ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 8/15 ಪು. 22
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಅನುರೂಪ ಮಾಹಿತಿ
  • ದೇವಪ್ರಭುತ್ವ ವಾರ್ತಗಳು
    1993 ನಮ್ಮ ರಾಜ್ಯದ ಸೇವೆ
  • 2021 ಅಂಕಿ ಅಂಶಗಳು
    2021 ಲೋಕವ್ಯಾಪಕ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
  • 2017 ಒಟ್ಟು ಸಂಖ್ಯೆ
    2017 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
  • 2018 ಒಟ್ಟು ಸಂಖ್ಯೆ
    2018 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 8/15 ಪು. 22

ವಾಚಕರಿಂದ ಪ್ರಶ್ನೆಗಳು

ವಾರ್ಷಿಕ ಸೇವಾ ವರದಿಯಲ್ಲಿರುವ ಅಂಕಿಅಂಶಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?

ಪ್ರತಿವರ್ಷ ಫೆಬ್ರವರಿ ತಿಂಗಳ ನಮ್ಮ ರಾಜ್ಯ ಸೇವೆಯಲ್ಲಿ ಬರುವ ಸೇವಾ ವರದಿಯನ್ನು ನಾವು ಕಾತರದಿಂದ ಮುನ್ನೋಡುತ್ತೇವೆ. ಯೆಹೋವನ ಜನರು ಭೂಸುತ್ತಲೂ ಸಾರುವ ಹಾಗೂ ಬೋಧಿಸುವ ಕೆಲಸದಲ್ಲಿ ಮಾಡಿರುವ ಸಾಧನೆಯನ್ನು ನೋಡುವಾಗ ಮೈನವಿರೇಳುತ್ತದೆ. ಆದರೆ ವರದಿಯ ಪೂರ್ಣ ಪ್ರಯೋಜನ ಪಡೆಯಬೇಕಾದರೆ ಅಲ್ಲಿ ಕೊಡಲಾಗಿರುವ ಅಂಕಿಅಂಶಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ ಇವುಗಳನ್ನು ಗಮನಿಸಿ:

ಸೇವಾ ವರ್ಷ. ಇದು ಒಂದು ವರ್ಷದ ಸೆಪ್ಟೆಂಬರ್‌ನಿಂದ ಮುಂದಿನ ವರ್ಷದ ಆಗಸ್ಟ್‌ವರೆಗಿನ ಅವಧಿ. ರಾಜ್ಯ ಸೇವೆಯಲ್ಲಿ ಯಾವಾಗಲೂ ಹಿಂದಿನ ಸೇವಾ ವರ್ಷದ ವರದಿ ಇರುತ್ತದೆ. ಅಂದರೆ 2011ರ ಫೆಬ್ರವರಿ ರಾಜ್ಯ ಸೇವೆಯಲ್ಲಿ ಇಸವಿ 2010ರ ಸೇವಾ ವರ್ಷದ ವರದಿಯಿರುತ್ತದೆ. ಆ ವರದಿ 2009ರ ಸೆಪ್ಟೆಂಬರ್‌ 1ರಿಂದ 2010ರ ಆಗಸ್ಟ್‌ 31ರ ವರೆಗಿನ ಅವಧಿಯದ್ದಾಗಿರುತ್ತದೆ.

