ಯೆಹೋವನ ಸಾಕ್ಷಿಗಳು ಅಂತಾರಾಷ್ಟ್ರೀಯ ಅಧಿವೇಶನಗಳನ್ನು ನಡೆಸಲಿಕ್ಕಿದ್ದಾರೆ
ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯು, 1998ರಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ನಡೆಸಲು ಯೋಜಿಸುತ್ತಿದೆ. 1996, ಅಕ್ಟೋಬರ್ 5ರ ಶನಿವಾರದಂದು, ಜೆರ್ಸಿ ಸಿಟಿ ಅಸೆಂಬ್ಲಿ ಹಾಲ್ನಲ್ಲಿ ನಡೆದ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ವಾರ್ಷಿಕ ಕೂಟದಲ್ಲಿ, ಈ ಪ್ರಕಟನೆಗೆ ಅತ್ಯುತ್ಸಾಹಭರಿತ ಪ್ರತಿಕ್ರಿಯೆಯು ದೊರಕಿತು.
1998ರ ಮಧ್ಯಭಾಗದಲ್ಲಿ, ಉತ್ತರ ಅಮೆರಿಕದಲ್ಲಿ, ಸಾಮಾನ್ಯವಾಗಿ ನಡೆಯುವ ಜಿಲ್ಲಾ ಅಧಿವೇಶನಗಳ ಜೊತೆಗೆ, ಅನೇಕ ಅಂತಾರಾಷ್ಟ್ರೀಯ ಅಧಿವೇಶನಗಳೂ ನಡೆಸಲ್ಪಡುವವು. ಈ ಒಟ್ಟುಗೂಡುವಿಕೆಗಳು, ಭೂಮಿಯ ಅನೇಕ ಭಾಗಗಳಿಂದ ನೂರಾರು ಸಾವಿರಗಟ್ಟಲೆ ಸಾಕ್ಷಿಗಳನ್ನು ಒಂದುಗೂಡಿಸುವವು ಎಂದು ನಿರೀಕ್ಷಿಸಲಾಗಿದೆ. ಸಾಧ್ಯವಿರುವಷ್ಟು ಹೆಚ್ಚು ದೇಶಗಳು ಅದರಲ್ಲಿ ಪ್ರತಿನಿಧಿಸಲ್ಪಡುವಂತೆ ಅನುಮತಿಸಲಿಕ್ಕಾಗಿ, ವಾಚ್ ಟವರ್ ಸೊಸೈಟಿಯ 100ಕ್ಕಿಂತಲೂ ಹೆಚ್ಚಿನ ಬ್ರಾಂಚ್ ಆಫೀಸ್ಗಳಲ್ಲಿ ಪ್ರತಿಯೊಂದು ಬ್ರಾಂಚ್ ಆಫೀಸು, ಉತ್ತರ ಅಮೆರಿಕದಲ್ಲಿನ ನಿಗದಿತ ಅಂತಾರಾಷ್ಟ್ರೀಯ ಅಧಿವೇಶನ ನಗರಕ್ಕಾಗಿ ಪ್ರತಿನಿಧಿಗಳ ಗೊತ್ತುಪಡಿಸುವಿಕೆಯನ್ನು ಮಾಡುವುದು.
ಉತ್ತರ ಅಮೆರಿಕಕ್ಕೆ ಪ್ರಯಾಣಿಸಲು ಇಷ್ಟಪಡುವವರೆಲ್ಲರೂ ಹಾಗೆ ಮಾಡಲು ಶಕ್ತರಾಗಲಿಕ್ಕಿಲ್ಲವೆಂಬುದು ಸ್ಪಷ್ಟ. ಆದರೂ, ತಮ್ಮ ಸ್ವದೇಶಕ್ಕೆ ಹೆಚ್ಚು ಸಮೀಪವಿರುವ ಒಂದು ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಲು ಸಾವಿರಾರು ಜನರಿಗೆ ಸಾಧ್ಯವಿರಬಹುದು. ಅಂತಾರಾಷ್ಟ್ರೀಯ ಅಧಿವೇಶನಗಳು, ಯೂರೋಪಿನಲ್ಲಿನ ಎರಡು ಅಥವಾ ಮೂರು ದೇಶಗಳಲ್ಲಿ ಮತ್ತು ಇತರ ಅಧಿವೇಶನಗಳು, ಆಫ್ರಿಕ, ಏಷಿಯ, ಲ್ಯಾಟಿನ್ ಅಮೆರಿಕ, ದಕ್ಷಿಣ ಪೆಸಿಫಿಕ್, ಮತ್ತು ಕ್ಯಾರಿಬಿಯನ್ನಲ್ಲಿ ನಡೆಸಲ್ಪಡುವಂತೆ ಏರ್ಪಾಡುಗಳು ಮಾಡಲ್ಪಡುತ್ತಿವೆ.
ಸೂಕ್ತವಾದ ಸಮಯದಲ್ಲಿ, ಸೊಸೈಟಿಯ ಬ್ರಾಂಚ್ ಆಫೀಸುಗಳು, ತಮ್ಮ ಸ್ಥಳಿಕ ಕ್ಷೇತ್ರಗಳಲ್ಲಿರುವ ಸಭೆಗಳು ಯಾವ ಅಧಿವೇಶನಕ್ಕೆ ಆಮಂತ್ರಿಸಲ್ಪಟ್ಟಿವೆಯೋ ಆ ಅಧಿವೇಶನ ನಗರದ ಅಥವಾ ನಗರಗಳ ಕುರಿತು ತಮ್ಮ ಸ್ಥಳಿಕ ಸಭೆಗಳಿಗೆ ತಿಳಿಯಪಡಿಸುವವು. ಅಧಿವೇಶನದ ತಾರೀಖುಗಳು ಹಾಗೂ ಪ್ರತಿನಿಧಿಗಳನ್ನು ಆಯ್ಕೆಮಾಡುವುದಕ್ಕಾಗಿರುವ ಏರ್ಪಾಡುಗಳ ಕುರಿತಾಗಿ ಮಾಹಿತಿಯು ಕೊಡಲ್ಪಡುವುದು. ಪ್ರತಿನಿಧಿ ಆಯ್ಕೆಗಾಗಿ ಅರ್ಜಿಗಳನ್ನು ಭರ್ತಿಮಾಡಲು ಬಯಸುವವರು, ಈ ವಿಶೇಷ ಘಟನೆಗಳ ನಿರೀಕ್ಷಣೆಯಲ್ಲಿ ತಮ್ಮ ಹಣಕಾಸಿನಲ್ಲಿ ಸ್ವಲ್ಪಭಾಗವನ್ನು ಉಳಿತಾಯಮಾಡಲು ಆರಂಭಿಸಬಹುದು.
ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳೆಲ್ಲರೂ, 1998ಕ್ಕಾಗಿರುವ ಈ ಅಂತಾರಾಷ್ಟ್ರೀಯ ಒಟ್ಟುಗೂಡುವಿಕೆಗಳಲ್ಲಿ ಏನು ಕಾದಿರಿಸಲ್ಪಟ್ಟಿದೆ ಎಂಬುದನ್ನು ಎದುರುನೋಡಸಾಧ್ಯವಿದೆ. ಎಲ್ಲಾ ದೇಶಗಳಲ್ಲಿನ ಜಿಲ್ಲಾ ಅಧಿವೇಶನಗಳು ಒಂದೇ ರೀತಿಯ ಕಾರ್ಯಕ್ರಮವನ್ನು ಹೊಂದಿರುವವು.