ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 6/1 ಪು. 3-4
  • ಏಕೆ ಇಷ್ಟೆಲ್ಲ ಗೋಪ್ಯತೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಕೆ ಇಷ್ಟೆಲ್ಲ ಗೋಪ್ಯತೆ?
  • ಕಾವಲಿನಬುರುಜು—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಗೋಪ್ಯತೆಯು ಅಪಾಯದ ಸೂಚನೆಯನ್ನು ಕೊಡುವಾಗ
  • ಈಗ ಅವರೇನು ಮಾಡುತ್ತಿದ್ದಾರೆ?
  • ಪರಿವಿಡಿ
    ಎಚ್ಚರ!—2018
  • ಬೇರೆಯವರಿಗೆ ಹೇಳಬಹುದಾದ ಗುಟ್ಟು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ನಮಗೆ ಸಂತೋಷ ತರುವ ಒಂದು ಗುಟ್ಟು
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ಕ್ರೈಸ್ತರು ತಮ್ಮಷ್ಟಕ್ಕೇ ಇಟ್ಟುಕೊಳ್ಳಬಾರದ ಒಂದು ರಹಸ್ಯ!
    ಕಾವಲಿನಬುರುಜು—1997
ಇನ್ನಷ್ಟು
ಕಾವಲಿನಬುರುಜು—1997
w97 6/1 ಪು. 3-4

ಏಕೆ ಇಷ್ಟೆಲ್ಲ ಗೋಪ್ಯತೆ?

“ಒಂದು ಗುಟ್ಟಿನಷ್ಟು ಭಾರವಾದ ಸಂಗತಿ ಬೇರೊಂದಿಲ್ಲ.” ಅಥವಾ ಕನಿಷ್ಠಪಕ್ಷ ಹೀಗೆಂದು ಒಂದು ಫ್ರೆಂಚ್‌ ನಾಣ್ಣುಡಿಯು ಹೇಳಿಕೊಳ್ಳುತ್ತದೆ. ನಮಗೆ ಒಂದು ಗುಟ್ಟು ತಿಳಿದಿರುವಾಗ ಸಂತೋಷವಾಗುತ್ತದಾದರೂ, ಅದರ ಕುರಿತಾಗಿ ಮಾತಾಡಲು ಸಾಧ್ಯವಿಲ್ಲದಿರುವಾಗ ನಾವು ಕೆಲವೊಮ್ಮೆ ಹತಾಶೆಗೊಳ್ಳುವುದಕ್ಕೂ ಕಾರಣವನ್ನು ಇದು ವಿವರಿಸಬಲ್ಲದೊ? ಆದರೂ, ಶತಮಾನಗಳಿಂದ, ಅನೇಕ ಜನರು ಒಂದು ಸಾಮಾನ್ಯ ಗುರಿಯ ಬೆನ್ನಟ್ಟುವಿಕೆಯಲ್ಲಿ ಗುಪ್ತ ಗುಂಪುಗಳಲ್ಲಿ ತಮ್ಮನ್ನು ಒಟ್ಟುಗೂಡಿಸಿಕೊಳ್ಳುತ್ತಾ, ಗೋಪ್ಯತೆಯನ್ನು ಸ್ವಾಗತಿಸಿದ್ದಾರೆ.

ಈ ಗುಪ್ತ ಸಂಸ್ಥೆಗಳಲ್ಲಿ ಅತಿ ಆರಂಭದ ಸಂಸ್ಥೆಗಳು, ಐಗುಪ್ತ, ಗ್ರೀಸ್‌ ಮತ್ತು ರೋಮ್‌ನಲ್ಲಿ ಕಂಡುಕೊಳ್ಳಲ್ಪಟ್ಟ ರಹಸ್ಯ ಪಂಥಗಳಾಗಿದ್ದವು. ತದನಂತರ, ಈ ಗುಂಪುಗಳಲ್ಲಿ ಕೆಲವು ಗುಂಪುಗಳು, ತಮ್ಮ ಧಾರ್ಮಿಕ ಹಿನ್ನೆಲೆಯಿಂದ ಅಡ್ಡಹಾದಿ ಹಿಡಿದು, ರಾಜಕೀಯ, ಆರ್ಥಿಕ ಅಥವಾ ಸಾಮಾಜಿಕ ಗುಪ್ತ ಮಸಲತ್ತುಗಳನ್ನು ತಾಳಿದವು. ಉದಾಹರಣೆಗಾಗಿ, ಮಧ್ಯ ಯುಗಗಳ ಯೂರೋಪಿನಲ್ಲಿ ವೃತ್ತಿಸಂಸ್ಥೆಗಳು ರಚಿಸಲ್ಪಟ್ಟಾಗ, ಅವುಗಳ ಸದಸ್ಯರು, ಪ್ರಮುಖವಾಗಿ ಆರ್ಥಿಕ ಸ್ವರಕ್ಷಣೆಗಾಗಿ ಗೋಪ್ಯತೆಗೆ ಮೊರೆಹೋದರು.

