ಮನೆ ಬೈಬಲ್ ಅಭ್ಯಾಸಗಳಿಗೆ ತಯಾರಿಸುವದು ಮತ್ತು ನಡಿಸುವದು
1 ಯೇಸುವು ತನ್ನ ಹಿಂಬಾಲಕರಿಗೆ ಸುವಾರ್ತೆಯನ್ನು ಸಾರಲು ಮತ್ತು “ಶಿಷ್ಯರನ್ನಾಗಿ ಮಾಡಲು” ಆಜ್ಞಾಪಿಸಿದನು. (ಮತ್ತಾ. 24:14; 28:19, 20) ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುವದು ಶಿಷ್ಯರನ್ನಾಗಿ ಮಾಡುವ ಒಂದು ಅತಿ ಪರಿಣಾಮಕಾರಿ ವಿಧವಾಗಿದೆ. ಈ ಪ್ರಾಮುಖ್ಯ ಕೆಲಸವು ನಮ್ಮ ಆರಾಧನೆಯ ಒಂದು ಭಾಗವಾಗಿರುವದರಿಂದ, ಮನೆ ಬೈಬಲ್ ಅಭ್ಯಾಸಕ್ಕಾಗಿ ತಯಾರಿಸುವಾಗ ಮತ್ತು ನಡಿಸುವಾಗ ನಮ್ಮಿಂದ ಅತ್ಯುತ್ತಮವಾದುದನ್ನು ಮಾಡಲು ಪ್ರಯತ್ನಿಸತಕ್ಕದ್ದು.
2 ಅಭ್ಯಾಸಕ್ಕಾಗಿ ತಯಾರಿಸುವದು: ಒಂದು ಮನೆ ಬೈಬಲ್ ಅಭ್ಯಾಸವನ್ನು ನಡಿಸಲು ತಯಾರಿಸುವಿಕೆಯಲ್ಲಿ ಪಾಠವನ್ನು ಓದುವದು ಮತ್ತು ಕೊಡಲ್ಪಟ್ಟ ಶಾಸ್ತ್ರವಚನಗಳನ್ನು ನೋಡುವದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿರುತ್ತದೆ. ನಮ್ಮ ಬೈಬಲ್ ವಿದ್ಯಾರ್ಥಿಯ ಹೃದಯವನ್ನು ತಲುಪಬೇಕಾದರೆ, ಅವನನ್ನು ಪ್ರಚೋದಿಸುವ ವಿಧದಲ್ಲಿ ವಿಷಯವನ್ನು ನಾವು ಸಾದರಪಡಿಸತಕ್ಕದ್ದು.
3 ಮೊದಲಾಗಿ ನಮಗೆ ವಿಷಯದ ಸ್ಪಷ್ಟವಾಗಿದ ತಿಳುವಳಿಕೆ ಇರತಕ್ಕದ್ದು. ಎಲ್ಲಾ ಶಾಸ್ತ್ರವಚನಗಳು ಪಾರಗ್ರಾಫ್ಗಳಿಗೆ ಮತ್ತು ಬೈಬಲ್ ವಿದ್ಯಾರ್ಥಿಗೆ ಹೇಗೆ ಅನ್ವಯಿಸುತ್ತವೆ ಎಂದು ನಾವು ತಿಳಿದಿರುವ ಆವಶ್ಯಕತೆಯಿದೆ. ಮುಖ್ಯ ಶಬ್ದಗಳನ್ನು ಮತ್ತು ಪದಸಮೂಹಗಳನ್ನು ಅಡಿಗೆರೆ ಮಾಡುವದರ ಮೂಲಕ ನೆನಪಿನಲ್ಲಿಡಲು ನಮಗೆ ಸಹಾಯ ಮಾಡುತ್ತವೆ. ಪಾಠದ ಮುಖ್ಯ ವಿಚಾರಗಳನ್ನು ಪ್ರತ್ಯೇಕಿಸಿ, ವಿದ್ಯಾರ್ಥಿಗೆ ಅದನ್ನು ಹೇಗೆ ದಾಟಿಸಬಹುದು ಎಂದು ನಾವು ಯೋಚಿಸತಕ್ಕದ್ದು. ಇದಕ್ಕೆ ಕೂಡಿಸಿ, ವಿದ್ಯಾರ್ಥಿಯ ಶಾಸ್ತ್ರೀಯ ತಿಳುವಳಿಕೆಯ ಮಟ್ಟ, ಕೆಲವೊಂದು ನಿರ್ದಿಷ್ಟ ವಿಷಯಗಳನ್ನು ಸ್ವೀಕರಿಸಲು ಅವನಿಗಿರಬಹುದಾದ ಸಮಸ್ಯೆಗಳು, ಅವನ ಕ್ರೈಸ್ತ ವ್ಯಕ್ತಿತ್ವದಲ್ಲಿ ಪ್ರಗತಿಮಾಡಬೇಕಾದ ಆವಶ್ಯಕತೆ, ಮುಂತಾದವುಗಳನ್ನು ಪರಿಗಣಿಸತಕ್ಕದ್ದು. ನಾವು ಹೀಗೆ ಪ್ರಶ್ನಿಸಬಹುದು: ‘ಪ್ರಗತಿಯನ್ನು ಮಾಡುವಂತೆ ಅವನಿಗೆ ಸಹಾಯವಾಗಲು ಪಾಠದಲ್ಲಿರುವ ವಿಷಯ ಮತ್ತು ಶಾಸ್ತ್ರ ವಚನಗಳನ್ನು ಹೇಗೆ ಉಪಯೋಗಿಸಸಾಧ್ಯವಿದೆ?’ ಕೆಲವೊಮ್ಮೆ ಹೆಚ್ಚಿನ ಸಂಶೋಧನೆಯ ಅಗತ್ಯವು ಜರೂರಿಯದ್ದಾಗಿರಬಹುದು. ವಿದ್ಯಾರ್ಥಿಯು ನಿಜವಾಗಿ ಪ್ರಯೋಜನ ಪಡೆಯಬೇಕಾದರೆ ಜಾಗ್ರತೆಯ ತಯಾರಿಯ ಅಗತ್ಯವು ಅಲ್ಲಿರುತ್ತದೆ.
