ಸಮೀಪಿಸುತ್ತಿರುವ ಒಳ್ಳೇ ಪರಿಸ್ಥಿತಿಗಳ ಸುವಾರ್ತೆಯನ್ನು ಸಾರಿರಿ
1 ಸಮೀಪಿಸುತ್ತಿರುವ ಹೊಸಲೋಕದ ಸಂದೇಶವನ್ನು ಸಾರುವುದರಲ್ಲಿ ಕ್ರಮವಾಗಿ ಭಾಗವಹಿಸುವುದು ಎಂಥಾ ಸಂತೋಷದ ಸುಯೋಗ! ಇತರರಿಗೆ ಈ ಸಂದೇಶವನ್ನು ಕೊಡುವುದಕ್ಕೆ ನಾವೆಷ್ಟು ಹೇರಳ ಆಶೀರ್ವದಿತರು! ಬರಲಿರುವ ಒಳ್ಳೇ ವಿಷಯಗಳ ಸುವಾರ್ತೆಯನ್ನು ನಾವು ಪಾಲಿಗರಾಗುವಾಗ ನಮ್ಮ ಸ್ವಂತ ನಂಬಿಕೆ ಮತ್ತು ಹುರುಪು ಬಲಗೊಳ್ಳುತ್ತದೆ. “ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ” ಎಂಬ ಬುದ್ಧಿವಾದಕ್ಕೆ ಕಿವಿಗೊಡುವಾಗ, ನಮ್ಮ ಹೃದಯಗಳು ಹರ್ಷಗೊಳ್ಳುತ್ತವೆ.—ಕೀರ್ತ. 96:2-4.
2 ರಾಜ್ಯದ ಸಂದೇಶದ ಕುರಿತು ಪ್ರತಿದಿನವೂ ಮಾತಾಡುವ ಧ್ಯೇಯವನ್ನು ನೀವಿಟ್ಟಿರುವಿರೋ? ಸಹಾಯಕ ಅಥವಾ ಕ್ರಮದ ಪಯನೀಯರರಾಗಿ ಸೇವೆ ಮಾಡುವವರು ಸಾಮಾನ್ಯವಾಗಿ ಪ್ರತೀ ದಿನ ಸುವಾರ್ತೆಯನ್ನು ಸಾರುವುದರಲ್ಲಿ ಭಾಗವಹಿಸುತ್ತಾರೆ. ನೀವಿದನ್ನು ಮಾಡಬಲ್ಲಿರೋ? ಇಲ್ಲವಾದರೆ, ಅನೌಪಚಾರಿಕವಾಗಿ ಕೊಂಚ ರೀತಿಯಲ್ಲಾದರೂ, ನೀವದರಲ್ಲಿ ಭಾಗವಹಿಸಶಕ್ತರೋ? ನಾವೆಲ್ಲರೂ ಇದನ್ನು ಮಾಡಶಕ್ತರಾದರೆ ಯೆಹೋವನಿಗೆ ಎಂಥಾ ಮಹಾ ಸ್ತುತಿದ್ವನಿಯು ಮೇಲೇರುವುದು! ಪ್ರತಿದಿನವೂ ರಾಜ್ಯದ ಸಂದೇಶವನ್ನು ನೀವು ಸಾರುವಾಗ ಯೆಹೋವನ ಮಹಾ ಆಶೀರ್ವಾದವನ್ನು ನೀವು ಅನುಭವಿಸುವಿರಿ.
3 ಸುವಾರ್ತೆಯನ್ನು ಇತರರೊಂದಿಗೆ ಹಂಚಲು ನಾವೆಷ್ಟು ಸಾರಿ ಭಾಗವಹಿಸುತ್ತೇವೆಂಬದನ್ನು ಶುಶ್ರೂಷೆಯ ಕಡೆಗೆ ನಮಗಿರುವ ಮನೋಭಾವವು ಪ್ರಭಾವಿಸಬಲ್ಲದು. ಜನರ ಪ್ರತಿವರ್ತನೆಯಲ್ಲಿ ಕೊರತೆಯ ಕಾರಣ ರಾಜ್ಯ ಸಂದೇಶದ ನೀಡಿಕೆಯಲ್ಲಿ ನಾವು ನಿರಾಶೆಗೊಳ್ಳಬಾರದು, ನಿಧಾನಿಸಬಾರದು. ಬದಲಾಗಿ, ಬರಲಿರುವ ಒಳ್ಳೇ ಪರಿಸ್ಥಿತಿಗಳ ಕುರಿತಾದ ಸಂದೇಶಕ್ಕೆ ನಾವು ಸಕಾರಾತ್ಮಕ ಭಾವವನ್ನೂ ತೀವ್ರ ಗಣ್ಯತೆಯನ್ನೂ ತೋರಿಸುವುದಾದರೆ, ದಿನದಿನವೂ ಸುವಾರ್ತೆಯನ್ನು ಸಾರುವುದರಲ್ಲಿ ಭಾಗಿಗಳಾಗುವ ನಮ್ಮ ಪ್ರಯತ್ನವು ಬಲಗೊಳ್ಳುವುದು.—ಲೂಕ 6:45.
