ನಮ್ಮ ಅಧಿಕೃತ ವೆಬ್ ಸೈಟ್—ನಮ್ಮ ಮತ್ತು ಇತರರ ಪ್ರಯೋಜನಕ್ಕಾಗಿ ವಿನ್ಯಾಸಿಸಲಾಗಿದೆ
ರಾಜ್ಯದ ಸುವಾರ್ತೆಯನ್ನು “ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ” ಸಾರಬೇಕು ಎಂದು ಆಜ್ಞಾಪಿಸಿದನು ಯೇಸು. (ಮತ್ತಾ. 24:14) ಹಾಗಾಗಿ ನಮ್ಮ ‘ಶೂಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಲು’ ಸಹಾಯವಾಗುವಂತೆ watchtower.org, jw-media.org, ಮತ್ತು jw.org ವೆಬ್ ಸೈಟ್ಗಳನ್ನು ಒಟ್ಟುಸೇರಿಸಿ jw.org ಎಂಬ ಹೊಸ ವೆಬ್ ಸೈಟ್ ಆಗಿ ಮರುವಿನ್ಯಾಸಿಸಲಾಗಿದೆ.—2 ತಿಮೊ. 4:5.
“ಭೂಮಿಯಾದ್ಯಂತ”: ಜನಸಂಖ್ಯೆಯಲ್ಲಿ ಶೇಕಡ 33 ಮಂದಿ ಇಂಟರ್ನೆಟ್ ಬಳಸುತ್ತಾರೆ. ಹೆಚ್ಚಿನ ಜನರು, ಅದರಲ್ಲೂ ಮುಖ್ಯವಾಗಿ ಯುವಜನರು ಇದರಿಂದಲೇ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಮ್ಮ ಅಧಿಕೃತ ವೆಬ್ ಸೈಟ್ನಲ್ಲಿ ಬೈಬಲಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಭರವಸಾರ್ಹ ಉತ್ತರವಿದೆ. ಇದು ಜನರಿಗೆ ಯೆಹೋವನ ಸಂಘಟನೆಯ ಪರಿಚಯ ಮಾಡಿಸುತ್ತದೆ. ಉಚಿತ ಮನೆ ಬೈಬಲ್ ಅಧ್ಯಯನವನ್ನು ವಿನಂತಿಸಲು ಅವರಿಗೆ ಸುಲಭವನ್ನಾಗಿ ಮಾಡುತ್ತದೆ. ಭೂಮಿಯ ಯಾವ ಸ್ಥಳಗಳಲ್ಲಿ ಸುವಾರ್ತೆ ಕೇಳಿಸಿಕೊಳ್ಳಲು ಜನರಿಗೆ ಅವಕಾಶ ಇಲ್ಲವೋ ಅಲ್ಲಿ ಸಹ ಈ ಸಂದೇಶವನ್ನು ತಲಪಿಸಲು ವೆಬ್ ಸೈಟ್ ನೆರವಾಗುತ್ತಿದೆ.
“ಎಲ್ಲ ಜನಾಂಗಗಳಿಗೆ”: ‘ಎಲ್ಲ ಜನಾಂಗದ’ ಜನರಿಗೆ ಸಾಕ್ಷಿನೀಡಬೇಕಾದರೆ ಬೇರೆ ಬೇರೆ ಭಾಷೆಗಳಲ್ಲಿ ಬೈಬಲ್ ಸತ್ಯವನ್ನು ನಾವು ಪ್ರಸ್ತುತಪಡಿಸಬೇಕು. jw.org ವೆಬ್ ಸೈಟ್ಗೆ ಭೇಟಿನೀಡುವವರು ಸುಮಾರು 400 ಭಾಷೆಗಳಲ್ಲಿ ಬೈಬಲಾಧರಿತ ಮಾಹಿತಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು. ಬೇರೆ ಯಾವುದೇ ವೆಬ್ ಸೈಟ್ ಇಷ್ಟೊಂದು ಭಾಷೆಯಲ್ಲಿ ಲಭ್ಯವಿಲ್ಲ.
ಇದರ ಸದುಪಯೋಗ ಮಾಡಿಕೊಳ್ಳಿ: jw.org ಮರುವಿನ್ಯಾಸಿಸಿರುವುದು ಅವಿಶ್ವಾಸಿಗಳಿಗೆ ಸಾಕ್ಷಿನೀಡಲಿಕ್ಕಾಗಿ ಮಾತ್ರವಲ್ಲ, ಯೆಹೋವನ ಸಾಕ್ಷಿಗಳ ಉಪಯೋಗಕ್ಕಾಗಿ ಸಹ. ನಿಮ್ಮ ಬಳಿ ಇಂಟರ್ನೆಟ್ ಲಭ್ಯವಿದ್ದರೆ, jw.org ಉಪಯೋಗಿಸುವುದು ಹೇಗೆಂದು ತಿಳಿದುಕೊಳ್ಳಿ. ಕೆಲವು ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ.
[ಪುಟ 3ರಲ್ಲಿರುವ ರೇಖಾಕೃತಿ]
(For fully formatted text, see publication)
ಪ್ರಯತ್ನಿಸಿ ನೋಡಿ
1 ಕಂಪ್ಯೂಟರ್ನ ಇಂಟರ್ನೆಟ್ ಬ್ರೌಸರ್ನಲ್ಲಿ www.jw.org ಎಂಬ ವಿಳಾಸ ಟೈಪ್ ಮಾಡಿ.
2 ಆ ಪೇಜ್ ತೆರೆದುಕೊಂಡ ಬಳಿಕ ಬೇರೆ ಬೇರೆ ವಿಷಯಗಳನ್ನು ಕ್ಲಿಕ್ಕಿಸಿ ಅದರಲ್ಲಿ ಏನಿದೆ ಎಂದು ನೋಡಿ.
3 ನಿಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ಸೌಲಭ್ಯ ಇರುವುದಾದರೆ ಅದರಲ್ಲಿ jw.org ಉಪಯೋಗಿಸಲು ಪ್ರಯತ್ನಿಸಿ. ಪೇಜ್ ವಿನ್ಯಾಸವು ನಿಮ್ಮ ಮೊಬೈಲಿಗೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಆದರೆ ಮಾಹಿತಿಯಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.