುತ್ತವೆ.
ಡೆನ್ಮಾರ್ಕ್ನಲ್ಲಿ ಒಂದು ಮಗು ಹುಟ್ಟಿದಾಗ, ಸ್ನೇಹಿತರು ಮತ್ತು ಸಂಬಂಧಿಕರು ಭೇಟಿನೀಡಿ ಶಿಶುವಿಗೆ ಉಪಯೋಗಕಾರಿಯಾಗಿರುವುದೆಂದು ಅವರು ನಿರೀಕ್ಷಿಸುವ ಕೊಡುಗೆಗಳನ್ನು ತರುತ್ತಾರೆ. ಇತರ ದೇಶಗಳಲ್ಲಿ ಸ್ನೇಹಿತರು ಜನನದ ನಿರೀಕ್ಷಣೆಯಲ್ಲಿ ಅಂತಹ ಕೊಡುಗೆಗಳು ಕೊಡಲ್ಪಡುವ ಒಂದು ಪಾರ್ಟಿಯನ್ನು ನಡಿಸಬಹುದು.
ಅನೇಕ ನಿದರ್ಶನಗಳಲ್ಲಿ, ಕೊಡುಗೆಗಳು ನಿರೀಕ್ಷಿಸಲ್ಪಡುವಾಗಿನ ಸಂದರ್ಭಗಳು, ವಾರ್ಷಿಕ ಪ್ರಸಂಗಗಳು ಆಗಿರುತ್ತವೆ. ಆದಿ ಕ್ರೈಸ್ತರೊಳಗೆ ಅಂತಹ ಆಚರಣೆಗಳು ಒಂದು ರೂಢಿಯಾಗಿರದಿದ್ದರೂ, ಅವು ಕ್ರೈಸ್ತರೆಂದು ಹೇಳಿಕೊಳ್ಳುವವರ ಹಾಗೂ ಕ್ರೈಸ್ತರಲ್ಲದವರಲ್ಲಿ ಹೆಚ್ಚಿನವರ ನಡುವೆ ತುಂಬ ಜನಪ್ರಿಯವಾಗಿ ಪರಿಣಮಿಸಿವೆ. ಮಕ್ಕಳು ದೊಡ್ಡವರಾದಂತೆ ಜನ್ಮದಿನದ ಕೊಡುಗೆಗಳನ್ನು ಕೊಡುವ ರೂಢಿಯು ಇತರ ಸಂಸ್ಕೃತಿಗಳಲ್ಲಿ ಮರೆಯಾಗಬಹುದು, ಆದರೆ ಗ್ರೀಕರ ನಡುವಿನ ಪದ್ಧತಿಯು ಬೇರೆ ರೀತಿಯಾಗಿ ವಿಧಿಸುತ್ತದೆ. ಗ್ರೀಸ್ನಲ್ಲಿ, ಜನ್ಮದಿನಗಳಿಗೆ ತುಂಬ ಗಮನವನ್ನು ಕೊಡಲಾಗುತ್ತದೆ. ಅವರು ಒಬ್ಬ ವ್ಯಕ್ತಿಗೆ ಅವನ “ನಾಮಕರಣದ ದಿನ”ದಂದೂ ಉಡುಗೊರೆಗಳನ್ನು ಕೊಡುತ್ತಾರೆ. ಅದು ಏನಾಗಿದೆ? ಒಳ್ಳೇದು, ಧಾರ್ಮಿಕ ಪದ್ಧತಿಯು ವರ್ಷದ ಪ್ರತಿಯೊಂದು ದಿವಸಕ್ಕೆ ಒಂದು ಭಿನ್ನ “ಸಂತ”ನನ್ನು ಜೋಡಿಸುತ್ತದೆ, ಮತ್ತು ಅನೇಕ ಜನರಿಗೆ “ಸಂತರ” ಹೆಸರುಗಳು ಕೊಡಲ್ಪಟ್ಟಿವೆ. ಆ “ಸಂತನ” ದಿನವು ಆಗಮಿಸುವಾಗ, ಆ ಹೆಸರನ್ನು ಹೊತ್ತಿರುವವರು ಕೊಡುಗೆಗಳನ್ನು ಪಡೆಯುತ್ತಾರೆ.
