ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 4/15 ಪು. 30
  • ನಿಮಗೆ ನೆನಪಿದೆಯೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯೇ?
  • ಕಾವಲಿನಬುರುಜು—1996
  • ಅನುರೂಪ ಮಾಹಿತಿ
  • ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು
    ಕಾವಲಿನಬುರುಜು—1996
  • ಶಿಕ್ಷಣ—ಯೆಹೋವನನ್ನು ಸ್ತುತಿಸಲು ಅದನ್ನು ಉಪಯೋಗಿಸಿರಿ
    ಕಾವಲಿನಬುರುಜು—1996
  • “ನೀನೊಬ್ಬನೇ ನಿಷ್ಠಾವಂತನು”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ನಿಷ್ಠಾವಂತರನ್ನು ನೋಡಿರಿ!
    ಕಾವಲಿನಬುರುಜು—1996
ಇನ್ನಷ್ಟು
ಕಾವಲಿನಬುರುಜು—1996
w96 4/15 ಪು. 30

ನಿಮಗೆ ನೆನಪಿದೆಯೇ?

ಕಾವಲಿನಬುರುಜುವಿನ ಇತ್ತೀಚಿನ ಸಂಚಿಕೆಗಳು ನಿಮಗೆ ಪ್ರಾಯೋಗಿಕ ಮೌಲ್ಯದವುಗಳಾಗಿ ಇರುವುದನ್ನು ನೀವು ಕಂಡುಕೊಂಡಿದ್ದೀರೊ? ಹಾಗಿರುವಲ್ಲಿ ಈ ಮುಂದಿನ ಪ್ರಶ್ನೆಗಳೊಂದಿಗೆ ನಿಮ್ಮ ಜ್ಞಾಪಕಶಕ್ತಿಯನ್ನು ಏಕೆ ಪರೀಕ್ಷಿಸಬಾರದು:

◻ ಅಮ್ಮೋನಿಯರ ಪತನದಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ? (ಚೆಫನ್ಯ 2:9, 10)

ತನ್ನ ದಯೆಯನ್ನು ದ್ವೇಷಭಾವದೊಂದಿಗೆ ಹಿಂದಿರುಗಿ ಕೊಡುವುದನ್ನು ದೇವರು ಹಗುರವಾಗಿ ತೆಗೆದುಕೊಳ್ಳುವುದಿಲ್ಲ, ಮತ್ತು ತನ್ನ ತಕ್ಕ ಸಮಯದಲ್ಲಿ, ಆತನು ಪುರಾತನ ಸಮಯಗಳಲ್ಲಿ ಮಾಡಿದಂತೆಯೇ ಪುನಃ ಕ್ರಿಯೆಗೈಯುವನು. (ಹೋಲಿಸಿರಿ ಕೀರ್ತನೆ 2:6-12.)—12/15, ಪುಟ 10.

◻ ಕ್ರೈಸ್ತರು ಯಾವ ವಿಧಗಳಲ್ಲಿ ಶಾಂತಿಯನ್ನು ಹೊಂದಿರುತ್ತಾರೆ?

ಮೊದಲನೆಯದಾಗಿ, ಅವರಿಗೆ “[ತಮ್ಮ] ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ . . . ಸಮಾಧಾನ [“ಶಾಂತಿ,” NW]” ಇದೆ. (ರೋಮಾಪುರ 5:1) ಎರಡನೆಯದಾಗಿ, “ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನ [“ಶಾಂತಿ,” NW]ಕರವಾದದ್ದು” ಆದ “ಮೇಲಣಿಂದ ಬರುವ ಜ್ಞಾನ”ವನ್ನು ಬೆಳೆಸಿಕೊಳ್ಳುವ ಮೂಲಕ, ಅವರಿಗೆ ತಮ್ಮೊಳಗೆ ಶಾಂತಿಯಿದೆ. (ಯಾಕೋಬ 3:17)—1/1, ಪುಟ 11.

◻ ದೇವರ ವಾಕ್ಯವು ಹೋಲಿಸಲ್ಪಟ್ಟಿರುವಂತಹ ಕೆಲವು ವಿಷಯಗಳು ಯಾವುವು, ಮತ್ತು ಇದು ನಮಗೆ ಹೇಗೆ ಸಹಾಯಕರವಾಗಿದೆ?

