ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w08 1/1 ಪು. 25
  • ಅಸಮಾನನಾದ ತಂದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಸಮಾನನಾದ ತಂದೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಅನುರೂಪ ಮಾಹಿತಿ
  • ಯೆಹೋವ ನಮ್ಮನ್ನು ತುಂಬ ಪ್ರೀತಿ ಮಾಡೋ ಅಪ್ಪ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ನೀವೊಬ್ಬ ಒಳ್ಳೇ ತಂದೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ನೀವು ಯೆಹೋವನನ್ನು ನಿಮ್ಮ ತಂದೆಯಾಗಿ ವೀಕ್ಷಿಸುತ್ತೀರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ‘ಮಗನು ತಂದೆಯನ್ನು ತಿಳಿಯಪಡಿಸಲು ಇಷ್ಟಪಡುತ್ತಾನೆ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
w08 1/1 ಪು. 25

ದೇವರ ಸಮೀಪಕ್ಕೆ ಬನ್ನಿರಿ

ಅಸಮಾನನಾದ ತಂದೆ

ಮತ್ತಾಯ 3:16, 17

“ತಂದೆ.” ಇದು, ಮಾನವರಲ್ಲಿ ಅತ್ಯಂತ ಆಳವಾದ ಭಾವನೆಗಳನ್ನು ಹುಟ್ಟಿಸುವ ಕೆಲವೇ ಪದಗಳಲ್ಲಿ ಒಂದು. ತನ್ನ ಮಕ್ಕಳನ್ನು ನಿಜವಾಗಿಯೂ ಪ್ರೀತಿಸುವ ತಂದೆಯೊಬ್ಬನು ಅವರು ಅಭಿವೃದ್ಧಿ ಹೊಂದುವಂತೆ ನೆರವಾಗುತ್ತಾನೆ. ಸಕಾರಣದಿಂದಲೇ ಬೈಬಲು ಯೆಹೋವ ದೇವರನ್ನು “ತಂದೆ” ಎಂದು ಸಂಬೋಧಿಸುತ್ತದೆ. (ಮತ್ತಾಯ 6:10) ಯೆಹೋವನು ಯಾವ ರೀತಿಯ ತಂದೆಯಾಗಿದ್ದಾನೆ? ಅದನ್ನು ಉತ್ತರಿಸಲಿಕ್ಕಾಗಿ, ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಯೆಹೋವನು ಯೇಸುವಿಗೆ ಹೇಳಿದ ಮಾತುಗಳನ್ನು ನಾವು ಸ್ವಲ್ಪ ಪರೀಕ್ಷಿಸೋಣ. ಎಷ್ಟೆಂದರೂ ತಂದೆಯೊಬ್ಬನು ತನ್ನ ಮಕ್ಕಳೊಂದಿಗೆ ಮಾತನಾಡುವ ವಿಧವು, ಅವನು ಯಾವ ತೆರನಾದ ತಂದೆ ಎಂಬುದರ ಕುರಿತು ಹೆಚ್ಚನ್ನು ತಿಳಿಸುತ್ತದೆ.

ಸರಿಸುಮಾರು ಸಾ. ಶ. 29ರ ಅಕ್ಟೋಬರದಲ್ಲಿ ಯೇಸು ದೀಕ್ಷಾಸ್ನಾನ ಪಡೆದುಕೊಳ್ಳಲಿಕ್ಕಾಗಿ ಯೊರ್ದನ್‌ ಹೊಳೆಗೆ ಹೋದನು. ಅಲ್ಲಿ ಏನು ಸಂಭವಿಸಿತ್ತೆಂದು ಬೈಬಲ್‌ ಹೀಗೆ ವರದಿಸುತ್ತದೆ: “ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ—ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.”a (ಮತ್ತಾಯ 3:16, 17) ಸ್ವತಃ ಯೆಹೋವನು ನುಡಿದ ಆ ಕೋಮಲ ಮಾತುಗಳು ಆತನು ಯಾವ ತೆರನಾದ ತಂದೆ ಎಂಬುದರ ಕುರಿತು ನಮಗೆ ಹೆಚ್ಚನ್ನು ತಿಳಿಸುತ್ತವೆ. ತನ್ನ ಮಗನಿಗೆ ಯೆಹೋವನು ಆ ಮಾತುಗಳಲ್ಲಿ ವ್ಯಕ್ತಪಡಿಸಿದ ಮೂರು ಸಂಗತಿಗಳನ್ನು ಗಮನಿಸಿರಿ.

