ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 7/1 ಪು. 25
  • “ಪ್ರತಿದಿನ ಪೇಟೆಯಲ್ಲಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಪ್ರತಿದಿನ ಪೇಟೆಯಲ್ಲಿ”
  • ಕಾವಲಿನಬುರುಜು—1998
  • ಅನುರೂಪ ಮಾಹಿತಿ
  • ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಆರೈಕೆಯನ್ನು ಅನುಭವಿಸುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಮಾರುಕಟ್ಟೆಯಲ್ಲಿ ಸಾಕ್ಷಿಕಾರ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನಮ್ಮ ಬೈಬಲಾಧಾರಿತ ಸಾಹಿತ್ಯವನ್ನು ವಿವೇಕಯುತವಾಗಿ ಬಳಸುವುದು
    2005 ನಮ್ಮ ರಾಜ್ಯದ ಸೇವೆ
  • ನಮ್ಮ ಸಾಹಿತ್ಯಗಳನ್ನು ನೀವು ಬೆಲೆಯುಳ್ಳದ್ದಾಗಿ ನೋಡುತ್ತಿರೋ?
    1992 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು—1998
w98 7/1 ಪು. 25

ರಾಜ್ಯ ಘೋಷಕರು ವರದಿಮಾಡುತ್ತಾರೆ

“ಪ್ರತಿದಿನ ಪೇಟೆಯಲ್ಲಿ”

ರಾಜ ಸಂದೇಶವನ್ನು ಹಬ್ಬಿಸಲಿಕ್ಕಾಗಿ ಅಪೊಸ್ತಲ ಪೌಲನು ಪ್ರತಿಯೊಂದು ಸಂದರ್ಭವನ್ನು ಉಪಯೋಗಿಸಿದನು. ಅರ್ಹ ವ್ಯಕ್ತಿಗಳನ್ನು ಹುಡುಕಲಿಕ್ಕೋಸ್ಕರ, “ಅವನು ಸಭಾಮಂದಿರದಲ್ಲಿ ಯೆಹೂದ್ಯರ . . . ಸಂಗಡಲೂ ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡಲೂ ವಾದಿಸಿದನು.”—ಅ. ಕೃತ್ಯಗಳು 17:17.

ಸಾ.ಶ. ಒಂದನೆಯ ಶತಮಾನದಂದಿನಿಂದಲೂ ಅಂತಹ ಹುರುಪು ಯೆಹೋವನ ನಿಜ ಆರಾಧಕರ ಚೊಕ್ಕಮುದ್ರೆಯಾಗಿರುತ್ತದೆ. (ಮತ್ತಾಯ 28:19, 20) ತದ್ರೀತಿಯಲ್ಲಿ ಇಂದು ಯೆಹೋವನ ಸಾಕ್ಷಿಗಳು, ಪ್ರಾಮಾಣಿಕ ಹೃದಯದ ವ್ಯಕ್ತಿಗಳು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಹುರುಪಿನಿಂದ ಸಹಾಯಮಾಡುತ್ತಿರುವಾಗ, ವಿವಿಧ ವಿಧಾನಗಳನ್ನು ಉಪಯೋಗಿಸುತ್ತಾರೆ. (1 ತಿಮೊಥೆಯ 2:3, 4) ಆಸ್ಟ್ರೇಲಿಯದಿಂದ ಬಂದಿರುವ ಈ ಮುಂದಿನ ಅನುಭವವು ಇದನ್ನು ದೃಷ್ಟಾಂತಿಸುತ್ತದೆ.