ಆಧುನಿಕ ಸಮಯಗಳಲ್ಲಿನ ಗುಪ್ತ ಗುಂಪುಗಳು ಅನೇಕವೇಳೆ, ಶುದ್ಧವಾಗಿ ಸನ್ಮಾನ್ಯವಾಗಿರುವ ಕಾರಣಗಳಿಗಾಗಿ—ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕಾಗನುಸಾರ, ಸಂಭವನೀಯವಾಗಿ “ಸಾಮಾಜಿಕ ಮತ್ತು ಧರ್ಮಕಾರ್ಯದ ಉದ್ದೇಶಗಳಿಗಾಗಿ” ಮತ್ತು “ದಾನಶೀಲ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡಿಸಲಿಕ್ಕಾಗಿ”—ರಚಿಸಲ್ಪಟ್ಟಿವೆ. ಕೆಲವು ಸೌಭ್ರಾತೃ ಸಂಸ್ಥೆಗಳು, ಯುವ ಜನರ ಕ್ಲಬ್‌ಗಳು, ಸಾಮಾಜಿಕ ಕ್ಲಬ್‌ಗಳು, ಮತ್ತು ಇತರ ಗುಂಪುಗಳೂ ಗುಪ್ತವಾಗಿವೆ ಅಥವಾ ಕಡಿಮೆ ಪಕ್ಷ ಅರೆ ಗುಪ್ತವಾಗಿವೆ. ಸರ್ವಸಾಮಾನ್ಯವಾಗಿ, ಈ ಗುಂಪುಗಳ ಹೇತು ಹಾನಿರಹಿತವಾಗಿರುತ್ತದೆ. ಅವುಗಳ ಸದಸ್ಯರು ಗೋಪ್ಯತೆಯನ್ನು ಕೇವಲ ಉದ್ರೇಕಕಾರಿಯಾಗಿ ಕಂಡುಕೊಳ್ಳುತ್ತಾರಷ್ಟೇ. ದೀಕ್ಷೆಯ ಗುಪ್ತ ಸಂಸ್ಕಾರಗಳು, ಬಲವಾದ ಭಾವನಾತ್ಮಕ ಆಕರ್ಷಣೆಯನ್ನು ಪಡೆದಿರುತ್ತವೆ ಮತ್ತು ಮೈತ್ರಿ ಹಾಗೂ ಐಕ್ಯದ ಬಂಧಗಳನ್ನು ಬಲಪಡಿಸುತ್ತವೆ. ಸದಸ್ಯರಿಗೆ ಆಪ್ತವಾದ ಸಂಬಂಧದ ಅನಿಸಿಕೆ ಮತ್ತು ಒಂದು ಉದ್ದೇಶವನ್ನು ಪಡೆದಿರುವ ಭಾವನೆಯಾಗುತ್ತದೆ. ಈ ವಿಧದ ಗುಪ್ತ ಸಂಸ್ಥೆಗಳು ಸಾಮಾನ್ಯವಾಗಿ, ಸದಸ್ಯರಾಗಿರದವರಿಗೆ ಯಾವುದೇ ಬೆದರಿಕೆಯಾಗಿರುವುದಿಲ್ಲ. ಹೊರಗಿನವರಿಗೆ ರಹಸ್ಯಗಳು ತಿಳಿಯದೆ ಇರುವುದರಿಂದ ಏನೂ ನಷ್ಟ ಆಗುವುದಿಲ್ಲ.

