ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w04 3/1 ಪು. 29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಅನುರೂಪ ಮಾಹಿತಿ
  • ಯೆಹೋವನು ನನ್ನ ಪಾಲು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
w04 3/1 ಪು. 29

ವಾಚಕರಿಂದ ಪ್ರಶ್ನೆಗಳು

ಪುರಾತನ ಇಸ್ರಾಯೇಲಿನಲ್ಲಿ ಲೇವ್ಯರಿಗೆ ಯಾವುದೇ ಬಾಧ್ಯತೆ ಇಲ್ಲದಿರುವಾಗ, ಯೆರೆಮೀಯ 32:7ರಲ್ಲಿ ತಿಳಿಸಲ್ಪಟ್ಟಿರುವ ಮೇರೆಗೆ, ಲೇವ್ಯನಾದ ಹನಮೇಲನು ತನ್ನ ಲೇವ್ಯ ಸೋದರಸಂಬಂಧಿಯಾದ ಯೆರೆಮೀಯನಿಗೆ ಹೊಲವನ್ನು ಹೇಗೆ ಮಾರಸಾಧ್ಯವಿತ್ತು?

ಲೇವ್ಯರ ವಿಷಯದಲ್ಲಿ, ಯೆಹೋವನು ಆರೋನನಿಗೆ ಹೇಳಿದ್ದು: “ಇಸ್ರಾಯೇಲ್ಯರ ದೇಶದಲ್ಲಿ ನಿನಗೆ ಸ್ವಂತಕ್ಕಾಗಿ ಭೂಸ್ಥಿತಿ ಆಗುವದಿಲ್ಲ; ಅವರೊಂದಿಗೆ [ಇಸ್ರಾಯೇಲ್ಯರೊಂದಿಗೆ] ನಿನಗೆ ಪಾಲು ಇರುವದಿಲ್ಲ.” (ಅರಣ್ಯಕಾಂಡ 18:20) ಆದರೂ ಲೇವ್ಯರಿಗೆ ವಾಗ್ದಾತ್ತ ದೇಶದ ಬೇರೆ ಬೇರೆ ಕಡೆಗಳಲ್ಲಿ 48 ಪಟ್ಟಣಗಳೂ ಅವುಗಳ ಹುಲ್ಲುಗಾವಲುಗಳೂ ನೇಮಿಸಲ್ಪಟ್ಟವು. ಯೆರೆಮೀಯನ ಸ್ವಂತ ಊರು “ಆರೋನನ ವಂಶ”ದವರಿಗೆ ನೇಮಿಸಲ್ಪಟ್ಟಿದ್ದ ನಗರಗಳಲ್ಲಿ ಒಂದಾಗಿದ್ದ ಅನಾತೋತ್‌ ಆಗಿತ್ತು.​—ಯೆಹೋಶುವ 21:13-19; ಅರಣ್ಯಕಾಂಡ 35:1-8; 1 ಪೂರ್ವಕಾಲವೃತ್ತಾಂತ 6:54, 60.

