ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 11/1 ಪು. 3-4
  • 2000—ಒಂದು ವಿಶೇಷ ವರ್ಷವೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 2000—ಒಂದು ವಿಶೇಷ ವರ್ಷವೋ?
  • ಕಾವಲಿನಬುರುಜು—1999
  • ಅನುರೂಪ ಮಾಹಿತಿ
  • ಮೂರನೆಯ ಸಹಸ್ರ ವರ್ಷವು ಯಾವಾಗ ಆರಂಭವಾಗುವುದು?
    ಕಾವಲಿನಬುರುಜು—1999
  • ವರುಷ 2000 ಎಷ್ಟು ಗಮನಾರ್ಹವಾಗಿದೆ?
    ಎಚ್ಚರ!—1998
  • ತೀರ ಮುಂಚಿತವಾಗಿಯೇ ಅಥವಾ ತೀರ ತಡವಾಗಿಯೇ?
    ಎಚ್ಚರ!—2000
  • ಬನ್ನಿರಿ, ನಿಜ ನಿರೀಕ್ಷೆಯ ಸಂದೇಶವೊಂದನ್ನು ಕೇಳಿಸಿಕೊಳ್ಳಿರಿ
    ಎಚ್ಚರ!—1999
ಇನ್ನಷ್ಟು
ಕಾವಲಿನಬುರುಜು—1999
w99 11/1 ಪು. 3-4

2000—ಒಂದು ವಿಶೇಷ ವರ್ಷವೋ?

ಇಸವಿ 2000ದ ಕುರಿತು ಏನಾದರೂ ವಿಶೇಷವಿದೆಯೊ? ಪಾಶ್ಚಿಮಾತ್ಯ ದೇಶಗಳಲ್ಲಿ ಜೀವಿಸುತ್ತಿರುವ ಜನರು, ಸಾಮಾನ್ಯವಾಗಿ ಇದನ್ನು ಮೂರನೆಯ ಸಹಸ್ರ ವರ್ಷದ ಆರಂಭದ ವರ್ಷವಾಗಿ ಪರಿಗಣಿಸುತ್ತಾರೆ. ಇದನ್ನು ಆಚರಿಸಲಿಕ್ಕಾಗಿ ಅದ್ಧೂರಿಯ ಸಿದ್ಧತೆಗಳು ನಡೆಯುತ್ತಿವೆ. ಈಗಿನಿಂದ ಹೊಸ ಸಹಸ್ರ ವರ್ಷವು ಆರಂಭವಾಗುವ ತನಕ, ಪ್ರತಿಯೊಂದು ಸೆಕೆಂಡುಗಳನ್ನು ಎಣಿಸಲಿಕ್ಕಾಗಿ ಬೃಹದಾಕಾರದ ಗಡಿಯಾರಗಳು ಈಗಾಗಲೇ ಅಳವಡಿಸಲ್ಪಡುತ್ತಿವೆ. ಡಿಸೆಂಬರ್‌ 31ರ ರಾತ್ರಿಗಾಗಿ ದೊಡ್ಡ ಪಾರ್ಟಿಗಳು ಏರ್ಪಡಿಸಲ್ಪಡುತ್ತಿವೆ. ಪಟ್ಟಣದ ಚಿಕ್ಕಪುಟ್ಟ ಅಂಗಡಿಗಳಲ್ಲಿ ಹಾಗೂ ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳಲ್ಲಿ, ಸಹಸ್ರ ವರ್ಷದ ಅಂತ್ಯವನ್ನು ಸೂಚಿಸುತ್ತಿರುವ ಧ್ಯೇಯಮಂತ್ರಗಳಿರುವ ಟಿ-ಶರ್ಟ್‌ಗಳು ಮಾರಾಟವಾಗುತ್ತಿವೆ.

ವರ್ಷದುದ್ದಕ್ಕೂ ನಡೆಯುವ ಉತ್ಸವ ಸಮಾರಂಭಗಳಲ್ಲಿ ಅನೇಕ ಚರ್ಚುಗಳು ಸಹ ಜೊತೆಗೂಡುವವು. ಮುಂದಿನ ವರ್ಷದ ಆರಂಭದಲ್ಲಿ, IIನೆಯ ಪೋಪ್‌ ಜಾನ್‌ ಪಾಲ್‌ರು ಇಸ್ರೇಲ್‌ಗೆ ಹೋಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. “ರೋಮನ್‌ ಕ್ಯಾತೊಲಿಕ್‌ ಚರ್ಚಿನ ಸಹಸ್ರ ವರ್ಷದ ವಾರ್ಷಿಕೋತ್ಸವದ ಆಚರಣೆ” ಎಂದು ಯಾವುದು ಕರೆಯಲ್ಪಡುತ್ತದೋ ಅದರಲ್ಲಿ ರೋಮನ್‌ ಕ್ಯಾತೊಲಿಕರ ನಾಯಕತ್ವವನ್ನು ವಹಿಸಲಿಕ್ಕಾಗಿಯೇ ಪೋಪ್‌ ಜಾನ್‌ ಪಾಲ್‌ರು ಅಲ್ಲಿಗೆ ಪ್ರಯಾಣಿಸಲಿದ್ದಾರೆ. ರೋಮನ್‌ ಕ್ಯಾತೊಲಿಕ್‌ ಭಕ್ತರಿಂದ ಹಿಡಿದು ಕುತೂಹಲಿಗಳಾದ ಜನರ ತನಕ, ಸುಮಾರು 25 ಲಕ್ಷದಿಂದ 60 ಲಕ್ಷ ಪ್ರವಾಸಿಗರು, ಮುಂದಿನ ವರ್ಷ ಇಸ್ರೇಲ್‌ಗೆ ಭೇಟಿನೀಡಲು ಯೋಜನೆಗಳನ್ನು ಮಾಡುತ್ತಿದ್ದಾರೆ ಎಂದು ಅಂದಾಜುಮಾಡಲಾಗಿದೆ.

ಇಷ್ಟೊಂದು ಜನರು ಏಕೆ ಇಸ್ರೇಲನ್ನು ಭೇಟಿಮಾಡಲು ಯೋಜನೆಗಳನ್ನು ಮಾಡುತ್ತಿದ್ದಾರೆ? ಪೋಪರ ಪರವಾಗಿ ಮಾತಾಡುತ್ತಾ, ವ್ಯಾಟಿಕನ್‌ ಅಧಿಕಾರಿಯಾದ ರಾಜರ್‌ ಕಾರ್ಡಿನಲ್‌ ಏಚಗರಿ ಹೇಳಿದ್ದು: “ಇಸವಿ 2000ವು, ಈ ದೇಶ (ಇಸ್ರೇಲ್‌)ದಲ್ಲಿ ಕ್ರಿಸ್ತನ ಮತ್ತು ಅವನ ಜೀವಿತದ ಆಚರಣೆಯು ನಡೆಯುತ್ತದೆ. ಆದುದರಿಂದ, ಪೋಪರು ಇಲ್ಲಿಗೆ ಬರುವುದರಲ್ಲಿ ಆಶ್ಚರ್ಯವೇನೂ ಇಲ್ಲ.” ಇಸವಿ 2000ಕ್ಕೂ ಕ್ರಿಸ್ತನಿಗೂ ಏನು ಸಂಬಂಧ? ಸಾಮಾನ್ಯವಾಗಿ ಇಸವಿ 2000ವು, ಕ್ರಿಸ್ತನ ಜನನದ ಸಮಯದಿಂದ ನಿಖರವಾಗಿ 2,000 ವರ್ಷಗಳನ್ನು ಗುರುತಿಸುತ್ತದೆ ಎಂದು ನೆನಸಲಾಗುತ್ತದೆ. ಆದರೆ ಈ ಅಭಿಪ್ರಾಯವು ಸರಿಯಾಗಿದೆಯೊ? ಅದರ ಬಗ್ಗೆ ನಾವೇ ಪರಿಶೀಲಿಸೋಣ.

