ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 6/1 ಪು. 5-6
  • ದೇವರ ಹೆಸರಿನಲ್ಲಿ ಗೋಪ್ಯತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಹೆಸರಿನಲ್ಲಿ ಗೋಪ್ಯತೆ
  • ಕಾವಲಿನಬುರುಜು—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಧಾರ್ಮಿಕ ಗೋಪ್ಯತೆಯ ಅಪಾಯಗಳು
  • ಏಕೆ ಇಷ್ಟೆಲ್ಲ ಗೋಪ್ಯತೆ?
    ಕಾವಲಿನಬುರುಜು—1997
  • ಪರಿವಿಡಿ
    ಎಚ್ಚರ!—2018
  • ಕ್ರೈಸ್ತರು ತಮ್ಮಷ್ಟಕ್ಕೇ ಇಟ್ಟುಕೊಳ್ಳಬಾರದ ಒಂದು ರಹಸ್ಯ!
    ಕಾವಲಿನಬುರುಜು—1997
  • ಬೇರೆಯವರಿಗೆ ಹೇಳಬಹುದಾದ ಗುಟ್ಟು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಕಾವಲಿನಬುರುಜು—1997
w97 6/1 ಪು. 5-6

ದೇವರ ಹೆಸರಿನಲ್ಲಿ ಗೋಪ್ಯತೆ

ಮಾರ್ಚ್‌ 1995ರಲ್ಲಿ ಜಪಾನಿನ ಟೋಕಿಯೋದ ಒಂದು ಸಬ್‌ವೇಯಲ್ಲಿ ವಿಷಾನಿಲದ ಆಕ್ರಮಣವೊಂದು, 12 ಜನರನ್ನು ಕೊಂದಿತು, ಇನ್ನೂ ಸಾವಿರಾರು ಜನರನ್ನು ಅಸ್ವಸ್ಥಗೊಳಿಸಿತು, ಮತ್ತು ಒಂದು ಗುಟ್ಟನ್ನು ಬಯಲುಗೊಳಿಸಲು ಸಹಾಯಮಾಡಿತು. ಓಂ ಶಿನ್‌ರಿಕ್ಯೊ (ಪರಮ ಸತ್ಯ) ಎಂದು ಜ್ಞಾತವಾಗಿರುವ ಒಂದು ಧಾರ್ಮಿಕ ಪಂಗಡವು, ರಹಸ್ಯಗರ್ಭಿತ ಗುರಿಗಳ ಬೆನ್ನಟ್ಟುವಿಕೆಯಲ್ಲಿ ಉಪಯೋಗಿಸಲಿಕ್ಕಾಗಿ, ಗುಪ್ತವಾಗಿ ಸಾರಿನ್‌ ಅನಿಲದ ಶಸ್ತ್ರಾಸ್ತ್ರಗಳನ್ನು ಶೇಖರಿಸಿತ್ತು.

