ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w04 12/1 ಪು. 3-4
  • ಮಾನವನಲ್ಲಿನ ಒಂದು ವಿಶಿಷ್ಟ ಗುಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾನವನಲ್ಲಿನ ಒಂದು ವಿಶಿಷ್ಟ ಗುಣ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನೀತಿಸೂತ್ರಗಳೆಂದರೇನು?
  • ಸರಿ ಮತ್ತು ತಪ್ಪು ನೀವು ಹೇಗೆ ನಿರ್ಧರಿಸಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • 7 ಒಳ್ಳೇ ಗುಣಗಳು
    ಎಚ್ಚರ!—2018
  • ಪ್ರಾಮಾಣಿಕತೆ ಅಭಿವೃದ್ಧಿಯ ಮಂತ್ರ
    ಎಚ್ಚರ!—2012
  • ಸರಿ ತಪ್ಪಿನ ಬಗ್ಗೆ ಬೈಬಲ್‌ ಕೊಡೋ ಸಲಹೆ ಈಗಲೂ ಸೂಕ್ತನಾ?
    ಇತರ ವಿಷಯಗಳು
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
w04 12/1 ಪು. 3-4

ಮಾನವನಲ್ಲಿನ ಒಂದು ವಿಶಿಷ್ಟ ಗುಣ

ಜೋಡೀ, ಸ್ಥಿರಾಸ್ತಿ ಮಾರಾಟ ವ್ಯಾಪಾರವನ್ನು ಹೊಂದಿದ್ದಾನೆ. ಒಬ್ಬ ಸ್ತ್ರೀಯು ತನ್ನ ಮೃತ ಸಹೋದರಿಯ ಮನೆವಾರ್ತೆಯ ಸಾಮಾನುಗಳನ್ನು ವರ್ಗೀಕರಿಸಿ ಮಾರುವುದರಲ್ಲಿ ಅವನು ಅವಳಿಗೆ ಸಹಾಯಮಾಡುತ್ತಿದ್ದಾನೆ. ಒಂದು ಹಳೇ ಬೆಂಕಿಗೂಡಿನ ಸುತ್ತಮುತ್ತ ಪರಿಶೋಧಿಸುತ್ತಿರುವಾಗ, ಮೀನುಗಾರಿಕೆಯ ಸಾಧನಗಳನ್ನಿಡುವ ಎರಡು ಹಳೆಯ ಪೆಟ್ಟಿಗೆಗಳು ಅವನ ಕಣ್ಣಿಗೆ ಬೀಳುತ್ತವೆ. ಅವುಗಳಲ್ಲಿ ಒಂದನ್ನು ತೆರೆದಾಗ ಅವನಿಗೆ ತನ್ನ ಕಣ್ಣುಗಳನ್ನೇ ನಂಬಲಾಗುವುದಿಲ್ಲ. ಅದರೊಳಗೆ ಲೋಹದ ತೆಳುಹಾಳೆಯಿಂದ ಕಟ್ಟಿಡಲ್ಪಟ್ಟಿರುವ 100 ಡಾಲರಿನ ನೋಟುಗಳಿವೆ​—ಒಟ್ಟು 82,000 ಡಾಲರ್‌ಗಳ ನಗದು ಅದರಲ್ಲಿದೆ! ಜೋಡೀ ಕೋಣೆಯಲ್ಲಿ ಒಬ್ಬನೇ ಇದ್ದಾನೆ. ಅವನೀಗ ಏನು ಮಾಡಬೇಕು? ಸದ್ದಿಲ್ಲದೆ ಆ ಪೆಟ್ಟಿಗೆಯನ್ನು ಮಾಯಮಾಡಿಬಿಡಬೇಕೋ ಅಥವಾ ತನಗೆ ಈ ಹಣ ಸಿಕ್ಕಿತೆಂದು ಅದನ್ನು ಆ ಸ್ತ್ರೀಗೆ ಕೊಟ್ಟುಬಿಡಬೇಕೋ?