ದೇವರ ವಾಕ್ಯವು ಪೋಷಿಸುವ ಹಾಲಿಗೆ, ಗಟ್ಟಿಯಾದ ಆಹಾರಕ್ಕೆ, ಚೈತನ್ಯದಾಯಕವಾದ ಹಾಗೂ ಶುದ್ಧಗೊಳಿಸುವ ನೀರಿಗೆ, ಕನ್ನಡಿಗೆ ಮತ್ತು ಒಂದು ಹರಿತವಾದ ಕತ್ತಿಗೆ ಹೋಲಿಸಲ್ಪಟ್ಟಿದೆ. ಈ ಪದಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು, ಬೈಬಲನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವಂತೆ ಒಬ್ಬ ಶುಶ್ರೂಷಕನಿಗೆ ಸಹಾಯ ಮಾಡುತ್ತದೆ.—1/1, ಪುಟ 29.

◻ ಒಂದು ಸಮತೂಕದ ಐಹಿಕ ಶಿಕ್ಷಣವು ನಮಗೆ ಏನನ್ನು ಮಾಡಲು ಸಹಾಯ ಮಾಡಬೇಕು?

ಚೆನ್ನಾಗಿ ಓದಲು, ಸ್ಪಷ್ಟವಾಗಿ ಬರೆಯಲು, ಮಾನಸಿಕವಾಗಿಯೂ ನೈತಿಕವಾಗಿಯೂ ವಿಕಾಸಹೊಂದಲು, ಮತ್ತು ಅನುದಿನದ ಜೀವನಕ್ಕಾಗಿ ಹಾಗೂ ಪರಿಣಾಮಕಾರಿ ಪವಿತ್ರ ಸೇವೆಗಾಗಿ ಬೇಕಾಗಿರುವ ಪ್ರಾಯೋಗಿಕ ತರಬೇತಿಯನ್ನು ಪಡೆಯಲಿಕ್ಕಾಗಿಯೇ.—2/1, ಪುಟ 10.

◻ ಶಿಕ್ಷಣದ ಕುರಿತಾಗಿ ನಾವು ಯೇಸುವಿನಿಂದ ಯಾವ ಅಮೂಲ್ಯ ಪಾಠವನ್ನು ಕಲಿಯಸಾಧ್ಯವಿದೆ?

ಶಿಕ್ಷಣವು, ನಮ್ಮನ್ನೇ ಮಹಿಮೆಪಡಿಸಿಕೊಳ್ಳಲು ಅಲ್ಲ, ಬದಲಿಗೆ ಅತ್ಯಂತ ಮಹಾನ್‌ ಶಿಕ್ಷಕನಾದ ಯೆಹೋವ ದೇವರಿಗೆ ಸ್ತುತಿಯನ್ನು ತರಲು ಉಪಯೋಗಿಸಲ್ಪಡಬೇಕು. (ಯೋಹಾನ 7:18)—2/1, ಪುಟ 10.

◻ ದೇವರ ರಾಜ್ಯವು ಏನಾಗಿದೆ?

ರಾಜ್ಯವು, ಪಾಪಮರಣಗಳ ಪರಿಣಾಮಗಳನ್ನು ತೆಗೆದುಹಾಕಿ, ಭೂಮಿಯ ಮೇಲೆ ನೀತಿಯ ಪರಿಸ್ಥಿತಿಗಳನ್ನು ಪುನಸ್ಸ್ಥಾಪಿಸುವ, ದೇವರ ಚಿತ್ತವನ್ನು ನೆರವೇರಿಸಲಿರುವ ದೈವಿಕವಾಗಿ ಸ್ಥಾಪಿಸಲ್ಪಟ್ಟ ಒಂದು ಸ್ವರ್ಗೀಯ ಸರಕಾರವಾಗಿದೆ. (ದಾನಿಯೇಲ 2:44; ಪ್ರಕಟನೆ 11:15; 12:10)—2/1, ಪುಟ 16.