ಲೇವ್ಯರು ಧಣಿಗಳಾಗಿರುವ ಆಸ್ತಿಯು “ಮಾರಲ್ಪಟ್ಟರೆ ಬಿಡಿಸುವ ಅಧಿಕಾರ”ದ ಬಗ್ಗೆ ನಿರ್ದಿಷ್ಟ ಸಲಹೆಗಳನ್ನು ಯೆಹೋವನು ಕೊಟ್ಟನೆಂಬುದನ್ನು ನಾವು ಯಾಜಕಕಾಂಡ 25:​32-34ರಲ್ಲಿ ಕಂಡುಕೊಳ್ಳುತ್ತೇವೆ. ಲೇವ್ಯ ಕುಟುಂಬಗಳಿಗೆ ವ್ಯಕ್ತಿಗತವಾಗಿ ಆಸ್ತಿಯ ನಿರ್ದಿಷ್ಟ ಪಾಲುಗಳ ಸ್ವಾಮ್ಯ, ಫಲಾನುಭವ, ಮತ್ತು ಮಾರುವಿಕೆಯ ಸಂಬಂಧದಲ್ಲಿ ಹಕ್ಕುಬಾಧ್ಯತೆಗಳು ಇದ್ದವೆಂಬುದು ವ್ಯಕ್ತವಾಗುತ್ತದೆ. ಇದರಲ್ಲಿ ಆಸ್ತಿಯ ಮಾರುವಿಕೆ ಮತ್ತು ಮರುಖರೀದಿಯ ಹಕ್ಕೂ ಇರುವುದು ನ್ಯಾಯಸಮ್ಮತ.a ಅನೇಕ ವಿಧಗಳಲ್ಲಿ ಲೇವ್ಯರು, ಇತರ ಕುಲಗಳ ಇಸ್ರಾಯೇಲ್ಯರಂತೆಯೇ ಆಸ್ತಿಯ ಧಣಿಗಳಾಗಿದ್ದು ಅದನ್ನು ಉಪಯೋಗಿಸಿದರು.

ಪ್ರಾಯಶಃ, ಇಂತಹ ಲೇವ್ಯ ಸ್ವತ್ತಿನ ಸ್ವಾಮ್ಯವು ಪಿತ್ರಾರ್ಜಿತವಾಗಿ ಕುಟುಂಬದಲ್ಲಿ ಮುಂದಕ್ಕೆ ದಾಟಿಹೋಗುತ್ತಿತ್ತು. ಆದರೆ “ಮಾರಲ್ಪಟ್ಟರೆ ಬಿಡಿಸುವ ಅಧಿಕಾರ”ದ ಸಂಬಂಧದಲ್ಲಿ ವ್ಯವಹಾರವು ಲೇವ್ಯರ ಮಧ್ಯೆ ಮಾತ್ರ ನಡೆಯಸಾಧ್ಯವಿತ್ತು. ಇದಲ್ಲದೆ, ಜಾಮೀನಿನ ಮಾರಾಟ ಮತ್ತು ಮರುಖರೀದಿಯು ಪಟ್ಟಣಗಳೊಳಗಿದ್ದ ಸ್ವತ್ತಿಗೆ ಮಾತ್ರ ಅನ್ವಯಿಸುತ್ತಿತ್ತೆಂದು ಕಾಣುತ್ತದೆ. ಏಕೆಂದರೆ, ‘ತಮ್ಮ ಪಟ್ಟಣಗಳಿಗೆ ಸೇರಿರುವ ಹುಲ್ಲುಗಾವಲು’ ಅವರ “ಶಾಶ್ವತವಾದ ಸ್ವಾಸ್ತ್ಯ”ವಾಗಿದ್ದುದರಿಂದ ಅದನ್ನು ಮಾರಲೇಬಾರದಾಗಿತ್ತು.​—ಯಾಜಕಕಾಂಡ 25:​32, 34.