ಜೋಡೀಯ ಸಂದಿಗ್ಧ ಪರಿಸ್ಥಿತಿಯು, ನಮ್ಮನ್ನು ಪಶುಪ್ರಾಣಿಗಳಿಂದ ಪ್ರತ್ಯೇಕಿಸುವ ಒಂದು ವಿಶಿಷ್ಟ ಗುಣವನ್ನು ಎತ್ತಿತೋರಿಸುತ್ತದೆ. ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ ಹೇಳುವುದು: “ಏನನ್ನು ಮಾಡಬೇಕು ಅಥವಾ ಏನನ್ನು ಮಾಡಬಾರದು ಎಂಬುದರ ಕುರಿತು ವಿಚಾರಪ್ರೇರಕ ಪ್ರಶ್ನೆಗಳನ್ನು ಕೇಳುವುದು ಮಾನವನಲ್ಲಿನ ವಿಶೇಷ ಸ್ವಭಾವಗಳಲ್ಲಿ ಒಂದಾಗಿದೆ.” ಹಸಿದಿರುವ ನಾಯಿಯೊಂದು ಮೇಜಿನ ಮೇಲೆ ಇಡಲ್ಪಟ್ಟಿರುವ ಮಾಂಸದ ಒಂದು ತುಂಡನ್ನು ನೋಡುವುದಾದರೆ, ಅದನ್ನು ತಿನ್ನಬೇಕೋ ತಿನ್ನಬಾರದೋ ಎಂದು ಅದು ಒಂದು ಕ್ಷಣವೂ ಯೋಚಿಸಲಿಕ್ಕಿಲ್ಲ. ಆದರೆ ಜೋಡೀಗೆ ತನ್ನ ನಿರ್ಧಾರದ ಹಿಂದಿರುವ ನೈತಿಕ ಅಂಶವನ್ನು ತೂಗಿನೋಡುವ ಸಾಮರ್ಥ್ಯವಿದೆ. ಅವನು ಹಣವನ್ನು ಇಟ್ಟುಕೊಳ್ಳುವುದಾದರೆ ಕದಿಯುತ್ತಿದ್ದಾನೆ, ಆದರೆ ಅವನು ಸಿಕ್ಕಿಬೀಳುವುದು ತೀರ ಅಸಂಭವನೀಯ. ಆ ಹಣವು ಅವನದ್ದಲ್ಲ; ಆದರೂ, ಇದರ ಅಸ್ತಿತ್ವವೇ ಆ ಸ್ತ್ರೀಗೆ ತಿಳಿದಿರುವುದಿಲ್ಲ. ಮಾತ್ರವಲ್ಲದೆ, ಜೋಡೀ ವಾಸಿಸುತ್ತಿರುವ ಸಮುದಾಯದ ಹೆಚ್ಚಿನ ಜನರು, ಅವನೇನಾದರೂ ಆ ಹಣವನ್ನು ಆ ಸ್ತ್ರೀಗೆ ಹಿಂದಿರುಗಿಸುವುದಾದರೆ ಅವನನ್ನು ಮುಟ್ಠಾಳನೆಂದು ಪರಿಗಣಿಸುವರು.

ಜೋಡೀಯ ಪರಿಸ್ಥಿತಿಯಲ್ಲಿ ನೀವಿರುತ್ತಿದ್ದಲ್ಲಿ ಏನು ಮಾಡುತ್ತಿದ್ದಿರಿ? ನಿಮ್ಮ ಉತ್ತರವು ನೀವು ಯಾವ ನೀತಿಸೂತ್ರಕ್ಕನುಸಾರ ಜೀವಿಸಲು ನಿರ್ಧರಿಸಿದ್ದೀರೋ ಅದರ ಮೇಲೆ ಅವಲಂಬಿಸಿರುವುದು.

ನೀತಿಸೂತ್ರಗಳೆಂದರೇನು?

ನೀತಿಸೂತ್ರಗಳು, ನೈತಿಕವಾಗಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸುವ ಮಟ್ಟಗಳಾಗಿವೆ. ಗ್ರೀಕ್‌ ಮತ್ತು ಲ್ಯಾಟಿನ್‌ ಭಾಷೆಗಳಲ್ಲಿ ಇದು, ಜನರ ಜೀವನರೀತಿಯಲ್ಲಿ ಸಂಪ್ರದಾಯ ಮತ್ತು ಪದ್ಧತಿಗಿದ್ದ ಅಧಿಕಾರಕ್ಕೆ ಸೂಚಿಸುತ್ತದೆ.

