“ನಾನು ಯೆಹೋವನಿಗೆ ಅಮೂಲ್ಯ ಆಗಿದ್ದೇನೆ!”
ಈ “ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಸಮಯ”ಗಳಲ್ಲಿ, ಯೆಹೋವನ ಅನೇಕ ನಂಬಿಗಸ್ತ ಸೇವಕರು ಅಯೋಗ್ಯತೆಯ ಅನಿಸಿಕೆಗಳೊಂದಿಗೆ ಎಡೆಬಿಡದ ಹೋರಾಟವನ್ನು ಸಹಿಸಿಕೊಳ್ಳುತ್ತಾರೆ. (2 ತಿಮೊಥೆಯ 3:1, NW) ಇದು ಆಶ್ಚರ್ಯವಲ್ಲ, ಏಕೆಂದರೆ ಸೈತಾನನ “ಕುತಂತ್ರದ ವರ್ತನೆ”ಗಳಲ್ಲಿ ಒಂದು, ನಾವು ನಮ್ಮ ಸೃಷ್ಟಿಕರ್ತನಿಂದಲೂ ಪ್ರೀತಿಸಲ್ಪಡುವುದಿಲ್ಲವೆಂದು ಭಾವಿಸುವಂತೆ ಮಾಡುವುದೇ. (ಎಫೆಸ 6:11, NW, ಪಾದಟಿಪ್ಪಣಿ) ಸಮಂಜಸವಾಗಿಯೇ, ಎಪ್ರಿಲ್ 1, 1995ರ ಕಾವಲಿನಬುರುಜು ಪತ್ರಿಕೆಯು, ಸಭಾ ಅಧ್ಯಯನಕ್ಕಾಗಿ “ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರಾಗಿದ್ದೀರಿ!” ಮತ್ತು “ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಹುರಿದುಂಬಿಸುವುದು—ಹೇಗೆ?” ಎಂಬ ಎರಡು ಲೇಖನಗಳನ್ನು ಒಳಗೊಂಡಿತ್ತು. ನಮ್ಮ ಪ್ರಯತ್ನಗಳನ್ನು ಯೆಹೋವನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂದು ನಾವು ಜ್ಞಾಪಿಸಿಕೊಳ್ಳುವಂತೆ ಮಾಡಲು ಈ ಲೇಖನಗಳು ರಚಿಸಲಾಗಿದ್ದವು. ಪಡೆಯಲಾಗಿದ್ದ ಗಣ್ಯತೆಯ ಕೆಲವು ಹೇಳಿಕೆಗಳು ಈ ಕೆಳಗಿವೆ:
“ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ 27 ವರ್ಷಗಳಲ್ಲಿ ಎಂದೂ ಒಂದು ಪತ್ರಿಕೆ ನನ್ನ ಮೇಲೆ ಇಷ್ಟು ಪರಿಣಾಮ ಬೀರಿದ್ದಿಲ್ಲ. ನನಗೆ ಅಳುವುದನ್ನು ಬಿಟ್ಟರೆ ಅನ್ಯಮಾರ್ಗವಿದಿರ್ದಲಿಲ್ಲ—ಈ ಲೇಖನಗಳು ನನಗೆ ಅಷ್ಟೊಂದು ಉಪಶಮನವನ್ನು ತಂದವು. ಈಗ ನನಗೆ ಯೆಹೋವನಿಂದ ಎಷ್ಟೋ ಹೆಚ್ಚು ಪ್ರೀತಿಸಲ್ಪಡುವ ಅನಿಸಿಕೆಯಿದೆ. ನನ್ನ ಭುಜದ ಮೇಲಿಂದ ಒಂದು ದೊಡ್ಡ ಹೊರೆಯು ತೊಲಗಿಸಲ್ಪಟ್ಟಂತಾಗಿದೆ.”—ಸಿ. ಏಚ್.