ಒಂದು ತಿಂಗಳ ಬಳಿಕ, ಒಂದು ಬಾಂಬ್‌ ಸ್ಫೋಟವು, ಅಮೆರಿಕದ ಓಕ್ಲಹಾಮ ನಗರದಲ್ಲಿನ ಒಂದು ಫೆಡೆರೆಲ್‌ ಕಟ್ಟಡವನ್ನು ನುಚ್ಚುನೂರುಗೊಳಿಸಿ, 167 ವ್ಯಕ್ತಿಗಳನ್ನು ಕೊಂದುಹಾಕಿತು. ಆ ಆಕ್ರಮಣವು, ನಿಖರವಾಗಿ ಎರಡು ವರ್ಷಗಳ ಹಿಂದೆ, ಟೆಕ್ಸಾಸ್‌ನ ವಾಕೊದಲ್ಲಿನ ಬ್ರಾಂಚ್‌ ಡೇವಿಡಿಯನ್‌ ಧಾರ್ಮಿಕ ಪಂಥದೊಂದಿಗೆ ಸರಕಾರದ ಬಿಕ್ಕಟ್ಟಿಗೆ ಯಾವುದೊ ರೀತಿಯಲ್ಲಿ ಸಂಬಂಧಿಸಿತ್ತು ಎಂಬುದಾಗಿ ಪುರಾವೆಯು ಸೂಚಿಸುತ್ತಿರುವಂತೆ ತೋರಿತು. ಆ ಸಮಯದಲ್ಲಿ ಪಂಥದ ಸುಮಾರು 80 ಮಂದಿ ಸದಸ್ಯರು ಸತ್ತರು. ಅನೇಕ ಜನರಿಗೆ ಗುಟ್ಟಾಗಿದ್ದ ಒಂದು ವಿಷಯವನ್ನೂ ಆ ಬಾಂಬ್‌ ಸ್ಫೋಟವು ಪ್ರಕಟಪಡಿಸಿತು: ಈಗ ಅಮೆರಿಕದಲ್ಲಿ ಡಜನುಗಟ್ಟಲೆ ಪ್ಯಾರಾಮಿಲಿಟರಿ ಪ್ರಜಾಸೈನ್ಯ ಗುಂಪುಗಳು ಕಾರ್ಯಾಚರಣೆ ನಡಿಸುತ್ತಿವೆ. ಇವುಗಳಲ್ಲಿ ಕಡಿಮೆ ಪಕ್ಷ ಕೆಲವು, ಸರಕಾರ ವಿರೋಧಿ ಕ್ರಿಯೆಯನ್ನು ಗುಪ್ತವಾಗಿ ಯೋಜಿಸುತ್ತಿರುವುದಾಗಿ ಶಂಕಿಸಲಾಗಿದೆ.

ತದನಂತರ, ಇಸವಿ 1995 ಕೊನೆಗೊಳ್ಳುತ್ತಿದ್ದಂತೆ, ಫ್ರಾನ್ಸಿನ ಗ್ರೀನೊಬಲ್‌ನ ಹತ್ತಿರದಲ್ಲಿರುವ ಒಂದು ಕಾಡು ಕ್ಷೇತ್ರದಲ್ಲಿ, 16 ವ್ಯಕ್ತಿಗಳ ಸುಟ್ಟುಹೋದ ದೇಹಗಳು ಸಿಕ್ಕಿದವು. ಅವರು ಆರ್ಡರ್‌ ಆಫ್‌ ದ ಸೊಲಾರ್‌ ಟೆಂಪಲ್‌ ಎಂಬ ಒಂದು ಚಿಕ್ಕ ಧಾರ್ಮಿಕ ಪಂಥದ ಸದಸ್ಯರಾಗಿದ್ದರು. ಈ ಪಂಥದ 53 ಸದಸ್ಯರು ಆತ್ಮಹತ್ಯೆಮಾಡಿಕೊಂಡಾಗಲೊ ಕೊಲ್ಲಲ್ಪಟ್ಟಾಗಲೊ, ಅಕ್ಟೋಬರ್‌ 1994ರಲ್ಲಿ ಈ ಪಂಥವು ಸ್ವಿಟ್ಸರ್‌ಲೆಂಡ್‌ ಮತ್ತು ಕೆನಡದಲ್ಲಿ ಸುದ್ದಿಯಲ್ಲಿತ್ತು. ಆದರೆ ಈ ದುರಂತದ ಅನಂತರವೂ, ಈ ಪಂಗಡವು ಕಾರ್ಯನಡಿಸುತ್ತಾ ಇತ್ತು. ಈ ದಿನದ ವರೆಗೂ ಅದರ ಪ್ರಚೋದನೆ ಮತ್ತು ಗುರಿಗಳು ಗುಪ್ತವಾಗಿ ಉಳಿದಿವೆ.

