ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 9/1 ಪು. 3
  • ಅನಾರೋಗ್ಯದ ರಹಸ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅನಾರೋಗ್ಯದ ರಹಸ್ಯ
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ರಹಸ್ಯವನ್ನು ನಿರ್ಮಿಸುವುದು
  • ಪಿಶಾಚನು ನಮಗೆ ರೋಗವನ್ನು ಬರಿಸುತ್ತಾನೋ?
    ಕಾವಲಿನಬುರುಜು—1999
  • ಭಕ್ತಿಚಿಕಿತ್ಸೆ ದೇವರಿಂದ ಒಪ್ಪಲ್ಪಟ್ಟಿದೆಯೇ?
    ಕಾವಲಿನಬುರುಜು—1992
  • ನಂಬಿಕೆಯು ರೋಗಿಗೆ ಸಹಾಯಮಾಡಬಲ್ಲ ವಿಧ
    ಕಾವಲಿನಬುರುಜು—1992
  • ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸಿರಿ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
ಇನ್ನಷ್ಟು
ಕಾವಲಿನಬುರುಜು—1999
w99 9/1 ಪು. 3

ಅನಾರೋಗ್ಯದ ರಹಸ್ಯ

ಪುಟ್ಟ ಓಮಾಜೀ ಭೇದಿಯಿಂದ ರೋಗಗ್ರಸ್ಥಳಾಗಿದ್ದಾಳೆ. ಅವಳ ತಾಯಿಯಾದ ಹಾವ ನಿರ್ಜಲೀಕರಣದ ಕುರಿತು ಚಿಂತಿತಳಾಗಿದ್ದಾಳೆ; ಇತ್ತೀಚೆಗಷ್ಟೇ ಹಳ್ಳಿಯಲ್ಲಿರುವ ಅವಳ ಸೋದರಸಂಬಂಧಿಯೊಬ್ಬಳು ಈ ರೀತಿಯ ಕಾಯಿಲೆಯಿಂದ ತನ್ನ ಮಗಳನ್ನು ಇತ್ತೀಚೆಗೆ ಕಳೆದುಕೊಂಡಿದ್ದಳು ಎಂಬ ವಿಷಯವನ್ನು ಅವಳು ಕೇಳಿಸಿಕೊಂಡಳು. ಓಮಾಜೀಯ ಅಜ್ಜಿ, ಅಂದರೆ ಹಾವಳ ಅತ್ತೆಯು, ಓಮಾಜೀಯನ್ನು ಬುಡಕಟ್ಟಿನ ಮಾಂತ್ರಿಕನೊಬ್ಬನ ಬಳಿ ಕರೆದೊಯ್ಯಲು ಬಯಸುತ್ತಾಳೆ. “ದುಷ್ಟಾತ್ಮವು ಮಗುವನ್ನು ರೋಗಗ್ರಸ್ಥಗೊಳಿಸುತ್ತಿದೆ. ರಕ್ಷೆಗಾಗಿ ಧರಿಸುವ ತಾಯಿತವನ್ನು ನೀನು ಅವಳಿಗೆ ಕೊಡಲು ನಿರಾಕರಿಸಿದೆ ಮತ್ತು ಇದರಿಂದಾಗಿಯೇ ಈಗ ಸಮಸ್ಯೆಗಳು ಪ್ರಾರಂಭವಾಗುತ್ತಿವೆ” ಎಂದು ಅವಳು ಹೇಳುತ್ತಾಳೆ!

ಈ ಸನ್ನಿವೇಶವು ಲೋಕದ ಅನೇಕ ಕಡೆಗಳಲ್ಲಿ ಸರ್ವಸಾಮಾನ್ಯವಾಗಿಬಿಟ್ಟಿದೆ. ಅನಾರೋಗ್ಯದ ಹಿಂದಿರುವ ಕಾರಣವು ದುಷ್ಟಾತ್ಮಗಳಾಗಿವೆ ಎಂದು ಕೋಟಿಗಟ್ಟಲೆ ಜನರು ನಂಬುತ್ತಾರೆ. ಇದು ಸತ್ಯವಾಗಿದೆಯೋ?