ಸುಮಾರು ವರ್ಷಗಳಿಂದ, ಜನರು ಅನುಸರಿಸಬೇಕಾದ ನೀತಿಸೂತ್ರ ಮಟ್ಟಗಳನ್ನು ಸಾಮಾನ್ಯವಾಗಿ ಧರ್ಮವೇ ನಿರ್ಧರಿಸುತ್ತಾ ಬಂದಿದೆ. ದೇವರ ವಾಕ್ಯವಾದ ಬೈಬಲು ಅನೇಕ ಸಮಾಜಗಳಲ್ಲಿ ಪ್ರಭಾವಕಾರಿ ಶಕ್ತಿಯಾಗಿ ಇದ್ದುಬಂದಿದೆ. ಆದರೂ, ಲೋಕವ್ಯಾಪಕವಾಗಿ ಹೆಚ್ಚು ಹೆಚ್ಚು ಜನರು ವಿಭಿನ್ನ ಧಾರ್ಮಿಕ ಮಟ್ಟಗಳನ್ನು ಅಪ್ರಾಯೋಗಿಕವೆಂದು ಮತ್ತು ಬೈಬಲಿನ ನೈತಿಕ ಸಂಹಿತೆಯನ್ನು ಹಳತಾದದ್ದೆಂದು ಬದಿಗೊತ್ತಿದ್ದಾರೆ. ಇದರ ಸ್ಥಾನವನ್ನು ಯಾವುದು ಭರ್ತಿಮಾಡಿತು? “ಐಹಿಕ ಬುದ್ಧಿವಂತಿಕೆಯು . . . ಈ ಮುಂಚೆ ಧರ್ಮದ ಕೈಯಲ್ಲಿದ್ದ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ,” ಎಂದು ವ್ಯಾಪಾರೀ ಜೀವನದಲ್ಲಿನ ನೀತಿಸೂತ್ರಗಳು (ಇಂಗ್ಲಿಷ್‌) ಎಂಬ ಪುಸ್ತಕವು ಹೇಳಿಕೆ ನೀಡುತ್ತದೆ. ಧಾರ್ಮಿಕ ಮೂಲಗಳಿಗೆ ತಿರುಗುವ ಬದಲು, ನೀತಿಸೂತ್ರಗಳಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಅನೇಕರು ಐಹಿಕ ನಿಪುಣರ ಮಾರ್ಗದರ್ಶನಕ್ಕಾಗಿ ಹುಡುಕುತ್ತಾರೆ. ಜೀವಿನೀತಿಶಾಸ್ತ್ರಜ್ಞ ಪಾಲ್‌ ಮಕ್‌ನೀಲ್‌ ಹೇಳುವುದು: “ನೀತಿಸೂತ್ರಗಳನ್ನು ನಿರ್ಧರಿಸುವವರು ಐಹಿಕ ಪುರೋಹಿತರಾಗಿದ್ದಾರೆ ಎಂದು ನನಗೆ ತೋರುತ್ತದೆ. . . . ಜನರು ಈ ಮುಂಚೆ ಧರ್ಮಕ್ಕೆ ಸಂಬಂಧಿಸಿ ಮಾತಾಡಿದ ವಿಷಯಗಳನ್ನು ಈಗ ನೀತಿಸೂತ್ರಗಳಿಗೆ ಸಂಬಂಧಿಸಿ ಮಾತಾಡುತ್ತಾರೆ.”

ನೀವು ಕಷ್ಟಕರ ತೀರ್ಮಾನಗಳನ್ನು ಎದುರಿಸುವಾಗ, ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಹೇಗೆ ವಿವೇಚಿಸುತ್ತೀರಿ? ನಿಮ್ಮ ನೀತಿಸೂತ್ರ ಮಟ್ಟಗಳು ದೇವರಿಂದ ನಿರ್ಧರಿಸಲ್ಪಡುತ್ತವೋ ಅಥವಾ ಸ್ವತಃ ನಿಮ್ಮಿಂದಲೋ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