ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w04 4/1 ಪು. 29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಅನುರೂಪ ಮಾಹಿತಿ
  • ಬಾಳನ—ಆರಾಧನೆ ಇಸ್ರಾಯೇಲ್ಯರ ಹೃದಯಗಳನ್ನು ಸೆಳೆಯಲು ನಡೆದ ಸಂಘರ್ಷ
    ಕಾವಲಿನಬುರುಜು—1999
  • ಅವನು ಸತ್ಯಾರಾಧನೆಯನ್ನು ಸಮರ್ಥಿಸಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ದೇವರು ಪ್ರತಿಯೊಂದು ವಿಧದ ಆರಾಧನೆಯನ್ನೂ ಅಂಗೀಕರಿಸುತ್ತಾನೆಯೆ?
    ಕಾವಲಿನಬುರುಜು—1996
  • ನಿರ್ಣಾಯಕವಾದ ಕ್ರಿಯೆಗೆ ಸಮಯವು ಇದೇ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
w04 4/1 ಪು. 29

ವಾಚಕರಿಂದ ಪ್ರಶ್ನೆಗಳು

ಅರಣ್ಯಕಾಂಡ 25ನೆಯ ಅಧ್ಯಾಯದ 9ನೆಯ ವಚನವು, ಒಂದೇ ದಿನದಲ್ಲಿ 24,000 ಮಂದಿ ಇಸ್ರಾಯೇಲ್ಯರು ಸತ್ತರು ಎಂದು ಹೇಳುವಾಗ, 1 ಕೊರಿಂಥ 10ನೆಯ ಅಧ್ಯಾಯದ 8ನೆಯ ವಚನವು 23,000 ಮಂದಿ ಸತ್ತರು ಎಂದು ಏಕೆ ಹೇಳುತ್ತದೆ?

ಈ ಎರಡು ವಚನಗಳಲ್ಲಿ ಕೊಡಲ್ಪಟ್ಟಿರುವ ಸಂಖ್ಯೆಗಳಲ್ಲಿ ಇರುವ ಭಿನ್ನತೆಗೆ ಅನೇಕ ಅಂಶಗಳು ಕಾರಣವಾಗಿರಬಹುದು. ಒಂದು ಅತಿ ಸರಳವಾದ ವಿವರಣೆ ಯಾವುದೆಂದರೆ, 23,000 ಮತ್ತು 24,000ದ ನಡುವಣ ಯಾವುದೋ ಸಂಖ್ಯೆಯು ನಿಜವಾದ ಸಂಖ್ಯೆಯಾಗಿರಸಾಧ್ಯವಿದೆ. ಹೀಗೆ, ಈ ಮಧ್ಯದ ಸಂಖ್ಯೆಯನ್ನೇ ಆ ಎರಡೂ ಸಂಖ್ಯೆಗಳಿಗೆ ಹೊಂದಿಸಿಕೊಂಡು ಅದನ್ನು ಪೂರ್ಣ ಸಂಖ್ಯೆಯಾಗುವಂತೆ ಇದು ಅನುಮತಿಸುತ್ತದೆ.

ಇನ್ನೊಂದು ಸಾಧ್ಯತೆಯನ್ನು ಪರಿಗಣಿಸಿರಿ. ಅಪೊಸ್ತಲ ಪೌಲನು, ಶಿಟ್ಟೀಮಿನಲ್ಲಿ ಇಸ್ರಾಯೇಲ್ಯರು ಮಾಡಿದ ಕೃತ್ಯದ ವೃತ್ತಾಂತವನ್ನು, ಕಾಮುಕ ಜೀವನ ರೀತಿಗೆ ಕುಪ್ರಸಿದ್ಧ ನಗರವಾಗಿದ್ದ ಪುರಾತನ ಕೊರಿಂಥದಲ್ಲಿನ ಕ್ರೈಸ್ತರಿಗೆ ಒಂದು ಎಚ್ಚರಿಕೆಯ ಉದಾಹರಣೆಯಾಗಿ ಉಲ್ಲೇಖಿಸಿದನು. ಅವನು ಬರೆದುದು: “ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವಮಾಡದೆ ಇರೋಣ.” ಜಾರತ್ವವನ್ನು ಮಾಡಿದ ಕಾರಣ ಯೆಹೋವನಿಂದ ಹತಮಾಡಲ್ಪಟ್ಟವರನ್ನು ಪ್ರತ್ಯೇಕವಾಗಿ ಸೂಚಿಸುತ್ತಾ ಪೌಲನು ಆ ಸಂಖ್ಯೆ 23,000 ಆಗಿತ್ತೆಂದು ಹೇಳಿದನು.​—1 ಕೊರಿಂಥ 10:8.