ಕೊರಿಯದವರಿಗೆ, ತಮ್ಮ ಮಕ್ಕಳಿಗಾಗಿ ಜನ್ಮದಿನದ ಆಚರಣೆಗಳಿಗೆ ಕೂಡಿಸಿ, ಮಕ್ಕಳ ದಿನವೆಂದು ಜ್ಞಾತವಾಗಿರುವ ಒಂದು ರಾಷ್ಟ್ರೀಯ ರಜಾದಿನವಿದೆ. ಕುಟುಂಬ ಸಂತೋಷಸಂಚಾರಗಳು ಇರುವ ಮತ್ತು ಅವರ ಜನನದ ತಾರೀಖು ಯಾವುದೇ ಆಗಿರಲಿ ಮಕ್ಕಳಿಗೆ ಉಡುಗೊರೆಗಳು ಕೊಡಲ್ಪಡುವ ಒಂದು ಸಮಯವು ಅದಾಗಿದೆ. ಮಕ್ಕಳು ತಮ್ಮ ಹೆತ್ತವರಿಗೆ ಕೊಡುವ, ಹೆತ್ತವರ ದಿನ, ಮತ್ತು ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸನ್ಮಾನಿಸುವ ಮತ್ತು ಅವರಿಗೆ ಕೊಡುಗೆಗಳನ್ನು ಕೊಡುವ, ಶಿಕ್ಷಕರ ದಿನ ಕೂಡ ಕೊರಿಯದ ಜನರಿಗೆ ಇದೆ. ಕೊರಿಯನ್ ಪದ್ಧತಿಗನುಸಾರ, ಒಬ್ಬ ವ್ಯಕ್ತಿಯು 60 ವರ್ಷ ಪ್ರಾಯವನ್ನು ತಲಪುವಾಗ, ಒಂದು ದೊಡ್ಡ ಪಾರ್ಟಿಯು ನಡಿಸಲ್ಪಡುತ್ತದೆ. ದೀರ್ಘಾಯುಸ್ಸು ಮತ್ತು ಸಂತೋಷಕ್ಕಾಗಿ ಶುಭಕಾಮನೆಗಳನ್ನು ನೀಡುವುದರಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಜೊತೆಗೂಡುತ್ತಾರೆ, ಮತ್ತು ಜೀವನದ ಆ ಬಿಂದುವನ್ನು ತಲಪಿರುವವನಿಗೆ ಕೊಡುಗೆಗಳು ನೀಡಲ್ಪಡುತ್ತವೆ.
ಜನಪ್ರಿಯ ಪದ್ಧತಿಯು ಕೊಡುಗೆಗಳಿಗಾಗಿ ಕರೆನೀಡುವ ಇನ್ನೊಂದು ಸಂದರ್ಭವು ಒಂದು ಮದುವೆಯಾಗಿದೆ. ಕೆನ್ಯದಲ್ಲಿ ಒಬ್ಬ ದಂಪತಿಗಳು ಮದುವೆಯಾಗುವಾಗ, ವರನ ಕುಟುಂಬವು, ವಧುವಿನ ಕುಟುಂಬಕ್ಕೆ ಒಂದು ಕೊಡುಗೆಯನ್ನು ನೀಡುವುದು ನಿರೀಕ್ಷಿಸಲ್ಪಡುತ್ತದೆ. ಅತಿಥಿಗಳೂ ಕೊಡುಗೆಗಳನ್ನು ತರುತ್ತಾರೆ. ವಧೂವರರು ಪದ್ಧತಿಯ ವಿಧಿಗಳನ್ನು ಅನುಸರಿಸುವಲ್ಲಿ, ಅತಿಥಿಗಳು ತಮ್ಮ ಕೊಡುಗೆಗಳನ್ನು ಮುಂದೆ ತಂದಂತೆಯೇ ಅವರು ಒಂದು ವೇದಿಕೆಯ ಮೇಲೆ ಕೂತಿರುವರು. ಪ್ರತಿಯೊಂದು ಕೊಡುಗೆಯು ನೀಡಲ್ಪಟ್ಟಂತೆಯೇ “ಇಂಥಿಂಥವರು ದಂಪತಿಗಳಿಗೆ ಒಂದು ಕೊಡುಗೆಯನ್ನು ತಂದಿದ್ದಾರೆ” ಎಂಬ ಒಂದು ಪ್ರಕಟನೆಯನ್ನು ಮಾಡಲಾಗುವುದು. ಅಂತಹ ಅಂಗೀಕಾರವನ್ನು ಪಡೆಯದಿದ್ದಲ್ಲಿ ಕೊಡುವವರಲ್ಲಿ ಅನೇಕರು ತೀವ್ರವಾಗಿ ಅಪ್ರಸನ್ನಗೊಳ್ಳುವರು.
