ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 10/1 ಪು. 28
  • ದೇವರ ಗುಣವರ್ಣನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಗುಣವರ್ಣನೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಅನುರೂಪ ಮಾಹಿತಿ
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಯೆಹೋವನ ಅದ್ಭುತ ಗುಣಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಸತ್ಯ ದೇವರು ಯಾರು?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • “ಆಹಾ, ಈತನೇ ನಮ್ಮ ದೇವರು”
    ಯೆಹೋವನ ಸಮೀಪಕ್ಕೆ ಬನ್ನಿರಿ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 10/1 ಪು. 28

ದೇವರ ಸಮೀಪಕ್ಕೆ ಬನ್ನಿರಿ

ದೇವರ ಗುಣವರ್ಣನೆ

ವಿಮೋಚನಕಾಂಡ 34:6, 7

ದೇವರನ್ನು ನೀವು ಹೇಗೆ ವರ್ಣಿಸುವಿರಿ? ಆತನ ವ್ಯಕ್ತಿತ್ವ, ಗುಣ, ವ್ಯವಹರಿಸುವ ರೀತಿಯ ಕುರಿತು? ದೇವರು ತನ್ನ ಕುರಿತು ತಿಳಿಸುವಂತೆ ನೀವು ಆತನನ್ನು ಕೇಳಶಕ್ತರಾಗುತ್ತೀರಿ ಎಂದು ನೆನಸಿ. ಆಗ ಆತನು ತನ್ನ ಸ್ವಂತ ಗುಣಗಳನ್ನು ವರ್ಣಿಸುತ್ತಾನೆ. ಇದೇ ಅನುಭವವು ಪ್ರವಾದಿಯಾದ ಮೋಶೆಗೂ ಆಯಿತು. ಆಗ ಏನು ಸಂಭವಿಸಿತ್ತೋ ಅದನ್ನು ದಾಖಲಿಸಲು ಅವನು ಪ್ರೇರಿಸಲ್ಪಟ್ಟದ್ದಕ್ಕಾಗಿ ನಾವು ಕೃತಜ್ಞರು.

“ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು” ಎಂದು ಮೋಶೆ ಸೀನಾಯಿ ಬೆಟ್ಟದ ಮೇಲೆ ಯೆಹೋವ ದೇವರಿಗೆ ವಿನಂತಿಸಿದನು. (ವಿಮೋಚನಕಾಂಡ 33:18) ಮಾರಣೇದಿನ ಪ್ರವಾದಿಗೆ ದೇವರ ಮಹಿಮೆಯನ್ನು ಕ್ಷಣಕಾಲ ವೀಕ್ಷಿಸುವ ಭಾಗ್ಯವು ದೊರೆಯಿತು.a ಆ ಮಹಿಮಾಭರಿತ ದರ್ಶನದಲ್ಲಿ ತಾನೇನನ್ನು ಕಂಡನೋ ಅದರ ಸವಿವರ ವರ್ಣನೆಯನ್ನು ಮೋಶೆ ಕೊಡಲಿಲ್ಲ. ಬದಲಾಗಿ ಅದಕ್ಕಿಂತಲೂ ಎಷ್ಟೋ ಮಹತ್ವದ ವಿಷಯವನ್ನು ಅಂದರೆ ದೇವರು ಏನಂದನೋ ಅದನ್ನು ದಾಖಲಿಸಿದನು. ಯೆಹೋವನು ಆಗ ಹೇಳಿದ ಮಾತುಗಳನ್ನು ನಾವೀಗ ಪರಿಗಣಿಸೋಣ. ಅದು ವಿಮೋಚನಕಾಂಡ 34:6, 7ರಲ್ಲಿ ಇದೆ.