ಆದರೂ, ಅರಣ್ಯಕಾಂಡ 25ನೆಯ ಅಧ್ಯಾಯವು ‘ಇಸ್ರಾಯೇಲ್ಯರು ಪೆಗೋರದ ಬಾಳನೊಂದಿಗೆ ಸೇರಿದರು. ಆದದರಿಂದ ಅವರ ಮೇಲೆ ಯೆಹೋವನು ಕೋಪಗೊಂಡನು’ (NW) ಎಂದು ಹೇಳುತ್ತದೆ. ತದನಂತರ ಯೆಹೋವನು ಮೋಶೆಗೆ ‘ಜನರ ಮುಖಂಡರೆಲ್ಲರನ್ನು’ ಹಿಡಿಸಿ ಮರಣದಂಡನೆಯನ್ನು ವಿಧಿಸುವಂತೆ ಅಪ್ಪಣೆ ನೀಡಿದನು. ಇದಕ್ಕೆ ಪ್ರತಿಯಾಗಿ ಮೋಶೆಯು ಈ ಅಪ್ಪಣೆಯನ್ನು ಪೂರೈಸುವ ಜವಾಬ್ದಾರಿಯನ್ನು ನ್ಯಾಯಾಧಿಪತಿಗಳಿಗೆ ಒಪ್ಪಿಸಿದನು. ಕಟ್ಟಕಡೆಗೆ, ಒಬ್ಬ ಮಿದ್ಯಾನ್‌ ಸ್ತ್ರೀಯನ್ನು ಪಾಳೆಯಕ್ಕೆ ಕರೆತಂದಿದ್ದ ಇಸ್ರಾಯೇಲ್ಯನನ್ನು ಕೊಲ್ಲಲಿಕ್ಕಾಗಿ ಫೀನೆಹಾಸನು ತ್ವರಿತಗತಿಯಿಂದ ಕ್ರಿಯೆಗೈದಾಗ, ‘ವ್ಯಾಧಿಯು ನಿಂತುಹೋಯಿತು.’ ಆ ವೃತ್ತಾಂತವು ಈ ಹೇಳಿಕೆಯೊಂದಿಗೆ ಕೊನೆಗೊಳ್ಳುತ್ತದೆ: “ಆ ವ್ಯಾಧಿಯಿಂದ ಇಪ್ಪತ್ತನಾಲ್ಕು ಸಾವಿರ ಮಂದಿ ಸತ್ತರು.”​—ಅರಣ್ಯಕಾಂಡ 25:1-9.