ಮೊದಲಾಗಿ, “ಈತನು ನನ್ನ ಮಗನು” ಎಂದು ಹೇಳುವ ಮೂಲಕ, “ನಿನ್ನ ತಂದೆಯಾಗಿರಲು ನಾನು ಹೆಮ್ಮೆಪಡುತ್ತೇನೆ” ಎಂದು ಯೆಹೋವನು ಕಾರ್ಯತಃ ಹೇಳುತ್ತಿದ್ದನು. ಮಕ್ಕಳಲ್ಲಿ ಬೇರೆಯವರಿಂದ ಒಪ್ಪಲ್ಪಡುವ ಮತ್ತು ಗಮನಿಸಲ್ಪಡುವ ಹಂಬಲವು ಸಹಜವಾಗಿ ಇದೆ. ಈ ಹಂಬಲವನ್ನು ವಿವೇಚನೆಯುಳ್ಳ ತಂದೆಯು ತೃಪ್ತಿಪಡಿಸಲು ಪ್ರಯತ್ನಿಸುತ್ತಾನೆ. ಮಕ್ಕಳಿಗೆ ಆಶ್ವಾಸನೆ ಕೊಡುವ ಅಗತ್ಯವಿದೆ ಏನೆಂದರೆ ಅವರು ಕುಟುಂಬದಲ್ಲಿ ಮೌಲ್ಯವುಳ್ಳ ವೈಯಕ್ತಿಕ ಸದಸ್ಯರಾಗಿ ಗಣಿಸಲ್ಪಡುತ್ತಾರೆ ಎಂಬುದಾಗಿ. ಯೇಸು ಪ್ರಾಪ್ತ ವಯಸ್ಕನಾಗಿದ್ದಾಗ್ಯೂ ಅಂಥ ಮಾನ್ಯತೆಯನ್ನು ತಂದೆಯಿಂದ ಪಡೆದಾಗ ಆತನಿಗೆ ಹೇಗನಿಸಿದ್ದಿರಬೇಕೆಂದು ತುಸು ಊಹಿಸಿರಿ!

ಎರಡನೆಯದಾಗಿ, ತನ್ನ ಮಗನನ್ನು ‘ಪ್ರಿಯನು’ ಎಂದು ಸಂಬೋಧಿಸುವ ಮೂಲಕ ಯೆಹೋವನು ಯೇಸುವಿಗೆ ತನ್ನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದನು. ಒಂದರ್ಥದಲ್ಲಿ, ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಆ ತಂದೆ ಹೇಳುತ್ತಿದ್ದನು. ಒಬ್ಬ ಒಳ್ಳೆಯ ತಂದೆಯು ಮಕ್ಕಳನ್ನು ತಾನು ತುಂಬ ಪ್ರೀತಿಸುತ್ತೇನೆಂದು ಮಾತಿನಲ್ಲಿ ಹೇಳುತ್ತಾ ವ್ಯಕ್ತಪಡಿಸುತ್ತಾನೆ. ಸಹಜವಾದ ವಾತ್ಸಲ್ಯದಿಂದ ಕೂಡಿದ ಅಂಥ ಮಾತುಗಳು ಮಕ್ಕಳು ಅಭಿವೃದ್ಧಿ ಹೊಂದುವಂತೆ ನೆರವಾಗುತ್ತವೆ. ತನಗಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ ತಂದೆಯ ಸ್ವರವನ್ನು ಕೇಳಿಸಿಕೊಂಡದ್ದು ಯೇಸುವಿನ ಹೃದಯವನ್ನು ಅದೆಷ್ಟು ಸ್ಪರ್ಶಿಸಿದ್ದಿರಬೇಕು!

