ವಿಶೇಷ ಅಧಿವೇಶನಗಳು ಯೆಹೋವನನ್ನು ಗೌರವಿಸುತ್ತವೆ
1 ವಾರ್ಷಿಕ ಅಧಿವೇಶನಗಳು ಯೆಹೋವನ ಸಾಕ್ಷಿಗಳಿಗೆ ಆತ್ಮಿಕ ಚೈತನ್ಯ ಮತ್ತು ಪ್ರೋತ್ಸಾಹನೆಯೊಂದಿಗೆ ಆನಂದದ ಕ್ರಿಸ್ತೀಯ ಒಡನಾಟವನ್ನೂ ಒದಗಿಸುತ್ತವೆ. ಯೆಹೋವನ ಜನರ ದೊಡ್ಡ ಸಮ್ಮೇಳಗಳು ಯೆಹೋವನ ನಾಮದ ಪ್ರಕಟನೆಗೆ ಮತ್ತು ರಾಜ್ಯದ ಸುವಾರ್ತೆಯ ಸಾರುವಿಕೆಗೆ ಪರಿಣಾಮಕಾರಿ ಸಾಧನಗಳಾಗಿಯೂ ಕಾರ್ಯನಡಿಸುತ್ತವೆ.
2 ಎಲ್ಲಾ ಸಹೋದರರ ಪ್ರಯೋಜನಕ್ಕಾಗಿ ಕ್ರಮದ ಜಿಲ್ಲಾ ಅಧಿವೇಶನಗಳು ಭೂಮಿಯಲ್ಲೆಲ್ಲಾ ಏರ್ಪಡಿಸಲ್ಪಡುತ್ತಿವೆ. ಮತ್ತು ಕೆಲವು ಸಾರಿ, ನಿರ್ದಿಷ್ಟ ಪ್ರದೇಶಗಳಲ್ಲಿ, ವಿಶೇಷ ಅಧಿವೇಶನಗಳೂ ನಡಿಸಲ್ಪಡುತ್ತವೆ. ಇದು, ಸಂಸ್ಥೆಯ ಅಂತರಾಷ್ಟ್ರೀಯ ಸ್ವರೂಪವನ್ನು ತೋರಿಸಲು ಮತ್ತು ಇನ್ನೂ ಮಹತ್ತಾದ ಸಾಕ್ಷಿಯನ್ನು ನೀಡಲು ಒಂದು ಸಂದರ್ಭವನ್ನು ಒದಗಿಸುತ್ತದೆ. 1989 ರಲ್ಲಿ ಮೂರು ವಿಶೇಷ ಅಧಿವೇಶನಗಳು ಪೋಲೆಂಡ್ನಲ್ಲಿ ನಡೆದವು. ಆ ವಿಶೇಷ ಅಧಿವೇಶನಗಳ ಕುರಿತು ಎಂತಹ ರೋಮಾಂಚಕ ವರದಿಯನ್ನು ನಾವು ಪಡೆದೆವು!
ಆಯ್ದ ಪ್ರತಿನಿಧಿಗಳ ಏರ್ಪಾಡು
3 ಇಂಥಾ ವಿಶೇಷ ಅಧಿವೇಶನಗಳಲ್ಲೊಂದಕ್ಕೆ ಹಾಜರಾಗಲು ಸಾವಿರಾರು ಸಹೋದರರು ಬಯಸುತ್ತಾರೆ. ತಕ್ಕ ಕಾಲದಲ್ಲಿ ಹೆಚ್ಚು ಸಹೋದರರಿಗೆ ಅವುಗಳಲ್ಲೊಂದಕ್ಕೆ ಹಾಜರಾಗಲು ಶಕ್ಯವಾದೀತು. ಆದರೂ, ವಿಶೇಷ ಅಧಿವೇಶನಗಳ ಉದ್ದೇಶವನ್ನು ಪೂರೈಸಲಿಕ್ಕಾಗಿ ಮತ್ತು ಎಲ್ಲವೂ ಕ್ರಮಪ್ರಕಾರ ನಡಿಯುವಂತೆ, ಪ್ರತೀ ನೇಮಿತ ಬ್ರಾಂಚುಗಳು ಒಂದು ಸೀಮಿತ ಸಂಖ್ಯೆಯ ಪ್ರತಿನಿಧಿಗಳನ್ನು ಒಂದು ನಿರ್ದಿಷ್ಟ ಅಧಿವೇಶನಕ್ಕೆ ಕಳುಹಿಸಲು ಆರಿಸುವಂತೆ ಏರ್ಪಡಿಸಲಾಗಿದೆ. ಇದು, ಸ್ಥಳೀಕ ಸಹೋದರರ ಉತ್ತೇಜನಕ್ಕಾಗಿ ಮತ್ತು ಪ್ರೇಕ್ಷಕರೆಲರ್ಲಿಗೆ ಪ್ರಭಾವಿತ ಸಾಕ್ಷಿ ನೀಡುವರೇ ಒಂದು ಮಿತವಾದ ಅಂತರಾಷ್ಟ್ರೀಯ ಸಹೋದರತ್ವದ ಪ್ರತಿನಿಧಿತ್ವವನ್ನು ಒದಗಿಸುತ್ತದೆ. ಅರ್ಜಿ ಮಾಡಿರುವ ಮತ್ತು ಸ್ಥಳೀಕ ಸಭಾ ಸರ್ವಿಸ್ ಕಮಿಟಿಯಿಂದ ಶಿಫಾರಸು ಮಾಡಲ್ಪಟ್ಟ ಎಲ್ಲರೂ ಪ್ರತಿನಿಧಿಗಳಾಗಿ ಆರಿಸಲ್ಪಡುವರು ಎಂದಿದರ ಅರ್ಥವಲ್ಲ. ಆರಿಸಲ್ಪಡದಕ್ಕಾಗಿ ಕೆಲವರಿಗೆ ನಿರಾಶೆಯಾಗ ಬಹುದು ಆದರೆ ಅಂಥ ಒಂದು ಏರ್ಪಾಡಿನ ಮಹತ್ವದ ಕಾರಣವನ್ನು ಎಲ್ಲರೂ ತಿಳುಕೊಳ್ಳುವರು ಎಂದು ನಾವು ನಂಬುತ್ತೇವೆ.
4 ಒಂದು ಉತ್ತಮ ಸಾಕ್ಷಿಯನ್ನು ನೀಡುವದಕ್ಕೋಸ್ಕರ ಈ ವಿಶೇಷ ಅಧಿವೇಶನಕ್ಕಾಗಿ ಮಾಡಲ್ಪಟ್ಟ ಏರ್ಪಾಡಿನೊಂದಿಗೆ ಪ್ರತಿಯೊಬ್ಬನು ಸಹಕರಿಸುವಂತೆ ಸೊಸೈಟಿಯು ವಿನಂತಿಸುತ್ತದೆ. ಪ್ರತಿನಿಧಿಗಳಾಗಿ ಆರಿಸಲ್ಪಡದಿದ್ದರೂ ಒಂದು ವಿಶೇಷ ಅಧಿವೇಶನವನ್ನು ಹಾಜರಾಗಲು ಕೆಲವು ಸಹೋದರರು ತಮ್ಮ ಸ್ವಂತ ಏರ್ಪಾಡುಗಳನ್ನು ಮಾಡಿದಲ್ಲಿ, ಸಮಸ್ಯೆಗಳು ಉಂಟಾಗುತ್ತವೆ. ಆಯ್ದ ದೇಶಗಳಿಂದ ಕಳುಹಿಸಲ್ಪಡುವ ಪ್ರತಿನಿಧಿಗಳ ಸಂಖ್ಯೆಯು ಸೊಸೈಟಿಯಿಂದ ನಿರ್ಧರಿಸಲ್ಪಡುತ್ತದೆ. ಇದು ಅವಶ್ಯಕ ಏಕೆಂದರೆ ಅಧಿವೇಶನ ಸೌಕರ್ಯಗಳ ಮೇಲೆ ಮಿತಿಮೀರಿ ಭಾರ ಬೀಳದಂತೆ ತಡೆಯಲಿಕ್ಕಾಗಿ. ಸೌಕರ್ಯಗಳ ಮೇಲೆ ಮಿತಿಮೀರಿ ಭಾರಬಿದ್ದಲ್ಲಿ ಅಧಿವೇಶನ ಸುಗಮವಾಗಿ ಸಾಗುವುದಕ್ಕೆ ತಡೆಯಾಗುತ್ತದೆ ಮತ್ತು ಇದು ಸ್ಥಳೀಕ ಅಧಿಕಾರಿಗಳ ಮೇಲೆ ಒಳ್ಳೇ ಪ್ರಭಾವವನ್ನು ಹಾಕುವದಿಲ್ಲ.