ಪ್ರಚಾರಕರ ಉಚ್ಚಾಂಕ ಮತ್ತು ಸರಾಸರಿ ಪ್ರಚಾರಕರು. ಪ್ರಚಾರಕರ ಮೊತ್ತದಲ್ಲಿ ರಾಜ್ಯ ಘೋಷಕರಾಗಿರಲು ಅರ್ಹತೆ ಹೊಂದಿರುವ ಎಲ್ಲ ದೀಕ್ಷಾಸ್ನಾನ ಪಡೆದ ಹಾಗೂ ಪಡೆದಿಲ್ಲದ ಸಾಕ್ಷಿಗಳು ಸೇರಿದ್ದಾರೆ. “ಪ್ರಚಾರಕರ ಉಚ್ಚಾಂಕ” ಎನ್ನುವುದು, ಒಂದು ಸೇವಾ ವರ್ಷದ ಯಾವ ತಿಂಗಳಿನಲ್ಲಿ ಹೆಚ್ಚು ಪ್ರಚಾರಕರು ವರದಿ ಹಾಕಿದ್ದಾರೆ ಎಂದು ಸೂಚಿಸುತ್ತದೆ. ಇದರಲ್ಲಿ ಹಿಂದಿನ ತಿಂಗಳ ವರದಿ ಕೊಡಲು ಮರೆತು ಅದನ್ನು ಮುಂದಿನ ತಿಂಗಳು ಕೊಟ್ಟ ಪ್ರಚಾರಕರೂ ಸೇರಿರುತ್ತಾರೆ. ಹಾಗಾಗಿ ಪ್ರಚಾರಕರ ಉಚ್ಚಾಂಕದ ಮೊತ್ತದಲ್ಲಿ ಒಬ್ಬ ಪ್ರಚಾರಕನನ್ನೇ ಎರಡು ಬಾರಿ ಲೆಕ್ಕಿಸಿರುವ ಸಾಧ್ಯತೆಯಿದೆ. ಆದರೆ ಆ ತಿಂಗಳು ಶುಶ್ರೂಷೆಯಲ್ಲಿ ಭಾಗವಹಿಸಿಯೂ ವರದಿ ಕೊಡಲು ಮರೆತಿರುವ ಪ್ರಚಾರಕರು ಈ ಮೊತ್ತದಲ್ಲಿ ಸೇರಿರುವುದಿಲ್ಲ. ಆದುದರಿಂದ ಸೇವಾ ವರದಿಯನ್ನು ಪ್ರತಿ ತಿಂಗಳ ಕೊನೆಯಲ್ಲಿ ಕೊಡಲು ಮರೆಯದಿರುವುದು ತುಂಬ ಪ್ರಾಮುಖ್ಯ. “ಸರಾಸರಿ ಪ್ರಚಾರಕರು” ಎನ್ನುವುದು ಇಡೀ ಸೇವಾ ವರ್ಷದಲ್ಲಿ ವರದಿಮಾಡಿರುವ ಪ್ರಚಾರಕರ ಒಟ್ಟು ಮೊತ್ತವನ್ನು 12ರಿಂದ ಭಾಗಿಸಿ ತೆಗೆದ ಮೊತ್ತವಾಗಿದೆ.

ಒಟ್ಟು ತಾಸು. 2011ರ ನಮ್ಮ ರಾಜ್ಯ ಸೇವೆಯಲ್ಲಿ ಕೊಟ್ಟಿರುವ ವರದಿಯ ಪ್ರಕಾರ ಯೆಹೋವನ ಸಾಕ್ಷಿಗಳು 160 ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ಕ್ಷೇತ್ರ ಸೇವೆಯಲ್ಲಿ ವ್ಯಯಿಸಿದರು. ಈ ಮೊತ್ತದಲ್ಲಿ ನಾವು ಆರಾಧನೆಯಲ್ಲಿ ಕಳೆದ ಸಮಯ ಅಂದರೆ ಪರಿಪಾಲನಾ ಭೇಟಿಗಳಿಗಾಗಿ, ಕೂಟಗಳಿಗಾಗಿ, ವೈಯಕ್ತಿಕ ಬೈಬಲ್‌ ಅಧ್ಯಯನ ಹಾಗೂ ಧ್ಯಾನಕ್ಕಾಗಿ ಕಳೆದ ಸಮಯ ಸೇರಿರುವುದಿಲ್ಲ.

ವೆಚ್ಚ. ಇಸವಿ 2010ರ ಸೇವಾ ವರ್ಷದಲ್ಲಿ 15.5 ಕೋಟಿ ಡಾಲರ್‌ ಹಣವನ್ನು ಕ್ಷೇತ್ರ ಸೇವಾ ನೇಮಕ ಪೂರೈಸುವ ಸಲುವಾಗಿ ವಿಶೇಷ ಪಯನೀಯರರಿಗೆ, ಮಿಷನೆರಿಗಳಿಗೆ ಹಾಗೂ ಸಂಚರಣ ಮೇಲ್ವಿಚಾರಕರಿಗೆ ವೆಚ್ಚಮಾಡಲಾಯಿತು. ಇದರಲ್ಲಿ ಬೈಬಲಾಧರಿತ ಪ್ರಕಾಶನಗಳನ್ನು ಮುದ್ರಿಸಲು ಹಾಗೂ ಭೂಮಿಯಾದ್ಯಂತವಿರುವ ಬ್ರಾಂಚ್‌ ಸೌಕರ್ಯಗಳಲ್ಲಿ ಸೇವೆಮಾಡುತ್ತಿರುವ 20,000ಕ್ಕೂ ಹೆಚ್ಚಿನ ಸ್ವಯಂಸೇವಕರಿಗಾಗಿ ವೆಚ್ಚಮಾಡಿರುವ ಖರ್ಚು ಸೇರಿಲ್ಲ.

