ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w03 2/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಅನುರೂಪ ಮಾಹಿತಿ
  • ಯೆಹೋವನ ವಾಕ್ಯವನ್ನು ಪ್ರತಿದಿನವೂ ಪರಿಗಣಿಸಿರಿ!
    2000 ನಮ್ಮ ರಾಜ್ಯದ ಸೇವೆ
  • ಸಂತೋಷದಿಂದ ಸಹಿಸಿಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಅದೃಶ್ಯನಾಗಿರುವಾತನನ್ನು ದೃಷ್ಟಿಸುವವರೋಪಾದಿ ದೃಢಚಿತ್ತರಾಗಿ ಉಳಿಯಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್‌ ಸ್ಟಡಿ ಹೇಗಿರುತ್ತೆ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
w03 2/15 ಪು. 31

ವಾಚಕರಿಂದ ಪ್ರಶ್ನೆಗಳು

ಯೆಶಾಯ 30:21ರಲ್ಲಿ, ಯೆಹೋವನ ಮಾತು “ನಿಮ್ಮ ಹಿಂದೆ” ಆಡಲಾಗುತ್ತಿದೆಯೆಂದು ಹೇಳಲಾಗಿದೆ. ಆದರೆ ಅದರ ಹಿಂದಿನ ವಚನದಲ್ಲಿ “ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ” ಎಂದು ಹೇಳುವ ಮೂಲಕ ಯೆಹೋವನು ಮುಂದೆ ಇರುವಂತೆ ತೋರಿಸಲಾಗಿದೆ. ಹೀಗೇಕೆ?

ಯೆಶಾಯ 30:​20, 21 ಹೀಗೆ ತಿಳಿಸುತ್ತದೆ: “ನಿಮ್ಮ ಬೋಧಕನು ಇನ್ನು ಮರೆಯಾಗಿರನು, ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ; ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.”

ಈ ವಚನವನ್ನು ಅಕ್ಷರಾರ್ಥವಾಗಿ ಪರಿಗಣಿಸುವಾಗ, ವಾಚಕನು ಮಹಾ ಉಪದೇಶಕನಾದ ಯೆಹೋವನನ್ನು ಅವನೆದುರು ಇರುವಂತೆ ನೋಡುತ್ತಾನಾದರೂ, ಆತನ ಧ್ವನಿಯನ್ನು ಹಿಂದಿನಿಂದ ಕೇಳಿಸಿಕೊಳ್ಳುತ್ತಾನೆ. ಆದರೆ ಈ ಪದಗಳು ಸಾಂಕೇತಿಕವಾಗಿವೆ ಮತ್ತು ಅವುಗಳನ್ನು ಸಾಂಕೇತಿಕವಾಗಿಯೇ ಅರ್ಥಮಾಡಿಕೊಳ್ಳಬೇಕು.

ವಚನ 20ರಲ್ಲಿರುವ ಅಲಂಕಾರವು, ಯಜಮಾನನ ಸೇವೆ ಮಾಡಲು, ಅವನ ಆಜ್ಞೆಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ಸದಾ ಸಿದ್ಧನಿರುವ ಒಬ್ಬ ಸೇವಕನ ಚಿತ್ರಣವನ್ನು ನಮ್ಮ ಮನಸ್ಸಿಗೆ ತರುತ್ತದೆ. ಸೇವಕನೊಬ್ಬನು ತನ್ನ ಯಜಮಾನನ ಸೂಚನೆಗಳನ್ನು ತಿಳಿದುಕೊಳ್ಳಲು ಅವನ ಕೈಯನ್ನೇ ತದೇಕಚಿತ್ತದಿಂದ ಗಮನಿಸುತ್ತಿರುವಂತೆಯೇ, ಇಂದು ಯೆಹೋವನ ಜನರು, ಆತನು ತನ್ನ ಭೂಸಂಸ್ಥೆಯ ಮೂಲಕ ಒದಗಿಸುತ್ತಿರುವ ಪ್ರಗತಿಪರ ಬೈಬಲಾಧಾರಿತ ಸೂಚನೆಗಳ ಮೇಲೆ ತಮ್ಮ ಕಣ್ಣುಗಳನ್ನು ನೆಟ್ಟಿದ್ದಾರೆ. (ಕೀರ್ತನೆ 123:​1, 2) ಹೌದು, ಯೆಹೋವನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಒದಗಿಸುತ್ತಿರುವ ಎಲ್ಲಾ ನಿರ್ದೇಶನಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ಅವರು ಸದಾ ಎಚ್ಚರವಾಗಿರುತ್ತಾರೆ.​—ಮತ್ತಾಯ 24:​45-47.