ರಹಸ್ಯವನ್ನು ನಿರ್ಮಿಸುವುದು

ಅದೃಶ್ಯ ಆತ್ಮಗಳು ರೋಗವನ್ನು ಉಂಟುಮಾಡುತ್ತವೆಂಬದನ್ನು ನೀವು ವೈಯಕ್ತಿಕವಾಗಿ ನಂಬದಿರಬಹುದು. ವಾಸ್ತವದಲ್ಲಿ, ಅನೇಕ ರೋಗಗಳು ವಿಷಾಣು ಮತ್ತು ಬ್ಯಾಕ್ಟೀರಿಯಾದಿಂದ ಉಂಟಾಗುತ್ತವೆಂದು ವಿಜ್ಞಾನಿಗಳು ತೋರಿಸಿಕೊಟ್ಟಿರುವುದಾದರೂ, ಯಾರಾದರೊಬ್ಬರು ಹೀಗೇಕೆ ಯೋಚಿಸುತ್ತಾರೆಂಬುದರ ಕುರಿತು ನೀವು ಆಶ್ಚರ್ಯಗೊಳ್ಳಬಹುದು. ಆದರೂ, ಇಂತಹ ಚಿಕ್ಕಪುಟ್ಟ ರೋಗಜನಕಗಳ ಕುರಿತು ಮಾನವಕುಲಕ್ಕೆ ಯಾವಾಗಲೂ ತಿಳಿದಿರಲಿಲ್ಲ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. 17ನೆಯ ಶತಮಾನದಲ್ಲಿ ಆ್ಯಂಟೋನೀ ವ್ಯಾನ್‌ ಲ್ಯುವೆನ್‌ಹ್ಯೂಕ್‌ರು ಸೂಕ್ಷ್ಮದರ್ಶಕವನ್ನು ಕಂಡುಹಿಡಿದ ನಂತರವೇ, ಸೂಕ್ಷ್ಮದರ್ಶಕ ಜಗತ್ತು ಮಾನವನ ಕಣ್ಣಿಗೆ ಕಾಣಿಸಲಾರಂಭಿಸಿತು. ಆಗಲೂ ಸಹ, 19ನೆಯ ಶತಮಾನದ ಲೂಯಿ ಪ್ಯಾಶ್ಚರ್‌ನ ಆವಿಷ್ಕಾರಗಳ ಮೂಲಕವಾಗಿಯೇ, ರೋಗಜನಕಗಳ ಮತ್ತು ರೋಗದ ಮಧ್ಯೆಯಿರುವ ಸಂಬಂಧವನ್ನು ವಿಜ್ಞಾನವು ತಿಳಿದುಕೊಳ್ಳಲಾರಂಭಿಸಿತು.

