ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಏಪ್ರಿಲ್‌ ಪು. 30-ಪು. 31 ಪ್ಯಾ. 3
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಅನುರೂಪ ಮಾಹಿತಿ
  • ನಮ್ಮ ಅಧಿಕೃತ ವೆಬ್‌ ಸೈಟ್‌—ನಮ್ಮ ಮತ್ತು ಇತರರ ಪ್ರಯೋಜನಕ್ಕಾಗಿ ವಿನ್ಯಾಸಿಸಲಾಗಿದೆ
    2012 ನಮ್ಮ ರಾಜ್ಯದ ಸೇವೆ
  • ಇದನ್ನೂ ನೋಡಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಕಷ್ಟಗಳಿಂದ ಹೊರಬರಲು ಸಹಾಯ ಪಡೆಯಿರಿ
    ಎಚ್ಚರ!—2020
  • ವಿವೇಕಕ್ಕಾಗಿ JW.ORGನಲ್ಲಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಏಪ್ರಿಲ್‌ ಪು. 30-ಪು. 31 ಪ್ಯಾ. 3
ಕಾಪಿರೈಟ್‌ ಇರುವ ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ವೈಯಕ್ತಿಕ ವೆಬ್‌ಸೈಟ್‌ಗಳಲ್ಲಿ ಪೋಸ್ಟ್‌ ಮಾಡಬಾರದು

ವಾಚಕರಿಂದ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ವೈಯಕ್ತಿಕ ವೆಬ್‌ಸೈಟ್‌ಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲು ಅನುಮತಿ ಇಲ್ಲವೇಕೆ?

ನಮ್ಮ ಬೈಬಲಾಧಾರಿತ ಮಾಹಿತಿಯನ್ನು ನಾವು ಉಚಿತವಾಗಿ ಕೊಡುತ್ತಿರುವ ಕಾರಣ ಅದನ್ನು ಕಾಪಿ ಮಾಡಿ ಬೇರೆ ವೆಬ್‌ಸೈಟ್‌ಗಳಿಗೆ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್‌ ಮಾಡಬಹುದು ಎಂದು ಕೆಲವರು ನೆನಸುತ್ತಾರೆ. ಆದರೆ ಹೀಗೆ ಮಾಡಿದರೆ ನಮ್ಮ ವೆಬ್‌ಸೈಟ್‌ಗಿರುವ ಶರತ್ತುಗಳನ್ನುa ಉಲ್ಲಂಘನೆ ಮಾಡಿದಂತಾಗುತ್ತದೆ. ಇದರಿಂದ ಗಂಭೀರವಾದ ಸಮಸ್ಯೆಗಳು ಉಂಟಾಗಿವೆ. ಯಾರೂ ಕೂಡ “ಈ ವೆಬ್‌ಸೈಟ್‌ನಿಂದ ಇಂಟರ್‌ನೆಟ್‌ಗೆ (ಅಂದರೆ ಬೇರೆ ವೆಬ್‌ಸೈಟ್‌ಗಳಿಗೆ, ಫೈಲ್‌ ಶೇರಿಂಗ್‌ ಸೈಟ್‌ಗಳಿಗೆ, ವಿಡಿಯೋ ಶೇರಿಂಗ್‌ ಸೈಟ್‌ಗಳಿಗೆ ಅಥವಾ ಸಾಮಾಜಿಕ ಜಾಲತಾಣಕ್ಕೆ) ಚಿತ್ರಗಳನ್ನು, ಎಲೆಕ್ಟ್ರಾನಿಕ್‌ ಪ್ರಕಾಶನಗಳನ್ನು, ಟ್ರೇಡ್‌ಮಾರ್ಕ್‌ಗಳನ್ನು, ಸಂಗೀತ, ಫೋಟೋ, ವಿಡಿಯೋ ಅಥವಾ ಲೇಖನಗಳನ್ನು ಪೋಸ್ಟ್‌ ಮಾಡುವಂತಿಲ್ಲ” ಎಂದು ಶರತ್ತುಗಳ ಭಾಗದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇಂಥ ನಿರ್ಬಂಧವನ್ನು ಯಾಕೆ ಹಾಕಲಾಗಿದೆ?