“ನಾನು ಈ ಪತ್ರಿಕೆಯನ್ನು ಒಂದು ದಿನದಲ್ಲಿ ನಾಲ್ಕು ಬಾರಿ ಓದಿದೆ. ನೀವು ಕೆಲಸಕ್ಕೆ ಬಾರದವರೆಂದು ನಂಬುವಲ್ಲಿ ನಿಮಗೆ ಒಂದು ಸುಳ್ಳನ್ನು ಕಲಿಸಲಾಗಿದೆ ಎಂದು ಲೇಖನವು ಹೇಳಿದ ರೀತಿ ನನಗೆ ಬಲು ಇಷ್ಟವಾಯಿತು. ನಾನು ಈ ಲೇಖನವನ್ನು ಕುರಿಪಾಲನೆಯಲ್ಲಿ ಮತ್ತು ಮನೆಮನೆಯಲ್ಲಿ ಸಾರುವುದರಲ್ಲಿ ಉಪಯೋಗಿಸುವೆನು.”—ಎಮ್. ಪಿ.
“ಯೆಹೋವನನ್ನು ಪ್ರೀತಿಸುವವರು ಕೂಡ ಅಯೋಗ್ಯರು ಮತ್ತು ಪ್ರೀತಿಗೆ ಅಪಾತ್ರರೆಂದು ಭಾವಿಸುವಂತೆ ಮಾಡುವುದರಲ್ಲಿ ಸೈತಾನನು ಒಂದು ಅತ್ಯುತ್ತಮ ಕೆಲಸವನ್ನು ಮಾಡಿದ್ದಾನೆ. ಯೆಹೋವನು ನಮ್ಮನ್ನು ಆಳವಾಗಿ ಪ್ರೀತಿಸುತ್ತಾನೆ ಮತ್ತು ನಾವು ಆತನಿಗಾಗಿ ಮಾಡುವ ಎಲ್ಲ ಚಿಕ್ಕ ಸಂಗತಿಗಳನ್ನು ಆತನು ಮಾನ್ಯಮಾಡುತ್ತಾನೆಂದು ‘ನಂಬಿಗಸ್ತ ಆಳು’ ವರ್ಗದ ಮೂಲಕ ನೆನಪಿಸಲ್ಪಡುವುದು, ನಾನು ಓದಿರುವ ಅತ್ಯಂತ ಪ್ರೋತ್ಸಾಹಕರ ವಿಷಯಗಳಲ್ಲಿ ಒಂದಾಗಿದೆ. ಈ ಲೇಖನಗಳಲ್ಲಿ ನೀವು ಮಾತಾಡಿದ ಅನಿಸಿಕೆಗಳು ನನಗೆ ಅನೇಕ ವರ್ಷಗಳಿಂದಿದ್ದವು. ನಾನು ಯೆಹೋವನ ಪ್ರೀತಿಗೆ ಅರ್ಹನೆಂದು ನನಗೆ ಎಂದೂ ಅನಿಸುತ್ತಿರಲಿಲ್ಲವಾದುದರಿಂದ, ಆ ಪ್ರೀತಿಯನ್ನು ಸಂಪಾದಿಸಲು ನಾನು ಆತನ ಸೇವೆಯಲ್ಲಿ ಹೆಚ್ಚೆಚ್ಚನ್ನು ಮಾಡಲು ಪ್ರಯತ್ನಿಸಿದೆ. ಆದರೆ ನನಗೆ ಪ್ರೇರಕವಾಗಿದ್ದದ್ದು ದೋಷಿ ಮನಸ್ಸು ಮತ್ತು ಲಜ್ಜೆ. ಆದಕಾರಣ ನಾನು ಶುಶ್ರೂಷೆಯಲ್ಲಿ ಎಷ್ಟೇ ತಾಸುಗಳನ್ನು ಕಳೆಯಲಿ, ಎಷ್ಟೇ ಜನರಿಗೆ ಸಹಾಯಮಾಡಿರಲಿ, ಅದು ಸಾಲದೆಂದು ನನಗನಿಸಿತು. ನನ್ನಲ್ಲಿದ್ದ ಕೊರತೆಯನ್ನು ಮಾತ್ರ ನಾನು ನೋಡಿದೆ. ಈಗ ನಾನು ಪ್ರೀತಿಯಿಂದಾಗಿ ಯೆಹೋವನನ್ನು ಸೇವಿಸುವಾಗ, ಆತನು ನಸುನಗೆ ಬೀರುತ್ತಿದ್ದಾನೆ ಮತ್ತು ಆತನಿಗೆ ನನ್ನಲ್ಲಿ ಅಭಿಮಾನವಿದೆ ಎಂದು ನಾನು ಭಾವಿಸುತ್ತೇನೆ. ಇದು ಆತನಿಗಾಗಿರುವ ನನ್ನ ಪ್ರೀತಿಯನ್ನು ಇನ್ನೂ ಹೆಚ್ಚು ಉಕ್ಕೇರುವಂತೆ ಮಾಡಿ, ನಾನು ಇನ್ನೂ ಹೆಚ್ಚನ್ನು ಮಾಡಬಯಸುವಂತೆ ಮಾಡುತ್ತದೆ. ಈಗ ನಾನು ಯೆಹೋವನಿಗೆ ಮಾಡುವ ನನ್ನ ಸೇವೆಯಿಂದ ಮಹತ್ತರವಾದ ಆನಂದವನ್ನು ಅನುಭವಿಸುತ್ತೇನೆ.”—ಆರ್. ಎಮ್.
“ಇವು ಖಂಡಿತವಾಗಿ ನಾನು ಎಂದೂ ಓದಿರುವುವುಗಳಲ್ಲಿ ನಮ್ಮ ಹೃದಯಗಳನ್ನು ಸ್ಪರ್ಶಿಸಿರುವ ಅತ್ಯುತ್ಕೃಷವ್ಟಾದ, ಅತಿ ಭಕ್ತಿವರ್ಧಕವಾದ, ಹೌದು, ಪ್ರಮುಖ ಲೇಖನಗಳು! ನಾನು ಕಾವಲಿನಬುರುಜು ಪತ್ರಿಕೆಯನ್ನು 55 ವರುಷಗಳಿಂದ ಓದುತ್ತಿದ್ದೇನೆ, ಮತ್ತು ಹೆಗ್ಗುರುತು ಸಂಚಿಕೆಗಳು ಅನೇಕವಿದ್ದವು. ಆದರೆ ನಾವು ‘ಕೆಲಸಕ್ಕೆ ಬಾರದವರು’ ಮತ್ತು ‘ಪ್ರೀತಿಸಲ್ಪಡದವರು’ ಮತ್ತು ಯೆಹೋವನ ಪ್ರೀತಿಯನ್ನು ‘ಸಂಪಾದಿಸಲು’ ಸಾಕಷ್ಟನ್ನು ಮಾಡಲಶಕ್ತರು ಎಂಬ ನಮ್ಮ ಶಂಕೆಗಳು, ಭಯಗಳು ಮತ್ತು ದಿಗಿಲುಗಳನ್ನು ಅಡಗಿಸುವುದರಲ್ಲಿ ಈ ಸಂಚಿಕೆಯು ಹಿಂದೆಂದೂ ಇದ್ದ ಯಾವುದನ್ನೂ ಮೀರಿಸಿದೆ. ಈ ಕಾವಲಿನಬುರುಜು ನಮ್ಮ ಸಹೋದರರಿಗೆ ಅತ್ಯಂತ ಅವಶ್ಯವಿರುವ ವಿಧದ ಆತ್ಮಿಕ ಸಹಾಯವನ್ನು ಒಳಗೊಂಡಿದೆ. ಕುರಿಪಾಲನೆಯಲ್ಲಿ ಈ ಲೇಖನಗಳನ್ನು ಮತ್ತೆ ಮತ್ತೆ ಉಪಯೋಗಿಸುವುದು ನನ್ನ ಇಂಗಿತ.”—ಎಫ್. ಕೆ.