ಕೆಲವು ಧಾರ್ಮಿಕ ಗುಂಪುಗಳ ಸದಸ್ಯರಿಗೆ, ಇಸವಿ 2000ವು ಇನ್ನೂ ಹೆಚ್ಚು ವಿಶೇಷವಾದದ್ದಾಗಿದೆ. ಮುಂದಿನ ವರ್ಷದೊಳಗೆ ಅಥವಾ ತದನಂತರ ಯೇಸು ಎಣ್ಣೇ ಮರಗಳ ಗುಡ್ಡ (ಆಲಿವ್‌ ಪರ್ವತ)ಕ್ಕೆ ಹಿಂದಿರುಗುವನು ಮತ್ತು ಪ್ರಕಟನೆಯ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಅರ್ಮಗೆದೋನ್‌ ಯುದ್ಧವು ಮೆಗಿದ್ದೋ ಕಣಿವೆಯಲ್ಲಿ ನಡೆಯುವುದು ಎಂದು ಅವರು ದೃಢವಾಗಿ ನಂಬಿದ್ದಾರೆ. (ಪ್ರಕಟನೆ 16:14-16) ಈ ಘಟನೆಗಳನ್ನು ಕಾತುರದಿಂದ ಎದುರುನೋಡುತ್ತಾ, ಅಮೆರಿಕದ ನೂರಾರು ಮಂದಿ ನಿವಾಸಿಗಳು ತಮ್ಮ ಮನೆಗಳನ್ನು ಹಾಗೂ ಸ್ವತ್ತುಗಳನ್ನು ಮಾರಿ, ಇಸ್ರೇಲಿಗೆ ಹೋಗುತ್ತಿದ್ದಾರೆ. ಯಾರು ತಮ್ಮ ಮನೆಗಳನ್ನು ಬಿಟ್ಟುಬರಲು ಸಾಧ್ಯವಿಲ್ಲವೋ ಅವರಿಗಾಗಿ, ಯೇಸುವಿನ ಬರೋಣವನ್ನು ತಾನು ಕಲರ್‌ ಟಿವಿಯಲ್ಲಿ ಪ್ರಸಾರಮಾಡಿಸುವೆನು ಎಂದು ಅಮೆರಿಕದ ಒಬ್ಬ ಪ್ರಖ್ಯಾತ ಸೌವಾರ್ತಿಕನು ವಾಗ್ದಾನಿಸಿದ್ದಾನೆಂದು ವರದಿಸಲಾಗಿದೆ!