ಧಾರ್ಮಿಕ ಗೋಪ್ಯತೆಯ ಅಪಾಯಗಳು

ಇಂತಹ ಸಂಭವಗಳ ನೋಟದಲ್ಲಿ, ಜನರು ಧಾರ್ಮಿಕ ಗುಂಪುಗಳ ಕುರಿತಾಗಿ ಸಂಶಯಾಸ್ಪದರಾಗಿರುವುದು ಆಶ್ಚರ್ಯಪಡಿಸುವ ಸಂಗತಿಯೊ? ನಿಶ್ಚಯವಾಗಿಯೂ ಯಾವ ವ್ಯಕ್ತಿಯೂ, ತನ್ನ ಭರವಸೆಯನ್ನು ದುರುಪಯೋಗಿಸುವ ಮತ್ತು ತಾನು ಅಸಮ್ಮತಿಸುವಂತಹ ಗುರಿಗಳನ್ನು ಬೆನ್ನಟ್ಟುವಂತೆ ಮಾಡುವ, ಧಾರ್ಮಿಕ ಅಥವಾ ಧಾರ್ಮಿಕವಲ್ಲದ ಒಂದು ಗುಪ್ತ ಸಂಘವನ್ನು ಬೆಂಬಲಿಸಲು ಬಯಸಲಾರನು. ಆದರೆ ಸಂದೇಹಾಸ್ಪದ ಸ್ವಭಾವದ ಗುಪ್ತ ಸಂಸ್ಥೆಗಳೊಂದಿಗೆ ಒಳಗೂಡುವ ಬಲೆಯಲ್ಲಿ ಬೀಳದಿರುವಂತೆ ಜನರು ಏನು ಮಾಡಸಾಧ್ಯವಿದೆ?

ಸ್ಫುಟವಾಗಿ, ಒಂದು ಗುಪ್ತ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದುಕೊಳ್ಳುವುದನ್ನು ಪರಿಗಣಿಸುತ್ತಿರುವ ಯಾವನೇ ವ್ಯಕ್ತಿಯು, ಅದರ ನಿಜವಾದ ಉದ್ದೇಶಗಳ ಕುರಿತು ವಿಚಾರಿಸಿ ತಿಳಿದುಕೊಳ್ಳುವುದು ವಿವೇಕಯುತ. ಸ್ನೇಹಿತರು ಅಥವಾ ಪರಿಚಯಸ್ಥರಿಂದ ಬರುವ ಒತ್ತಡದ ವಿರುದ್ಧ ಎಚ್ಚರಿಕೆ ವಹಿಸಲ್ಪಡಬೇಕು, ಮತ್ತು ನಿರ್ಣಯಗಳು ಭಾವನೆಯ ಮೇಲ್ಲಲ್ಲ ಬದಲಾಗಿ ವಾಸ್ತವಾಂಶಗಳ ಮೇಲೆ ಆಧಾರಿಸಲ್ಪಟ್ಟಿರಬೇಕು. ನೆನಪಿಡಿರಿ, ಯಾವುದೇ ಸಂಭವನೀಯ ಫಲಿತಾಂಶಗಳನ್ನು ಸ್ವತಃ ಆ ವ್ಯಕ್ತಿಯೇ—ಬೇರೆಯವರಲ್ಲ—ಅನುಭವಿಸುವ ಸಂಭಾವ್ಯತೆಯಿದೆ.

