ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 4/1 ಪು. 3
  • ಯಾರು ಈ ಮೋಶೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾರು ಈ ಮೋಶೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಅನುರೂಪ ಮಾಹಿತಿ
  • ಯೇಸು ಕ್ರಿಸ್ತನು ಮೋಶೆಯಂಥ ಪ್ರವಾದಿ ಆಗಿದ್ದನು ಹೇಗೆ?
    ಕಾವಲಿನಬುರುಜು—1992
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಉರಿಯುತ್ತಿರುವ ಪೊದೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಮೋಶೆ ಓಡಿಹೋಗಲು ಕಾರಣ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 4/1 ಪು. 3

ಮುಖಪುಟ ಲೇಖನ

ಯಾರು ಈ ಮೋಶೆ?

ಮೋಶೆ ಅಂದಾಕ್ಷಣ ನಿಮಗೇನು ನೆನಪಾಗುತ್ತೆ?

  • ನೈಲ್‌ ಎನ್ನುವ ನದಿಯಲ್ಲಿ ತೇಲುತ್ತಿದ್ದ ಬುಟ್ಟಿಯಲ್ಲಿದ್ದ ಪುಟ್ಟ ಹಸುಳೆ?

  • ಈಜಿಪ್ಟಿನ ರಾಜಕುಮಾರಿಯ ಸುಪರ್ದಿನಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ತಾನು ಇಸ್ರೇಲಿನವ ಅನ್ನುವುದನ್ನು ಮರೆಯದ ಬಾಲಕ?

  • 40 ವರ್ಷ ಮಿದ್ಯಾನ್‌ ದೇಶದಲ್ಲಿ ಕುರುಬನಾಗಿ ಬಾಳಿದ ಪುರುಷ?

  • ಉರಿಯುತ್ತಿದ್ದ ಪೊದೆಯ ಮುಂದೆ ನಿಂತು ಯೆಹೋವa ದೇವರ ಬಳಿ ಮಾತಾಡಿದ ವ್ಯಕ್ತಿ?

  • ಗುಲಾಮರಾಗಿದ್ದ ಇಸ್ರೇಲ್‌ ಜನರನ್ನು ಬಿಡಬೇಕೆಂದು ಈಜಿಪ್ಟಿನ ರಾಜರ ಮುಂದೆ ನಿಂತ ಧೀರ?

  • ದೇವರ ಮಾತನ್ನು ಈಜಿಪ್ಟಿನ ರಾಜ ಧಿಕ್ಕರಿಸಿದಾಗ ಈಜಿಪ್ಟಿನ ಮೇಲೆ 10 ಬಾಧೆಗಳು ಬರುವುದೆಂದು ಸಾರಿದ ವ್ಯಕ್ತಿ?

  • ಇಸ್ರೇಲಿಗಳನ್ನು ಈಜಿಪ್ಟಿನಿಂದ ಬಿಡಿಸಿದ ಪುರುಷ?

  • ದೇವರ ಶಕ್ತಿಯಿಂದ ಕೆಂಪುಸಮುದ್ರವನ್ನು ಇಬ್ಭಾಗ ಮಾಡಿದ ಮನುಷ್ಯ?

  • ದೇವರ ದಶಾಜ್ಞೆಗಳನ್ನು ಇಸ್ರೇಲಿಗಳಿಗೆ ತಲಪಿಸಿದ ವ್ಯಕ್ತಿ?

ಇದೆಲ್ಲ ಮೋಶೆಯ ಬದುಕಿನ ಕೆಲವೊಂದು ಎಳೆಗಳಷ್ಟೆ. ಇದನ್ನೆಲ್ಲ ಓದುವಾಗ ದೇವಭಕ್ತ ಮೋಶೆ ಮೇಲೆ ಕ್ರೈಸ್ತರಿಗೆ, ಯೆಹೂದಿಗಳಿಗೆ, ಮುಸಲ್ಮಾನರಿಗೆ ಯಾಕಿಷ್ಟು ಗೌರವ ಎನ್ನುವುದು ನಮಗೆ ಅರ್ಥವಾಗುತ್ತೆ.

ದೇವರು ಮೋಶೆ ಮೂಲಕ “ಭಯಂಕರ ಕಾರ್ಯಗಳನ್ನೂ” ಅಥವಾ ಪವಾಡಗಳನ್ನೂ ಮಾಡಿಸಿದ್ದರು ಅನ್ನೋದು ಕೂಡ ಇದರಿಂದ ಸ್ಪಷ್ಟವಾಗುತ್ತೆ. (ಧರ್ಮೋಪದೇಶಕಾಂಡ 34:10-12) ಆದರೆ ಮೋಶೆ ಕೂಡ ನಮ್ಮ ಹಾಗೇ ಮನುಷ್ಯರೇ ಆಗಿದ್ದರು. ಪ್ರವಾದಿ ಮೋಶೆಯಲ್ಲೂ ನಮ್ಮಂಥ ಭಾವನೆಗಳಿದ್ದವು. ಇವತ್ತು ನಮ್ಮನ್ನು ಕಾಡುವಂಥ ಕಷ್ಟಗಳು ಅವರನ್ನೂ ಕಾಡಿದ್ದವು, ಅವನ್ನೆಲ್ಲ ಮೋಶೆ ಜಯಿಸಿ ಬಂದಿದ್ದರು.

ಹೇಗೆಂದು ತಿಳಿಯೋಣವೇ? ಕಷ್ಟಗಳನ್ನು ಜಯಿಸಲು ಅವರಿಗೆ ಮೂರು ಸೊಗಸಾದ ಗುಣಗಳು ನೆರವಾಗಿದ್ದವು. ಯಾವುದು ಆ ಗುಣಗಳು? ಅವರ ಆದರ್ಶದಿಂದ ನಾವು ಕಲಿಯುವ ಪಾಠಗಳೇನು? ಮುಂದೆ ಓದಿ ತಿಳಿಯೋಣ. . . (w13-E 02/01)

a ಬೈಬಲ್‌ ಪ್ರಕಾರ ಯೆಹೋವ ಎನ್ನುವುದು ದೇವರ ಹೆಸರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