4 ‘ಬಲಪ್ರಭಾವಗಳು ಯೆಹೋವನವೇ’ ಎಂದು ಹೇಳಿ ಆತನನ್ನು ಘನಪಡಿಸುವುದರಲ್ಲಿ ಕುಟುಂಬ ಸದಸ್ಯರು ಐಕ್ಯದಿಂದ ಒಟ್ಟಾಗಿ ಸೇವೆ ಮಾಡುವಾಗ, ಅನೇಕ ಮಹಾ ಆಶೀರ್ವಾದಗಳು ಆನಂದಿಸಲ್ಪಡುತ್ತವೆ. (ಕೀರ್ತ. 96:7) ಕುಟುಂಬವಾಗಿ ಶುಶ್ರೂಷೆಯಲ್ಲಿ ಭಾಗವಹಿಸುವಂತೆ ಸಮಯವನ್ನು ಬದಿಗಿಡುವಾಗ ಕೌಟುಂಬಿಕ ಮತ್ತು ಆತ್ಮೀಕ ಬಂಧಗಳು ಬಲಗೊಳ್ಳುತ್ತವೆ. ಕುಟುಂಬ ಸದಸ್ಯರು ಒಟ್ಟಾಗಿ ಸಭೆಯ ಇತರ ಕುಟುಂಬಗಳೊಂದಿಗೆ ರಾಜ್ಯ ನಿರೀಕ್ಷೆಯನ್ನು ಸಾರುವುದರಲ್ಲಿ ಪಾಲಿಗರಾಗಲು ಶನಿವಾರ ಮತ್ತು ಆದಿತ್ಯವಾರಗಳು ಅತ್ಯುತ್ತಮ ಸಂದರ್ಭಗಳನ್ನು ಒದಗಿಸುತ್ತವೆ.
ಲಿವ್ವ್ ಫಾರೆವರ್ ಪುಸ್ತಕ ಉಪಯೋಗಿಸಿರಿ
5 ಎಪ್ರಿಲಿನಲ್ಲಿ ನಾವು ಲಿವ್ವ್ ಫಾರೆವರ್ ಪುಸ್ತಕವನ್ನು ನೀಡಲಿದ್ದೇವೆ. ಜನರು ತಮ್ಮ ದೈನಂದಿನ ಜೀವಿತದ ಕುರಿತು ಚಿಂತಿಸುತ್ತಾರೆ ಮತ್ತು ಒಂದು ಸಂತೋಷದ ಭವಿಷ್ಯತ್ತನ್ನು ಬಯಸುತ್ತಾರೆ. ಮಾನವಕುಲಕ್ಕೆ ಇಂದು ಇಷ್ಟು ಮಾಮೂಲಿಯಾಗಿರುವ ಸಮಸ್ಯೆಗಳು ಇಲ್ಲದೇ ಹೋಗುವ ಒಂದು ದೀರ್ಘಾಯುಷ್ಯದ ಪ್ರತೀಕ್ಷೆಯ ಕುರಿತು ಕಲಿಯಲು ಪ್ರಾಮಾಣಿಕ ಹೃದಯದ ಜನರು ಸಂತೋಷಿಸುತ್ತಾರೆ. ಈ ನಿರೀಕ್ಷೆಯ ಕುರಿತಾದ ಸ್ಪಷ್ಟ ಜ್ಞಾನ ಮತ್ತು ಅದು ಬೇಗನೇ ನಿಜತ್ವವಾಗುವ ಸಂಗತಿಯಲ್ಲಿ ನಂಬಿಕೆ, ರಾಜ್ಯ ಸಂದೇಶವನ್ನು ನೀಡುವುದರಲ್ಲಿ ಸಕಾರಾತ್ಮಕ ಕ್ರಿಯೆ ಕೈಕೊಳ್ಳುವಂತೆ ನಮ್ಮನ್ನು ಪ್ರೇರಿಸಬೇಕು.
