ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w03 1/15 ಪು. 2-ಪು. 3 ಪ್ಯಾ. 4
  • ಅದು ಸೈತಾನನ ಶತಮಾನವಾಗಿತ್ತೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅದು ಸೈತಾನನ ಶತಮಾನವಾಗಿತ್ತೊ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಅನುರೂಪ ಮಾಹಿತಿ
  • ಸಾಮೂಹಿಕ ಹತ್ಯೆ ಯಾಕೆ ನಡಿತು? ದೇವರು ಯಾಕೆ ಅದನ್ನ ನಿಲ್ಲಿಸಲಿಲ್ಲ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಮನುಷ್ಯರ ಕಷ್ಟಸಂಕಟ ಎಂಬ ಸಮಸ್ಯೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಒಳ್ಳೆಯದರ ಪ್ರತಿ ಕೆಟ್ಟದ್ದು—ದೀರ್ಘಕಾಲದ ಒಂದು ಹೋರಾಟ
    ಕಾವಲಿನಬುರುಜು—1993
  • ಒಳ್ಳೆಯದು ಎಂದಾದರೂ ಕೆಟ್ಟದ್ದನ್ನು ಜಯಿಸೀತೇ?
    ಕಾವಲಿನಬುರುಜು—1993
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
w03 1/15 ಪು. 2-ಪು. 3 ಪ್ಯಾ. 4

ಅದು ಸೈತಾನನ ಶತಮಾನವಾಗಿತ್ತೊ?

“ಕೆಡುಕಿನ ಪ್ರಮಾಣವನ್ನು ಪರಿಗಣಿಸುವಾಗ, ಇಪ್ಪತ್ತನೆಯ ಶತಮಾನವನ್ನು ಸೈತಾನನ ಶತಮಾನವೆಂದು ಕರೆಯುವುದು ಸಮಂಜಸ. ಏಕೆಂದರೆ ಹಿಂದಿನ ಯಾವುದೇ ಶತಮಾನದಲ್ಲಿಯೂ ಜನರು ಕುಲ, ಧರ್ಮ ಅಥವಾ ಸಾಮಾಜಿಕ ಅಂತಸ್ತಿನ ಕಾರಣ ಲಕ್ಷಾಂತರ ಜನರನ್ನು ಕೊಲ್ಲುವಂಥ ಈ ಪ್ರವೃತ್ತಿ ಮತ್ತು ಅಪೇಕ್ಷೆಯನ್ನು ತೋರಿಸಿಲ್ಲ.”

ನಾಸಿ ಮರಣ ಶಿಬಿರಗಳಲ್ಲಿ ಬಂದಿಗಳಾಗಿದ್ದ ನಿರಪರಾಧಿಗಳ ಬಿಡುಗಡೆಯ 50ನೆಯ ವಾರ್ಷಿಕೋತ್ಸವವು, ದ ನ್ಯೂ ಯಾರ್ಕ್‌ ಟೈಮ್ಸ್‌ ತನ್ನ 1995, ಜನವರಿ 26ರ ಸಂಪಾದಕೀಯದಲ್ಲಿ ಈ ಮೇಲಿನ ಹೇಳಿಕೆಯನ್ನು ಮಾಡುವಂತೆ ಪ್ರೇರಿಸಿತು. ಇತಿಹಾಸದಲ್ಲಿಯೇ ಅತಿ ಪ್ರಸಿದ್ಧವಾದ ಜನಹತ್ಯೆಗಳಲ್ಲಿ ಒಂದಾದ ಈ ಹತ್ಯಾಕಾಂಡವು, ಸುಮಾರು 60 ಲಕ್ಷ ಮಂದಿ ಯೆಹೂದ್ಯರನ್ನು ವಧಿಸಿತು. 30 ಲಕ್ಷದಷ್ಟು ಯೆಹೂದ್ಯೇತರ ಪೋಲಿಷ್‌ ನಾಗರಿಕರು “ಮರೆತಿರುವ ಹತ್ಯಾಕಾಂಡ” ಎಂದು ಹೇಳಲಾಗಿರುವ ಹತ್ಯಾಕಾಂಡದಲ್ಲಿ ಸತ್ತರು.

