ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w05 7/15 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಅನುರೂಪ ಮಾಹಿತಿ
  • ಯಾರಿಗೆಲ್ಲ ಪುನರುತ್ಥಾನವಾಗುವುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಪುನರುತ್ಥಾನದ ನಿರೀಕ್ಷೆಗಿರುವ ಶಕ್ತಿ
    ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
  • ಷೀಓಲ್‌ ಮತ್ತು ಹೇಡೀಸ್‌ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಏಕೈಕ ಪರಿಹಾರ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
w05 7/15 ಪು. 31

ವಾಚಕರಿಂದ ಪ್ರಶ್ನೆಗಳು

ಪುರಾತನ ಇಸ್ರಾಯೇಲಿನ ಅರಸನಾಗಿದ್ದ ಸೊಲೊಮೋನನು ತನ್ನ ವೃದ್ಧಾಪ್ಯದಲ್ಲಿ ದೇವರಿಗೆ ಅಪನಂಬಿಗಸ್ತನಾಗಿ ಪರಿಣಮಿಸಿದ್ದರಿಂದ, ಅವನ ಪುನರುತ್ಥಾನವಾಗುವುದಿಲ್ಲ ಎಂಬ ತೀರ್ಮಾನಕ್ಕೆ ನಾವು ಬರಸಾಧ್ಯವಿದೆಯೋ?​—⁠1 ಅರಸುಗಳು 11:​3-10.

ನಿಸ್ಸಂದೇಹವಾಗಿಯೂ ಪುನರುತ್ಥಾನವಾಗಲಿರುವ ಕೆಲವು ನಂಬಿಗಸ್ತ ಸ್ತ್ರೀಪುರುಷರ ಹೆಸರುಗಳನ್ನು ಬೈಬಲು ಪಟ್ಟಿಮಾಡುತ್ತದಾದರೂ, ಬೈಬಲಿನಲ್ಲಿ ಯಾರ ಹೆಸರುಗಳು ಕೊಡಲ್ಪಟ್ಟಿವೆಯೊ ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪುನರುತ್ಥಾನದ ಪ್ರತೀಕ್ಷೆಗಳ ಕುರಿತು ಅದು ನಿಖರವಾಗಿ ಹೇಳಿಕೆ ನೀಡುವುದಿಲ್ಲ. (ಇಬ್ರಿಯ 11:1-40) ಸೊಲೊಮೋನನ ವಿಷಯದಲ್ಲಾದರೋ, ಅವನು ಮರಣಪಟ್ಟಾಗ ಏನು ಸಂಭವಿಸಿತು ಎಂಬುದನ್ನು, ಕೆಲವು ನಂಬಿಗಸ್ತರು ಮರಣಪಟ್ಟಾಗ ಏನು ಸಂಭವಿಸಿತು ಎಂಬುದರೊಂದಿಗೆ ಹೋಲಿಸುವ ಮೂಲಕ ನಾವು ದೇವರ ನ್ಯಾಯತೀರ್ಪಿನ ಕುರಿತಾದ ಗ್ರಹಿಕೆಯನ್ನು ಪಡೆಯಸಾಧ್ಯವಿದೆ.