ಯಾವ ಗುಂಪುಗಳ ಹೇತುಗಳು ಘನವಾದವುಗಳಾಗಿಲ್ಲವೋ, ಅಂತಹ ಅಪಾಯಕಾರಿ ಗುಂಪುಗಳಿಂದ ತಪ್ಪಿಸಿಕೊಳ್ಳುವ ಅತಿ ನಿಶ್ಚಿತ ವಿಧಾನವು, ಬೈಬಲ್‌ ಮೂಲತತ್ತ್ವಗಳನ್ನು ಅನುಸರಿಸುವುದೇ ಆಗಿದೆ. (ಯೆಶಾಯ 30:21) ಇದು, ರಾಜಕೀಯ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದು, ಇತರರಿಗೆ—ಶತ್ರುಗಳಿಗೂ—ಪ್ರೀತಿಯನ್ನು ತೋರಿಸುವುದು, “ಶರೀರಭಾವದ ಕರ್ಮ”ಗಳನ್ನು ದೂರಮಾಡುವುದು, ಮತ್ತು ದೇವರಾತ್ಮದ ಫಲವನ್ನು ವಿಕಸಿಸಿಕೊಳ್ಳುವುದನ್ನು ಒಳಗೊಳ್ಳುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಯೇಸು ಹೇಗೆ ಈ ಲೋಕದ ಭಾಗವಾಗಿರಲಿಲ್ಲವೊ ಹಾಗೆಯೇ ನಿಜ ಕ್ರೈಸ್ತರು ಈ ಲೋಕದ ಭಾಗವಾಗಿರಬಾರದು ಮತ್ತು ಈ ಮಾರ್ಗಕ್ರಮವು, ಲೌಕಿಕ ಗುಪ್ತ ಸಂಸ್ಥೆಗಳಲ್ಲಿ ಭಾಗವಹಿಸುವುದನ್ನು ಪ್ರತಿಬಂಧಿಸುತ್ತದೆ.—ಗಲಾತ್ಯ 5:19-23; ಯೋಹಾನ 17:14, 16; 18:36; ರೋಮಾಪುರ 12:17-21; ಯಾಕೋಬ 4:4.

ಯೆಹೋವನ ಸಾಕ್ಷಿಗಳು ಬೈಬಲಿನ ಶ್ರದ್ಧಾವಂತ ವಿದ್ಯಾರ್ಥಿಗಳಾಗಿದ್ದಾರೆ. ಅವರು ತಮ್ಮ ಧರ್ಮವನ್ನು ಅತೀ ಪ್ರಾಮುಖ್ಯವಾಗಿ ಪರಿಗಣಿಸುತ್ತಾರೆ ಮತ್ತು ಬಹಿರಂಗವಾಗಿ ಅದಕ್ಕನುಸಾರ ಜೀವಿಸಲು ಪ್ರಯತ್ನಿಸುತ್ತಾರೆ. ಲೋಕವ್ಯಾಪಕವಾಗಿ ಅವರು, ‘ಶಾಂತಿಯನ್ನು ಹುಡುಕಿ ಅದನ್ನು ಬೆನ್ನಟ್ಟುವ’ (NW) ಒಂದು ಧಾರ್ಮಿಕ ಗುಂಪಾಗಿ ಪ್ರಖ್ಯಾತರಾಗಿದ್ದಾರೆ. (1 ಪೇತ್ರ 3:11) ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಎಂಬ ಅವರ ಪುಸ್ತಕವು ಸರಿಯಾಗಿ ಅವಲೋಕಿಸುವುದು: “ಯೆಹೋವನ ಸಾಕ್ಷಿಗಳು ಯಾವುದೇ ಅರ್ಥದಲ್ಲಿ ಒಂದು ಗುಪ್ತ ಸಂಸ್ಥೆಯಾಗಿರುವುದಿಲ್ಲ. ಅವರ ಬೈಬಲಾಧಾರಿತ ನಂಬಿಕೆಗಳು, ಎಲ್ಲರಿಗೂ ಲಭ್ಯವಾಗಿರುವ ಪ್ರಕಾಶನಗಳಲ್ಲಿ ಪೂರ್ಣವಾಗಿ ವಿವರಿಸಲ್ಪಟ್ಟಿವೆ. ಇದಕ್ಕೆ ಕೂಡಿಸಿ, ಅವರು ಸಾರ್ವಜನಿಕರಿಗೆ ಕೂಟಗಳಿಗೆ ಹಾಜರಾಗುವಂತೆ, ಏನು ನಡೆಯುತ್ತದೊ ಅದನ್ನು ಸ್ವತಃ ನೋಡಿ, ಆಲಿಸುವಂತೆ ಆಮಂತ್ರಿಸಲು, ವಿಶೇಷ ಪ್ರಯತ್ನವನ್ನು ಮಾಡುತ್ತಾರೆ.”

