ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 3/15 ಪು. 10-11
  • ಮನುಷ್ಯರ ದಾಸರೋ ದೇವರ ಸೇವಕರೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮನುಷ್ಯರ ದಾಸರೋ ದೇವರ ಸೇವಕರೋ?
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮನುಷ್ಯರನ್ನು ಹಿಂಬಾಲಿಸುವುದರ ಅಪಾಯಗಳು
  • ಯೆಹೋವನ ಸಾಕ್ಷಿಗಳು ಒಂದು ಪಂಥವಾಗಿದ್ದಾರೋ?
    ಕಾವಲಿನಬುರುಜು—1994
  • ಕ್ರೈಸ್ತರು ಮತ್ತು ಮಾನವ ಸಮಾಜ ಇಂದು
    ಕಾವಲಿನಬುರುಜು—1993
  • ನೀವು ಅಮೆರಿಕದ ಒಂದು ಧಾರ್ಮಿಕ ಪಂಥನಾ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಯೆಹೋವನ ಸಾಕ್ಷಿಗಳೆಂದರೆ ಒಂದು ಪಂಥನಾ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
ಇನ್ನಷ್ಟು
ಕಾವಲಿನಬುರುಜು—1998
w98 3/15 ಪು. 10-11

ಮನುಷ್ಯರ ದಾಸರೋ ದೇವರ ಸೇವಕರೋ?

“ಯೆಹೋವನ ಸಾಕ್ಷಿಗಳು ಒಂದು ರೀತಿಯಲ್ಲಿ ಶ್ಲಾಘಿಸಲ್ಪಡಬೇಕು.” ಹೀಗೆ ಸೇಯರ್‌, ಗ್ರೂಯೆಬ್ಲರ್‌, ಎನ್‌ಟೂಸೀಆಸ್ಟನ್‌ (ಕನಸಿಗರು, ವಿಮರ್ಶಕರು, ಅತ್ಯುತ್ಸಾಹಿಗಳು) ಎಂಬ ಜರ್ಮನ್‌ ಪುಸ್ತಕವು ಹೇಳುತ್ತದೆ. ಸಾಕ್ಷಿಗಳ ಕುರಿತು ಟೀಕೆಮಾಡುವುದಾದರೂ, ಅದು ಒಪ್ಪಿಕೊಳ್ಳುವುದು: “ಸಾಮಾನ್ಯವಾಗಿ, ಅವರು ನಿಂದಾರಹಿತ, ಮಧ್ಯಮವರ್ಗದ ಜೀವಿತಗಳನ್ನು ಜೀವಿಸುತ್ತಾರೆ. ಅವರು ತಮ್ಮ ಕೆಲಸದಲ್ಲಿ ಶ್ರದ್ಧಾಪೂರ್ವಕರೂ ನಿಷ್ಠಾವಂತರೂ ಆಗಿದ್ದಾರೆ ಮತ್ತು ಅವರು ಶಾಂತ ನಾಗರಿಕರೂ ಪ್ರಾಮಾಣಿಕ ತೆರಿಗೆ ಪಾವತಿಗಾರರೂ ಆಗಿದ್ದಾರೆ. ಲೌಕಿಕ ಸುಖಭೋಗಗಳಿಂದ ದೂರವಿರುವಂತೆಯೇ, ಅವರು ಹುಚ್ಚುಹುಚ್ಚಾಗಿ ಐಶ್ವರ್ಯವನ್ನು ಬೆನ್ನಟ್ಟುವುದರಿಂದಲೂ ದೂರವಿರುತ್ತಾರೆ. . . . ಅಧಿವೇಶನಗಳಲ್ಲಿನ ಅವರ ಶಿಸ್ತು ಪ್ರಶಂಸನಾರ್ಹ. ಅವರ ಸ್ವತ್ಯಾಗ ಮನೋಭಾವವು ಬೇರೆ ಯಾವುದೇ ಧಾರ್ಮಿಕ ಗುಂಪುಗಳಂತಿದೆಯಾದರೂ, ಶುಶ್ರೂಷೆಯ ಸಂಬಂಧದಲ್ಲಿ ಅವರು ಇತರರೆಲ್ಲರನ್ನೂ ಮೀರಿಸುತ್ತಾರೆ. ಆದರೆ ಅವರನ್ನು ಇತರ ಕ್ರೈಸ್ತ ಚರ್ಚು ಮತ್ತು ನಮ್ಮ ದಿನದ ಗುಂಪಿಗಿಂತ ಉನ್ನತಕ್ಕೇರಿಸುವುದು ಯಾವುದೆಂದರೆ, ತಮ್ಮ ಸಿದ್ಧಾಂತಗಳನ್ನು ಎಲ್ಲ ಸಂದರ್ಭಗಳಲ್ಲಿಯೂ ಎಲ್ಲ ಗಂಡಾಂತರಗಳ ಎದುರಿನಲ್ಲಿಯೂ ಘೋಷಿಸುವುದರ ಬಗ್ಗೆ, ಅವರಲ್ಲಿ ಹೆಚ್ಚಿನವರಿಗಿರುವ ಸಂಪೂರ್ಣವಾಗಿ ಮುರಿಯಲಾಗದ ದೃಢನಿರ್ಧಾರವೇ. . . . ಗಮನಾರ್ಹವಾದ, ಕಂಗೊಳಿಸುವ ಮಾದರಿಗಳಾಗಿರುವುದರಿಂದ ಅವರು ಆಳವಾದ ಗೌರವಕ್ಕೆ ಅರ್ಹರಾಗಿದ್ದಾರೆ.”a