ಹಾಗಾದರೆ, ಆತನ ಸೇವಕರು ಹಿಂದಿನಿಂದ ಕೇಳಿಸಿಕೊಳ್ಳುವ ಮಾತಿನ ಕುರಿತಾಗಿ ಏನು? ಅದು ಗತಕಾಲದಲ್ಲಿ ವ್ಯಕ್ತಪಡಿಸಲ್ಪಟ್ಟ ದೇವರ ಧ್ವನಿಯಾಗಿದೆಯೆಂದು ತೀರ್ಮಾನಿಸುವುದು ಸಮಂಜಸವಾಗಿದೆ. ಅದು ಆತನ ಲಿಖಿತ ವಾಕ್ಯದಲ್ಲಿ ದಾಖಲಿಸಲ್ಪಟ್ಟಿದ್ದು, ಆತನ ‘ನಂಬಿಗಸ್ತ ಮನೆವಾರ್ತೆಯವನು’ ಅದನ್ನು ಅರ್ಥಮಾಡಿಕೊಳ್ಳುವುದನ್ನು ಸಾಧ್ಯಗೊಳಿಸುತ್ತದೆ. (ಲೂಕ 12:42) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿರುವ ‘ನಂಬಿಗಸ್ತ ಮನೆವಾರ್ತೆಯವನಿಂದ’ ತಯಾರಿಸಲ್ಪಟ್ಟ ಪ್ರಕಾಶನಗಳ ಸಹಾಯದಿಂದ, ದೇವರ ಆಧುನಿಕ ದಿನದ ಸೇವಕರು ಬೈಬಲನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿ, ಅದರ ಮೂಲತತ್ತ್ವಗಳನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವುದರ ಮೂಲಕ ಆತನ ಧ್ವನಿಯನ್ನು ಕೇಳುತ್ತಿದ್ದಾರೆ. ಮಹಾ ಉಪದೇಶಕನು ಒದಗಿಸುತ್ತಿರುವ ಸಮಯೋಚಿತ ನಿರ್ದೇಶನ ಮೇಲೆ ಆತುಕೊಳ್ಳುವ ಮೂಲಕ ಮತ್ತು ಅದನ್ನು ಲಕ್ಷ್ಯವಿಟ್ಟು ಗಮನಿಸುವ ಮೂಲಕ ಹಾಗೂ ಶತಮಾನಗಳ ಹಿಂದೆ ಬರೆಯಲ್ಪಟ್ಟ ದೇವರ ವಾಕ್ಯದ ಅಧ್ಯಯನ ಮಾಡುವ ಮೂಲಕ, ದೇವರ ಸೇವಕರು ಸಾಂಕೇತಿಕವಾಗಿ ಆತನನ್ನು ತಮ್ಮ ಎದುರಿನಲ್ಲಿ ನೋಡುತ್ತಾರೆ ಮತ್ತು ಹಿಂದಿನಿಂದ ಆತನ ಧ್ವನಿಯನ್ನು ಕೇಳಿಸಿಕೊಳ್ಳುತ್ತಾರೆ.​—ರೋಮಾಪುರ 15:4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