ಸತ್ಯ ಧರ್ಮವು ಯಾವುದೇ ರೀತಿಯಲ್ಲಿ ಗೋಪ್ಯತೆಯನ್ನು ಆಚರಿಸುವುದಿಲ್ಲ. ಸತ್ಯ ದೇವರ ಆರಾಧಕರು, ಯೆಹೋವನ ಸಾಕ್ಷಿಗಳೋಪಾದಿ ತಮ್ಮ ಗುರುತನ್ನು ಅಡಗಿಸಿಟ್ಟುಕೊಳ್ಳದಂತೆ ಅಥವಾ ತಮ್ಮ ಉದ್ದೇಶವನ್ನು ಮರೆಮಾಚದಿರುವಂತೆ ಉಪದೇಶಿಸಲ್ಪಟ್ಟಿದ್ದಾರೆ. ಯೇಸುವಿನ ಆರಂಭದ ಶಿಷ್ಯರು ಯೆರೂಸಲೇಮನ್ನು ತಮ್ಮ ಬೋಧನೆಯಿಂದ ತುಂಬಿಸಿದರು. ತಮ್ಮ ನಂಬಿಕೆಗಳು ಮತ್ತು ಚಟುವಟಿಕೆಯ ಕುರಿತಾಗಿ ಅವರು ಮುಚ್ಚುಮರೆಯಿಲ್ಲದವರಾಗಿದ್ದರು. ಇಂದು ಯೆಹೋವನ ಸಾಕ್ಷಿಗಳ ಕುರಿತಾಗಿಯೂ ಇದು ಸತ್ಯವಾಗಿದೆ. ನಿರಂಕುಶಾಧಿಕಾರಿ ಆಳ್ವಿಕೆಗಳು ಆರಾಧನಾ ಸ್ವಾತಂತ್ರ್ಯವನ್ನು ತಪ್ಪಾಗಿ ನಿರ್ಬಂಧಪಡಿಸುವಾಗ, ಕ್ರೈಸ್ತರು “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ” ವಿಧೇಯರಾಗಿ, ತಮ್ಮ ಚಟುವಟಿಕೆಯನ್ನು ಎಚ್ಚರಿಕೆಯಿಂದ ಮತ್ತು ಧೈರ್ಯದಿಂದ ಮುಂದುವರಿಸಬೇಕೆಂಬುದು ಗ್ರಾಹ್ಯ. ಇದು ಅವರ ಧೈರ್ಯಶಾಲಿ ಬಹಿರಂಗ ಸಾಕ್ಷಿಯ ಕಾರಣದಿಂದ ಅವರ ಮೇಲೆ ಒತ್ತಾಯಪೂರ್ವಕವಾಗಿ ಹೇರಲ್ಪಟ್ಟಿರುವ ಒಂದು ಸನ್ನಿವೇಶವಾಗಿದೆ.—ಅ. ಕೃತ್ಯಗಳು 5:27-29; 8:1; 12:1-14; ಮತ್ತಾಯ 10:16, 26, 27.

ಯೆಹೋವನ ಸಾಕ್ಷಿಗಳು ಒಂದು ಗುಪ್ತ ಪಂಥ ಅಥವಾ ಪಂಗಡವಾಗಿರಬಹುದೆಂಬ ವಿಚಾರವು ಎಂದಾದರೂ ನಿಮ್ಮ ಮನಸ್ಸಿಗೆ ಬಂದಿರುವಲ್ಲಿ, ಅದು ನಿಮಗೆ ಅವರ ಕುರಿತಾಗಿ ತೀರ ಕೊಂಚ ವಿಷಯ ತಿಳಿದಿದ್ದದರಿಂದಲೇ ಎಂಬುದು ಸಂಭಾವ್ಯ. ಪ್ರಥಮ ಶತಮಾನದಲ್ಲಿದ್ದ ಅನೇಕರ ಸನ್ನಿವೇಶವೂ ಅದೇ ಆಗಿದ್ದಿರಬೇಕು.