ಅಂಥ ಒಂದು ಸಕಾರಾತ್ಮಕ ಬೆಲೆಕಟ್ಟುವಿಕೆಯಿದ್ದಾಗ್ಯೂ, ಜರ್ಮನಿಯಲ್ಲಿ ಮತ್ತು ಇನ್ನಿತರ ಕೆಲವೊಂದು ದೇಶಗಳಲ್ಲಿ ಎಬ್ಬಿಸಲ್ಪಟ್ಟ ಕೆಲವು ಅಭಿಪ್ರಾಯಗಳು ಯೆಹೋವನ ಸಾಕ್ಷಿಗಳ ಬಗ್ಗೆ ತೀರ ಭಿನ್ನ ದೃಷ್ಟಿಕೋನವನ್ನು ಕೊಡುತ್ತವೆ. ಲೋಕದ ಸುತ್ತಲಿರುವ ಹೆಚ್ಚಿನ ದೇಶಗಳಲ್ಲಿ, ಸಾಕ್ಷಿಗಳು ಯಾವುದೇ ಹಸ್ತಕ್ಷೇಪವಿಲ್ಲದೆ ದಶಕಗಳಿಂದ ತಮ್ಮ ಧಾರ್ಮಿಕ ಸೇವೆಗಳನ್ನು ಬಹಿರಂಗವಾಗಿ ಮಾಡಿದ್ದಾರೆ. ಕೋಟ್ಯಂತರ ಜನರು ಅವರನ್ನು ತಿಳಿದಿದ್ದಾರೆ, ಅವರನ್ನು ಗೌರವಿಸುತ್ತಾರೆ ಮತ್ತು ಅವರಿಗೆ ತಮ್ಮ ಧರ್ಮವನ್ನು ಆಚರಿಸುವ ಹಕ್ಕಿದೆ ಎಂಬುದನ್ನು ಅವರು ಒಪ್ಪುತ್ತಾರೆ. ಹಾಗಾದರೆ, ಯೆಹೋವನ ಸಾಕ್ಷಿಗಳು ಯಾರು ಎಂಬುದರ ಬಗ್ಗೆ ಸಂದೇಹವು ಇರುವುದಾದರೂ ಏಕೆ?

