ನಮ ವಾಚಕರಿಂದ
ಒಂದು ರೋಬಾಟ್ ಮಂಗಳಗ್ರಹವನ್ನು ಪರೀಕ್ಷಿಸುತ್ತದೆ ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುವ ದೊಡ್ಡ ಅಂತರವನ್ನು ತೋರಿಸಿದ ಲೇಖನಮಾಲೆಯನ್ನು ಓದಿದ ನಂತರ, ಅದೇ ಸಂಚಿಕೆಯಲ್ಲಿ “ರೋಬಾಟ್ ಮಂಗಳಗ್ರಹವನ್ನು ಪರೀಕ್ಷಿಸುತ್ತದೆ” (ಜೂನ್ 22, 1998, ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಲೇಖನಕ್ಕೆ ಪುಟವನ್ನು ತಿರುವಿದೆ. ಮಾನವನ ಮತ್ತು ಪ್ರಾಣಿಗಳ ನಡುವೆ ಇರುವಂತಹ ಬೌದ್ಧಿಕ ಅಂತರದ ವಿಷಯವನ್ನು, ಎಷ್ಟು ಸಂಕ್ಷಿಪ್ತವೂ ಅನಿವಾರ್ಯವೂ ಆದಂತಹ ರೀತಿಯಲ್ಲಿ ಆ ಲೇಖನವು ದೃಢೀಕರಿಸಿತು!
ಜಿ. ಡಿ. ಎಮ್., ಅಮೆರಿಕ
ಹಣ ಗಳಿಸುವುದು “ಯುವ ಜನರು ಪ್ರಶ್ನಿಸುವುದು . . . ನಾನು ಹಣವನ್ನು ಹೇಗೆ ಗಳಿಸಬಲ್ಲೆ?” (ಆಗಸ್ಟ್ 22, 1998, ಇಂಗ್ಲಿಷ್) ಎಂಬ ಬೋಧಪ್ರದ ಲೇಖನವನ್ನು ಪ್ರಕಾಶಿಸಿದ್ದಕ್ಕಾಗಿ ನಿಮಗೆ ತುಂಬ ಧನ್ಯವಾದಗಳು. ಉದ್ಯೋಗವೊಂದನ್ನು ಕಂಡುಹಿಡಿಯುವುದು ಬಹಳ ಕಷ್ಟಕರವಾಗಿತ್ತು. ಆದರೆ, ನಾನು ನಿಮ್ಮ ಶಿಫಾರಸ್ಸುಗಳನ್ನು ಅನುಸರಿಸಿದೆ ಮತ್ತು ಇದರ ಫಲವಾಗಿ ಕೊನೆಗೂ ನನಗೆ ಒಂದು ಉದ್ಯೋಗವು ಸಿಕ್ಕಿತು!
ಎಸ್. ಡಿ., ಘಾನ
ದುಃಸ್ವಪ್ನಗಳು “ಜಗತ್ತನ್ನು ಗಮನಿಸುವುದು” ಎಂಬ ಅಂಕಣದಲ್ಲಿ “ಮಕ್ಕಳ ದುಃಸ್ವಪ್ನ ಸರ್ವಸಾಮಾನ್ಯ” (ಅಕ್ಟೋಬರ್ 8, 1998) ಎಂಬ ವಿಷಯದಲ್ಲಿ ಕೊಡಲ್ಪಟ್ಟ ಸಲಹೆಗಳನ್ನು ನಾನು ನಿಜವಾಗಿಯೂ ಗಣ್ಯಮಾಡಿದೆ. ನನ್ನ ಮಕ್ಕಳಿಗೆ ಯಾವಾಗಲೂ ದುಃಸ್ವಪ್ನಗಳು ಬೀಳುತ್ತದೆ. ಆದರೆ ಅದರ ಕುರಿತಾಗಿ ಮಾತಾಡದೆ, ಸುಮ್ಮನೆ ಹೋಗಿ ಮಲಗುವಂತೆ ನಾನು ಯಾವಾಗಲೂ ಹೇಳುತ್ತಿದ್ದೆ. ಈಗ ನೀವು ನೀಡಿರುವ ಸಲಹೆಗಳಿಗನುಸಾರ, ಈ ಸಮಸ್ಯೆಯನ್ನು ಉತ್ತಮವಾಗಿ ನಿಭಾಯಿಸಬಲ್ಲೆ. ಇಂತಹ ಸಹಾಯಕಾರಿಯಾದ ಮಾಹಿತಿಯನ್ನು ಪ್ರಕಾಶಿಸುವುದನ್ನು ನಿಲ್ಲಿಸದಿರಿ.