5 ರಾಜ್ಯಾಭಿರುಚಿಗಳನ್ನು ವರ್ಧಿಸುವುದೇ ಅಧಿವೇಶನಕ್ಕೆ ಹಾಜರಾಗುವ ತಮ್ಮ ಉದ್ದೇಶವೆಂಬದನ್ನು ಪ್ರತಿನಿಧಿಗಳು ಮನಸ್ಸಲ್ಲಿಡಬೇಕು. ಎಲ್ಲಾ ಪ್ರತಿನಿಧಿಗಳು ಸೊಸೈಟಿಯಿಂದ ಮಾಡಲ್ಪಟ್ಟ ಪ್ರಯಾಣ ಮತ್ತು ಇತರ ಏರ್ಪಾಡುಗಳೊಂದಿಗೆ ಸಹಕರಿಸುವಾಗ ಮತ್ತು ತಮ್ಮ ಸ್ವಂತ ಏರ್ಪಾಡುಗಳನ್ನು ಮಾಡದೇ ಇರುವಾಗ, ಈ ಉದ್ದೇಶವು ಹೆಚ್ಚು ಸುಲಭವಾಗಿ ಪೂರೈಸಲ್ಪಡುವುದು.
6 ಈ ವರ್ಷ ವಿಶೇಷ ಅಧಿವೇಶನಗಳು ಜರ್ಮನಿಯ ಬರ್ಲಿನ್, ಮತ್ತು ಬ್ರಾಜೀಲಿನ ಸಾವೋಪೌಲೊದಲ್ಲಿ ನಡಿಸಲ್ಪಟ್ಟವು. ದಶಂಬರದಲ್ಲಿ ಒಂದು ವಿಶೇಷ ಅಧಿವೇಶನವು ಆರ್ಜೆಂಟೀನಾದ ಬ್ಯೂನಸ್ ಏರಸ್ನಲ್ಲಿ ನಡಿಯುವದು. 1991 ರ ಜನವರಿಯಲ್ಲಿ ದೂರಪೂರ್ವದಲ್ಲಿ ವಿಶೇಷ ಸಮ್ಮೇಳನಗಳು ಜರಗಲಿವೆ. ಅದರ ಮೂರು ಸ್ಥಳಗಳು ಫಿಲಿಪ್ಪೀನ್ಸ್ನ ಮನಿಲಾ; ತೈವಾನ್ನ ತೈಪೀ; ಥಾಯ್ಲೆಂಡಿನ ಬಾಂಗ್ಕಾಕ್. ಈ ಅಧಿವೇಶನಗಳಿಗಾಗಿ ಪ್ರತಿನಿಧಿಗಳು ಈ ಮೊದಲೇ ಆರಿಸಲ್ಪಟ್ಟಿದ್ದಾರೆ. (ಭಾರತ ಈ ಸಾರಿ ಈ ಏರ್ಪಾಡಿನೊಳಗೆ ಕೂಡಿಲ್ಲ) ಆಯ್ದ ಪ್ರತಿನಿಧಿಗಳೆಲ್ಲರೂ ಬೇರೆ ದೇಶದಿಂದ ಹಾಜರಾಗುವ ಪ್ರತಿನಿಧಿಗಳ ಜೊತೆಯಲ್ಲಿ ಒಳ್ಳೇ ಸಾಕ್ಷಿಯನ್ನು ಕೊಡಲು ಎಲ್ಲಾ ಪ್ರಯತ್ನವನ್ನು ಮಾಡುವರೆಂದು ನಿರೀಕ್ಷಿಸಲಾಗಿದೆ.
7 ವಿಶೇಷ ಅಧಿವೇಶನಗಳಿಗೆ ಆರಿಸಲ್ಪಡಲಿ ಇಲ್ಲವೇ ಸ್ಥಳೀಕ ಅಧಿವೇಶನಗಳಿಗೆ ಹಾಜರಾಗಲಿ, ನಮ್ಮ ಪ್ರಾರ್ಥನೆಗಳು ಮತ್ತು ನಡವಳಿಕೆಯು ನಮ್ಮ ಪೂರ್ಣಾತ್ಮದ ಭಕ್ತಿಯನ್ನು ಮತ್ತು ಎಲ್ಲದರಲ್ಲಿ ಯೆಹೋವನಿಗೆ ಗೌರವ ತರುವ ನಮ್ಮ ಪ್ರಾಮಾಣಿಕ ಅಪೇಕ್ಷೆಯ ರುಜುವಾತನ್ನು ಕೊಡುವಂತಾಗಲಿ!