ಸಂದೇಹಕ್ಕೆ ಪ್ರಾಯಶಃ ಒಂದು ಕಾರಣವು, ಇತ್ತೀಚಿನ ಸಮಯಗಳಲ್ಲಿ ಹೆಚ್ಚಿನ ಇತರ ಧಾರ್ಮಿಕ ಗುಂಪುಗಳು ಮಕ್ಕಳ ದುರುಪಯೋಗ, ಸಾಮೂಹಿಕ ಆತ್ಮಹತ್ಯೆ ಮತ್ತು ಭಯೋತ್ಪಾದಕ ಆಕ್ರಮಣಗಳಲ್ಲಿ ಒಳಗೊಂಡಿರುವುದೇ ಆಗಿದೆ. ನಿಶ್ಚಯವಾಗಿಯೂ, ಇವುಗಳಂತಹ ಅಸ್ವಾಭಾವಿಕ ನಡತೆಗಳು ಎಲ್ಲೆಡೆಯಲ್ಲೂ ಇವೆ, ಧಾರ್ಮಿಕ ಸ್ವಭಾವದವರಾಗಿರುವವರ ಮಧ್ಯೆ ಮಾತ್ರ ಸೀಮಿತವಾಗಿರುವುದಿಲ್ಲ. ಧರ್ಮದ ಸಂಬಂಧದಲ್ಲಿಯಾದರೋ, ಅನೇಕರು ಸಂದೇಹವಾದಿಗಳು, ಕೆಲವರು ಶತ್ರುಗಳು ಸಹ ಆಗಿದ್ದಾರೆ.

ಮನುಷ್ಯರನ್ನು ಹಿಂಬಾಲಿಸುವುದರ ಅಪಾಯಗಳು

ಒಂದು “ಪಂಥ”ವು, “ವೈಲಕ್ಷಣವಾದ ಒಂದು ಸಿದ್ಧಾಂತ ಅಥವಾ ಒಬ್ಬ ಮುಖ್ಯಸ್ಥನಿಗೆ ಅಂಟಿಕೊಂಡಿರುವ ಒಂದು ಗುಂಪು” ಎಂದು ನಿರೂಪಿಸಲಾಗಿದೆ. ಅದೇ ರೀತಿಯಲ್ಲಿ, “ಕುಪಂಥ”ಕ್ಕೆ ಸೇರಿರುವವರು “ಒಬ್ಬ ವ್ಯಕ್ತಿ, ಒಂದು ವಿಚಾರ ಅಥವಾ ವಸ್ತುವಿಗೆ ಅತ್ಯಂತ ಭಯಭಕ್ತಿ”ಯುಳ್ಳವರು ಆಗಿರುತ್ತಾರೆ. ವಾಸ್ತವವಾಗಿ, ಮಾನವ ಮುಖ್ಯಸ್ಥರು ಮತ್ತು ಅವರ ವಿಚಾರಗಳಿಗೆ ಬಲವಾಗಿ ಅಂಟಿಕೊಳ್ಳುವ ಯಾವುದೇ ಧಾರ್ಮಿಕ ಗುಂಪಿನ ಸದಸ್ಯರು ಮನುಷ್ಯರ ದಾಸರಾಗಿ ಪರಿಣಮಿಸುವ ಅಪಾಯವಿರುತ್ತದೆ. ಮುಖ್ಯಸ್ಥನ ಕಡೆಗಿರುವ ಒಂದು ಬಲವಾದ ಸಂಬಂಧವು, ಹಾನಿಕಾರಕವಾದ ಭಾವನಾತ್ಮಕ ಮತ್ತು ಆತ್ಮಿಕ ಅವಲಂಬನೆಗೆ ನಡೆಸಬಲ್ಲದು. ಒಬ್ಬ ವ್ಯಕ್ತಿಯು ಬಾಲ್ಯಾವಸ್ಥೆಯಿಂದ ಒಂದು ಪಂಥಾಭಿಮಾನದ ವಾತಾವರಣದಲ್ಲಿ ಬೆಳೆಸಲ್ಪಟ್ಟಿರುವಾಗ ಅಪಾಯವು ಹೆಚ್ಚಾಗಬಹುದು.