“ಕೀಳು ಆತ್ಮಾಭಿಮಾನ ಅಥವಾ ಆತ್ಮ ಜುಗುಪ್ಸೆಯ ಅನಿಸಿಕೆಗಳೊಡನೆ ಕೂಡ ಹೋರಾಡುತ್ತಿರುವ ನಮ್ಮವರಿಗೆ, ಸತ್ಯದಲ್ಲಿ ಮುಂದುವರಿಯಲು ಬೇಕಾದ ಶಕ್ತಿಯನ್ನು ಒಟ್ಟುಗೂಡಿಸುವುದು ಎಷ್ಟೋ ಕಷ್ಟಕರವಾಗಿರಬಲ್ಲದು. ಈ ಲೇಖನವು ಕನಿಕರ ಮತ್ತು ಸಹತಾಪದ ಎಷ್ಟು ಅಗಾಧತೆಯನ್ನು ಪ್ರತಿಬಿಂಬಿಸಿತೆಂದರೆ, ಅದು ಹೃದಯಕ್ಕೇ ಶಾಂತಿತರುವ, ವಾಸಿಮಾಡುವ ಮುಲಾಮಿನ ಲೇಪನದಂತಿತ್ತು. ಇಂತಹ ಮಾತುಗಳನ್ನು ಕಾವಲಿನಬುರುಜುವಿನಲ್ಲಿ ಓದುವುದು ಮತ್ತು ಯೆಹೋವನು ನಿಸ್ಸಂದೇಹವಾಗಿ ಅರ್ಥೈಸಿಕೊಳ್ಳುತ್ತಾನೆ ಎಂದು ತಿಳಿಯುವುದು ಅದೆಷ್ಟು ದುಃಖಶಾಮಕ! ಯೆಹೋವನು ತನ್ನ ಜನರನ್ನು, ಅವರು ದೋಷಿ ಮನಸ್ಸು, ನಾಚಿಕೆ ಅಥವಾ ಭಯದಿಂದ ಪ್ರಚೋದಿತರಾಗುವಂತೆ ಬಯಸುವುದಿಲ್ಲವೆಂದು ನಮಗೆ ಜ್ಞಾಪಕಹುಟ್ಟಿಸಿದ್ದಕ್ಕಾಗಿ ನಿಮಗೆ ಉಪಕಾರ. ಸಾರುವ ಕೆಲಸಕ್ಕೆ ನನ್ನ ಸಹಾಯವು, ಇತ್ತೀಚೆಗೆ ನಮ್ಮ ಕುಟುಂಬದಲ್ಲಿನ ಆರ್ಥಿಕ ಕಷ್ಟಗಳು ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ ತೀರ ಸೀಮಿತವಾಗಿದ್ದರೂ, ನನಗೆ ಮಾಡಲು ಸಾಧ್ಯವಾಗುವುದರಲ್ಲಿ ನಾನಿನ್ನೂ ಪೂರೈಕೆಯನ್ನು ಕಂಡುಕೊಳ್ಳುತ್ತಿದ್ದೇನೆ. ನನ್ನ ಪ್ರೇರಕಶಕ್ತಿಯು ಪ್ರೀತಿಯಾಗಿರಲು ಬಿಡುವಂತೆ ನಾನು ಪ್ರಯತ್ನಿಸುವಾಗ, ನಾನು ಸೇವೆಯಲ್ಲಿ ಹೆಚ್ಚು ಸಂತುಷ್ಟಳೆಂದು ಕಂಡುಕೊಳ್ಳುತ್ತೇನೆ.”—ಡಿ. ಎಮ್.