ಆರ್. ಎನ್., ಸಿಂಬಾವ್ವೆ
ಮಾನಸಿಕ ಏಕಾಗ್ರತೆ ಟೀಚರ್ ಪಾಠವನ್ನು ಹೇಳಿಕೊಡುತ್ತಿದ್ದಾಗ ನನಗೆ ಏಕಾಗ್ರತೆಯನ್ನು ಕೊಡಲು ತುಂಬ ಕಷ್ಟವಾಗುತ್ತಿತ್ತು. ಆದರೆ “ಯುವ ಜನರು ಪ್ರಶ್ನಿಸುವುದು . . . ಯಾವುದೇ ವಿಷಯದ ಮೇಲೆ ನಾನು ಮನಸ್ಸನ್ನು ಹೇಗೆ ಕೇಂದ್ರೀಕರಿಸಬಲ್ಲೆ?” (ಅಕ್ಟೋಬರ್ 8, 1998) ಎಂಬ ನಿಮ್ಮ ಲೇಖನವು ತರಗತಿಯಲ್ಲಿ ನನ್ನ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿದೆ. ನಿಮ್ಮ ಲೇಖನವನ್ನು ಓದಿದ ಕಾರಣದಿಂದಲೇ, ನಾನು ಈ ಸಮಸ್ಯೆಯನ್ನು ಜಯಿಸಿದ್ದೇನೆ ಮತ್ತು ಈಗ ನಾನು ನನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಿದ್ದೇನೆ.
ಎಮ್. ಏ. ಎಮ್., ಬ್ರೆಸಿಲ್
ಏಕಾಗ್ರತೆಯನ್ನು ಕೊಡುವುದರಲ್ಲಿ ನನಗೆ ಸಮಸ್ಯೆಗಳಿವೆ. ಏಕಾಗ್ರತೆಗೆ, ಸ್ವಲ್ಪ ಪ್ರೇರಕಶಕ್ತಿ ಹಾಗೂ ಸ್ವ-ಶಿಸ್ತು ಮಾತ್ರ ಆವಶ್ಯಕ ಎಂಬುದನ್ನು ನಾನು ಗ್ರಹಿಸಿರಲಿಲ್ಲ. ಇದಕ್ಕೆ ಶ್ರದ್ಧಾಪೂರ್ವಕ ಪ್ರಯತ್ನವು ಅಗತ್ಯವಿರುವುದಾದರೂ ಅದನ್ನು ನಾನು ಮಾಡಬಲ್ಲೆ ಎಂದು ಯೋಚಿಸುತ್ತೇನೆ!
ಡಿ. ಆರ್. ಎ., ಅಮೆರಿಕ
ಎಚ್ಚರ! ಪತ್ರಿಕೆಯು ನನ್ನಂತಹ ಯುವ ಜನರಿಗೆ ತುಂಬ ಆಸಕ್ತಿದಾಯಕವಾಗಿರುವ ಹೇರಳವಾದ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಲೇಖನದಿಂದ ನಾನು ಪ್ರಯೋಜನವನ್ನು ಪಡೆದುಕೊಂಡೆ, ಏಕೆಂದರೆ ನನಗೆ ಏಕಾಗ್ರತೆಯನ್ನು ತೋರಿಸುವುದರಲ್ಲಿ ಕಷ್ಟವಿತ್ತು. ನಿಮಗೆ ಹೃದಯದಾಳದಿಂದ ನನ್ನ ಧನ್ಯವಾದಗಳು.
ಎಮ್. ಎನ್., ಇಟಲಿ
ಏಡ್ಸ್“ಏಡ್ಸ್ ವಿರುದ್ಧ ಹೋರಾಟ—ಜಯ ದೊರಕುವುದೊ?” (ಡಿಸೆಂಬರ್ 8, 1998) ಎಂಬ ಲೇಖನಮಾಲೆಗಾಗಿ ನಾನು ನಿಮಗೆ ನಿಜವಾಗಿಯೂ ಧನ್ಯವಾದಗಳನ್ನು ಹೇಳಲು ಬಯಸಿದೆ. ಅದು ನಿಜವಾಗಿಯೂ ಬೋಧಪ್ರದವಾಗಿತ್ತು. ನನಗೆ 19 ವರ್ಷ ಪ್ರಾಯ. ಏಡ್ಸ್ ಮತ್ತು ಏಚ್‌ಐವಿ ಬಗ್ಗೆ ಅನೇಕ ವಿಷಯಗಳನ್ನು ನನಗೆ ಶಾಲೆಯಲ್ಲಿ ಮತ್ತು ಮನೆಯಲ್ಲಿ ಕಲಿಸಲಾಗಿತ್ತಾದರೂ, ನಾನು ಗಲಿಬಿಲಿಗೊಂಡಿದ್ದೆ. ಒಬ್ಬ ವಿವಾಹ ಸಂಗಾತಿಯನ್ನು ವಿವೇಕಯುತವಾಗಿ ಆರಿಸಿಕೊಂಡು, ಶುದ್ಧವಾದ ನೈತಿಕ ಜೀವಿತವನ್ನು ನಡೆಸುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ಗಣ್ಯಮಾಡಲು ಈ ಲೇಖನವು ನನಗೆ ಸಹಾಯಮಾಡಿತು.