ಜ್ಞಾಪಕ ಕುರುಹುಗಳಲ್ಲಿ ಪಾಲುತೆಗೆದುಕೊಂಡವರು. ಇದು ಲೋಕಾದ್ಯಂತ ಜ್ಞಾಪಕಾಚರಣೆಯಂದು ಕುರುಹುಗಳಲ್ಲಿ ಪಾಲುತೆಗೆದುಕೊಂಡ ದೀಕ್ಷಾಸ್ನಾನ ಪಡೆದ ಸಾಕ್ಷಿಗಳ ಒಟ್ಟು ಸಂಖ್ಯೆಯಾಗಿದೆ. ಈ ಸಂಖ್ಯೆಯನ್ನು ಭೂಮಿಯಲ್ಲಿರುವ ಒಟ್ಟು ಅಭಿಷಿಕ್ತರ ಸಂಖ್ಯೆಯೆಂದು ಪರಿಗಣಿಸಬೇಕಾ? ಇಲ್ಲ. ಏಕೆಂದರೆ ಕೆಲವರು ಹಿಂದಿನ ಧಾರ್ಮಿಕ ನಂಬಿಕೆಯಿಂದಾಗಿ ಅಥವಾ ಮಾನಸಿಕ ಅಥವಾ ಭಾವನಾತ್ಮಕ ಏರುಪೇರುಗಳಿಂದಾಗಿ ತಮಗೆ ಸ್ವರ್ಗೀಯ ಕರೆಯಿದೆ ಎಂದು ನೆನಸುವ ಸಾಧ್ಯತೆಯಿದೆ. ಹಾಗಾಗಿ ಭೂಮಿಯಲ್ಲಿ ಎಷ್ಟು ಅಭಿಷಿಕ್ತರಿದ್ದಾರೆ ಎಂದು ನಾವು ನಿಖರವಾಗಿ ತಿಳಿಯಸಾಧ್ಯವಿಲ್ಲ; ತಿಳಿದುಕೊಳ್ಳಲೇ ಬೇಕೆಂಬ ಅಗತ್ಯವೂ ಇಲ್ಲ. ಆಡಳಿತ ಮಂಡಲಿ ಜ್ಞಾಪಕ ಕುರುಹುಗಳಲ್ಲಿ ಪಾಲುತೆಗೆದುಕೊಂಡವರ ಹೆಸರುಗಳನ್ನು ದಾಖಲಿಸಿಡುವುದಿಲ್ಲ.a

ಆದರೆ ಒಂದು ವಿಷಯವಂತೂ ನಮಗೆ ತಿಳಿದಿದೆ. ಮಹಾ ಸಂಕಟದ ವಿನಾಶಕಾರಿ ಗಾಳಿಗಳನ್ನು ಸಡಿಲಗೊಳಿಸುವಾಗ ‘ನಮ್ಮ ದೇವರ ದಾಸರಾದ’ ಅಭಿಷಿಕ್ತರಲ್ಲಿ ಕೆಲವರಾದರೂ ಭೂಮಿಯಲ್ಲಿರುತ್ತಾರೆ. (ಪ್ರಕ. 7:1-3) ಮಾತ್ರವಲ್ಲ ಆ ಅಭಿಷಿಕ್ತರು ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಮುಂಚೂಣಿಯಲ್ಲಿರುತ್ತಾರೆ. ವಾರ್ಷಿಕ ಸೇವಾ ವರದಿಯು ಇತಿಹಾಸದಲ್ಲೇ ಮಹತ್ತಾಗಿರುವ ಈ ಕೆಲಸದ ದಾಖಲೆ ಇಡುವುದರಲ್ಲಿ ನೆರವಾಗುತ್ತದೆ.

[ಪಾದಟಿಪ್ಪಣಿ]

a 2009, ಜೂನ್‌ 15 ಕಾವಲಿನಬುರುಜು ಪುಟ 24ರಲ್ಲಿರುವ “ನಂಬಿಗಸ್ತ ಮನೆವಾರ್ತೆಯವ ಮತ್ತು ಆಡಳಿತ ಮಂಡಲಿ” ಲೇಖನ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