ಮೂರನೇದಾಗಿ, “ನಾನು ಮೆಚ್ಚಿದ್ದೇನೆ” ಎಂಬ ಮಾತುಗಳ ಮೂಲಕ ಯೆಹೋವನು ತನ್ನ ಮಗನಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದನು. ಅದು ‘ಮಗನೇ, ನೀನು ಮಾಡಿದ ವಿಷಯವು ನನ್ನನ್ನು ಸಂತೋಷಪಡಿಸಿದೆ’ ಎಂದು ಯೆಹೋವನು ಹೇಳುತ್ತಿದ್ದನೋ ಎಂಬಂತಿತ್ತು. ತನ್ನ ಮಕ್ಕಳು ಹೇಳುವ ಮತ್ತು ಮಾಡುವ ಒಳ್ಳೇ ವಿಷಯಗಳು ತನ್ನನ್ನು ಖುಷಿಪಡಿಸುತ್ತವೆಂದು ತಿಳಿಸಲು ಪ್ರೀತಿಯುಳ್ಳ ತಂದೆಯು ಸಂದರ್ಭಗಳನ್ನು ಹುಡುಕುತ್ತಿರುತ್ತಾನೆ. ಹೆತ್ತವರ ಮೆಚ್ಚುಗೆಯ ಮಾತುಗಳಿಂದ ಮಕ್ಕಳು ಧೈರ್ಯ ಮತ್ತು ಸ್ಥೈರ್ಯವನ್ನು ಪಡಕೊಳ್ಳುತ್ತಾರಲ್ಲಾ. ತನ್ನ ತಂದೆಯ ಮೆಚ್ಚುಗೆ ತನ್ನ ಮೇಲಿದೆಯೆಂದು ಕೇಳಿಸಿಕೊಂಡಾಗ ಯೇಸುವಿಗೆ ಬಹಳಷ್ಟು ಉತ್ತೇಜನವು ದೊರೆತಿರಬೇಕು ನಿಶ್ಚಯ!

ನಿಜವಾಗಿಯೂ ಯೆಹೋವನು ಅಸಮಾನನಾದ ತಂದೆ. ಅಂಥ ಒಬ್ಬ ತಂದೆಗಾಗಿ ನಿಮ್ಮ ಹೃದಯವು ಹಂಬಲಿಸುವುದಿಲ್ಲವೇ? ಹಾಗಿದ್ದಲ್ಲಿ, ಯೆಹೋವನೊಂದಿಗೆ ಅಂಥ ಒಂದು ಸಂಬಂಧಕ್ಕಾಗಿ ನೀವು ಎಟಕಬಲ್ಲಿರಿ ಎಂದು ತಿಳುಕೊಂಡವರಾಗಿ ಸಾಂತ್ವನವನ್ನು ಪಡೆದುಕೊಳ್ಳಿರಿ. ನಂಬಿಕೆಯನ್ನಿಟ್ಟು ನೀವು ಆತನ ಕುರಿತು ಕಲಿಯುವುದಾದರೆ ಮತ್ತು ಆತನ ಚಿತ್ತವನ್ನು ಮಾಡಲು ಯಥಾರ್ಥವಾಗಿ ಪ್ರಯತ್ನಿಸುವುದಾದರೆ ಆತನು ಪ್ರತಿವರ್ತನೆ ತೋರಿಸುವನು. ಬೈಬಲ್‌ ಅನ್ನುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಊಹನೆಗೂ ಮೀರಿದ ಈ ಸರ್ವೋತ್ತಮ ತಂದೆಯಾದ ಯೆಹೋವ ದೇವರೊಂದಿಗಿನ ಅತ್ಯಾಪ್ತ ಬಂಧಕ್ಕಿಂತ ಬೇರೆ ಯಾವುದಾದರೂ ನಿಮ್ಮನ್ನು ಹೆಚ್ಚು ಸುರಕ್ಷಿತರನ್ನಾಗಿ ಮಾಡಸಾಧ್ಯವೋ? ಸಾಧ್ಯವಿಲ್ಲ ಖಂಡಿತ! (w08 1/1)

[ಪಾದಟಿಪ್ಪಣಿ]

a ಲೂಕನ ಸುವಾರ್ತೆಯಲ್ಲಿರುವ ಸಮಾನ ವೃತ್ತಾಂತಕ್ಕೆ ಅನುಸಾರವಾಗಿ, ವೈಯಕ್ತಿಕ ಸರ್ವನಾಮವಾದ “ನೀನು” ಎಂಬುದನ್ನು ಬಳಸುತ್ತಾ ಯೆಹೋವನು ಅಂದದ್ದು: “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ.”—ಲೂಕ 3:22.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