“‘ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರಾಗಿದ್ದೀರಿ!’ ಎಂಬ ಲೇಖನವನ್ನು ನಾನು ಈಗ ತಾನೇ ಓದಿ ಮುಗಿಸಿದೆ. ಪ್ರತಿಯೊಂದು ಪ್ಯಾರಗ್ರಾಫ್ ನನಗೆ ಕಣ್ಣೀರನ್ನು ತರಿಸಿತು. ನಾನು ಕೊಂಚವೇ ಪ್ರೀತಿಯನ್ನು ತೋರಿಸಿದ ಕುಟುಂಬವೊಂದರಿಂದ ಬಂದೆ. ನಾನು ತೃಣೀಕರಿಸಲ್ಪಟ್ಟು, ಕಾಡಿಸಲ್ಪಟ್ಟು, ಹಾಸ್ಯಕ್ಕೊಳಗಾಗಿದ್ದೆ. ಆದಕಾರಣ, ಜೀವನಾರಂಭದಲ್ಲೇ ನಾನು ಅಯೋಗ್ಯನೆಂಬ ಅನಿಸಿಕೆ ನನ್ನಲ್ಲಿತ್ತು. ನಾನಿನ್ನೂ ನನ್ನ ಗತಕಾಲದ ಬೇರೂರಿರುವ ಅನಿಸಿಕೆಗಳನ್ನು ಹೊತ್ತುಕೊಂಡಿದ್ದೇನೆ. ಇದು ನಾನು ವಿಪತ್ತನ್ನು ಅನುಭವಿಸುವಾಗ ನನ್ನನ್ನು ಪೀಡಿಸುತ್ತದೆ. ಸಭಾ ಹಿರಿಯನಾಗಿ ಸೇವೆಮಾಡುವುದನ್ನು ನಾನು ನಿಲ್ಲಿಸಿದಾಗ ನನಗೆ ಎಂದಿನಂತೆ ವೈಫಲ್ಯ—ದೇವರ, ನನ್ನ ಕುಟುಂಬ ಮತ್ತು ಸಭೆಯ ನನ್ನ ಸಹೋದರರ ಕಡೆಗೆ—ದ ಅನಿಸಿಕೆಯಾಯಿತು. ಈ ಅನಿಸಿಕೆಗಳು ಒಡನೆ ಬಿಟ್ಟುಹೋಗುವುದಿಲ್ಲ, ಆದರೆ ಈ ಸಮಯೋಚಿತ ಲೇಖನವು ನಾನು ತುಸು ಸಮತೂಕವನ್ನು ಪುನಃ ಸಂಪಾದಿಸುವಂತೆ ಸಹಾಯಮಾಡಿದೆ. ಅದು ನನ್ನ ಹೊರನೋಟವನ್ನು ಉಜ್ವಲಗೊಳಿಸಿದೆ.”—ಡಿ. ಎಲ್.
“‘ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರಾಗಿದ್ದೀರಿ!’ ಎಂಬ ಲೇಖನಕ್ಕೆ ನಿಮಗೆ ಉಪಕಾರ. ನಾನು ತೀಕ್ಷ್ಣ ಆತ್ಮದ್ವೇಷ ಮತ್ತು ಆಳವಾದ ಅಯೋಗ್ಯತೆಯ ಭಾವನೆಯನ್ನು ನಿಭಾಯಿಸುತ್ತೇನೆ. ಅವುಗಳ ಮೂಲವು ಶೈಶವದಲಾದ್ಲ ಅಪಪ್ರಯೋಗದಲ್ಲಿದೆ. ಈ ಕೊಂಕಾದ ಯೋಚನೆಯನ್ನು ಸ್ವತಃ ಸೈತಾನನ ಕುತಂತ್ರದ ಒಂದು ವರ್ತನೆಯಾಗಿ ವೀಕ್ಷಿಸುವುದು ನಿಶ್ಚಯವಾಗಿಯೂ ಸಮಂಜಸವಾಗಿದೆ. ಅದು ಒಬ್ಬನ ಜೀವಿಸುವ ಇಚ್ಛೆಯನ್ನು ಸಹ ನಜ್ಜುಗುಜ್ಜುಮಾಡಬಲ್ಲದು. ಪ್ರೀತಿಗೆ ಅರ್ಹತೆಯಿಲ್ಲದವನು ಎಂಬ ಸುಳ್ಳನ್ನು ಪ್ರತಿಭಟಿಸಲು, ನಾನು ನಿಜವಾಗಿ ಪ್ರತಿದಿನವೂ ಕೆಲಸ ಮಾಡಲೇಬೇಕು. ಈ ಲೇಖನವು ನನಗೆ ನಿಮಗೆಂದೂ ತಿಳಿಯಸಾಧ್ಯವಿರುವುದಕ್ಕಿಂತ ಹೆಚ್ಚಿನ ಅರ್ಥದಲ್ಲಿದೆ.”—ಸಿ. ಎಫ್.