ಕಾಪಿರೈಟ್‌ ಇರುವ ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ವೈಯಕ್ತಿಕ ವೆಬ್‌ಸೈಟ್‌ಗಳಲ್ಲಿ ಪೋಸ್ಟ್‌ ಮಾಡಬಾರದು

ಕಾಪಿರೈಟ್‌ ಇರುವ ನಮ್ಮ ಪ್ರಕಾಶನಗಳನ್ನು ಬೇರೆ ಇಂಟರ್‌ನೆಟ್‌ ಸೈಟ್‌ಗಳಿಗೆ ಪೋಸ್ಟ್‌ ಮಾಡುವಂತಿಲ್ಲ

ನಮ್ಮ ವೆಬ್‌ಸೈಟ್‌ಗಳಲ್ಲಿರುವ ಎಲ್ಲ ಮಾಹಿತಿಯನ್ನು ಕಾಪಿರೈಟ್‌ ಮಾಡಲಾಗಿದೆ. ಧರ್ಮಭ್ರಷ್ಟರು ಮತ್ತು ಇತರ ವಿರೋಧಿಗಳು ನಮ್ಮ ಪ್ರಕಾಶನಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಹಾಕಿ ಯೆಹೋವನ ಸಾಕ್ಷಿಗಳನ್ನು ಮತ್ತು ಇತರರನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ವೆಬ್‌ಸೈಟ್‌ಗಳನ್ನು ರಚಿಸಿರುವ ಮುಖ್ಯ ಉದ್ದೇಶ ಓದುಗರ ಮನಸ್ಸಿನಲ್ಲಿ ಅನುಮಾನಗಳನ್ನು ಎಬ್ಬಿಸುವುದೇ ಆಗಿದೆ. (ಕೀರ್ತ. 26:4; ಜ್ಞಾನೋ. 22:5) ಇನ್ನು ಕೆಲವರು ನಮ್ಮ ಪ್ರಕಾಶನಗಳಲ್ಲಿರುವ ಮಾಹಿತಿಯನ್ನು ಅಥವಾ jw.org ಲೋಗೋವನ್ನು ಜಾಹೀರಾತುಗಳಲ್ಲಿ, ಮಾರಾಟಕ್ಕಿರುವ ವಸ್ತುಗಳ ಮೇಲೆ ಮತ್ತು ಮೊಬೈಲ್‌ ಫೋನ್‌ ಆ್ಯಪ್‌ಗಳ ಮೇಲೆ ಬಳಸಿದ್ದಾರೆ. ನಮ್ಮ ವೆಬ್‌ಸೈಟ್‌ಗೆ ಕಾಪಿರೈಟ್‌ ಮತ್ತು ಟ್ರೇಡ್‌ಮಾರ್ಕ್‌ ಇರುವುದರಿಂದ ಇಂಥ ದುರ್ಬಳಕೆಗಳನ್ನು ತಡೆಗಟ್ಟಲು ನಮಗೆ ಕಾನೂನಿನ ಬೆಂಬಲ ಇದೆ. (ಜ್ಞಾನೋ. 27:12) ಆದರೆ ನಮ್ಮ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಇತರ ವೆಬ್‌ಸೈಟ್‌ಗಳಿಗೆ ಪೋಸ್ಟ್‌ ಮಾಡಲು ಅಥವಾ jw.org ಟ್ರೇಡ್‌ಮಾರ್ಕನ್ನು ಬಳಸಿ ತಮ್ಮ ಸರಕುಗಳನ್ನು ಮಾರಲು ಜನರಿಗೆ ಅಥವಾ ನಮ್ಮ ಸಹೋದರರಿಗೆ ಅನುಮತಿಸಿದರೆ ನಮಗೆ ಕಾನೂನಿನ ಸಂರಕ್ಷಣೆ ಸಿಗುವುದಿಲ್ಲ. ಮಾತ್ರವಲ್ಲದೆ ನಮ್ಮ ವೆಬ್‌ಸೈಟನ್ನು ದುರ್ಬಳಕೆ ಮಾಡುತ್ತಿರುವ ವಿರೋಧಿಗಳನ್ನು ಮತ್ತು ವ್ಯಾಪಾರ-ವ್ಯವಹಾರಗಳನ್ನು ತಡೆಗಟ್ಟಲು ನಮಗೆ ಕೋರ್ಟ್‌ ಬೆಂಬಲ ಸಹ ಸಿಗುವುದಿಲ್ಲ.