◻ ಹಿಂಸಾಕೃತ್ಯಕ್ಕೆ ಒಂದು ಶಾಶ್ವತ ಕೊನೆಯನ್ನು ತರಲಿಕ್ಕಾಗಿ ಅಗತ್ಯವಿರುವ ಶಿಕ್ಷಣವನ್ನು ಬೈಬಲು ಹೇಗೆ ಒದಗಿಸುತ್ತದೆ?

ತನ್ನ ವಾಕ್ಯವಾದ ಬೈಬಲಿನ ಮೂಲಕ, ಯೆಹೋವನು ಜನರಿಗೆ ಶಾಂತಿಪ್ರಿಯರೂ ನೀತಿವಂತರೂ ಆಗಿರಲು ಕಲಿಸುತ್ತಾನೆ. (ಯೆಶಾಯ 48:17, 18) ಒಬ್ಬ ವ್ಯಕ್ತಿಯ ಹೃದಯವನ್ನು ತಲಪಿ, ಅದನ್ನು ಸ್ಪರ್ಶಿಸಿ, ಅವನ ಆಲೋಚನೆ ಮತ್ತು ನಡವಳಿಕೆಯನ್ನು ಮಾರ್ಪಡಿಸುವಂತಹ ಶಕ್ತಿಯು ದೇವರ ವಾಕ್ಯಕ್ಕಿದೆ. (ಇಬ್ರಿಯ 4:12)—2/15, ಪುಟ 6.

◻ ಯೆಶಾಯ 35ನೆಯ ಅಧ್ಯಾಯದ ಪ್ರವಾದನೆಗೆ ಮೂರು ನೆರವೇರಿಕೆಗಳಿವೆಯೆಂದು ಯಾವ ವಿಧದಲ್ಲಿ ಹೇಳಸಾಧ್ಯವಿದೆ?

ಸಾ.ಶ.ಪೂ. 537ರಲ್ಲಿ ಬಾಬೆಲಿನ ಬಂಧಿವಾಸದಿಂದ ಯೆಹೂದ್ಯರು ಹಿಂದಿರುಗಿದಾಗ ಯೆಶಾಯನ ಪ್ರವಾದನೆಯು ಪ್ರಥಮ ನೆರವೇರಿಕೆಯನ್ನು ಹೊಂದಿತ್ತು. ಮಹಾ ಬಾಬೆಲಿನ ಬಂಧಿವಾಸದಿಂದ ಆತ್ಮಿಕ ಇಸ್ರಾಯೇಲಿನ ಬಿಡುಗಡೆಯಾದಂದಿನಿಂದ ಅದಕ್ಕೆ ಇಂದು ಒಂದು ಮುಂದುವರಿಯುತ್ತಿರುವ ಆತ್ಮಿಕ ನೆರವೇರಿಕೆಯಿದೆ. ಮತ್ತು ಭೂಮಿಯ ಮೇಲೆ ಅಕ್ಷರಶಃ ಪ್ರಮೋದವನ್ಯ ಪರಿಸ್ಥಿತಿಗಳ ಬೈಬಲ್‌ ಸಂಬಂಧಿತ ಆಶ್ವಾಸನೆಗಳ ಸಂಬಂಧದಲ್ಲಿ ಅದಕ್ಕೆ ಮೂರನೆಯ ನೆರವೇರಿಕೆಯು ಇರುವುದು. (ಕೀರ್ತನೆ 37:10, 11; ಪ್ರಕಟನೆ 21:4, 5)—2/15, ಪುಟ 17.

◻ ತನ್ನ ಮಗನಾದ ಯೇಸುವಿನ ಮೂಲಕ ನಡಿಸಲ್ಪಟ್ಟ ಅದ್ಭುತಕಾರ್ಯಗಳಲ್ಲಿ, ಮಾನವರಲ್ಲಿರುವ ದೇವರ ವೈಯಕ್ತಿಕ ಆಸಕ್ತಿಯು ಹೇಗೆ ಪ್ರದರ್ಶಿಸಲ್ಪಟ್ಟಿತು?