“ಕನಿಕರವೂ ದಯೆಯೂ ಉಳ್ಳ ದೇವರು” (ವಚನ 6) ಎಂಬದೇ ಯೆಹೋವನು ತನ್ನ ಕುರಿತು ತಿಳಿಯಪಡಿಸಿದ ಮೊದಲನೆಯ ವಿಷಯ. ಒಬ್ಬ ವಿದ್ವಾಂಸರಿಗನುಸಾರ, “ಕನಿಕರ” ಎಂದು ಅನುವಾದಿಸಲಾದ ಹೀಬ್ರು ಪದವು “ತಂದೆಗೆ ತನ್ನ ಮಕ್ಕಳ ಮೇಲಿರುವ ಕನಿಕರದಂಥ ದೇವರ ಕೋಮಲ ಕರುಣೆಯನ್ನು ಸೂಚಿಸುತ್ತದೆ.” “ದಯೆ” ಎಂದು ಭಾಷಾಂತರಿಸಲಾದ ಹೀಬ್ರು ಪದವು “ಕೊರತೆಯಲ್ಲಿರುವವರಿಗೆ ಸಹಾಯಮಾಡಲು ಒಬ್ಬನ ಹೃತ್ಪೂರ್ವಕ ಅಪೇಕ್ಷೆಯನ್ನು ಸೂಚಿಸುವ” ಒಂದು ಕ್ರಿಯಾಪದಕ್ಕೆ ಸಂಬಂಧಿಸಿದೆ. ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಸಾಕಿಸಲಹುತ್ತಾರೊ ಹಾಗೆಯೇ ಯೆಹೋವನು ತನ್ನ ಭಕ್ತರನ್ನು ಕೋಮಲ ಪ್ರೀತಿ ಮತ್ತು ಆಳವಾದ ಚಿಂತನೆಯಿಂದ ಪರಾಮರಿಸುತ್ತಾನೆ ಎಂದು ನಾವು ತಿಳಿಯುವುದೇ ಆತನ ಅಪೇಕ್ಷೆ ಎಂಬುದು ಸ್ಪಷ್ಟ.—ಕೀರ್ತನೆ 103:8, 13.

ಬಳಿಕ ಯೆಹೋವನು ತಾನು “ದೀರ್ಘಶಾಂತನೂ” ಎಂದು (ವಚನ 6) ಹೇಳುತ್ತಾನೆ. ಆತನು ತನ್ನ ಭೂಸೇವಕರ ಮೇಲೆ ಆಗಾಗ್ಗೆ ಸಿಟ್ಟುಗೊಳ್ಳುವವನಲ್ಲ, ಬದಲಾಗಿ ಆತನು ಅವರೊಂದಿಗೆ ತಾಳ್ಮೆಯಿಂದಿದ್ದಾನೆ, ಅವರ ಕುಂದುಕೊರತೆಗಳನ್ನು ಸಹಿಸಿಕೊಂಡು ತಮ್ಮ ಪಾಪಪೂರ್ಣ ಮಾರ್ಗಗಳನ್ನು ಬದಲಾಯಿಸಿಕೊಳ್ಳುವಂತೆ ಸಮಯವನ್ನು ಕೊಟ್ಟಿದ್ದಾನೆ.—2 ಪೇತ್ರ 3:9.

ದೇವರು ಮುಂದುವರಿಸುತ್ತಾ ತಾನು “ಪ್ರೀತಿಪೂರ್ವಕ ದಯೆ ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನು” ಎಂದು ಹೇಳುತ್ತಾನೆ. (ವಚನ 6, NW) ಪ್ರೀತಿಪೂರ್ವಕ ದಯೆ ಅಥವಾ ನಿಷ್ಠಾವಂತ ಪ್ರೀತಿಯು ಯೆಹೋವನು ತನ್ನ ಮತ್ತು ತನ್ನ ಜನರ ನಡುವೆ ಹೊಸೆಯುವ ಅಮೂಲ್ಯ ಬಂಧ. ಈ ಅಮೂಲ್ಯ ಬಂಧವು ಸುದೃಢವೂ ಎಂದೂ ಬಿದ್ದುಹೋಗದ್ದೂ ಆಗಿದೆ. (ಧರ್ಮೋಪದೇಶಕಾಂಡ 7:9) ಯೆಹೋವನು ಸತ್ಯದ ಮೂಲನೂ ಆಗಿದ್ದಾನೆ. ಆತನು ಮೋಸಮಾಡುವವನೂ ಅಲ್ಲ ಮೋಸಹೋಗುವವನೂ ಅಲ್ಲ. ಆತನು “ಸತ್ಯದ ದೇವರು” ಆಗಿರಲಾಗಿ ಆತನು ಹೇಳುವ ಎಲ್ಲಾ ವಿಷಯಗಳಲ್ಲಿ ನಮಗೆ ಪೂರ್ಣ ನಂಬಿಕೆಯಿರಸಾಧ್ಯವಿದೆ. ಭವಿಷ್ಯತ್ತಿಗಾಗಿ ಆತನು ಕೊಟ್ಟಿರುವ ವಾಗ್ದಾನಗಳಲ್ಲಿ ಸಹ.—ಕೀರ್ತನೆ 31:5 NW.