ಎಸ್. ಟಿ., ಅಮೆರಿಕ
ನಿಮ್ಮ ಲೇಖನಗಳು ಬೋಧಪ್ರದವೂ, ನಿಷ್ಕೃಷ್ಟವೂ, ಸತ್ಯಪೂರ್ಣವೂ ಆಗಿದ್ದವು. ನಾನು ಕಳೆದ 10 ವರ್ಷಗಳಿಂದಲೂ ಏಡ್ಸ್ ರೋಗದಿಂದ ಬಳಲುತ್ತಿದ್ದೇನೆ. ನಿಮ್ಮ ಸಾಹಿತ್ಯಗಳ ಸಹಾಯದಿಂದ ಸ್ನೇಹಿತೆಯೊಬ್ಬಳು ನನ್ನೊಂದಿಗೆ ಬೈಬಲ್ ಅಭ್ಯಾಸವನ್ನು ನಡೆಸುತ್ತಿದ್ದಾಳೆ. ಇಂತಹ ಲೇಖನಗಳನ್ನು ಧೈರ್ಯದಿಂದ ಪ್ರಕಾಶಿಸುತ್ತಿರುವುದಕ್ಕಾಗಿ ನಿಮಗೆ ಧನ್ಯವಾದಗಳು.
ಬಿ. ಡಬ್ಲ್ಯು., ಅಮೆರಿಕ
ಏಡ್ಸ್ ಕುರಿತಾದ ಲೇಖನಗಳನ್ನು ಸಂಪೂರ್ಣವಾಗಿ ಓದಿಮುಗಿಸುವ ತನಕ ಎಚ್ಚರ! ಪತ್ರಿಕೆಯನ್ನು ನನಗೆ ಕೆಳಗಿಡಲು ಸಾಧ್ಯವಾಗಲಿಲ್ಲ. ಈ ವಿಷಯದ ಕುರಿತು ಇಷ್ಟೊಂದು ನಿಷ್ಕೃಷ್ಟವಾದ ಮಾಹಿತಿಯನ್ನು ನಾನು ಇದುವರೆಗೂ ಓದಿರಲಿಲ್ಲ. ನಾನೊಬ್ಬ ನರ್ಸ್ ಆಗಿರುವುದರಿಂದ ಇದು ನಿಜವಾಗಿಯೂ ಬಹಳ ಪ್ರಾಮುಖ್ಯವಾದದ್ದಾಗಿದೆ. ನಿಮಗೆ ತುಂಬ ಧನ್ಯವಾದಗಳು.
ಡಿ. ಇ., ಜರ್ಮನಿ
ನನ್ನ ಮಗನು ಕ್ರಿಸ್ತೀಯ ಜೀವಿತವನ್ನು ತೊರೆದುಬಿಟ್ಟ ಅನಂತರ, ಅವನು ಪೂರ್ತಿ ವಿಕಾಸಗೊಂಡ ಏಡ್ಸ್ ರೋಗದೊಂದಿಗೆ ಹಿಂದಿರುಗಿ ಬಂದಿರುವ ಕಾರಣ, ನಾನು ಈ ಲೇಖನಗಳಿಗೆ ಗಣ್ಯತೆಯನ್ನು ತೋರಿಸುತ್ತೇನೆ. ಯೆಹೋವನ ಸಹಾಯದಿಂದ, ಈಗ ಅವನು ಆತ್ಮಿಕವಾಗಿ ಒಳ್ಳೆಯ ನಿಲುವಿನಲ್ಲಿದ್ದಾನೆ. ವೈದ್ಯಕೀಯ ಚಿಕಿತ್ಸೆಯಿಂದಾಗಿ ಅವನ ಆರೋಗ್ಯವು ನಿಯಂತ್ರಣದಲ್ಲಿದೆ. ಅನೇಕ ಜನರು ಸೋಂಕಿತರಾಗಿದ್ದರೂ, ಇನ್ನೂ ಅವರಿಗೆ ಆ ವಿಷಯವು ತಿಳಿದಿರುವುದಿಲ್ಲ ಎಂಬುದು ನಮಗೆ ಗೊತ್ತು. ವಿವಾಹದ ಬಗ್ಗೆ ಆಲೋಚಿಸುತ್ತಿರುವವರು ಇದರ ಕುರಿತಾಗಿ ಬಹಳ ಜಾಗ್ರತೆವಹಿಸಬೇಕು.
ಎನ್. ಜೆ., ಅಮೆರಿಕ