ಮಾನವ ಇತಿಹಾಸದಲ್ಲಿರುವ ಹೆಚ್ಚಿನವರಿಗೆ ರೋಗದ ಕಾರಣಗಳು ಅಜ್ಞಾತವಾಗಿದ್ದುದ್ದರಿಂದ, ಅನೇಕ ಮೂಢನಂಬಿಕೆಯುಳ್ಳ ವಿಚಾರಗಳು ವಿಕಸಿಸಲ್ಪಟ್ಟವು. ಇದರಲ್ಲಿ ಎಲ್ಲ ರೋಗಗಳು ದುಷ್ಟಾತ್ಮಗಳಿಂದ ಉಂಟಾಗುತ್ತವೆಂಬ ಅಭಿಪ್ರಾಯವು ಸೇರಿತ್ತು. ದಿ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕವು ಇದು ವಿಕಸಿಸಬಹುದಾಗಿದ್ದ ಒಂದು ವಿಧವನ್ನು ಸೂಚಿಸುತ್ತದೆ. ಹಿಂದೆ ರೋಗವನ್ನು ಗುಣಪಡಿಸುತ್ತಿದ್ದವರು ನಾನಾ ಪ್ರಕಾರದ ಸಸ್ಯಗಳ ಬೇರುಗಳನ್ನು, ಎಲೆಗಳನ್ನು ಮತ್ತು ತಮ್ಮಲ್ಲಿದ್ದ ಇತರ ವಸ್ತುಗಳನ್ನು ಉಪಯೋಗಿಸಿ ರೋಗಿಗಳನ್ನು ವಾಸಿಮಾಡಲು ಪ್ರಯತ್ನಿಸಿದರೆಂದು ಅದು ಹೇಳುತ್ತದೆ. ಕೆಲವೊಮ್ಮೆ, ಇವುಗಳಲ್ಲಿ ಕೆಲವು ಕಾರ್ಯನಡಿಸಿದವು. ಅನಂತರ, ನಿಜವಾದ ವಾಸಿಮಾಡುವಿಕೆಯ ವಿಚಾರವನ್ನು ಮರೆಮಾಚಲು, ಗುಣಪಡಿಸುವವನು ತನ್ನ ವಾಸಿಮಾಡುವಿಕೆಯ ಚಿಕಿತ್ಸೆಗೆ ಅನೇಕ ಮೂಢನಂಬಿಕೆಯುಳ್ಳ ವಿಧಿ ಮತ್ತು ಆಚಾರಗಳನ್ನು ಹೇರುತ್ತಿದ್ದನು. ಹೀಗೆ, ಜನರು ತನ್ನ ಸೇವಾವಿಧಿಗಳ ಉಪಯೋಗವನ್ನು ಪಡೆದುಕೊಳ್ಳುತ್ತಾ ಮುಂದುವರಿಯುವುದನ್ನು ಗುಣಪಡಿಸುವವನು ಖಾತ್ರಿಮಾಡಿಕೊಳ್ಳುತ್ತಿದ್ದನು. ಈ ರೀತಿಯಲ್ಲಿ, ಔಷಧಿಯು ರಹಸ್ಯವಾಗಿ ಇಡಲ್ಪಟ್ಟಿತು ಮತ್ತು ಸಹಾಯಕ್ಕಾಗಿ ಜನರು ಅತಿಮಾನುಷ ಶಕ್ತಿಯ ಕಡೆಗೆ ನೋಡಲು ಉತ್ತೇಜಿಸಲ್ಪಟ್ಟರು.

ಈ ಸಾಂಪ್ರದಾಯಿಕ ಗುಣಪಡಿಸುವ ವಿಧಾನಗಳನ್ನು ಈಗಲೂ ಅನೇಕ ಪ್ರದೇಶಗಳಲ್ಲಿ ಬಳಸಲಾಗುತ್ತಿದೆ. ಸತ್ತ ಪೂರ್ವಜರ ಆತ್ಮಗಳಿಂದ ಸಹ ರೋಗವು ಉಂಟಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಇನ್ನಿತರರು ದೇವರು ನಮ್ಮನ್ನು ರೋಗಿಗಳನ್ನಾಗಿ ಮಾಡುತ್ತಾನೆ ಮತ್ತು ಅಸ್ವಸ್ಥತೆಯು ನಮ್ಮ ಪಾಪಗಳಿಗಾಗಿರುವ ಶಿಕ್ಷೆಯಾಗಿದೆಯೆಂದು ಸಹ ಹೇಳುತ್ತಾರೆ. ರೋಗದ ಜೀವವಿಜ್ಞಾನ ಸ್ವರೂಪವನ್ನು ತಿಳಿದುಕೊಂಡಿರುವ ಶಿಕ್ಷಿತ ಜನರು ಸಹ, ಅತಿಮಾನುಷ ಪ್ರಭಾವಗಳಿಗೆ ಈಗಲೂ ಹೆದರುತ್ತಾರೆ.

ಮಾಟಗಾರರು ಮತ್ತು ಸಾಂಪ್ರದಾಯಿಕವಾಗಿ ವಾಸಿಮಾಡುವವರು ಜನರನ್ನು ಶೋಷಿಸಲು ಈ ಭಯವನ್ನು ಉಪಯೋಗಿಸುತ್ತಾರೆ. ಹಾಗಾದರೆ, ನಾವೇನನ್ನು ನಂಬಬೇಕು? ಆರೋಗ್ಯದ ಆರೈಕೆಗಾಗಿ ದುಷ್ಟಾತ್ಮಗಳ ಕಡೆಗೆ ನೋಡುವುದು ನಿಜವಾಗಿಯೂ ಸಹಾಯಮಾಡುವುದೋ? ಬೈಬಲು ಏನನ್ನು ಹೇಳುತ್ತದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