ಸಿಡ್‌ ಮತ್ತು ಹ್ಯಾರಲ್ಡ್‌, ಪ್ರತಿ ವಾರ ಐದು ದಿನಗಳ ವರೆಗೆ, ಸಿಡ್ನಿಯ ರೈಲು ನಿಲ್ದಾಣದ ಬಳಿ ಬೈಬಲ್‌ ಸಾಹಿತ್ಯದ ಒಂದು ಚಿಕ್ಕ ಪ್ರದರ್ಶನದ ಉಸ್ತುವಾರಿ ಮಾಡುತ್ತಾರೆ. ಅವರು ಈಗ ಸುಮಾರು ಐದು ವರ್ಷಗಳಿಂದ ಈ ರೀತಿಯಲ್ಲಿ ದೇವರ ರಾಜ್ಯದ ಸುವಾರ್ತೆಯನ್ನು ಹಂಚುತ್ತಿದ್ದಾರೆ. 95 ವರ್ಷ ಪ್ರಾಯದವರಾಗಿರುವ ಸಿಡ್‌ ವಿವರಿಸುವುದು: “ನಾನು 87 ವರ್ಷದವನಾದಾಗ, ನಾನು ನನ್ನ ಕಾರನ್ನು ಚಲಾಯಿಸಲು ಸಾಧ್ಯವಿರಲಿಲ್ಲ. ಇದರಿಂದ ನನಗೆ ತುಂಬ ಆಶಾಭಂಗವಾಯಿತು, ಯಾಕಂದರೆ ನಾನು ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಆನಂದಿಸುತ್ತಿದ್ದೆ. ಒಂದು ದಿನ ಕಾಟೂಂಬದಲ್ಲಿ ಎಕೊ ಪಾಯಿಂಟ್‌ ಎಂದು ಕರೆಯಲ್ಪಡುವ ಪ್ರವಾಸಿ ತಾಣದ ಹತ್ತಿರ, ಒಬ್ಬ ಚಿತ್ರಕಲಾಕಾರನು ಭೂದೃಶ್ಯ ಚಿತ್ರಗಳನ್ನು ಮಾರುತ್ತಿರುವುದನ್ನು ನೋಡಿದೆ. ನಾನು ಆ ಚಿತ್ರಗಳನ್ನು ಅವಲೋಕಿಸಿ, ‘ನನ್ನ ಸೇವೆಯ ಬ್ಯಾಗ್‌ನಲ್ಲಿ ಇದಕ್ಕಿಂತಲೂ ಉತ್ತಮ ಚಿತ್ರಗಳು ಇವೆ—ಮತ್ತು ಅದೂ ಇದಕ್ಕಿಂತ ತುಂಬ ಕಡಿಮೆ ಬೆಲೆಯಲ್ಲಿ!’ ಎಂದು ಯೋಚಿಸಿದೆ. ಆದುದರಿಂದ ನಾನೊಂದು ಚಿಕ್ಕ ಪ್ರದರ್ಶನ ಸ್ಟ್ಯಾಂಡನ್ನು ನಿರ್ಮಿಸಿ, ಒಂದು ಜನಪ್ರಿಯ ಪ್ರವಾಸಿ ತಾಣದಲ್ಲಿ ಅದನ್ನು ನಿಲ್ಲಿಸಿ, ದಾರಿಹೋಕರಿಗೆ ಯೆಹೋವನ ಸಾಕ್ಷಿಗಳಿಂದ ವಿತರಿಸಲ್ಪಡುವ ಸುಂದರವಾದ ಚಿತ್ರಗಳುಳ್ಳ ಬೈಬಲ್‌ ಸಾಹಿತ್ಯವನ್ನು ನೀಡಲು ನಿರ್ಣಯಿಸಿದೆ.

“ನಾಲ್ಕು ವರ್ಷಗಳ ಹಿಂದೆ, ನಾನು ಆ ಸ್ಟ್ಯಾಂಡನ್ನು ಸಿಡ್ನಿಗೆ ಸ್ಥಳಾಂತರಿಸಿದೆ, ಮತ್ತು ಹ್ಯಾರಲ್ಡ್‌ ನನ್ನೊಂದಿಗೆ ಜೊತೆಗೂಡಿದರು. ಸ್ಟ್ಯಾಂಡನ್ನು ನೋಡಿಕೊಳ್ಳುವುದರಲ್ಲಿ ಮತ್ತು ನಮ್ಮ ಸ್ಥಳಿಕ ಸಭೆಗಳೊಂದಿಗೆ ಕೆಲಸಮಾಡುವುದರಲ್ಲಿ ನಾವು ಸರದಿ ತೆಗೆದುಕೊಳ್ಳುತ್ತೇವೆ.” ಈಗ 83 ವರ್ಷಪ್ರಾಯದವರಾಗಿರುವ ಹ್ಯಾರಲ್ಡ್‌ ಹೇಳುವುದು: “ಸೋಮವಾರದಿಂದ ಶುಕ್ರವಾರದ ವರೆಗೆ, ತುಂಬ ಕಡಿಮೆ ಜನರು ಮನೆಯಲ್ಲಿರುತ್ತಾರೆ. ಆದುದರಿಂದ ಈ ವಿಧದಲ್ಲಿ ರಾಜ್ಯ ಸಂದೇಶವನ್ನು ಹಂಚುವುದು, ಜನರು ಎಲ್ಲಿ ಇದ್ದಾರೊ ಅಲ್ಲಿ ನಮ್ಮನ್ನು ಇರಿಸುತ್ತದೆ. ಸ್ವಾಭಾವಿಕವಾಗಿಯೇ, ನಮಗೆ ಹೆಚ್ಚು ಉತ್ತಮವಾದ ಫಲಿತಾಂಶಗಳು ಸಿಗುತ್ತವೆ. ನಮ್ಮ ಸಾಹಿತ್ಯ ನೀಡುವಿಕೆಗಳು ಈ ದೇಶದ ನೀಡುವಿಕೆಯ ಲೆಕ್ಕದಲ್ಲಿ ತುಂಬ ಗಮನಾರ್ಹವಾಗಿವೆ.”

