ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 10/1 ಪು. 13
  • ನಿಮಗೆ ತಿಳಿದಿತ್ತೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ತಿಳಿದಿತ್ತೋ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಅನುರೂಪ ಮಾಹಿತಿ
  • ನೀವು ಹೇಳುವ “ಆಮೆನ್‌” ಯೆಹೋವನಿಗೆ ತುಂಬ ಮುಖ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಆಮೆನ್‌—ಅದರ ಅರ್ಥ ಮತ್ತು ಉಪಯೋಗ
    ಕಾವಲಿನಬುರುಜು—1993
  • ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಗಣ್ಯಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 10/1 ಪು. 13

ನಿಮಗೆ ತಿಳಿದಿತ್ತೋ?

ಪ್ರಾರ್ಥನೆಯ ಕೊನೆಯಲ್ಲಿ ಜನರು “ಆಮೆನ್‌” ಎಂದು ಹೇಳುವುದೇಕೆ?

‘ಆ-ಮೆನ್‌’ ಎಂಬದು ಹೀಬ್ರು ಪದ. ಇಂಗ್ಲಿಷ್‌ ಮತ್ತು ಗ್ರೀಕ್‌ ಭಾಷೆಯ ಬೈಬಲ್‌ಗಳಲ್ಲಿ ಇದನ್ನು “ಆಮೆನ್‌” ಎಂದೇ ಲಿಪ್ಯಂತರ ಮಾಡಲಾಗಿದೆ. ಕನ್ನಡ ಬೈಬಲ್‌ನಲ್ಲೂ ಹೆಚ್ಚಿನ ಕಡೆ “ಆಮೆನ್‌” ಎಂದೇ ಇದೆ. ಈ ಅಭಿವ್ಯಕ್ತಿಯ ಮೂಲಾರ್ಥವು “ಹಾಗೆಯೇ ಆಗಲಿ” ಅಥವಾ “ನಿಶ್ಚಯವಾಗಿ ಆಗಲಿ” ಎಂದಾಗಿದೆ. ಒಂದು ಪ್ರಾರ್ಥನೆ, ಪ್ರಮಾಣವಚನ, ಆಶೀರ್ವಚನ ಅಥವಾ ಶಾಪವನ್ನು ಆಲಿಸುವವರು “ಆಮೆನ್‌” ಎಂದು ಹೇಳುವಾಗ, ಅದರಲ್ಲಿ ಹೇಳಲಾದ ಭಾವನೆಗಳಿಗೆ ಮತ್ತು ವಿಚಾರಗಳಿಗೆ ತಮ್ಮ ಸಮ್ಮತಿ ಇದೆ ಎಂಬುದನ್ನು ಸೂಚಿಸುತ್ತಾರೆ. ಒಂದು ಪರಾಮರ್ಶೆ ಕೃತಿಗನುಸಾರ, “ಆ ಪದವು ನಿಶ್ಚಿತತೆ, ಸತ್ಯತೆ, ನಂಬಿಗಸ್ತಿಕೆ ಮತ್ತು ನಿಸ್ಸಂಶಯವನ್ನು ಸೂಚಿಸುತ್ತದೆ.” ಬೈಬಲ್‌ ಸಮಯಗಳಲ್ಲಿ ಆ ಅಭಿವ್ಯಕ್ತಿಯು, ಅದನ್ನು ಉಪಯೋಗಿಸುವವರನ್ನು ಒಂದು ಪ್ರಮಾಣವಚನಕ್ಕೆ ಅಥವಾ ಕರಾರಿಗೆ ಹಾಗೂ ಅದರ ಪರಿಣಾಮಗಳಿಗೆ ಕಾನೂನುಬದ್ಧವಾಗಿ ಹೊಣೆಗಾರರನ್ನಾಗಿಯೂ ಮಾಡುತ್ತಿತ್ತು.—ಧರ್ಮೋಪದೇಶಕಾಂಡ 27:15-26.

