ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 1/1 ಪು. 16
  • ಬೈಬಲ್‌ ಕೊಡುವ ಉತ್ತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಕೊಡುವ ಉತ್ತರ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಅನುರೂಪ ಮಾಹಿತಿ
  • ನಿಮಗೆ ಈ ಪ್ರಶ್ನೆ ಬಂದಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
    ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
  • ಕುಟುಂಬಕ್ಕಾಗಿ ಇನ್ನಷ್ಟು ನೆರವು
    ಎಚ್ಚರ!—2018
  • ನಮ್ಮ ಕಷ್ಟಗಳಿಗೆ ಕೊನೆ ಇದೆಯಾ?
    ನಮ್ಮ ಕಷ್ಟಗಳಿಗೆ ಕೊನೆ ಇದೆಯಾ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 1/1 ಪು. 16

ಬೈಬಲ್‌ ಕೊಡುವ ಉತ್ತರ

ದೇವರನ್ನು ಪ್ರೀತಿಸುವಂತೆ ಮಕ್ಕಳಿಗೆ ಹೇಗೆ ಕಲಿಸಬಹುದು?

ತಂದೆ ತನ್ನ ಮಗನಿಗೆ ಸೃಷ್ಟಿ ತೋರಿಸುತ್ತ ಕಲಿಸುತ್ತಿರುವುದು

ಸೃಷ್ಟಿಯನ್ನು ತೋರಿಸುತ್ತ ನಿಮ್ಮ ಮಕ್ಕಳು ದೇವರ ಬಗ್ಗೆ ತಿಳಿದುಕೊಳ್ಳಲು ಮತ್ತು ಆತನನ್ನು ಪ್ರೀತಿಸಲು ನೆರವಾಗಿ

ದೇವರಿದ್ದಾನೆ, ಆತನು ಪ್ರೀತಿಸುತ್ತಾನೆ ಅನ್ನೋದಕ್ಕೆ ಆಧಾರ ಗೊತ್ತಿದ್ದರೆ ಮಾತ್ರ ನಿಮ್ಮ ಮಕ್ಕಳು ದೇವರನ್ನು ಪ್ರೀತಿಸಲು ಕಲಿಯುತ್ತಾರೆ. ಹಾಗೆ ಪ್ರೀತಿಸಬೇಕೆಂದರೆ, ಮೊದಲು ದೇವರ ಬಗ್ಗೆ ಅವರು ಚೆನ್ನಾಗಿ ತಿಳಿದುಕೊಂಡಿರಬೇಕು. (1 ಯೋಹಾನ 4:8) ಉದಾಹರಣೆಗೆ, ದೇವರು ಯಾಕೆ ಮನುಷ್ಯರನ್ನು ಸೃಷ್ಟಿಸಿದನು? ಕಷ್ಟಗಳನ್ನು ಯಾಕೆ ದೇವರು ಹಾಗೆಯೇ ಬಿಟ್ಟಿದ್ದಾನೆ? ಭವಿಷ್ಯದಲ್ಲಿ ದೇವರು ಮನುಷ್ಯರಿಗಾಗಿ ಏನು ಮಾಡಲಿದ್ದಾನೆ? ಇಂಥ ಪ್ರಶ್ನೆಗಳಿಗೆ ಅವರಿಗೆ ಉತ್ತರ ಗೊತ್ತಿರಬೇಕು.—ಫಿಲಿಪ್ಪಿ 1:9 ಓದಿ.

ದೇವರನ್ನು ಪ್ರೀತಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಬೇಕೆಂದರೆ ಮೊದಲು ನೀವು ಆತನನ್ನು ಪ್ರೀತಿಸುತ್ತೀರಿ ಅನ್ನೋದನ್ನು ಮಕ್ಕಳಿಗೆ ತೋರಿಸಿಕೊಡಬೇಕು. ಆಗ ನಿಮ್ಮನ್ನು ನೋಡಿ ಮಕ್ಕಳು ಸಹ ಪ್ರೀತಿಸಲು ಕಲಿಯುತ್ತಾರೆ.—ಧರ್ಮೋಪದೇಶಕಾಂಡ 6:5-7; ಜ್ಞಾನೋಕ್ತಿ 22:6 ಓದಿ.

ದೇವರ ವಿಷಯಗಳನ್ನು ಮಕ್ಕಳ ಹೃದಯಕ್ಕೆ ನಾಟಿಸುವುದು ಹೇಗೆ?

ದೇವರ ವಾಕ್ಯಕ್ಕೆ ಶಕ್ತಿಯಿದೆ. (ಇಬ್ರಿಯ 4:12) ಹಾಗಾಗಿ ಮಕ್ಕಳು ಅದರಲ್ಲಿರುವ ಮೂಲಭೂತ ವಿಷಯಗಳ ಬಗ್ಗೆ ಕಲಿಯಲು ನೆರವಾಗಿ. ದೇವರ ವಾಕ್ಯವನ್ನು ಜನರ ಹೃದಯದಲ್ಲಿ ನಾಟಿಸಲು ಯೇಸು ಪ್ರಶ್ನೆಗಳನ್ನು ಕೇಳಿದನು, ಅವರು ಹೇಳುವಾಗ ಕಿವಿಗೊಟ್ಟನು ಮತ್ತು ಬೈಬಲ್‌ ವಚನಗಳನ್ನು ವಿವರಿಸಿದನು. ನಿಮ್ಮ ಮಕ್ಕಳ ಹೃದಯದಲ್ಲೂ ದೇವರ ವಾಕ್ಯವನ್ನು ನಾಟಿಸಬೇಕೆಂದರೆ ಯೇಸು ಮಾಡಿದಂತೆಯೇ ಮಾಡಿ.—ಲೂಕ 24:15-19, 27, 32 ಓದಿ.

ದೇವರು ಜನರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದನು ಎಂದು ತಿಳಿಸುವ ಘಟನೆಗಳು ಬೈಬಲಿನಲ್ಲಿವೆ. ಇವುಗಳ ಬಗ್ಗೆ ಮಕ್ಕಳು ತಿಳಿದುಕೊಂಡರೆ ಅವರು ದೇವರನ್ನು ಪ್ರೀತಿಸಲು ಕಲಿಯುತ್ತಾರೆ. ಈ ಘಟನೆಗಳ ಬಗ್ಗೆ ತಿಳಿಸುವ ಸಾಹಿತ್ಯಗಳು www.jw.org ವೆಬ್‌ಸೈಟ್‌ನಲ್ಲಿ ಲಭ್ಯ.—2 ತಿಮೊಥೆಯ 3:16 ಓದಿ. (w14-E 12/01)

ಹೆಚ್ಚಿನ ಮಾಹಿತಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 14⁠ರಲ್ಲಿ ಸಿಗುತ್ತದೆ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ

ಇದನ್ನು www.jw.orgನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಅಥವಾ ಉಚಿತ ಪ್ರತಿಗಾಗಿ ಪುಟ 2⁠ರ ಸೂಕ್ತ ವಿಳಾಸಕ್ಕೆ ನಿಮ್ಮ ವಿನಂತಿ ಕಳುಹಿಸಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