“ಅನೇಕ ವರ್ಷಗಳಿಂದ ನಾವು ನಾಲ್ಕು ಅಥವಾ ಐದು ವಿಭಿನ್ನ ಸ್ಥಳಗಳಲ್ಲಿ ನಮ್ಮ ಸ್ಟ್ಯಾಂಡನ್ನು ಇರಿಸಿದ್ದೇವಾದರೂ, ಸ್ವಲ್ಪ ಸಮಯದೊಳಗೆ ಜನರಿಗೆ ನಮ್ಮ ಪರಿಚಯವಾಗಿಬಿಡುತ್ತದೆ. ಕೆಲವು ಜನರು ಸಾಹಿತ್ಯವನ್ನು ಕೇಳುತ್ತಾ ನಮ್ಮ ಬಳಿಗೆ ಬರುತ್ತಾರೆ. ಇತರರಿಗೆ ಉತ್ತರಗಳ ಆವಶ್ಯಕತೆಯಿರುವ ಪ್ರಶ್ನೆಗಳಿರುತ್ತವೆ. ಮತ್ತು ಕೆಲವರು, ಕೆಲವು ನಿಮಿಷಗಳಿಗೆ ಮಾತ್ರ ಮಾತಾಡಲು ಬಯಸುತ್ತಾರೆ. ನನ್ನ ಪುನರ್ಭೇಟಿಗಳು ನನ್ನ ಬಳಿ ಬರುವ ಸಮಯ ಇದು ಮಾತ್ರ” ಎಂದು ಹೇಳಿ ಅವರು ಮುಸಿನಗುತ್ತಾರೆ.

“ಅನೇಕ ಜನರು ನಿಜವಾಗಿಯೂ ಬೈಬಲಿನಲ್ಲಿ ಆಸಕ್ತರಾಗಿದ್ದಾರೆ,” ಎಂದು ಹ್ಯಾರಲ್ಡ್‌ ಕೂಡಿಸುತ್ತಾರೆ. “ಒಂದೇ ತಿಂಗಳಿನಲ್ಲಿ ನಾಲ್ಕು ವ್ಯಕ್ತಿಗಳು, ನಮ್ಮಿಂದ ಪಡೆದುಕೊಂಡ ಸಾಹಿತ್ಯದಿಂದಾಗಿ ಮತ್ತು ನಾವು ಬೈಬಲಿನಿಂದ ಅವರ ಪ್ರಶ್ನೆಗಳನ್ನು ಉತ್ತರಿಸಲು ಶಕ್ತರಾದುದಕ್ಕಾಗಿ, ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು. ಇಂತಹ ಅನುಭವಗಳು ನಮಗೆ ತುಂಬ ಉತ್ತೇಜನವನ್ನು ಕೊಡುತ್ತವೆ.”

ಸಿಡ್‌ ಮತ್ತು ಹ್ಯಾರಲ್ಡ್‌ರಂತೆ—ಮತ್ತು ಅಪೊಸ್ತಲ ಪೌಲನಂತೆ—ಯೆಹೋವನ ಸಾಕ್ಷಿಗಳು ಎಲ್ಲೆಡೆಯೂ ತಮ್ಮ ಅತ್ಯಾವಶ್ಯಕ ಸಂದೇಶವನ್ನು ಹಬ್ಬಿಸಲು ಸಾಧ್ಯವಿರುವ ಪ್ರತಿಯೊಂದು ಮಾಧ್ಯಮವನ್ನು ಉಪಯೋಗಿಸುತ್ತಾರೆ. ಈ ರೀತಿಯಲ್ಲಿ, “ಸುವಾರ್ತೆಯು ಸರ್ವಲೋಕದಲ್ಲಿ” ಸಾರಲ್ಪಡುವ ಕೆಲಸವು ಮುಂದುವರಿಯುವುದು.—ಮತ್ತಾಯ 24:14.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