ಯೇಸು ಸಾರುವಾಗ ಮತ್ತು ಬೋಧಿಸುವಾಗ ತನ್ನ ಕೆಲವು ಹೇಳಿಕೆಗಳ ಆರಂಭದಲ್ಲಿ “ಆಮೆನ್‌” ಎಂಬ ಪದವನ್ನು ಉಪಯೋಗಿಸಿದನು. ಹಾಗೆ ಹೇಳುವ ಮೂಲಕ ತಾನು ಹೇಳಲಿಕ್ಕಿದ್ದ ವಿಷಯಗಳು ಸಂಪೂರ್ಣ ಭರವಸಾರ್ಹವೆಂದು ಒತ್ತಿಹೇಳಿದನು. ಆ ಸಂದರ್ಭಗಳಲ್ಲಿ ಯೇಸು ಬಳಸಿದ “ಆಮೆನ್‌” ಎಂಬ ಗ್ರೀಕ್‌ ಪದವು “ನಿಜವಾಗಿ” ಅಥವಾ “ಸತ್ಯವಾಗಿ” ಎಂದು ಭಾಷಾಂತರಿಸಲ್ಪಟ್ಟಿದೆ. (ಮತ್ತಾಯ 5:18; 6:2, 5 BSI) ಯೋಹಾನನ ಸುವಾರ್ತೆಯಿಡೀ ಯೇಸು ಎರೆಡೆರಡು ಬಾರಿ ಆಮೆನ್‌ ಎಂದು ಹೇಳಿರುವುದನ್ನು ನಾವು ಕಾಣುತ್ತೇವೆ. ಅದನ್ನು “ನಿಜನಿಜವಾಗಿ” ಎಂದು ಭಾಷಾಂತರಿಸಲಾಗಿದೆ. (ಯೋಹಾನ 1:51) ಈ ರೀತಿಯಲ್ಲಿ ಯೇಸು ಉಪಯೋಗಿಸಿದ “ಆಮೆನ್‌” ಎಂಬದು ಬೈಬಲಿನಲ್ಲಿ ಬೇರೆಲ್ಲಿಯಾಗಲಿ ಅಥವಾ ಇತರ ಧಾರ್ಮಿಕ ಸಾಹಿತ್ಯದಲ್ಲಾಗಲಿ ಕಂಡುಬರುವುದಿಲ್ಲ. ಅದು ಸುವಾರ್ತಾ ವೃತ್ತಾಂತಗಳಲ್ಲಿರುವ ಯೇಸುವಿನ ಮಾತುಗಳಲ್ಲಿ ಮಾತ್ರ ಕಂಡುಬರುತ್ತದೆ.

ಕ್ರೈಸ್ತ ಗ್ರೀಕ್‌ ಶಾಸ್ತ್ರದಲ್ಲಿ “ಆಮೆನ್‌” ಎಂಬ ಬಿರುದು ಸ್ವತಃ ಯೇಸುವಿಗೇ ಅನ್ವಯಿಸಲಾಗಿದೆ. ಯಾಕೆಂದರೆ “ನಂಬಿಗಸ್ತನೂ ಸತ್ಯ ಸಾಕ್ಷಿಯೂ” ಆದ ಆತನ ಸಾಕ್ಷಿ ಸತ್ಯವೆಂದು ಸೂಚಿಸಲಿಕ್ಕಾಗಿ.—ಪ್ರಕಟನೆ 3:14. (w09 6/1)

[ಪುಟ 13ರಲ್ಲಿರುವ ಚಿತ್ರ]

“ಆಮೆನ್‌,” ಪ್ರಕಟನೆ 3:14. ದ ಕೋಡೆಕ್ಸ್‌ ಆ್ಯಲೆಕ್ಸಾಂಡ್ರಿನಸ್‌, ಕ್ರಿ.ಶ. 5ನೇ ಶತಮಾನ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