ಅಂಥ ಅಪಾಯವನ್ನು ದೃಷ್ಟಿಯಲ್ಲಿಡುತ್ತಾ, ಒಂದು ಜರ್ಮನ್‌ ವಾರ್ತಾಪತ್ರಿಕೆಯ ಲೇಖನವು ಇತ್ತೀಚೆಗೆ ಎಚ್ಚರಿಸಿದ್ದು: “ಪಂಥಗಳ ಕುರಿತ ಪರಿಣತರಿಗನುಸಾರ, ಜರ್ಮನಿಯಲ್ಲಿರುವ 2,00,000 ಮಕ್ಕಳು ಮತ್ತು ವಯಸ್ಕರು ಮಾನಸಿಕ ದುರ್ವ್ಯವಹಾರದಿಂದ ಅಪಾಯಕ್ಕೊಳಗಾಗಿದ್ದಾರೆ.” ಅಂಥ ಪ್ರತಿಪಾದನೆಗಳನ್ನು ಮಾಡುವವರು, ತಮ್ಮ ದೃಢ ದೃಷ್ಟಿಕೋನಗಳನ್ನು ಯೆಹೋವನ ಸಾಕ್ಷಿಗಳಿಗೆ ಅನ್ವಯಿಸುವಾಗ ವಾಸ್ತವವಾಗಿ ಅವರು ಮುಖ್ಯವಿಷಯವನ್ನು ತಪ್ಪಿಹೋಗುತ್ತಾರೆ. ತನ್ನ ಸದಸ್ಯರನ್ನು ದಾಸರನ್ನಾಗಿ ಮಾಡಿಕೊಳ್ಳುವ, ಅವರ ಮೇಲೆ ನಿರಂಕುಶಾಧಿಕಾರಿ ನಿಯಂತ್ರಣವನ್ನು ಪ್ರಯೋಗಿಸುವ, ಅವರ ಸ್ವಾತಂತ್ರ್ಯವನ್ನು ಅನುಚಿತವಾಗಿ ನಿರ್ಬಂಧಿಸುವ ಮತ್ತು ಇಡೀ ಸಮಾಜದಿಂದಲೇ ಅವರನ್ನು ಹೊರಗಿಡಲಾಗುವ ಒಂದು ಧಾರ್ಮಿಕ ಸಂಘಟನೆಗೆ ಸಾಕ್ಷಿಗಳು ಸೇರಿದ್ದಾರೆಂದು ಅವರು ಪ್ರತಿಪಾದಿಸಬಹುದು. ಆದರೆ ಈ ಪ್ರತಿಪಾದನೆಗಳು ನಿಜಾಂಶದ ಮೇಲೆ ಆಧಾರಿತವಾಗಿವೆಯೋ?

ನೀವೇ ಸ್ವತಃ ಪರೀಕ್ಷಿಸಿ ನೋಡುವಂತೆ ನಿಮ್ಮನ್ನು ಯೆಹೋವನ ಸಾಕ್ಷಿಗಳು ಆಮಂತ್ರಿಸುತ್ತಾರೆ. ಜಾಗರೂಕ ಪರಿಗಣನೆಯ ಅನಂತರ, ನಿಮ್ಮ ಸ್ವಂತ ನಿರ್ಣಯಗಳಿಗೆ ಬನ್ನಿ. ಅವರು ಪ್ರತಿಪಾದಿಸುವಂತೆ, ಸಾಕ್ಷಿಗಳು ದೇವರ ಸೇವಕರೋ ಇಲ್ಲವೇ ವಾಸ್ತವದಲ್ಲಿ ಮನುಷ್ಯರ ದಾಸರೋ? ಅವರ ಬಲದ ಮೂಲವು ಯಾವುದಾಗಿದೆ? ಇಂಥ ಪ್ರಶ್ನೆಗಳಿಗೆ ಪುಟ 12-23ರಲ್ಲಿರುವ ಎರಡು ಲೇಖನಗಳು ತೃಪ್ತಿದಾಯಕ ಉತ್ತರಗಳನ್ನು ನೀಡುವವು.

[ಪಾದಟಿಪ್ಪಣಿ]

a 1950ರ ಮೂಲ ಸಂಪುಟವು ಈ ಮೇಲಿನ ಹೇಳಿಕೆಯನ್ನು ಒಳಗೊಂಡಿರಲಿಲ್ಲ. ಹೀಗೆ 1982ರಲ್ಲಿನ ಪರಿಷ್ಕೃತ ಸಂಪುಟದಲ್ಲಿನ ಅದರ ಕಂಡುಬರುವಿಕೆಯು, ಯೆಹೋವನ ಸಾಕ್ಷಿಗಳ ಕುರಿತ ಒಂದು ಉತ್ತಮ ತಿಳಿವಳಿಕೆಯ ಕಡೆಗೆ ಒಲವನ್ನು ಹೊರಗೆಡಹುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