“ಇಸವಿ 1900ರಿಂದ 1989ರ ವರೆಗಿನ ಸಮಯಾವಧಿಯಲ್ಲಿ, ಯುದ್ಧವು 8.6 ಕೋಟಿ ಜನರನ್ನು ಕೊಂದಿದೆ ಎಂದು ಅಂದಾಜುಮಾಡಲಾಗಿದೆ” ಎಂದು ಜಾನತನ್‌ ಗ್ಲೋವರ್‌ ಅವರು ಮಾನವಕುಲ​—ಇಪ್ಪತ್ತನೆಯ ಶತಮಾನದ ನೈತಿಕ ಇತಿಹಾಸ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ. ಅವರು ಮುಂದುವರಿಸಿ ಹೇಳುವುದು: “ಇಪ್ಪತ್ತನೆಯ ಶತಮಾನದ ಯುದ್ಧಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಯನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಮರಣ ಸಂಖ್ಯೆಯನ್ನು ಸರಾಸರಿಯಾಗಿ ಹೇಳುವುದು ವಾಸ್ತವಾಂಶಗಳಿಗಿಂತ ಭಿನ್ನವಾಗಿರುತ್ತದೆ, ಏಕೆಂದರೆ ಸುಮಾರು ಮೂರನೇ ಎರಡು ಭಾಗದಷ್ಟು (5.8 ಕೋಟಿ) ಜನರು ಎರಡು ಲೋಕ ಯುದ್ಧಗಳಲ್ಲಿ ಮೃತಪಟ್ಟಿದ್ದಾರೆ. ಆದರೆ ಈ ಮರಣಗಳು ಸಮಾನವಾದ ಅಂತರಗಳಲ್ಲಿ ಸಂಭವಿಸುತ್ತಿದ್ದಲ್ಲಿ, ಯುದ್ಧವು ಪ್ರತಿದಿನ 2,500 ಜನರನ್ನು ಕೊಂದಿರುತ್ತಿತ್ತು. ಅಂದರೆ ರಾತ್ರಿಹಗಲು ಎಡೆಬಿಡದೆ ತೊಂಬತ್ತು ವರುಷಗಳ ತನಕ ಪ್ರತಿ ತಾಸಿಗೆ 100 ಮಂದಿ ಸಾಯುತ್ತಿದ್ದರು.”

ಈ ಕಾರಣದಿಂದ, 20ನೆಯ ಶತಮಾನವನ್ನು ಮಾನವರಿಗೆ ತಿಳಿದಿರುವವುಗಳಲ್ಲೇ ಅತಿ ಕಗ್ಗೊಲೆಯ ಶತಮಾನಗಳಲ್ಲಿ ಒಂದು ಎಂದು ಕರೆಯಲಾಗಿದೆ. ನಿರೀಕ್ಷೆಗೆ ವಿರುದ್ಧವಾದ ನಿರೀಕ್ಷೆ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ನಾಡ್ಯೆಸ್ಟ ಮ್ಯಾಂಡಲ್‌ಶ್ಟಾಮ್‌ರು ಬರೆಯುವುದು: “ಮಾನವೀಯತೆಯನ್ನು ಅವಮಾನಕ್ಕೊಳಪಡಿಸಿ, ಅದರ ಹಕ್ಕುಗಳನ್ನು ತುಳಿದುಹಾಕಿದ್ದನ್ನು ನಾವು ಕಣ್ಣಾರೆ ನೋಡಿದ್ದೇವೆ.” ಹಾಗಾದರೆ, ಕೆಡುಕು ಹಾಗೂ ಒಳಿತಿನ ನಡುವಣ ಹೋರಾಟದಲ್ಲಿ, ಕೆಡುಕು ನಿಜವಾಗಿಯೂ ಜಯಗಳಿಸಿದೆಯೆ?

[ಪುಟ 2ರಲ್ಲಿರುವ ಚಿತ್ರ ಕೃಪೆ]

ಮುಖಪುಟ: ತಾಯಿ ಮತ್ತು ಮಗಳು: J.R. Ripper/SocialPhotos

[ಪುಟ 3ರಲ್ಲಿರುವ ಚಿತ್ರ ಕೃಪೆ]

U.S. Department of Energy photograph

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