ಯೇಸು “ತಂದೆಯು ಮಾಡುವದನ್ನು ಕಂಡು . . . ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲು” ಸಾಧ್ಯವಿಲ್ಲದವನಾಗಿರುವುದರಿಂದ, ಆತನ ಕರುಣೆಯು ತನ್ನ ಸೇವಕರಲ್ಲಿ ಪ್ರತಿಯೊಬ್ಬರಿಗಾಗಿರುವ ಯೆಹೋವನ ಚಿಂತೆಯನ್ನು ಒಂದು ಮನಮುಟ್ಟುವ ರೀತಿಯಲ್ಲಿ ಚಿತ್ರಿಸುತ್ತದೆ. (ಯೋಹಾನ 5:19)—3/1, ಪುಟ 5.

◻ ಯೋಹಾನ 5:28, 29ರಲ್ಲಿ ಉಪಯೋಗಿಸಲ್ಪಟ್ಟ “ಸ್ಮರಣೆಯ ಸಮಾಧಿಗಳು” ಎಂಬ ಯೇಸುವಿನ ಅಭಿವ್ಯಕ್ತಿಯಿಂದ ಏನು ಸೂಚಿಸಲ್ಪಟ್ಟಿದೆ?

ಇಲ್ಲಿ ಬಳಸಲ್ಪಟ್ಟಿರುವ ನೆಮೈಆನ್‌ (ಸ್ಮರಣೆಯ ಸಮಾಧಿ) ಎಂಬ ಗ್ರೀಕ್‌ ಪದವು, ಸತ್ತಿರುವ ವ್ಯಕ್ತಿಯ ದಾಖಲೆಯನ್ನು—ಅವನು ಅಥವಾ ಅವಳು ಬಾಧ್ಯತೆಯಾಗಿ ಪಡೆದಂತಹ ಗುಣಲಕ್ಷಣಗಳು ಮತ್ತು ಸಂಪೂರ್ಣ ಜ್ಞಾಪಕಶಕ್ತಿಯನ್ನು ಒಳಗೂಡಿಸಿ—ಯೆಹೋವನು ನೆನಪಿಸಿಕೊಳ್ಳುತ್ತಾನೆ ಎಂಬುದನ್ನು ಸೂಚಿಸುತ್ತದೆ. ದೇವರು ಮನುಷ್ಯರ ಕುರಿತಾಗಿ ಒಂದು ವ್ಯಕ್ತಿಗತ ಮಟ್ಟದಲ್ಲಿ ಕಾಳಜಿ ವಹಿಸುತ್ತಾನೆಂಬುದಕ್ಕೆ ಇದು ಬಲವಾದ ಪುರಾವೆಯನ್ನು ಕೊಡುತ್ತದೆ!—3/1, ಪುಟ 6.

◻ ಚೆಫನ್ಯನ ಪ್ರವಾದನೆಯಲ್ಲಿನ ಯಾವ ಎಚ್ಚರಿಕೆಯ ಸಂದೇಶವು ನಮಗೆ ಪ್ರಾಯೋಗಿಕ ಸಹಾಯದ್ದಾಗಿರುತ್ತದೆ?

ನಮ್ಮ ಹೃದಯಗಳಲ್ಲಿ ಸಂದೇಹಗಳು ಬೇರೂರುವಂತೆ ಬಿಡುವ ಮತ್ತು ನಮ್ಮ ಮನಸ್ಸುಗಳಲ್ಲಿ ಯೆಹೋವನ ದಿನದ ಬರುವಿಕೆಯನ್ನು ತಳ್ಳಿಡುವ ಸಮಯವು ಇದಾಗಿರುವುದಿಲ್ಲ. ಅಲ್ಲದೆ, ನಾವು ಉದಾಸೀನತೆಯ ನಿತ್ರಾಣಗೊಳಿಸುವ ಪರಿಣಾಮಗಳ ವಿರುದ್ಧವಾಗಿ ಎಚ್ಚರದಿಂದಿರಬೇಕು. (ಚೆಫನ್ಯ 1:12, 13; 3:8)—3/1, ಪುಟ 17.

◻ ದೇವರಿಗೆ ನಿಷ್ಠೆಯು ಒಂದು ಪಂಥಾಹ್ವಾನವನ್ನು ಒಡ್ಡುತ್ತದೆ ಏಕೆ?