ಅರಣ್ಯಕಾಂಡ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಸಂಖ್ಯೆಯಲ್ಲಿ, ನ್ಯಾಯಾಧಿಪತಿಗಳಿಂದ ವಧಿಸಲ್ಪಟ್ಟ ‘ಜನರ ಮುಖಂಡರೂ’ ಯೆಹೋವನಿಂದ ನೇರವಾಗಿ ಹತರಾದವರೂ ಸೇರಿದ್ದರು ಎಂಬುದು ಸುವ್ಯಕ್ತ. ನ್ಯಾಯಾಧಿಪತಿಗಳಿಂದ ವಧಿಸಲ್ಪಟ್ಟವರಲ್ಲಿ ಸುಮಾರು ಒಂದು ಸಾವಿರದಷ್ಟು ಮುಖಂಡರು ಸೇರಿದ್ದು, ಇದರಿಂದಾಗಿಯೇ ಈ ಸಂಖ್ಯೆಯು 24,000ವಾಗಿ ಪರಿಣಮಿಸಿರುವ ಸಾಧ್ಯತೆಯಿದೆ. ಈ ಮುಖಂಡರು ಅಥವಾ ನಾಯಕರು ಜಾರತ್ವವನ್ನು ನಡೆಸಿದರೋ, ಉತ್ಸವ ಸಮಾರಂಭಗಳಲ್ಲಿ ಭಾಗವಹಿಸಿದರೋ ಅಥವಾ ಅಂಥ ಕೃತ್ಯಕ್ಕೆ ಒಪ್ಪಿಗೆ ನೀಡಿದರೋ ಇಲ್ಲವೋ, ಅವರೆಲ್ಲರೂ ‘ಪೆಗೋರದ ಬಾಳನೊಂದಿಗೆ ಸೇರಿದ’ ದೋಷಾಪರಾಧಕ್ಕೆ ಒಳಗಾಗಿದ್ದರು.

ಒಂದು ಬೈಬಲ್‌ ಪರಾಮರ್ಶೆ ಕೃತಿಯು, ‘ಸೇರಿಕೊಳ್ಳುವುದು’ ಎಂಬ ಪದದ ಕುರಿತು, ಇದು “ಸ್ವತಃ ಒಬ್ಬನು ಇನ್ನೊಬ್ಬ ವ್ಯಕ್ತಿಯೊಂದಿಗೆ ಬಂಧಿಸಿಕೊಳ್ಳುವುದನ್ನು” ಅರ್ಥೈಸಸಾಧ್ಯವಿದೆ ಎಂದು ವಿವರಿಸುತ್ತದೆ. ಇಸ್ರಾಯೇಲ್ಯರು ಯೆಹೋವನಿಗೆ ಸಮರ್ಪಿತರಾಗಿದ್ದ ಜನರಾಗಿದ್ದರಾದರೂ, ಅವರು ‘ಪೆಗೋರದ ಬಾಳನಿಗೆ ಸೇರಿಕೊಂಡಾಗ’ ದೇವರೊಂದಿಗಿನ ಸಮರ್ಪಿತ ಸಂಬಂಧವನ್ನು ಕಡಿದುಕೊಂಡರು. ಸುಮಾರು 700 ವರ್ಷಗಳ ಬಳಿಕ, ಪ್ರವಾದಿಯಾದ ಹೋಶೇಯನ ಮೂಲಕ ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದ್ದು: “ಅವರು ಬಾಳ್‌ಪೆಗೋರಿಗೆ ಬಂದು ಬಾಳ್‌ದೇವತೆಯ ಭಕ್ತರಾಗಿ ದೀಕ್ಷೆಗೊಂಡು ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು.” (ಹೋಶೇಯ 9:10) ಹೀಗೆ ಮಾಡಿದವರೆಲ್ಲರೂ ದೇವರ ಪ್ರತಿಕೂಲ ನ್ಯಾಯತೀರ್ಪಿಗೆ ಅರ್ಹರಾಗಿದ್ದರು. ಹೀಗೆ, ಮೋಶೆಯು ಇಸ್ರಾಯೇಲ್‌ ಜನರಿಗೆ ನೆನಪು ಹುಟ್ಟಿಸಿದ್ದು: “ಪೆಗೋರದ ಬಾಳನ ಸಂಗತಿಯಲ್ಲಿ ಯೆಹೋವನು ಮಾಡಿದ ಕಾರ್ಯವನ್ನು ನೀವು ನೋಡೇ ಇದ್ದೀರಷ್ಟೇ; ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನೂ ನಿಮ್ಮ ದೇವರಾದ ಯೆಹೋವನು ನಿಮ್ಮಲ್ಲಿರದಂತೆ ನಾಶ ಮಾಡಿದನಲ್ಲಾ.”​—ಧರ್ಮೋಪದೇಶಕಾಂಡ 4:3.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