4 ಒಂದು ಬೈಬಲ್ ಅಭ್ಯಾಸಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುವದು ತಯಾರಿಯ ಒಂದು ಪ್ರಾಮುಖ್ಯ ಭಾಗವಾಗಿರುತ್ತದೆ. ವ್ಯಕ್ತಿಯ ಮತ್ತು ಅವನ ಆವಶ್ಯಕತೆಗಳ ಕುರಿತು ಪ್ರಾರ್ಥಿಸುವದರಲ್ಲಿ ನಿರ್ದಿಷ್ಟವಾಗಿರ್ರಿ. ಅವನ ಹೃದಯವನ್ನು ನೀವು ತಲುಪಲು ಸಹಾಯವಾಗುವಂತೆ ಯೆಹೋವನನ್ನು ಬೇಡಿರಿ.—1 ಕೊರಿಂ. 3:6.
5 ಅಭ್ಯಾಸವನ್ನು ನಡಿಸುವದು: ಸತ್ಯವನ್ನು ತನ್ನ ಸ್ವಂತದ್ದಾಗಿ ಮಾಡಿಕೊಳ್ಳಲು ಒಬ್ಬ ವ್ಯಕ್ತಿಗೆ ಸಹಾಯಮಾಡುವದರಲ್ಲಿ ನಮ್ಮ ವತಿಯಿಂದ ಪ್ರಯತ್ನವನ್ನು ಅಪೇಕ್ಷಿಸಲಾಗುತ್ತದೆ. ವ್ಯಾಸಂಗದೋಪಾದಿ ಸರಳವಾಗಿ ಅಭ್ಯಾಸದ ಸಮಾಚಾರವನ್ನು ಆವರಿಸುವದು ವ್ಯಕ್ತಿಗೆ ಜ್ಞಾನವನ್ನು ಪಡೆಯಲು ನೆರವಾಗಬಹುದು, ಆದರೆ ಅವನೇನು ಕಲಿಯುತ್ತಾನೋ ಅದನ್ನು ಅವನು ನಂಬುತ್ತಾನೋ? ವೈಯಕಿಕ್ತವಾಗಿ ಸಮಾಚಾರವು ಅವನಿಗೆ ಹೇಗೆ ತಟ್ಟುತ್ತದೆ ಮತ್ತು ಅವನೇನು ಕಲಿತಿದ್ದಾನೋ ಅದರಿಂದ ಅವನೇನು ಮಾಡತಕ್ಕದ್ದು ಎಂದು ವಿದ್ಯಾರ್ಥಿಯು ನೋಡಲು ಸಹಾಯ ಮಾಡಿರಿ.—ಕೊಲೊ. 3:10.
6 ಗಮನಿಸುತ್ತಿರುವ ವಿಷಯಕ್ಕೆ ನೇರವಾಗಿ ಸಂಬಂಧಿಸದ ಇತರ ವಿಚಾರಗಳಿಗೆ ತೇಲಿಹೋಗುವ ಅಪಾಯದಿಂದ ಚರ್ಚೆಯನ್ನು ದೂರವಿರಿಸಿರಿ. ಇವುಗಳನ್ನು ಅಭ್ಯಾಸದ ನಂತರ ಇಲ್ಲವೇ ಇನ್ನೊಂದು ಸಮಯದಲ್ಲಿ ನೋಡಬಹುದು. ಪುಸ್ತಕದಿಂದ ಕೇವಲ ಓದುವದರ ಬದಲಾಗಿ ವಿದ್ಯಾರ್ಥಿಯು ತನ್ನ ಸ್ವಂತ ಮಾತುಗಳಲ್ಲಿ ಉತ್ತರಿಸುವದು ಎಷ್ಟೋ ಪ್ರಾಮುಖ್ಯವಾಗಿದೆ. ಇದರಿಂದ ಅವನು ವಿಷಯವನ್ನು ಅರ್ಥಮಾಡಿಕೊಳ್ಳುತ್ತಾನೋ ಇಲ್ಲವೋ ಎಂದು ನಿರ್ಧರಿಸಲು ನಿಮಗೆ ಸಹಾಯವಾಗುತ್ತದೆ.