ಯಾಕಂದರೆ, ನಾವು ನಮ್ಮ ಹೆತ್ತವರಿಂದ ಬಾಧ್ಯತೆಯಾಗಿ ಪಡೆದಿರುವ ಸ್ವಾರ್ಥ ಪ್ರವೃತ್ತಿಗಳೊಂದಿಗೆ ನಿಷ್ಠೆಯು ಘರ್ಷಿಸುತ್ತದೆ. (ಆದಿಕಾಂಡ 8:21; ರೋಮಾಪುರ 7:19) ಹೆಚ್ಚು ಪ್ರಾಮುಖ್ಯವಾಗಿ, ಸೈತಾನನು ಮತ್ತು ಅವನ ದೆವ್ವಗಳು ನಮ್ಮನ್ನು ದೇವರಿಗೆ ನಿಷ್ಠಾದ್ರೋಹಿಗಳಾಗಿ ಮಾಡಲು ನಿರ್ಧರಿತರಾಗಿದ್ದಾರೆ. (ಎಫೆಸ 6:12; 1 ಪೇತ್ರ 5:8)—3/15, ಪುಟ 10.

◻ ಯಾವ ನಾಲ್ಕು ಕ್ಷೇತ್ರಗಳಲ್ಲಿ ನಾವು ನಿಷ್ಠೆಯ ಪಂಥಾಹ್ವಾನವನ್ನು ಎದುರಿಸಬೇಕು, ಮತ್ತು ಹಾಗೆ ಮಾಡಲು ನಮಗೆ ಯಾವುದು ಸಹಾಯ ಮಾಡುವುದು?

ನಾಲ್ಕು ಕ್ಷೇತ್ರಗಳು—ಯೆಹೋವನಿಗೆ, ಆತನ ಸಂಸ್ಥೆಗೆ, ಸಭೆಗೆ, ಮತ್ತು ನಮ್ಮ ವಿವಾಹದ ಸಂಗಾತಿಗಳಿಗೆ ನಿಷ್ಠೆಯಾಗಿದೆ. ಈ ಪಂಥಾಹ್ವಾನಗಳನ್ನು ಎದುರಿಸುವುದರಲ್ಲಿ ಒಂದು ಸಹಾಯವು, ನಿಷ್ಠೆಯ ಪಂಥಾಹ್ವಾನವು ಯೆಹೋವನ ಪರಮಾಧಿಕಾರದ ನಿರ್ದೋಷೀಕರಣಕ್ಕೆ ನಿಕಟವಾಗಿ ಸಂಬಂಧಿಸಿದೆ ಎಂಬುದನ್ನು ಗಣ್ಯಮಾಡುವುದೇ ಆಗಿದೆ.—3/15, ಪುಟ 20.

◻ ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ತರಲು ಪ್ರಯತ್ನಿಸಿದುದರಲ್ಲಿನ ದಾವೀದನ ಅನುಭವದಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ? (2 ಸಮುವೇಲ 6:2-7)

ಮಂಜೂಷವನ್ನು ಒಯ್ಯುವುದರ ಕುರಿತಾಗಿ ಯೆಹೋವನು ತನಗೆ ಕೊಟ್ಟಂತಹ ಉಪದೇಶಗಳನ್ನು ದಾವೀದನು ಅಲಕ್ಷಿಸಿದನು, ಮತ್ತು ಇದು ವಿಪತ್ತನ್ನು ತಂದಿತು. ಪಾಠವು ಏನೆಂದರೆ, ನಾವು ಆತನ ಸ್ಪಷ್ಟವಾದ ಉಪದೇಶಗಳನ್ನು ಅಲಕ್ಷಿಸುವಾಗ ಫಲಿಸುವ ಸಮಸ್ಯೆಗಳಿಗಾಗಿ ನಾವು ಯೆಹೋವನನ್ನು ಎಂದೂ ದೂಷಿಸಬಾರದು. (ಜ್ಞಾನೋಕ್ತಿ 19:3)—4/1, ಪುಟಗಳು 28, 29.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