ಪಾಶ್ಚಿಮಾತ್ಯ ದೇಶಗಳಲ್ಲಿ, ಮೂರನೆಯ ಸಹಸ್ರ ವರ್ಷದ ಆಗಮನವನ್ನು ಘೋಷಿಸುವ ಯೋಜನೆಗಳು ತ್ವರಿತಗತಿಯಿಂದ ನಡೆಯುತ್ತಿವೆ. ಆದರೆ, ಬೇರೆ ದೇಶಗಳಲ್ಲಿರುವ ಜನರು ಮಾತ್ರ ತಮ್ಮ ಸಾಮಾನ್ಯ ಚಟುವಟಿಕೆಗಳಲ್ಲಿ ತುಂಬ ಮಗ್ನರಾಗಿದ್ದಾರೆ. ಈ ಜನರು, ಅಂದರೆ ಲೋಕದ ಜನಸಂಖ್ಯೆಯ ಅಧಿಕಾಂಶ ಮಂದಿ, ನಜರೇತಿನ ಯೇಸುವೇ ಮೆಸ್ಸೀಯನಾಗಿದ್ದನು ಎಂಬುದನ್ನು ನಂಬುವುದಿಲ್ಲ. ಅಥವಾ ಕ್ರಿ.ಪೂ.-ಕ್ರಿ.ಶ. ಎಂಬಂತಹ ಕಾಲಗಣನ ವಿಧಾನವನ್ನು ಅವರು ಅಂಗೀಕರಿಸುವುದೂ ಇಲ್ಲ.a ಉದಾಹರಣೆಗೆ, ಅನೇಕ ಮುಸ್ಲಿಮರು ತಮ್ಮದೇ ಆದ ಕ್ಯಾಲೆಂಡರನ್ನು ಉಪಯೋಗಿಸುತ್ತಾರೆ. ಅವರ ಕ್ಯಾಲೆಂಡರ್‌ಗನುಸಾರ, ಮುಂದೆ ಬರಲಿರುವ ವರ್ಷವು 2000 ಅಲ್ಲ, ಬದಲಾಗಿ 1420 ಆಗಿರುವುದು. ಮುಸ್ಲಿಮರು, ಪ್ರವಾದಿಯಾದ ಮಹಮ್ಮದ್‌ ಮಕ್ಕಾದಿಂದ ಮದೀನಕ್ಕೆ ಹೋದ ಸಮಯದಿಂದ ವರ್ಷಗಳ ಕಾಲಗಣನೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ, ಲೋಕದಾದ್ಯಂತ ಜನರು ಸುಮಾರು 40 ಬೇರೆ ಬೇರೆ ಕ್ಯಾಲೆಂಡರ್‌ಗಳನ್ನು ಉಪಯೋಗಿಸುತ್ತಾರೆ.

ಇಸವಿ 2000ವು ಕ್ರೈಸ್ತರಿಗೆ ವಿಶೇಷ ಅರ್ಥವುಳ್ಳದ್ದಾಗಿದೆಯೊ? ಜನವರಿ 1, 2000ವು ನಿಜವಾಗಿಯೂ ವಿಶೇಷ ದಿನವಾಗಿದೆಯೊ? ಮುಂದಿನ ಲೇಖನದಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳು ಸಿಗುವುದು.

[ಅಧ್ಯಯನ ಪ್ರಶ್ನೆಗಳು]

a ಕ್ರಿ.ಪೂ.-ಕ್ರಿ.ಶ. ಎಂಬಂತಹ ಕಾಲಗಣನ ವಿಧಾನದಲ್ಲಿ, ಯೇಸುವಿನ ಜನನದ ಸಾಂಪ್ರದಾಯಿಕ ಸಮಯಕ್ಕೆ ಮುಂಚೆ ನಡೆದ ಘಟನೆಗಳನ್ನು “ಕ್ರಿ.ಪೂ.” (ಕ್ರಿಸ್ತ ಪೂರ್ವ) ವರ್ಷಗಳು ಎಂದು ಸೂಚಿಸಲಾಗಿದೆ; ಯೇಸುವಿನ ಜನನದ ಬಳಿಕ ಸಂಭವಿಸಿದ ಘಟನೆಗಳನ್ನು “ಕ್ರಿ.ಶ.” (ಕ್ರಿಸ್ತ ಶಕ—“ನಮ್ಮ ಸ್ವಾಮಿಯ ವರ್ಷ.”) ವರ್ಷಗಳು ಎಂದು ಹೆಸರಿಸಲಾಗಿದೆ. ಆದರೂ, ಕೆಲವು ಸುಶಿಕ್ಷಿತ ವಿದ್ವಾಂಸರು, “ಸಾ.ಶ.ಪೂ.” (ಸಾಮಾನ್ಯ ಶಕ ಪೂರ್ವ) ಮತ್ತು “ಸಾ.ಶ.” (ಸಾಮಾನ್ಯ ಶಕ) ಎಂಬ ಐಹಿಕ ನಿರ್ದೇಶಕಗಳನ್ನು ಉಪಯೋಗಿಸಲು ಇಷ್ಟಪಡುತ್ತಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