‘ಅವರು ತಮ್ಮ ಧಾರ್ಮಿಕ ತರಬೇತಿಗನುಸಾರ ನಡೆಯುತ್ತಾರೆ’
ಅಮೆರಿಕದ ಫ್ಲೋರಿಡದ ಮಯಾಮಿಯ ಒಬ್ಬ ಸ್ತ್ರೀಯು, ಒಂದು ಸ್ಥಳಿಕ ವಾರ್ತಾಪತ್ರಿಕೆಗೆ ಈ ಮುಂದಿನ ಪತ್ರವನ್ನು ಕಳುಹಿಸಿದಳು: “ಡಿಸೆಂ. 10ರಂದು, ನನ್ನ ಮಗನ ಹಣದ ಚೀಲವನ್ನು ಒಂದು ಬೀದಿಮಾರುಕಟ್ಟೆಯಲ್ಲಿ ಕದಿಯಲಾಯಿತು. ಅದರಲ್ಲಿ ಅವನ ಡ್ರೈವರ್ಸ್ ಲೈಸೆನ್ಸ್, ಸೋಷಲ್ ಸೆಕ್ಯೂರಿಟಿ ಕಾರ್ಡು, ಇನ್ನಿತರ ವಸ್ತುಗಳು ಹಾಗೂ 260 ಡಾಲರುಗಳಿದ್ದವು.
“ಮ್ಯಾನೇಜರನಿಗೆ ತನ್ನ ನಷ್ಟದ ಕುರಿತಾಗಿ ವರದಿಸಿದ ನಂತರ ಅವನು ಮನೆಗೆ ಬಂದನು. ಸಾಯಂಕಾಲದಲ್ಲಿ, ಸ್ಪ್ಯಾನಿಷ್ ಭಾಷೆಯನ್ನಾಡುವ ಒಬ್ಬ ಸ್ತ್ರೀಯಿಂದ ಅವನಿಗೆ ಒಂದು ಟೆಲಿಫೋನ್ ಕರೆ ಬಂತು. ಅವಳಿಗೆ ಅವನ ಹಣದ ಚೀಲ ಸಿಕ್ಕಿದೆಯೆಂದು, ಅವಳಿಗಾಗಿ ಭಾಷಾಂತರಕಾರನಾಗಿ ವರ್ತಿಸಿದ ಒಬ್ಬ [ಟೆಲಿಫೋನ್] ಆಪರೇಟರ್ ಮೂಲಕ ಹೇಳಿದಳು.
“ಅವಳು ಅವನಿಗೆ ತನ್ನ ವಿಳಾಸವನ್ನು ಕೊಟ್ಟಳು. . . . ಅವಳು ಅವನಿಗೆ ಹಣದ ಚೀಲವನ್ನು ಕೊಟ್ಟಳು. ಅದರಲ್ಲಿ ಯಾವುದೇ ವಸ್ತುವು—260 ಡಾಲರುಗಳನ್ನೂ ಸೇರಿಸಿ—ಮುಟ್ಟಲ್ಪಟ್ಟಿರಲಿಲ್ಲ.
“ಆ ಕಳ್ಳನು ಅವನ ಹಣದ ಚೀಲವನ್ನು ತೆಗೆಯುತ್ತಿದ್ದುದನ್ನು ಅವಳು ನೋಡಿ, ಕಿರುಚಿದ್ದಳು. ಕಳ್ಳನು ಅದನ್ನು ಕೆಳಗೆಹಾಕಿ, ಓಡಿಹೋದನು. ಅಷ್ಟರೊಳಗೆ ನನ್ನ ಮಗನು ಅವಳಿಂದ ಕಣ್ಮರೆಯಾಗಿದ್ದನು, ಆದುದರಿಂದ ಅವಳು ಹಣದ ಚೀಲವನ್ನು ಮನೆಗೆ ಕೊಂಡೊಯ್ದು, ಫೋನ್ ಮಾಡಿದ್ದಳು.
“ಅವಳು ಮತ್ತು ಅವಳ ಕುಟುಂಬದವರು ಯೆಹೋವನ ಸಾಕ್ಷಿಗಳು. ಅವರು ತಮ್ಮ ಧಾರ್ಮಿಕ ತರಬೇತಿಗನುಸಾರ ನಡೆಯುತ್ತಾರೆಂಬುದು ವ್ಯಕ್ತವಾಗುತ್ತದೆ.”
ಮನುಷ್ಯರಿಂದ ಹೊಗಳಿಕೆಯನ್ನು ಪಡೆಯಲಿಕ್ಕಾಗಿ ಯೆಹೋವನ ಸಾಕ್ಷಿಗಳು ಪ್ರಾಮಾಣಿಕತೆಯನ್ನು ಪ್ರದರ್ಶಿಸುವುದಿಲ್ಲ. (ಎಫೆಸ 6:7) ಬದಲಿಗೆ, ಅವರು ತಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಸ್ತುತಿಯನ್ನು ತರಲು ಶ್ರದ್ಧಾಪೂರ್ವಕವಾಗಿ ಬಯಸುತ್ತಾರೆ. (1 ಕೊರಿಂಥ 10:31) ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಅವರ ಪ್ರೀತಿಯು, ದೇವರ ರಾಜ್ಯದ ಕುರಿತಾದ “ಸುವಾರ್ತೆ”ಯನ್ನು ಘೋಷಿಸುವಂತೆ ಅವರನ್ನು ಮುಂದೂಡುತ್ತದೆ. (ಮತ್ತಾಯ 24:14) ಆ ರಾಜ್ಯದ ಮೂಲಕ, ದೇವರು ಭೂಮಿಯನ್ನು ಸುಂದರವಾದ ಒಂದು ಪ್ರಮೋದವನವಾಗಿ ಪರಿವರ್ತಿಸುವ ವಾಗ್ದಾನಮಾಡುತ್ತಾನೆ. ಆಗ ಭೂಮಿಯು, ಕೇವಲ ಐಹಿಕ ಸೌಂದರ್ಯದ ಸ್ಥಳವಾಗಿರದೆ, ಎಲ್ಲಿ ಪ್ರಾಮಾಣಿಕತೆಯು ಸದಾಕಾಲ ಚಾಲ್ತಿಯಲ್ಲಿರುವುದೋ ಅಂತಹ ನೈತಿಕ ಉತ್ಕೃಷ್ಟತೆಯ ಸ್ಥಳವೂ ಆಗಿರುವುದು.—ಇಬ್ರಿಯ 13:18; 2 ಪೇತ್ರ 3:13.