“ಇಂದು ಸಹೋದರರು, ಯೆಹೋವನು ಬಲಾತ್ಕಾರ ಅಥವಾ ಒತ್ತಡಕ್ಕೆ ಬದಲು, ಪ್ರೀತಿಯಿಂದ ಪ್ರಚೋದಿಸಲ್ಪಡುವ ಕ್ರಿಯೆಗಳನ್ನು ಗಣ್ಯಮಾಡುತ್ತಾನೆಂಬ ವಿಚಾರಕ್ಕೆ ವಿಶೇಷವಾಗಿ ಪ್ರತಿವರ್ತನೆಯನ್ನು ತೋರಿಸುತ್ತಾರೆ. ಯೆಹೋವನ ಹೃದಯೋಲ್ಲಾಸಕರವಾದ ಮತ್ತು ಮಮತೆಯ ವ್ಯಕ್ತಿತ್ವ, ತನ್ನ ಜನರ ಮೇಲೆ ಒಬ್ಬೊಬ್ಬರಾಗಿ ಆತನಿಗಿರುವ ಆಸಕ್ತಿ ಮತ್ತು ಆತನು ತನ್ನನ್ನು ನೀಡಿಕೊಳ್ಳುವ ಪ್ರೀತಿಯ ವಿಧ—ಇವು ಚೈತನ್ಯದಾಯಕವೂ ಪ್ರೇರಕವೂ ಆಗಿದೆ. ಈ ಕಾರಣದಿಂದ, ‘ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರಾಗಿದ್ದೀರಿ!’ ಎಂಬ ಲೇಖನವು ನಮಗೆ ದೊರೆತೊಡನೆ ಅನೇಕರು ಗಣ್ಯತೆಯನ್ನು ವ್ಯಕ್ತಪಡಿಸಿದರು. ಯೆಹೋವನೊಂದಿಗೆ ಹೆಚ್ಚು ವ್ಯಕ್ತಿಪರ ಸಂಬಂಧವನ್ನು ಬೆಳೆಸಲು ಇದು ಅನೇಕರಿಗೆ ದಾರಿ ತೆರೆಯುತ್ತಿದೆಯೆಂದು ತೋರುತ್ತದೆ. ಇತ್ತೀಚಿನ ಕಾವಲಿನಬುರುಜು ಪತ್ರಿಕೆಗಳಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಶೈಲಿ ಮತ್ತು ಸೂಕ್ಷ್ಮಗ್ರಾಹಿತ್ವಕ್ಕೆ ನನ್ನ ಪತ್ನಿಯೂ ನಾನೂ ಕೃತಜ್ಞತೆಯನ್ನು ವ್ಯಕ್ತಪಡಿಸಬಯಸುತ್ತೇವೆ. ಈ ಅಂಶಗಳಲ್ಲಿ ಅನೇಕವನ್ನು ನಾವು ಸಭೆಗಳನ್ನು ಸಂದರ್ಶಿಸುವಾಗ ಅನ್ವಯಿಸುವಂತೆ ಕೆಲಸ ನಡಿಸುತ್ತಿದ್ದೇವೆ.”—ಒಬ್ಬ ಸಂಚಾರ ಮೇಲ್ವಿಚಾರಕನಿಂದ.