ಯೆಹೋವನ ಸಾಕ್ಷಿಗಳ ಅಧಿಕೃತ ವೆಬ್‌ಸೈಟ್‌ ಮತ್ತು ಆ್ಯಪ್‌ಗಳು

jw.org ಬಿಟ್ಟು ಬೇರೆ ಯಾವ ಮೂಲದಿಂದಲೂ ನಮ್ಮ ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಅಪಾಯಕರ. ಯೆಹೋವನು ಆಧ್ಯಾತ್ಮಿಕ ಆಹಾರವನ್ನು ಕೊಡುವಂಥ ಜವಾಬ್ದಾರಿಯನ್ನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ’ ಮಾತ್ರ ವಹಿಸಿದ್ದಾನೆ. (ಮತ್ತಾ. 24:45) ಆ “ಆಳು” ಆಧ್ಯಾತ್ಮಿಕ ಆಹಾರವನ್ನು ಅಧಿಕೃತ ವೆಬ್‌ಸೈಟ್‌ಗಳಾದ www.jw.org, tv.jw.org ಮತ್ತು wol.jw.org ಮೂಲಕ ಮಾತ್ರ ಒದಗಿಸುತ್ತದೆ. ನಮ್ಮ ಮೊಬೈಲ್‌ ಫೋನ್‌ಗಾಗಿ JW Language®, JW Library® ಮತ್ತು JW Library Sign Language® ಎಂಬ ಮೂರು ಅಧಿಕೃತ ಆ್ಯಪ್‌ಗಳನ್ನು ಮಾತ್ರ ತಯಾರಿಸಲಾಗಿದೆ. ಇವುಗಳಲ್ಲಿ ಯಾವುದೇ ಜಾಹೀರಾತುಗಳಾಗಲಿ ಸೈತಾನನ ಲೋಕದ ಕಲ್ಮಶವಾಗಲಿ ಬರುವುದಿಲ್ಲ. ಈ ಆಧ್ಯಾತ್ಮಿಕ ಆಹಾರವನ್ನು ಬೇರೆ ಮೂಲಗಳಿಂದ ನಾವು ಡೌನ್‌ಲೋಡ್‌ ಮಾಡಿಕೊಂಡರೆ ಅದರಲ್ಲಿರುವ ಮಾಹಿತಿಯನ್ನು ಬದಲಾಯಿಸಿರುವ ಅಥವಾ ತಿರುಚಿರುವ ಸಾಧ್ಯತೆ ಇದೆ.—ಕೀರ್ತ. 18:26; 19:8.