6 ನಿಮ್ಮ ಪ್ರಸಂಗವನ್ನು ರುಚಿಸುವಂತೆ ಮಾಡಲು ನೀವು ಹೇಳಲಿರುವ ವಿಷಯದ ಕಡೆಗೆ ಪ್ರಾರ್ಥನಾಪೂರ್ವಕ ಗಮನವನ್ನು ಕೊಡಿರಿ. ನಿಮ್ಮ ಪರಿಚಯವನ್ನು ಹೇಳಿದ ಮೇಲೆ ಹೀಗನ್ನಬಹುದು: “ನಿಮಗೂ ನಿಮ್ಮ ಕುಟುಂಬಕ್ಕೂ ಯಾವ ರೀತಿಯ ಭವಿಷ್ಯತ್ತನ್ನು ನೀವು ಬಯಸುತ್ತೀರಿ? [ಉತ್ತರಿಸಲು ಸಮಯ ಕೊಡಿರಿ.] ನಾವೆಲ್ಲರೂ ಜೀವದಲ್ಲಿ ಆನಂದಿಸುತ್ತೇವೆ ಮತ್ತು ಸಾಧ್ಯವಾದಷ್ಟು ಹೆಚ್ಚು ಕಾಲ ಜೀವಿಸ ಬಯಸುತ್ತೇವೆ. ಆದರೂ ಎಷ್ಟೋ ಸಮಸ್ಯೆಗಳು ಬರುತ್ತವೆ ಮತ್ತು ನಮ್ಮ ಜೀವಕ್ಕೇ ಬೆದರಿಕೆ ಹಾಕುವಂತೆ ಕಾಣುತ್ತವೆ. ಆದ್ದರಿಂದ ಒಂದು ಭವ್ಯ ಭವಿಷ್ಯದ ಮತ್ತು ಜೀವಿತದ ಚಿಂತೆಗಳನ್ನು ನಿಭಾಯಿಸುವ ವಿಧವನ್ನು ತೋರಿಸುವ ಬೈಬಲಿನ ಸಂದೇಶವನ್ನು ತಿಳಿಯುವುದರಲ್ಲಿ ನೀವು ಅಸಕ್ತರಿರಬಹುದು.” ಈ ಬಿಂದುವಲ್ಲಿ ನೀವು, ನಿಮ್ಮ ಸದ್ಯದ ಸಂಭಾಷಣೆಗಾಗಿ ವಿಷಯದ ವಚನಗಳನ್ನು ಒಳತರಬಹುದು. ಮುಂದಿರುವ ಭವ್ಯ ಭವಿಷ್ಯತ್ತನ್ನು ಒತ್ತಿ ಹೇಳಲು ಲಿವ್ವ್ ಫಾರೆವರ್ ಪುಟದ 9, 11-13, 161 ಮತ್ತು 162 ರಲ್ಲಿರುವ ನಿರ್ದಿಷ್ಟ ಮಾತಾಡುವ ವಿಷಯಗಳನ್ನು ಉಪಯೋಗಿಸಿರಿ.
7 ಎಂಥಾ ಸಂತೋಷಕರ ಹಾಗೂ ನಂಬಿಕೆ ವರ್ಧಕ ಸಂದೇಶವನ್ನು ಸಾರಲು ಯೆಹೋವನು ನಮಗೆ ಕೊಟ್ಟಿದ್ದಾನೆ! ಯೆಹೋವನ ಮಹಾ ವಾಗ್ದಾನಗಳಿಗಾಗಿ ಆಳವಾದ ಗಣ್ಯತೆ ತೋರಿಸುವ ಇತರರೊಂದಿಗೂ ನಿಕಟವಾಗಿ ಕೆಲಸ ಮಾಡುವ ಮಹಾ ಸುಯೋಗವು ನಮಗಿದೆ. ನಾವೀಗ ಮಾಡುತ್ತಿರುವ ಕೆಲಸವು ಇನ್ನೆಂದೂ ಪುನರಾವರ್ತನೆಯಾಗದು, ಮತ್ತು ಅದು ಬೇಗನೇ ಕೊನೆಗೊಳ್ಳಲಿದೆ. ಆದ್ದರಿಂದ, ನಮಗಿರುವ ಸಮಯವನ್ನು ಮತ್ತು ಸೌಲಭ್ಯಗಳನ್ನು, ಸಮೀಪಿಸುತ್ತಿರುವ ಒಳ್ಳೇ ವಿಷಯಗಳ ಸುವಾರ್ತೆಯನ್ನು ಪ್ರತಿದಿನವೂ ಸಾರುವುದಕ್ಕಾಗಿ ಉಪಯೋಗಿಸಬಾರದೇ?