ಮೃತಜನರಿಗೆ ಕೇವಲ ಎರಡು ಸಾಧ್ಯತೆಗಳಿವೆ ಎಂದು ಶಾಸ್ತ್ರವಚನಗಳು ತಿಳಿಸುತ್ತವೆ​—⁠ಒಂದು ತಾತ್ಕಾಲಿಕವಾಗಿ ಅಸ್ತಿತ್ವದಲ್ಲಿಲ್ಲದೇ ಹೋಗುವ ಸ್ಥಿತಿ ಮತ್ತು ಮತ್ತೊಂದು ನಿತ್ಯಮರಣದ ಸ್ಥಿತಿ. ಪುನರುತ್ಥಾನಕ್ಕೆ ಅನರ್ಹರಾಗಿ ತೀರ್ಪು ವಿಧಿಸಲ್ಪಡುವವರು ‘ಗೆಹೆನಕ್ಕೆ’ (NW) ಅಥವಾ ‘ಬೆಂಕಿಯ ಕೆರೆಗೆ’ ದೊಬ್ಬಲ್ಪಡುವರು. (ಮತ್ತಾಯ 5:22; ಮಾರ್ಕ 9:47, 48; ಪ್ರಕಟನೆ 20:14) ಇವರಲ್ಲಿ ಪ್ರಥಮ ಮಾನವ ದಂಪತಿಯಾದ ಆದಾಮಹವ್ವರು, ವಿಶ್ವಾಸಘಾತುಕನಾದ ಇಸ್ಕರಿಯೋತ ಯೂದನು ಮತ್ತು ದೇವರು ನ್ಯಾಯತೀರ್ಪನ್ನು ವಿಧಿಸಿದಾಗ ಯಾರು ಮರಣಪಟ್ಟರೋ ಅಂಥವರು, ಅಂದರೆ ನೋಹನ ದಿನಗಳಲ್ಲಿದ್ದ ಜನರು ಹಾಗೂ ಸೊದೋಮ್‌ ಮತ್ತು ಗೊಮೋರ ಪಟ್ಟಣಗಳ ನಿವಾಸಿಗಳು ಸೇರಿರುವರು.a ಪುನರುತ್ಥಾನದ ಅನುಗ್ರಹವುಳ್ಳವರು, ಮರಣಪಟ್ಟಾಗ ಮಾನವಕುಲದ ಸಾಮಾನ್ಯ ಸಮಾಧಿಯಾಗಿರುವ ಷೀಓಲ್‌ಗೆ ಅಥವಾ ಹೇಡೀಸ್‌ಗೆ ಹೋಗುತ್ತಾರೆ. ಅವರ ಭವಿಷ್ಯತ್ತಿನ ಕುರಿತು ಮಾತಾಡುತ್ತಾ ಬೈಬಲ್‌ ಹೀಗೆ ಹೇಳುತ್ತದೆ: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [“ಹೇಡೀಸ್‌ ಸಹ,” NW] ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.”​—⁠ಪ್ರಕಟನೆ 20:⁠13.

ಹೀಗಿರುವುದರಿಂದ, ಇಬ್ರಿಯ 11ನೆಯ ಅಧ್ಯಾಯದಲ್ಲಿ ಯಾರ ಕುರಿತು ಮಾತಾಡಲಾಗಿದೆಯೋ ಆ ನಂಬಿಗಸ್ತರು ಷೀಓಲ್‌ನಲ್ಲಿ ಅಥವಾ ಹೇಡೀಸ್‌ನಲ್ಲಿದ್ದಾರೆ ಮತ್ತು ಪುನರುತ್ಥಾನಕ್ಕಾಗಿ ಕಾಯುತ್ತಿದ್ದಾರೆ. ಇವರಲ್ಲಿ ದೇವರ ನಿಷ್ಠಾವಂತ ಸೇವಕರಾಗಿದ್ದ ಅಬ್ರಹಾಮ, ಮೋಶೆ ಮತ್ತು ದಾವೀದರು ಒಳಗೂಡಿದ್ದಾರೆ. ಅವರ ಮರಣದ ಕುರಿತು ಬೈಬಲ್‌ ಹೇಗೆ ಮಾತಾಡುತ್ತದೆಂಬುದನ್ನು ಈಗ ಪರಿಗಣಿಸಿರಿ. ಯೆಹೋವನು ಅಬ್ರಹಾಮನಿಗೆ ಹೇಳಿದ್ದು: “ನೀನಂತೂ ಸಮಾಧಾನದೊಡನೆ ಪಿತೃಗಳ ಬಳಿಗೆ ಸೇರುವಿ; ತುಂಬಾ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ.” (ಆದಿಕಾಂಡ 15:15) ಯೆಹೋವನು ಮೋಶೆಗೆ ಹೇಳಿದ್ದು: “ನೀನು ಮೃತನಾಗಿ ನಿನ್ನ ಪಿತೃಗಳ ಸಂಗಡ ಸೇರುವಿ.” (ಧರ್ಮೋಪದೇಶಕಾಂಡ 31:​16, NIBV) ಸೊಲೊಮೋನನ ತಂದೆಯಾಗಿದ್ದ ದಾವೀದನ ಕುರಿತು ಬೈಬಲ್‌ ಹೇಳುವುದು: “ಅನಂತರ ದಾವೀದನು ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿ ಮಾಡಿದರು.” (1 ಅರಸುಗಳು 2:10) ಹೀಗೆ, ‘ಪಿತೃಗಳ ಬಳಿಗೆ ಸೇರು’ ಎಂಬ ಅಭಿವ್ಯಕ್ತಿಯು, ಆ ವ್ಯಕ್ತಿಯು ಷೀಓಲ್‌ಗೆ ಹೋದನು ಎಂದು ಹೇಳುವಂಥ ಇನ್ನೊಂದು ವಿಧವಾಗಿದೆ.

