ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 10/1 ಪು. 16
  • ಬೈಬಲ್‌ ಕೊಡುವ ಉತ್ತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಕೊಡುವ ಉತ್ತರ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಅನುರೂಪ ಮಾಹಿತಿ
  • ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಪ್ರಾರ್ಥನೆ ಮಾಡುವುದರಿಂದ ಪ್ರಯೋಜನ ಇದೆಯೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ದೇವರ ಗೆಳೆಯರಾಗಲು ಏನು ಮಾಡಬೇಕು?
    ದೇವರಿಂದ ನಿಮಗೊಂದು ಸಿಹಿಸುದ್ದಿ!
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 10/1 ಪು. 16

ಬೈಬಲ್‌ ಕೊಡುವ ಉತ್ತರ

ದೇವರು ಎಲ್ಲರ ಪ್ರಾರ್ಥನೆ ಕೇಳ್ತಾನಾ?

ಯಾವ ಕುಲಕ್ಕೆ ಸೇರಿದ ವ್ಯಕ್ತಿ ಪ್ರಾರ್ಥಿಸಿದರೂ ದೇವರು ಕೇಳುತ್ತಾನೆ. (ಕೀರ್ತನೆ 145:18, 19) ನಮ್ಮ ಮನಸ್ಸನ್ನು ಕಾಡುತ್ತಿರುವ ವಿಷಯವನ್ನು ಪ್ರಾರ್ಥನೆಯ ಮುಖಾಂತರ ದೇವರ ಬಳಿ ಹೇಳಿಕೊಳ್ಳುವಂತೆ ದೇವರ ವಾಕ್ಯವಾದ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ. (ಫಿಲಿಪ್ಪಿ 4:6, 7) ಆದರೆ ದೇವರು ಮೆಚ್ಚದಂಥ ಪ್ರಾರ್ಥನೆಗಳು ಕೂಡ ಇವೆ. ಉದಾಹರಣೆಗೆ ಬಾಯಿಪಾಠ ಮಾಡಿಕೊಂಡು ಜಪಿಸುವಂಥ ಪ್ರಾರ್ಥನೆಗಳನ್ನು ದೇವರು ಇಷ್ಟಪಡೋದಿಲ್ಲ.—ಮತ್ತಾಯ 6:7 ಓದಿ.

ತನ್ನ ನಿಯಮಗಳ ಕಡೆಗೆ ಬೇಕುಬೇಕೆಂದೇ ಗೌರವ ತೋರಿಸದ ಜನರ ಪ್ರಾರ್ಥನೆಗಳನ್ನು ಯೆಹೋವ ದೇವರು ಮೆಚ್ಚುವುದಿಲ್ಲ. (ಜ್ಞಾನೋಕ್ತಿ 28:9) ಉದಾಹರಣೆಗೆ ಹಿಂದಿನ ಕಾಲದಲ್ಲಿ ಅಪರಾಧದಲ್ಲಿ ಮುಳುಗಿ ಹೋಗಿದ್ದ ಇಸ್ರೇಲಿಗಳ ಪ್ರಾರ್ಥನೆಯನ್ನು ದೇವರು ಕೇಳಲಿಲ್ಲ. ಇದರಿಂದ ನಾವು ಕಲಿಯುವ ಪಾಠ ಏನೆಂದರೆ, ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಬೇಕಾದರೆ ಆತನ ನೀತಿನಿಯಮಗಳನ್ನು ಪಾಲಿಸಲೇಬೇಕು.—ಯೆಶಾಯ 1:15 ಓದಿ.

ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಬೇಕಾದರೆ ಏನು ಮಾಡಬೇಕು?

ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಬೇಕಾದರೆ ಆತನ ಮೇಲೆ ನಮಗೆ ನಂಬಿಕೆ ಇರಬೇಕು. (ಯಾಕೋಬ 1:5, 6) ದೇವರಿದ್ದಾನೆ, ಆತನಿಗೆ ನಮ್ಮ ಮೇಲೆ ಕಾಳಜಿ ಇದೆ ಅನ್ನೋ ವಿಷಯದಲ್ಲಿ ಎಳ್ಳಷ್ಟೂ ಸಂಶಯ ಇರಬಾರದು. ಬೈಬಲನ್ನು ಕಲಿಯುವುದರಿಂದ ನಾವು ನಂಬಿಕೆಯನ್ನು ಬೆಳೆಸಿಕೊಳ್ಳಬಲ್ಲೆವು. ದೇವರ ವಾಕ್ಯದಲ್ಲಿ ಇರುವ ಪುರಾವೆ ಮತ್ತು ಆಶ್ವಾಸನೆಗಳ ಮೇಲೆ ಕಟ್ಟಿರುವ ನಂಬಿಕೆಯೇ ನಿಜವಾದ ನಂಬಿಕೆ.—ಇಬ್ರಿಯ 11:1, 6 ಓದಿ.

ಪ್ರಾಮಾಣಿಕರಾಗಿ ನಮ್ರರಾಗಿ ಪ್ರಾರ್ಥಿಸಬೇಕು. ದೇವರ ಮಗನಾದ ಯೇಸು ಕೂಡ ನಮ್ರತೆಯಿಂದ ಪ್ರಾರ್ಥಿಸಿದನು. (ಲೂಕ 22:41, 42) ಹಾಗಾಗಿ ನಾವು ಕೇಳಿಕೊಂಡ ಹಾಗೆ ದೇವರು ಮಾಡಬೇಕು ಅಂದುಕೊಳ್ಳದೆ ಬೈಬಲನ್ನು ಓದಿ ದೇವರ ನೀತಿನಿಯಮಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಹೀಗೆ ಮಾಡಿದರೆ ನಾವು ದೇವರ ಚಿತ್ತ, ಸಂಕಲ್ಪಗಳಿಗೆ ತಕ್ಕಂತೆ ಪ್ರಾರ್ಥಿಸಲು ಆಗುತ್ತೆ.—1 ಯೋಹಾನ 5:14 ಓದಿ. (w13-E 08/01)

ಹೆಚ್ಚಿನ ಮಾಹಿತಿ ಈ ಪುಸ್ತಕದ ಅಧ್ಯಾಯ 17ರಲ್ಲಿ ಸಿಗುತ್ತದೆ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ಇದನ್ನು www.jw.orgನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