ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 1/1 ಪು. 9
  • ಹಣವೇ ಸಂತೋಷಕ್ಕೆ ಮೂಲವೇ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಣವೇ ಸಂತೋಷಕ್ಕೆ ಮೂಲವೇ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಅನುರೂಪ ಮಾಹಿತಿ
  • ಮೊದಲಾಗಿ ನಾವು ರಾಜ್ಯವನ್ನು ಹುಡುಕಿದೆವು
    ಕಾವಲಿನಬುರುಜು—1994
  • ಪೀಡಿತರಿಗೆ ಎಂದಾದರೂ ಪರಿಹಾರವಿರುವುದೊ?
    ಕಾವಲಿನಬುರುಜು—1997
  • ಜನರನ್ನು ಎಚ್ಚರಿಸಲು ಇನ್ನೂ ಹೆಚ್ಚನ್ನು ಮಾಡಬಲ್ಲಿರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಹೃದಯಗಳಲ್ಲಿರುವ ಪ್ರೀತಿಯ ಆಜ್ಞೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 1/1 ಪು. 9

ಹಣವೇ ಸಂತೋಷಕ್ಕೆ ಮೂಲವೇ?

ಸೋನ್ಯಾ ಹುಟ್ಟಿದ್ದು ಸ್ಪೇನ್‌ ದೇಶದಲ್ಲಿ. ಚಿಕ್ಕದರಲ್ಲಿ ತನ್ನ ತಾಯಿಯೊಟ್ಟಿಗೆ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹೋಗುತ್ತಿದ್ದಳು. ದೊಡ್ಡವಳಾದ ಮೇಲೆ ಇಂಗ್ಲೆಂಡ್‌ನ ಲಂಡನ್‌ಗೆ ಹೋಗಿ ಕಾಲಾನಂತರ ಹಣಕಾಸಿನ ದೊಡ್ಡ ಉದ್ಯಮದಲ್ಲಿ ಕೆಲಸಕ್ಕೆ ಸೇರಿಕೊಂಡಳು.

ಸೋನ್ಯಾಳಿಗೆ ತನ್ನ ಉದ್ಯೋಗವೇ ಉಸಿರಾಗಿತ್ತು. ಕೈತುಂಬ ಸಂಪಾದನೆ ಇತ್ತು. ಗ್ರಾಹಕರೊಂದಿಗೆ ಅವಳು ದೊಡ್ಡ ಮೊತ್ತದ ವ್ಯವಹಾರ ನಡೆಸುತ್ತಿದ್ದಳು. ಆ ಕೆಲಸದಲ್ಲಿ ಅವಳಿಗೆ ಎಲ್ಲಿಲ್ಲದ ಹುಮ್ಮಸ್ಸು. ಯಶಸ್ಸಿನ ಶಿಖರವನ್ನೂ ತಲಪಿದಳು. ಹಗಲಿರುಳೆನ್ನದೆ ದಿನಕ್ಕೆ 18 ತಾಸು ಕೆಲಸಮಾಡುತ್ತಿದ್ದಳು. ಕೆಲವೊಮ್ಮೆ ರಾತ್ರಿ ಅವಳು ಮಲಗುತ್ತಿದ್ದದ್ದು ಎರಡು ಮೂರು ತಾಸು ಅಷ್ಟೇ. ಆದರೆ ಒಂದು ದಿನ ಥಟ್ಟನೆ ಎಲ್ಲವೂ ಕುಸಿದುಬಿತ್ತು. ಅವಳಿಗೆ ತೀವ್ರ ಲಕ್ವ ಹೊಡೆಯಿತು. ಅವಳ ಒತ್ತಡಭರಿತ ಜೀವನಶೈಲಿ ಬಹುಶಃ ಇದಕ್ಕೆ ಕಾರಣವಾಗಿತ್ತು. ಆಗ ಅವಳಿಗೆ ಬರೀ 30 ವಯಸ್ಸು.

ಸೋನ್ಯಾಳ ದೇಹದ ಒಂದು ಪಾರ್ಶ್ವಕ್ಕೆ ಲಕ್ವ ಬಡಿದಿತ್ತು. ಅವಳು ಪುನಃ ಮಾತಾಡಲು ಶಕ್ತಳಾಗುವಳೆಂದು ಡಾಕ್ಟರರಿಗೂ ಭರವಸೆಯಿರಲಿಲ್ಲ. ಅವಳ ಆರೈಕೆಮಾಡಲೆಂದು ತಾಯಿ ಕೂಡಲೇ ಇಂಗ್ಲೆಂಡ್‌ಗೆ ಬಂದರು. ಅವಳು ಪುನಃ ನಡೆಯಲು ಶಕ್ತಳಾದಾಗ ತಾಯಿ ಅವಳಿಗೆ, “ನಾನು ಸಭಾ ಕೂಟಗಳಿಗೆ ಹೋಗಬೇಕು. ನಿನ್ನನ್ನು ಒಬ್ಬಳೇ ಬಿಟ್ಟು ಹೋಗಲಿಕ್ಕಾಗಲ್ಲ, ನೀನೂ ನನ್ನೊಟ್ಟಿಗೆ ಬಾ” ಎಂದು ಹೇಳಿದರು. ಅದಕ್ಕೆ ಸೋನ್ಯಾ ಒಪ್ಪಿದಳು. ಫಲಿತಾಂಶ?