ಗೋಪ್ಯತೆಯು ಅಪಾಯದ ಸೂಚನೆಯನ್ನು ಕೊಡುವಾಗ

ಎಲ್ಲಾ ಗುಪ್ತ ಗುಂಪುಗಳು ಒಂದೇ ಮಟ್ಟದಲ್ಲಿ ಗುಪ್ತವಾದವುಗಳಾಗಿರುವುದಿಲ್ಲ. ಆದರೆ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕಾ ವ್ಯಕ್ತಪಡಿಸುವಂತೆ, “ಗುಟ್ಟುಗಳೊಳಗೆ ಗುಟ್ಟುಗಳನ್ನು” ಹೊಂದಿರುವ ಗುಂಪುಗಳು, ಒಂದು ನಿರ್ದಿಷ್ಟ ಅಪಾಯವನ್ನು ಒಡ್ಡುತ್ತವೆ. ಉಚ್ಚ ಅಂತಸ್ತಿನ ಸದಸ್ಯರು, “ವಿಶೇಷ ಹೆಸರುಗಳು, ಉಗ್ರ ಪರೀಕ್ಷೆಗಳು ಅಥವಾ ವಿಧ್ಯುಕ್ತವಾದ ಜ್ಞಾನದ ಮೇಲೆ ಆಧರಿತವಾದ ಪ್ರಕಟನೆಗಳನ್ನು ಉಪಯೋಗಿಸುವ ಮೂಲಕ, ತಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳಲು” ಶಕ್ತರಾಗುತ್ತಾರೆ ಎಂದು ಅದು ವಿವರಿಸುತ್ತದೆ. ಈ ರೀತಿಯಲ್ಲಿ, “ಕೆಳಗಿನ ಅಂತಸ್ತಿನಲ್ಲಿರುವವರು, ಆ ಉನ್ನತಕ್ಕೇರಿಸಲ್ಪಟ್ಟ ಮಟ್ಟಗಳ ತನಕ ತಲಪಲು ಅವಶ್ಯವಿರುವ ಪ್ರಯತ್ನವನ್ನು ಮಾಡುವಂತೆ” ಅವರು ಪ್ರಚೋದಿಸುತ್ತಾರೆ. ಇಂತಹ ಗುಂಪುಗಳ ಅಂತರ್ಗತವಾಗಿರುವ ಅಪಾಯವು ವ್ಯಕ್ತವಾಗಿರುತ್ತದೆ. ಕೆಳಗಿನ ಪಂಕ್ತಿಗಳಲ್ಲಿರುವವರು, ವಿಧ್ಯುಕ್ತವಾದ ಜ್ಞಾನದ ಮೇಲೆ ಆಧರಿತವಾದ ಪ್ರಕಟನೆಯ ಆ ಮಟ್ಟಕ್ಕೆ ಇನ್ನೂ ಮುಂದುವರಿಯದೆ ಇರುವುದರಿಂದ, ಸಂಸ್ಥೆಯ ನಿಜವಾದ ಉದ್ದೇಶಗಳ ಕುರಿತಾಗಿ ಏನೂ ಅರಿವಿಲ್ಲದವರಾಗಿರಬಹುದು. ಯಾವುದರ ಗುರಿಗಳು ಮತ್ತು ಅವುಗಳನ್ನು ಸಾಧಿಸುವ ವಿಧಾನಗಳು ನಿಮ್ಮಿಂದ ಆಂಶಿಕವಾಗಿ ಗುರುತಿಸಲ್ಪಡುತ್ತವೊ ಮತ್ತು ಪ್ರಾಯಶಃ ನಿಮ್ಮೊಂದಿಗೆ ಪೂರ್ಣವಾಗಿ ಹಂಚಿಕೊಳ್ಳಲ್ಪಟ್ಟಿಲ್ಲವೊ, ಅಂತಹ ಒಂದು ಗುಂಪಿನೊಂದಿಗೆ ಒಳಗೂಡುವುದು ಸುಲಭ. ಆದರೆ ಅಂತಹ ಒಂದು ಗುಂಪಿನೊಳಗೆ ದೀಕ್ಷೆಕೊಡಿಸಲ್ಪಟ್ಟಿರುವ ವ್ಯಕ್ತಿಯು, ತದನಂತರ ತನ್ನನ್ನು ಸ್ವತಂತ್ರಗೊಳಿಸಿಕೊಳ್ಳುವುದನ್ನು ಕಷ್ಟಕರವಾಗಿ ಕಂಡುಕೊಳ್ಳಬಹುದು; ಏಕೆಂದರೆ ಅವನು ಗೋಪ್ಯತೆಯ ಸರಪಣಿಗಳಿಂದ ಬಂಧಿಸಲ್ಪಟ್ಟಿದ್ದಾನೊ ಎಂಬಂತಿದ್ದಾನೆ.