ನಾವು ತಿಳಿದಿರಬೇಕೆಂದು ಯೆಹೋವನು ಬಯಸುವ ಇನ್ನೊಂದು ದೊಡ್ಡ ಸತ್ಯವು ಯಾವುದೆಂದರೆ ಆತನು “ದೋಷಾಪರಾಧಪಾಪಗಳನ್ನು ಕ್ಷಮಿಸುವವನು” ಎಂಬುದೇ. (ವಚನ 7) ಪಶ್ಚಾತ್ತಾಪಪಡುವ ಪಾಪಿಗಳನ್ನು ‘ಕ್ಷಮಿಸಲು’ ಆತನು ಸದಾ ಸಿದ್ಧನು. (ಕೀರ್ತನೆ 86:5) ಅದೇ ಸಮಯದಲ್ಲಿ ಯೆಹೋವನು ಕೆಟ್ಟತನವನ್ನು ಗಮನಿಸದೇ ಇರುವ ದೇವರಲ್ಲ. ಏಕೆಂದರೆ ತಾನು “[ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು” ಎಂದು ಆತನು ವಿವರಿಸುತ್ತಾನೆ. (ವಚನ 7) ಪರಿಶುದ್ಧನೂ ನ್ಯಾಯವಂತನೂ ಆದ ದೇವರು ಬೇಕುಬೇಕೆಂದು ಪಾಪಮಾಡುವ ಪಾಪಿಗಳನ್ನಾದರೋ ದಂಡಿಸದೆ ಬಿಡಲಾರನು. ಇಂದೋ ಮುಂದೋ ಅವರು ತಮ್ಮ ಪಾಪಪೂರ್ಣ ಕೃತ್ಯಗಳ ದುಷ್ಪರಿಣಾಮಗಳನ್ನು ಅನುಭವಿಸಿಯೇ ತೀರಬೇಕು.

ಯೆಹೋವನು ಈ ರೀತಿ ತನ್ನ ಗುಣಗಳನ್ನು ವರ್ಣಿಸಿರುವುದು ಏಕೆಂದರೆ, ನಾವು ಆತನನ್ನು ತಿಳಿಯಕ್ಕಾಗಿ ಹಾಗೂ ಆತನ ವ್ಯಕ್ತಿತ್ವ ಮತ್ತು ಮಾರ್ಗಗಳ ಪರಿಚಯವನ್ನು ಪಡೆಯಲಿಕ್ಕಾಗಿಯೇ. ಆತನ ಸುಂದರವಾದ ಗುಣಗಳ ಕುರಿತು ಹೆಚ್ಚನ್ನು ಕಲಿಯಲು ನೀವು ಪ್ರಚೋದಿತರಾಗುವುದಿಲ್ಲವೇ? (w09 5/1)

[ಪಾದಟಿಪ್ಪಣಿ]

a ಮೋಶೆಯು ಯೆಹೋವನನ್ನು ಮುಖಾಮುಖಿಯಾಗಿ ನೋಡಿರಲಿಲ್ಲ, ಯಾಕಂದರೆ ಯಾವ ಮಾನವನೂ ದೇವರನ್ನು ನೋಡಿ ಬದುಕಿ ಉಳಿಯಲಾರನು. (ವಿಮೋಚನಕಾಂಡ 33:20) ಆದುದರಿಂದ ಯೆಹೋವನು ತನ್ನ ಮಹಿಮೆಯ ಆ ದರ್ಶನವನ್ನು ಕೊಟ್ಟು ಮೋಶೆಯೊಂದಿಗೆ ಮಾತಾಡಿದನು. ಆತನದನ್ನು ದೇವದೂತನ ಮೂಲಕ ಮಾಡಿದ್ದನೆಂಬುದು ವ್ಯಕ್ತ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