ಅವಳು ನೆನಪಿಸಿಕೊಳ್ಳುವುದು: “ಕೂಟದಲ್ಲಿ ಕೇಳಿದ್ದೆಲ್ಲವೂ ಸತ್ಯವೆಂದು ಅನಿಸಿತು. ಅದು ತುಂಬ ಚೆನ್ನಾಗಿತ್ತು. ನಾನು ರಾಜ್ಯ ಸಭಾಗೃಹಕ್ಕೆ ಪ್ರಥಮ ಸಲ ಹೋದಾಗ ನನ್ನನ್ನು ಮಾತಾಡಿಸಿದವರಲ್ಲಿ ಒಬ್ಬರೊಂದಿಗೆ ಬೈಬಲ್‌ ಅಧ್ಯಯನಕ್ಕೆ ಸಂತೋಷದಿಂದ ಒಪ್ಪಿಕೊಂಡೆ. ನನ್ನ ಹಿಂದಿನ ಒಡನಾಡಿಗಳು ನನ್ನನ್ನು ಭೇಟಿಮಾಡುವುದನ್ನು ನಿಲ್ಲಿಸಿಬಿಟ್ಟರು. ಆದರೆ ನನಗೆ ಸಿಕ್ಕಿದ ಹೊಸ ಮಿತ್ರರು ಅಪಾರ ಪ್ರೀತಿ ಮತ್ತು ಕಾಳಜಿ ತೋರಿಸಿದರು.”

ಕ್ರಮೇಣ ಸೋನ್ಯಾ ಪುನಃ ಮಾತಾಡಲು ಶಕ್ತಳಾದಳು. ಆಧ್ಯಾತ್ಮಿಕ ಪ್ರಗತಿ ಮಾಡಿ ಒಂದು ವರ್ಷದೊಳಗೆ ದೀಕ್ಷಾಸ್ನಾನ ಪಡೆದಳು. ಅವಳ ಹೊಸ ಸ್ನೇಹಿತರಲ್ಲಿ ಅನೇಕರು ಪೂರ್ಣ ಸಮಯದ ಕ್ರೈಸ್ತ ಶುಶ್ರೂಷಕರಾಗಿದ್ದರು. ಅವರ ಸಂತೋಷವನ್ನು ಗಮನಿಸಿ, ‘ನಾನೂ ಅವರಂತೆ ಇರಬೇಕು. ಯೆಹೋವ ದೇವರಿಗೆ ಸರ್ವೋತ್ತಮವಾದುದ್ದನ್ನು ಕೊಡಬೇಕು’ ಎಂದು ಸೋನ್ಯಾ ನೆನಸಿದಳು. ಈಗ ಅವಳು ಸಹ ಪೂರ್ಣ ಸಮಯದ ಶುಶ್ರೂಷಕಳಾಗಿದ್ದಾಳೆ.

ಸೋನ್ಯಾ ತನ್ನ ಅನುಭವದಿಂದ ಕಲಿತಿರುವ ಪಾಠವೇನು? “ನಾನು ಬೇಕಾದಷ್ಟು ಹಣ ಸಂಪಾದಿಸುತ್ತಿದ್ದೆ. ಆದರೆ ನನ್ನ ಕೆಲಸದಲ್ಲಿದ್ದ ಒತ್ತಡ ಹಾಗೂ ಅಭದ್ರ ಅನಿಸಿಕೆ ನನ್ನ ನೆಮ್ಮದಿ, ಸಂತೋಷವನ್ನು ಕಸಿದುಕೊಂಡಿತ್ತು. ಸ್ವರ್ಗೀಯ ತಂದೆಯಾದ ಯೆಹೋವ ದೇವರೊಂದಿಗಿನ ಒಳ್ಳೇ ಸಂಬಂಧವೇ ಜೀವನದಲ್ಲಿ ಮುಖ್ಯ ಎಂದು ನನಗೀಗ ಮನವರಿಕೆಯಾಗಿದೆ. ಈಗ ನಾನು ನಿಜಕ್ಕೂ ಸಂತೋಷಿತಳು.”

“ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ ಮತ್ತು ಕೆಲವರು ಈ ಪ್ರೇಮವನ್ನು ಬೆನ್ನಟ್ಟುತ್ತಾ ನಂಬಿಕೆಯಿಂದ ದಾರಿತಪ್ಪಿದವರಾಗಿ ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ ತಿವಿಸಿಕೊಂಡಿದ್ದಾರೆ” ಎಂದು ಅಪೊಸ್ತಲ ಪೌಲನು ಬರೆದನು. (1 ತಿಮೊಥೆಯ 6:10) ಈ ಮಾತುಗಳು ನೂರಕ್ಕೆ ನೂರು ಸತ್ಯವೆಂದು ಸೋನ್ಯಾ ತನ್ನ ಸ್ವಂತ ಅನುಭವದಿಂದ ಹೇಳಬಲ್ಲಳು. (w09 09/01)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