“ನಾನು ಸುಮಾರು 30 ವರುಷಗಳ ನಂಬಿಕೆಯ ಓದುಗನು, ಆದರೆ ಇಷ್ಟು ಪ್ರೇರಕವಾಗಿರುವುದನ್ನು, ಇಷ್ಟು ಆತ್ಮೋನ್ನತಿ ಮಾಡುವ ಯಾವುದನ್ನೂ ನಾನು ಎಂದೂ ಓದಿಲ್ಲ. ಬಲಾಢ್ಯವಾದ, ಕೌಶಲದಿಂದ ಅನ್ವಯಿಸಿರುವ ಶಾಸ್ತ್ರವಚನಗಳು, ನನ್ನ ಸ್ವಂತ ಅನಿಸಿಕೆಗಳಲ್ಲಿ ಅಡಗಿದ್ದ ಸುಳ್ಳುಗಳನ್ನು ಕಿತ್ತೊಗೆದು, ಯೆಹೋವನಿಗೆ ಹೆಚ್ಚು ಸಮೀಪವಾಗಲು ನನಗೆ ಸಹಾಯಮಾಡಿವೆ. ಅನೇಕ ವರ್ಷಗಳಿಂದ ನಾನು ದೋಷಿ ಮನಸ್ಸಿನಿಂದ ಯೆಹೋವನನ್ನು ಸೇವಿಸಿದೆ. ಪ್ರಾಯಶ್ಚಿತ್ತ ಯಜ್ಞದ ಮತ್ತು ದೇವರ ಪ್ರೀತಿಯ ಕುರಿತ ಕೇವಲ ಬುದ್ಧಿಶಕ್ತಿಯ ತಿಳಿವಳಿಕೆ ಮಾತ್ರ ನನಗಿತ್ತು. ಅಷ್ಟು ಅಂತರ್ದೃಷ್ಟಿಯ ಮತ್ತು ಆಲೋಚನಾಪರ ಲೇಖನಗಳಿಗಾಗಿ ನಿಮಗೆ ಉಪಕಾರ. ಅವುಗಳಂತಹ ಇನ್ನೂ ಅನೇಕ ಲೇಖನಗಳನ್ನು ನಾನು ಓದಲು ನಿರೀಕ್ಷಿಸುತ್ತೇನೆ.”—ಎಮ್. ಎಸ್.
“ನಾನು ಸತ್ಯದಲ್ಲಿದ್ದ ಎಲ್ಲ 29 ವರುಷಗಳಲ್ಲಿ, ಇಂತಹ ಕೃತಜ್ಞತಾ ಪ್ರತಿಕ್ರಿಯೆ ಮತ್ತು ಆಳವಾದ ಭಾವಾವೇಶವನ್ನು ಒಂದು ಲೇಖನವು ಯಾವಾಗ ಆಗಿಸಿದೆಯೆಂದು ನಾನು ನೆನಪಿಸಿಕೊಳ್ಳಲಾರೆ. ನಾನು ಮಹಾ ಪ್ರೀತಿಯಿಂದ ಮತ್ತು ಒಂದು ಪರಾಮರಿಸುವ ಕುಟುಂಬದಲ್ಲಿ ಬೆಳೆಸಲ್ಪಟ್ಟೆನಾದರೂ, ಯೆಹೋವನನ್ನು ಸೇವಿಸಲು ನಾನು ಯೋಗ್ಯಳೆಂಬುದು ಇರಲಿ, ಜೀವಿಸುತ್ತಿರಲು ಯೋಗ್ಯಳೆಂಬ ಅನಿಸಿಕೆಯೂ ಇಲ್ಲದವಳಾಗಿದ್ದೆ. ಈ ಲೇಖನಾನಂತರವಾದರೊ, ನಾನು ಮೊಣಕಾಲೂರಿ, ತೀವ್ರವಾಗಿ ಗದದ್ಗಿಸಿ ಅಳುತ್ತ ಯೆಹೋವನಿಗೆ ಉಪಕಾರ ಹೇಳಿದೆ. ನಾನು ಈ ಲೇಖನವನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡಿರುವೆ. ನಾನು ನನ್ನನ್ನು ಪ್ರತ್ಯೇಕ ರೀತಿಯಲ್ಲಿ ನೋಡುವೆ, ಏಕೆಂದರೆ ಈಗ ನನಗೆ, ನಾನು ಯೆಹೋವನಿಗೆ ಅಮೂಲ್ಯಳು ಆಗಿದ್ದೇನೆ ಎಂಬ ತಿಳಿವಳಿಕೆಯಿದೆ.”—ಡಿ. ಬಿ.