ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್
ಬೈಬಲ್ ಯಾಕೆ ಉಳಿದುಕೊಳ್ತು?
ಬೈಬಲ್ ಇವತ್ತು ಉಳಿದುಕೊಂಡಿರೋದಕ್ಕೇ ನಿಮ್ಮ ಕೈಯಲ್ಲಿರೋ ಸ್ವಂತ ಬೈಬಲನ್ನು ಓದೋಕೆ ಆಗ್ತಿದೆ. ನೀವು ಒಂದು ಒಳ್ಳೇ ಭಾಷಾಂತರದ ಬೈಬಲನ್ನು ತಗೊಳ್ಳೋದಾದ್ರೆ ಮೂಲ ಬರಹದಲ್ಲಿರೋ ಸಂದೇಶವನ್ನೇ ನಿಮ್ಗೆ ಓದೋಕೆ ಆಗುತ್ತೆ.a ಬೈಬಲ್ ಹಸ್ತಪ್ರತಿಗಳು ಕೊಳೆತು ಹಾಳಾಗುವ ಸಾಧ್ಯತೆ ಇದ್ರೂ, ಕಡು ವಿರೋಧ ಎದುರಿಸಿದ್ರೂ, ಅದರಲ್ಲಿರೋ ಸಂದೇಶವನ್ನು ತಿರುಚುವ ಪ್ರಯತ್ನ ಮಾಡಿದ್ರೂ ಹೇಗೆ ಉಳಿದುಕೊಳ್ತು? ಈ ಪುಸ್ತಕಕ್ಕೆ ಅಂಥದ್ದೇನು ವಿಶೇಷತೆ ಇದೆ?
“ಬೈಬಲ್ ದೇವರಿಂದ ಬಂದ ಉಡುಗೊರೆನೇ ಅಂತ ನನಗೀಗ ಅರ್ಥ ಆಗಿದೆ”
ಬೈಬಲನ್ನು ಓದುವ ಅನೇಕರಿಗೆ “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.” ಅನ್ನೋ ಅಪೊಸ್ತಲ ಪೌಲನ ಮಾತು ನಿಜ ಅಂತ ಅನಿಸಿದೆ. (2 ತಿಮೊತಿ 3:16) ಇವರು ಬೈಬಲನ್ನು ಇಲ್ಲಿ ತನಕ ದೇವರೇ ಉಳಿಸಿದ್ದು ಅಂತನೂ ನಂಬುತ್ತಾರೆ. ಈ ಸಂಚಿಕೆಯ ಆರಂಭದ ಲೇಖನದಲ್ಲಿ ತಿಳಿಸಲಾದ ಫೈಜ಼ಲ್, ಬೈಬಲನ್ನು ನಂಬಬಹುದಾ ಅಂತ ಪರೀಕ್ಷಿಸೋಕೆ ಅದನ್ನು ಓದಿ ನೋಡಿದ್ರು. ಓದಿದಾಗ ಅವರಿಗೆ ತುಂಬ ಆಶ್ಚರ್ಯ ಆಯ್ತು. ಯಾಕಂದ್ರೆ ಚರ್ಚಲ್ಲಿ ಕಲಿಸೋದಕ್ಕೂ ಬೈಬಲಲ್ಲಿ ಇರೋದಕ್ಕೂ ತುಂಬ ವ್ಯತ್ಯಾಸ ಇದೆ ಅಂತ ಅವರಿಗೆ ಅರ್ಥ ಆಯ್ತು. ಅಷ್ಟೇ ಅಲ್ಲ, ಮನುಷ್ಯರಿಗಾಗಿ ದೇವರು ಮುಂದೆ ಏನು ಮಾಡ್ಲಿಕ್ಕಿದ್ದಾರೆ ಅಂತ ತಿಳ್ಕೊಂಡಾಗ ಅವರಿಗೆ ತುಂಬ ಖುಷಿ ಆಯ್ತು.
ಫೈಜ಼ಲ್ ಹೇಳಿದ್ದು: “ಬೈಬಲ್ ದೇವರಿಂದ ಬಂದ ಉಡುಗೊರೆನೇ ಅಂತ ನನಗೀಗ ಅರ್ಥ ಆಗಿದೆ. ಇಡೀ ವಿಶ್ವವನ್ನೇ ಸೃಷ್ಟಿ ಮಾಡಿದ ದೇವರಿಗೆ ನಮಗೋಸ್ಕರ ಒಂದು ಪುಸ್ತಕವನ್ನು ಉಳಿಸಿಕೊಡೋಕೆ ಆಗಲ್ವಾ? ಒಂದುವೇಳೆ ಸರ್ವಶಕ್ತ ದೇವರಿಗೆ ಆಗಲ್ಲ ಅಂತ ಹೇಳಿದ್ರೆ ಆತನಿಗೆ ಶಕ್ತಿನೇ ಇಲ್ಲ ಅಂತ ಹೇಳಿದ ಹಾಗೆ. ಆದ್ರೆ ಹಾಗೆ ಹೇಳೋಕೆ ನಾನ್ಯಾರು?”—ಯೆಶಾಯ 40:8.
a ಹೊಸ ಲೋಕ ಭಾಷಾಂತರ ಬೈಬಲಿನ ಪರಿಶಿಷ್ಟ ಎ1 ಮತ್ತು ಎ2 ನೋಡಿ. ಜೊತೆಗೆ ಮೇ 1, 2008ರ “ಒಳ್ಳೇ ಬೈಬಲ್ ಭಾಷಾಂತರವನ್ನು ನಾನು ಹೇಗೆ ಆಯ್ಕೆ ಮಾಡಲಿ?” ಅನ್ನೋ ಇಂಗ್ಲಿಷ್ ಲೇಖನ ನೋಡಿ.