ಆದಾಗಲೂ, ಒಂದು ಗುಂಪು ಕಾನೂನುಬಾಹಿರ ಅಥವಾ ಅಪರಾಧಿ ಗುರಿಗಳನ್ನು ಬೆನ್ನಟ್ಟುತ್ತಿದ್ದು, ಈ ಕಾರಣದಿಂದ ತನ್ನ ಅಸ್ತಿತ್ವವನ್ನೇ ಅಡಗಿಸಿಬಿಡಲು ಪ್ರಯತ್ನಿಸುವಾಗ, ಗೋಪ್ಯತೆಯು ಇನ್ನೂ ಹೆಚ್ಚಿನ ಅಪಾಯದ ಸೂಚನೆಯನ್ನು ಕೊಡುತ್ತದೆ. ಅಥವಾ ಆ ಸಂಸ್ಥೆಯ ಅಸ್ತಿತ್ವವು ಮತ್ತು ಸಾಮಾನ್ಯ ಗುರಿಗಳು ಜ್ಞಾತವಾಗಿರುವಲ್ಲಿ, ಅದು ತನ್ನ ಸದಸ್ಯತ್ವ ಹಾಗೂ ಅದರ ಅಲ್ಪಾವಧಿಯ ಯೋಜನೆಗಳನ್ನು ಗುಟ್ಟಾಗಿಡಲು ಪ್ರಯತ್ನಿಸಬಹುದು. ಇದು, ತಮ್ಮ ಭಯೋತ್ಪಾದಕ ಆಕ್ರಮಣಗಳಿಂದ ಲೋಕವನ್ನು ನಿಯತಕಾಲಿಕವಾಗಿ ಆಘಾತಗೊಳಿಸುವ, ಬಲವಾಗಿ ಪ್ರಚೋದಿಸಲ್ಪಟ್ಟ ಭಯೋತ್ಪಾದಕ ಗುಂಪುಗಳ ವಿಷಯದಲ್ಲಿ ಸತ್ಯವಾಗಿದೆ.

ಹೌದು, ಗೋಪ್ಯತೆಯು ವ್ಯಕ್ತಿಗಳಿಗೂ, ಇಡೀ ಸಮಾಜಕ್ಕೂ—ಇಬ್ಬರಿಗೂ—ಅಪಾಯಕಾರಿಯಾಗಿರಸಾಧ್ಯವಿದೆ. ಲೋಕ ಶಾಂತಿ ಹಾಗೂ ಭದ್ರತೆಯನ್ನು ಸಾಧಿಸಲು ಮಾಡಲ್ಪಡುವ ಪ್ರಯತ್ನಗಳನ್ನು ಕೆಡಿಸುತ್ತಾ ಮುಂದುವರಿಯುವ, ಲೋಕದ ಸುತ್ತಲಿರುವ ಅನೇಕ ಭಯೋತ್ಪಾದಕ ಗುಂಪುಗಳಿಗೆ ಕೂಡಿಸಿ, ಮುಗ್ಧ ಬಲಿಗಳ ಮೇಲೆ ಹಿಂಸಾತ್ಮಕವಾಗಿ ಎರಗುವ ಗುಪ್ತ ಹದಿವಯಸ್ಕ ಗ್ಯಾಂಗ್‌ಗಳ ಕುರಿತಾಗಿ, ರಹಸ್ಯಗರ್ಭಿತ ಮಾಫಿಯದಂತಹ ಅಪರಾಧ ಸಂಘಗಳು, ಕು ಕ್ಲಕ್ಸ್‌ ಕ್ಲಾನ್‌ನಂತಹa ಬಿಳಿಯರು ಶ್ರೇಷ್ಠರೆಂಬ ಭಾವನೆಯಿರುವ ಗುಂಪುಗಳ ಕುರಿತಾಗಿ ಯೋಚಿಸಿರಿ.

ಈಗ ಅವರೇನು ಮಾಡುತ್ತಿದ್ದಾರೆ?