ಅಪೊಸ್ತಲ ಪೌಲನು ‘ಯೆಹೂದ್ಯರ ಪ್ರಮುಖ’ರೊಂದಿಗೆ ನಡೆಸಿದ್ದ ಒಂದು ಕೂಟದ ಕುರಿತಾಗಿ, ಅ. ಕೃತ್ಯಗಳು ಅಧ್ಯಾಯ 28 ನಮಗೆ ತಿಳಿಸುತ್ತದೆ. ಅವರು ಅವನಿಗೆ ಹೇಳಿದ್ದು: “ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವದು ನಮಗೆ ಯುಕ್ತವೆಂದು ತೋರುತ್ತದೆ. ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬುದೊಂದೇ ನಮಗೆ ಗೊತ್ತದೆ.” (ಅ. ಕೃತ್ಯಗಳು 28:16-22) ಪ್ರತ್ಯುತ್ತರವಾಗಿ, ಪೌಲನು “ದೇವರ ರಾಜ್ಯವನ್ನು ಕುರಿತು ಕುಲಂಕಷವಾಗಿ ಸಾಕ್ಷಿನೀಡುವ ಮೂಲಕ ಅವರಿಗೆ ವಿಷಯವನ್ನು ವಿವರಿಸಿದನು” ಮತ್ತು “ಕೆಲವರು ನಂಬಲು ಆರಂಭಿಸಿದರು” (NW). (ಅ. ಕೃತ್ಯಗಳು 28:23, 24) ನಿಜ ಕ್ರೈಸ್ತತ್ವಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ಅರಿಯುವುದು ನಿಶ್ಚಯವಾಗಿಯೂ ಅವರ ನಿತ್ಯ ಪ್ರಯೋಜನಕ್ಕೆ ಸಹಾಯಕವಾಗಿತ್ತು.

ಯೆಹೋವನ ಸಾಕ್ಷಿಗಳು, ದೇವರ ಬಹಿರಂಗ ಮತ್ತು ಸಾರ್ವಜನಿಕ ಸೇವೆಗಾಗಿ ಸಮರ್ಪಿತರಾಗಿದ್ದು, ವಾಸ್ತವಾಂಶಗಳ ಕುರಿತಾಗಿ ತಿಳಿಯಲು ಬಯಸುವ ಯಾರಿಗೂ, ತಮ್ಮ ಚಟುವಟಿಕೆ ಮತ್ತು ನಂಬಿಕೆಗಳ ಕುರಿತಾದ ಸರಳವಾದ ವಾಸ್ತವಾಂಶಗಳನ್ನು ಪ್ರಕಟಪಡಿಸಲು ಸಂತೋಷಿತರಾಗಿರುವರು. ಅವರ ನಂಬಿಕೆಯ ಕುರಿತಾಗಿ ಯೋಗ್ಯವಾದ ತಿಳಿವಳಿಕೆಯುಳ್ಳವರಾಗಿರುವ ಸ್ಥಾನದಲ್ಲಿರಲು, ನೀವೇ ಸ್ವತಃ ಪರೀಕ್ಷಿಸಿನೋಡಬಾರದೇಕೆ?

[ಪುಟ 6 ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳು, ತಾವು ಯಾರು ಮತ್ತು ಏನನ್ನು ಮಾಡುತ್ತಿದ್ದೇವೆ ಎಂಬುದನ್ನು ಪ್ರಕಟಪಡಿಸಲು ಸಂತೋಷಿಸುತ್ತಾರೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