ಸೊಲೊಮೋನನು ಮರಣಪಟ್ಟಾಗ ಏನು ಸಂಭವಿಸಿತು? ಬೈಬಲ್‌ ಹೀಗೆ ಉತ್ತರಿಸುತ್ತದೆ: “ಅವನು ಯೆರೂಸಲೇಮಿನಲ್ಲಿದ್ದುಕೊಂಡು ಎಲ್ಲಾ ಇಸ್ರಾಯೇಲ್ಯರನ್ನು ನಾಲ್ವತ್ತು ವರುಷ ಆಳಿದನಂತರ ಪಿತೃಗಳ ಬಳಿಗೆ ಸೇರಿದನು; ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು.” (1 ಅರಸುಗಳು 11:42, 43) ಆದುದರಿಂದ, ಸೊಲೊಮೋನನು ಷೀಓಲ್‌ ಅಥವಾ ಹೇಡೀಸ್‌ನಲ್ಲಿದ್ದಾನೆ ಮತ್ತು ಅಲ್ಲಿಂದ ಅವನು ಪುನರುತ್ಥಾನಗೊಳಿಸಲ್ಪಡುವನು ಎಂಬ ತೀರ್ಮಾನಕ್ಕೆ ಬರುವುದು ಸಮಂಜಸವಾದದ್ದಾಗಿದೆ.

ಈ ತೀರ್ಮಾನದ ಸೂಚಿತಾರ್ಥವೇನೆಂದರೆ, ಯಾರ ಕುರಿತಾಗಿ ಶಾಸ್ತ್ರವಚನಗಳು ನಿರ್ದಿಷ್ಟವಾಗಿ ‘ಅವರು ಪಿತೃಗಳ ಬಳಿಗೆ ಸೇರಿದರು’ ಎಂದು ಹೇಳುತ್ತವೋ ಆ ಇತರರೂ ಪುನರುತ್ಥಾನಗೊಳಿಸಲ್ಪಡುವ ಸಾಧ್ಯತೆಯಿದೆ. ವಾಸ್ತವದಲ್ಲಿ, ಸೊಲೊಮೋನನ ಬಳಿಕ ಆಳಿದಂಥ ಅರಸರಲ್ಲಿ ಅನೇಕರು ಅಪನಂಬಿಗಸ್ತರಾಗಿದ್ದರೂ, ಅವರ ಬಗ್ಗೆ ಇದೇ ರೀತಿ ತಿಳಿಸಲಾಗಿದೆ. ಇದು ನಂಬಲಸಾಧ್ಯವಾದ ವಿಚಾರವೇನಲ್ಲ, ಏಕೆಂದರೆ ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗಲಿದೆ.’ (ಅ. ಕೃತ್ಯಗಳು 24:15) ಆದರೆ “ಸಮಾಧಿಗಳಲ್ಲಿರುವವರೆಲ್ಲರು” ಎಬ್ಬಿಸಲ್ಪಟ್ಟ ಬಳಿಕವೇ, ಯಾರಿಗೆ ಪುನರುತ್ಥಾನದ ಅನುಗ್ರಹವು ದೊರಕಿದೆ ಎಂಬುದು ನಮಗೆ ಖಂಡಿತವಾಗಿಯೂ ಗೊತ್ತಾಗುವುದು ಎಂಬುದಂತೂ ನಿಶ್ಚಯ. (ಯೋಹಾನ 5:28, 29) ಆದುದರಿಂದ, ಪುರಾತನ ಕಾಲದ ಯಾವುದೇ ನಿರ್ದಿಷ್ಟ ವ್ಯಕ್ತಿಯ ಪುನರುತ್ಥಾನದ ಕುರಿತು ಖಡಾಖಂಡಿತವಾಗಿ ಪ್ರತಿಪಾದಿಸುವುದಕ್ಕೆ ಬದಲಾಗಿ, ಯೆಹೋವನ ಲೋಪರಹಿತ ನಿರ್ಣಯದಲ್ಲಿ ಭರವಸೆಯಿಡುತ್ತಾ ನಾವು ಕಾಯೋಣ.

[ಪಾದಟಿಪ್ಪಣಿ]

a ಜೂನ್‌ 1, 1988ರ ಕಾವಲಿನಬುರುಜು (ಇಂಗ್ಲಿಷ್‌) ಸಂಚಿಕೆಯ 30-1ನೇ ಪುಟಗಳನ್ನು ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