1950ಗಳ ಸಮಯದಲ್ಲಿ, ಶೀತಲ ಯುದ್ಧದ ಒಂದು ಉಪ ಉತ್ಪಾದನೆಯಾಗಿ, ಹಲವಾರು ಪಾಶ್ಚಾತ್ಯ ಐರೋಪ್ಯ ದೇಶಗಳಲ್ಲಿ ಗುಪ್ತ ಗುಂಪುಗಳು ವ್ಯವಸ್ಥಿತಗೊಳಿಸಲ್ಪಟ್ಟವು. ಇವು, ಸೋವಿಯಟರು ಎಂದಾದರೂ ಪಾಶ್ಚಾತ್ಯ ಯೂರೋಪನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಲ್ಲಿ, ಪ್ರತಿಭಟನಾ ಚಳವಳಿಗಳಿಗಾಗಿ ಆಧಾರವಾಗಿ ಕಾರ್ಯವೆಸಗಲಿದ್ದವು. ಉದಾಹರಣೆಗಾಗಿ, ಫೋಕಸ್‌ ಎಂಬ ಜರ್ಮನ್‌ ವಾರ್ತಾಪತ್ರಿಕೆಗನುಸಾರ, ಈ ಅವಧಿಯಲ್ಲಿ ಆಸ್ಟ್ರಿಯದಲ್ಲಿ “79 ಗುಪ್ತ ಆಯುಧದ ಉಗ್ರಾಣಗಳು” ಸ್ಥಾಪಿಸಲ್ಪಟ್ಟವು. ಈ ಗುಂಪುಗಳ ಕುರಿತಾಗಿ ಎಲ್ಲಾ ಐರೋಪ್ಯ ದೇಶಗಳಿಗೆ ತಿಳಿದಿರಲೂ ಇಲ್ಲ. 1990ಗಳ ಆರಂಭದಲ್ಲಿ ಒಂದು ವಾರ್ತಾಪತ್ರಿಕೆಯು ವಾಸ್ತವಿಕವಾಗಿ ವರದಿಸಿದ್ದು: “ಈ ಸಂಸ್ಥೆಗಳಲ್ಲಿ ಎಷ್ಟು ಸಂಸ್ಥೆಗಳು ಇಂದು ಸಕ್ರಿಯವಾಗಿವೆ ಮತ್ತು ಅವು ಈಗೀಗ ಏನನ್ನು ಮಾಡುತ್ತಿವೆಯೆಂಬುದು ಇನ್ನೂ ಅಜ್ಞಾತವಾಗಿದೆ.”

ಹೌದು, ಖಂಡಿತ. ಎಷ್ಟು ಗುಪ್ತ ಗುಂಪುಗಳು ಈ ಕ್ಷಣದಲ್ಲಿ, ನಮ್ಮಲ್ಲಿ ಯಾರಾದರೂ ಊಹಿಸಬಹುದಾಗಿರುವುದಕ್ಕಿಂತಲೂ ದೊಡ್ಡದಾದ ಬೆದರಿಕೆಯನ್ನು ಒಡ್ಡುತ್ತಿವೆಯೆಂಬುದನ್ನು ನಿಜವಾಗಿಯೂ ಯಾರು ತಿಳಿಯಸಾಧ್ಯವಿದೆ?

[ಪಾದಟಿಪ್ಪಣಿ]

a ಈ ಅಮೆರಿಕನ್‌ ಗುಂಪು, ಉರಿಯುತ್ತಿರುವ ಒಂದು ಶಿಲುಬೆಯನ್ನು ತನ್ನ ಚಿಹ್ನೆಯಾಗಿ ಉಪಯೋಗಿಸುವ ಮೂಲಕ, ಅತಿ ಆರಂಭದ ಗುಪ್ತ ಸಂಸ್ಥೆಗಳ ಕೆಲವು ಧಾರ್ಮಿಕ ಘಟಕಾಂಶಗಳನ್ನು ಇಟ್ಟುಕೊಂಡಿತು. ಗತಕಾಲದಲ್ಲಿ, ಅದು ರಾತ್ರಿಸಮಯದಲ್ಲಿ ದಾಳಿಗಳನ್ನು ನಡಿಸುತ್ತಿತ್ತು. ಅದರ ಸದಸ್ಯರು ನೀಳುಡುಪುಗಳ ಮತ್ತು ಬಿಳಿಯ ದುಪ್ಪಟ್ಟಿಗಳನ್ನು ಧರಿಸುತ್ತಿದ್ದರು ಮತ್ತು ತಮ್ಮ ಕ್ರೋಧವನ್ನು, ಕರಿಯರು, ಕ್ಯಾತೊಲಿಕರು, ಯೆಹೂದ್ಯರು, ವಿದೇಶೀಯರು, ಮತ್ತು ಸಂಘಟಿತ ದುಡಿಮೆಯ ವಿರುದ್ಧ ಕಾರುತ್ತಿದ್ದರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