ಅಷ್ಟೇ ಅಲ್ಲದೆ, ಕಮೆಂಟುಗಳನ್ನು ಹಾಕಲು ಅವಕಾಶ ಮಾಡಿಕೊಡುವಂಥ ವೆಬ್‌ಸೈಟ್‌ಗಳಿಗೆ ನಮ್ಮ ಪ್ರಕಾಶನಗಳನ್ನು ಪೋಸ್ಟ್‌ ಮಾಡಿದಾಗ ಧರ್ಮಭ್ರಷ್ಟರು ಮತ್ತು ಹುಳುಕು ಹುಡುಕುವವರು ಅವುಗಳ ಬಗ್ಗೆ ತಪ್ಪಾದ ಕಮೆಂಟುಗಳನ್ನು ಹಾಕಿ ಯೆಹೋವನ ಸಂಘಟನೆಯ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಇಂಥ ಕಮೆಂಟುಗಳನ್ನು ನೋಡಿ ನಮ್ಮ ಸಹೋದರರು ಅವರಿಗೆ ತಿರುಗಿಸಿ ಉತ್ತರ ಕೊಟ್ಟಿದ್ದಾರೆ. ಇದು ಯೆಹೋವನ ಹೆಸರಿಗೆ ಇನ್ನಷ್ಟು ಕಳಂಕ ತಂದಿದೆ. ‘ಎದುರಿಸುವವರನ್ನು ಸೌಮ್ಯಭಾವದಿಂದ ಉಪದೇಶಿಸಲು’ ಇಂಥ ವೆಬ್‌ಸೈಟ್‌ಗಳನ್ನು ವೇದಿಕೆಯನ್ನಾಗಿ ಮಾಡಿಕೊಳ್ಳುವುದು ಸರಿಯಲ್ಲ. (2 ತಿಮೊ. 2:23-25; 1 ತಿಮೊ. 6:3-5) ಸಂಘಟನೆಯ, ಆಡಳಿತ ಮಂಡಲಿಯ ಮತ್ತು ಅದರ ಸದಸ್ಯರ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದ ನಕಲಿ ಖಾತೆಗಳನ್ನು ಮತ್ತು ವೆಬ್‌ಸೈಟ್‌ಗಳನ್ನು ತೆರೆದಿರುವ ಸುದ್ದಿಯೂ ಇದೆ. ಆದರೆ ಆಡಳಿತ ಮಂಡಲಿಯ ಯಾವುದೇ ಸದಸ್ಯರು ವೈಯಕ್ತಿಕ ವೆಬ್‌ ಪೇಜನ್ನಾಗಲಿ ಅಥವಾ ಸಾಮಾಜಿಕ ಮಾಧ್ಯಮದ ಸೈಟನ್ನಾಗಲಿ ಹೊಂದಿಲ್ಲ.

jw.org ಅನ್ನು ನೀವು ಜನರಿಗೆ ಪರಿಚಯಿಸಿದಾಗ “ಸುವಾರ್ತೆ” ಹಬ್ಬಲು ಸಾಧ್ಯವಾಗುತ್ತದೆ. (ಮತ್ತಾ. 24:14) ಸೇವೆಯಲ್ಲಿ ಬಳಸಲು ನಮಗೆ ಸಂಘಟನೆಯಿಂದ ಸಿಗುತ್ತಿರುವ ಡಿಜಿಟಲ್‌ ಸಹಾಯಕಗಳು ದಿನೇ ದಿನೇ ಉತ್ತಮವಾಗುತ್ತಾ ಇವೆ. ಅವುಗಳನ್ನು ಎಲ್ಲರೂ ಉಪಯೋಗಿಸಿ ಪ್ರಯೋಜನ ಪಡೆಯಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ಶರತ್ತುಗಳು ಸೂಚಿಸುವಂತೆ ನಾವು ಜನರಿಗೆ ನಮ್ಮ ಪ್ರಕಾಶನಗಳ ಎಲೆಕ್ಟ್ರಾನಿಕ್‌ ಪ್ರತಿಯನ್ನು ಈ-ಮೇಲ್‌ ಮೂಲಕ ಕಳುಹಿಸಬಹುದು ಅಥವಾ jw.orgನಲ್ಲಿರುವ ಮಾಹಿತಿಯ ಲಿಂಕನ್ನು ಕಳುಹಿಸಬಹುದು. ನಮ್ಮ ಅಧಿಕೃತ ವೆಬ್‌ಸೈಟ್‌ಗಳನ್ನು ಜನರಿಗೆ ಪರಿಚಯಿಸಿದಾಗ ಅವರು ಆಧ್ಯಾತ್ಮಿಕ ಆಹಾರವನ್ನು ಅದರ ನಿಜ ಮೂಲದಿಂದ ಅಂದರೆ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನಿಂದ’ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

a ಶರತ್ತುಗಳನ್ನು jw.org ವೆಬ್‌ಸೈಟ್‌ನ ಮುಖಪುಟದಲ್ಲಿ ಕೆಳಗೆ ಕೊಡಲಾಗಿದೆ. ಅದರಲ್ಲಿರುವ ನಿರ್ಬಂಧಗಳು ನಮ್ಮ ವೆಬ್‌ಸೈಟ್‌ನಲ್ಲಿ ಸಿಗುವ ಎಲ್ಲ ಮಾಹಿತಿಗೂ ಅನ್ವಯವಾಗುತ್ತವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