ಆದುದರಿಂದ, ಹನಮೇಲನಿಂದ ಯೆರೆಮೀಯನು ಮರುಖರೀದಿಸಿದ ಹೊಲವು, ಮರುಖರೀದಿಸಿ ದಾಟಿಸಬಲ್ಲ ರೀತಿಯದ್ದಾಗಿರಬೇಕು. ಅದು ಪಟ್ಟಣದ ಮೇರೆಯೊಳಗೆ ಇದ್ದಿರಬಹುದು. ಆ “ಹೊಲವು” ಹನಮೇಲನಿಗೆ ಸೇರಿದ್ದಾಗಿತ್ತೆಂದೂ ಅದನ್ನು “ಕೊಂಡುಕೊಳ್ಳುವ ಹಕ್ಕು” ಯೆರೆಮೀಯನಿಗೆ ಇತ್ತೆಂದೂ ಯೆಹೋವನು ತಾನೇ ಸ್ಥಿರೀಕರಿಸಿ ಹೇಳಿದನು. (ಯೆರೆಮೀಯ 32:​6, 7) ಇಸ್ರಾಯೇಲ್ಯರು ಬಾಬೆಲಿನಲ್ಲಿ ಕೆಲವು ಕಾಲ ಸೆರೆಯಲ್ಲಿದ್ದ ಬಳಿಕ ತಮ್ಮ ದೇಶದಲ್ಲಿ ತಮಗಿದ್ದ ಬಾಧ್ಯತೆಯನ್ನು ಪುನಃ ಪಡೆಯಲು ಹಿಂದಿರುಗುವರು ಎಂಬ ತನ್ನ ವಾಗ್ದಾನವನ್ನು ಸ್ಥಿರೀಕರಿಸಲಿಕ್ಕಾಗಿ ಯೆಹೋವನು ಈ ವ್ಯವಹಾರವನ್ನು ಸಾಂಕೇತಿಕವಾಗಿ ಉಪಯೋಗಿಸಿದನು.​—ಯೆರೆಮೀಯ 32:​13-15.

ಹನಮೇಲನು ಅನಾತೋತಿನಲ್ಲಿದ್ದ ಆಸ್ತಿಗೆ ಅನ್ಯಾಯವಾದ ರೀತಿಯಲ್ಲಿ ಒಡೆಯನಾದನೆಂಬುದಕ್ಕೆ ಯಾವ ಸೂಚನೆಯೂ ಇಲ್ಲ. ಮತ್ತು ಯೆರೆಮೀಯನು ಈ ಹೊಲವನ್ನು ಕೊಳ್ಳುವಂತೆ ಅವನು ಕೇಳುವ ಮೂಲಕ ಅವನು ಯೆಹೋವನ ನಿಯಮವನ್ನು ಮುರಿದನೆಂದಾಗಲಿ, ಯೆರೆಮೀಯನು ಆ ಹೊಲವನ್ನು ಕೊಳ್ಳುವಾಗ ತನ್ನ ಕೊಂಡುಕೊಳ್ಳುವ ಹಕ್ಕನ್ನು ಯೋಗ್ಯವಲ್ಲದ ರೀತಿಯಲ್ಲಿ ಉಪಯೋಗಿಸಿದನೆಂದಾಗಲಿ ಸೂಚಿಸುವ ಯಾವುದೇ ಸಂಗತಿಯಿಲ್ಲ.​—ಯೆರೆಮೀಯ 32:​8-15.

[ಪಾದಟಿಪ್ಪಣಿ]

a ಸಾ.ಶ. ಒಂದನೆಯ ಶತಮಾನದಲ್ಲಿ, ಲೇವ್ಯ ಬಾರ್ನಬನು ತನ್ನ ಸ್ವಂತ ಆಸ್ತಿಯನ್ನು ಮಾರಿ, ಅದರ ಹಣವನ್ನು ಯೆರೂಸಲೇಮಿನಲ್ಲಿದ್ದ ಯೇಸುವಿನ ಬಡ ಹಿಂಬಾಲಕರ ಸಹಾಯಾರ್ಥವಾಗಿ ದಾನವಾಗಿ ಕೊಟ್ಟನು. ಆ ಆಸ್ತಿ ಒಂದೇ ಪಲೆಸ್ತೀನದಲ್ಲಿ, ಇಲ್ಲವೆ ಸೈಪ್ರಸ್‌ (ಕುಪ್ರ)ನಲ್ಲಿದ್ದಿರಬಹುದು. ಅಥವಾ ಬಾರ್ನಬನು ಯೆರೂಸಲೇಮ್‌ ಪ್ರದೇಶದಲ್ಲಿ ಕೊಂಡುಕೊಂಡಿದ್ದ ಸಮಾಧಿ ಸ್ಥಳ ಮಾತ್ರ ಅದಾಗಿದ್ದಿರಬಹುದು.​—ಅ. ಕೃತ್ಯಗಳು 4:​34-37.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