ಲೆಬನೀಸ್ ಜನರೊಳಗೆ, ಯಾರಾದರೊಬ್ಬರು ಮದುವೆಯಾದಾಗ, ಸ್ನೇಹಿತರು ಮತ್ತು ನೆರೆಹೊರೆಯವರು, ದಂಪತಿಗಳನ್ನು ಚೆನ್ನಾಗಿ ತಿಳಿಯದವರು ಸಹ, ಹಲವಾರು ದಿನಗಳ ಅನಂತರವೂ ಕೊಡುಗೆಗಳೊಂದಿಗೆ ಬರುತ್ತಾರೆ. ಬಾಲ್ಯಾವಸ್ಥೆಯಿಂದಲೇ, ಕೊಡುಗೆಗಳನ್ನು ಕೊಡುವದು, ಒಂದು ಸಾಲವನ್ನು ತೀರಿಸುವಂತೆ, ಒಂದು ಜವಾಬ್ದಾರಿಯಾಗಿದೆಯೆಂದು ಅವರಿಗೆ ಕಲಿಸಲಾಗುತ್ತದೆ. “ನೀವು ಅದನ್ನು ಮಾಡದಿದ್ದರೆ, ನಿಮಗೆ ನಿಮ್ಮ ಕುರಿತಾಗಿ ಒಳ್ಳೇದನಿಸುವುದಿಲ್ಲ” ಅಂದನು ಒಬ್ಬ ಲೆಬನೀಸ್ ಪುರುಷ. “ಅದು ಸಂಪ್ರದಾಯವಾಗಿದೆ.”
ಆದಾಗಲೂ, ಅನೇಕ ದೇಶಗಳಲ್ಲಿ ಕೊಡುವಿಕೆಯು ನಿರೀಕ್ಷಿಸಲ್ಪಡುವ ಎಲ್ಲಾ ಸಂದರ್ಭಗಳಲ್ಲಿ, ಕ್ರಿಸ್ಮಸ್ ಅತ್ಯಂತ ಪ್ರಧಾನವಾದದ್ದಾಗಿದೆ. ನೀವು ಜೀವಿಸುವಲ್ಲಿ ಹೀಗಿರುವುದಿಲ್ಲವೊ? ಕ್ರಿಸ್ಮಸ್ ಕೊಡುಗೆಗಳ ಮೇಲೆ ಅಮೆರಿಕನರು ವಾರ್ಷಿಕವಾಗಿ 4,000 ಕೋಟಿಗಿಂತ ಹೆಚ್ಚು ಡಾಲರುಗಳನ್ನು ವ್ಯಯಿಸುತ್ತಾರೆಂದು 1990ರಷ್ಟು ಇತ್ತೀಚೆಗೆ ಅಂದಾಜಿಸಲಾಯಿತು. ಭಾರೀ ಹುರುಪಿನೊಂದಿಗೆ ಆ ರಜಾದಿನವು, ಜಪಾನಿನಲ್ಲಿ ಬೌದ್ಧರು ಮತ್ತು ಶಿಂಟೋ ಧರ್ಮದವರಿಂದ ಆಚರಿಸಲ್ಪಡುತ್ತದೆ, ಮತ್ತು ಆ ಆಚರಣೆಯ ಅನೇಕ ರೂಪಗಳು ಯೂರೋಪ್, ದಕ್ಷಿಣ ಅಮೆರಿಕ ಮತ್ತು ಆಫ್ರಿಕದ ಭಾಗಗಳಲ್ಲಿ ಕಂಡುಕೊಳ್ಳಲ್ಪಡುತ್ತವೆ.
ಕ್ರಿಸ್ಮಸ್, ಜನರು ಸಂತೋಷದಿಂದಿರಲು ನಿರೀಕ್ಷಿಸುವ ಒಂದು ಕಾಲವಾಗಿದೆ, ಆದರೆ ಅನೇಕರು ಸಂತೋಷದಿಂದಿರುವುದಿಲ್ಲ. ಕೊಡುಗೆಗಳಿಗಾಗಿ ಉನ್ಮದಾವೇಗದ ಖರೀದಿಯು ಮತ್ತು ಬಿಲ್ಗಳನ್ನು ಪಾವತಿ ಮಾಡುವುದರ ಕುರಿತಾದ ಚಿಂತೆಯು, ತಾವು ಅನುಭವಿಸುವ ಯಾವುದೇ ಸುಖದ ಕ್ಷಣಗಳನ್ನು ಮರೆಮಾಡುತ್ತದೆಂದು ಅನೇಕ ಜನರು ಕಂಡುಕೊಳ್ಳುತ್ತಾರೆ.
ಆದರೂ, ಕೊಡುವುದರಲ್ಲಿ ಸಂತೋಷವಿದೆಯೆಂದು ಬೈಬಲ್ ಹೇಳುತ್ತದೆ. ಕೊಡುವಿಕೆಯು ಮಾಡಲ್ಪಡುವ ಮನೋವೃತ್ತಿಯ ಮೇಲೆ ಆಧರಿಸಿ, ಅದರಲ್ಲಿ ನಿಜವಾಗಿಯೂ ಸಂತೋಷವಿರುತ್ತದೆ.—ಅ. ಕೃತ್ಯಗಳು 20:35.