7 ವಿದ್ಯಾರ್ಥಿಯು ಅದನ್ನು ತಪ್ಪಿಸದಂತೆ, ಒಳ್ಳೆಯ ಬೋಧಕನು ಮುಖ್ಯ ವಿಷಯವನ್ನು ಒತ್ತಿಹೇಳುತ್ತಾನೆ. ಯೇಸುವು ಇದನ್ನು ವಿಷಯಗಳ ಹೃದಯಕ್ಕೆ ಹೋಗಿ ತಲುಪುವ ಯೋಚನಾ-ಪ್ರೇರಕ ಪ್ರಶ್ನೆಗಳ ಮೂಲಕ ಮಾಡಿದ್ದನು. (ಮತ್ತಾ. 16:13-16; 17:24-27) ವಿದ್ಯಾರ್ಥಿಯು ತಿಳಿದು ಕೊಂಡಿದ್ದಾನೆಂದು ಖಚಿತ ಪಡಿಸಿಕೊಳ್ಳಲು ಪ್ರಶ್ನೆಗಳು ನಿಮಗೆ ಸಹಾಯ ಮಾಡುವದು ಮಾತ್ರವಲ್ಲ, ಆದರೆ ಅವನ ಹೃದಯದಲ್ಲಿ ಏನಿದೆ ಎಂದೂ ಪ್ರಕಟಪಡಿಸುತ್ತದೆ. ಯೇಸುವು ಸರಳವಾದ, ಜಿಗುಟಾಗಿರದ ಉದಾಹರಣೆಗಳನ್ನು ಕೂಡ ಉಪಯೋಗಿಸಿದನು, ಅದರಿಂದ ಅವನೇನು ಹೇಳುತ್ತಾನೆ ಎನ್ನುವದರ ಮೇಲೆ ಅವನ ಆಲಿಸುವವರಿಗೆ ಯೋಚಿಸಲು ಸಹಾಯವಾಯಿತು.—ಮತ್ತಾಯ 13:31-33; 24:32, 33.
8 ಅಭ್ಯಾಸದ ಕೊನೆಯಲ್ಲಿ ಪುನರಾವರ್ತನೆಯಲ್ಲಿ ಮುಖ್ಯ ಶಾಸ್ತ್ರವಚನಗಳನ್ನು ಸೇರಿಸುವದಕ್ಕೆ ಖಚಿತ ನಿರ್ಧಾರ ಮಾಡಿರಿ. ಅವನೇನು ಕಲಿತಿದ್ದಾನೋ ಅದರ ಕುರಿತು ವಿದ್ಯಾರ್ಥಿಯು ಯಾವ ಭಾವನೆ ಹೊಂದಿದ್ದಾನೆ ಎಂದು ನೀವು ನೋಡಲು ಮತ್ತು ಅವನೇನನ್ನು ಕಲಿತಿದ್ದಾನೋ ಅದನ್ನು ಹೇಗೆ ಅನ್ವಯಿಸಸಾಧ್ಯವಿದೆ ಎಂಬುದರ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗುವಂತೆ ಪ್ರಶ್ನೆಗಳನ್ನು ಉಪಯೋಗಿಸಿರಿ. ನಿಮ್ಮ ಮುಂದಿನ ಅಭ್ಯಾಸದ ಆರಂಭದಲ್ಲಿ, ಆವಶ್ಯಕವಾದ ಮುಖ್ಯ ವಿಚಾರಗಳನ್ನು ಸಂಕ್ಷಿಪ್ತವಾಗಿ ಪುನರಾವರ್ತಿಸಿರಿ.
9 ಯೆಹೋವನ ಸೇವಕರಾಗುವಂತೆ ಜನರ ತರಬೇತಿಯನ್ನು ನಾವು ಮಾಡುತ್ತೇವೆ. ಇದು ಒಂದು ಸುಯೋಗವೂ, ಮತ್ತು ಒಂದು ಗಂಭೀರವಾದ ಜವಾಬ್ದಾರಿಕೆಯೂ ಆಗಿದೆ. ಮನೆ ಬೈಬಲ್ ಅಭ್ಯಾಸದಲ್ಲಿ ನೀವು ನಿಮ್ಮ ಕಲಿಸುವ ಗುಣಮಟ್ಟವನ್ನು ಪ್ರಗತಿಗೊಳಿಸಸಾಧ್ಯವಿದೆಯೇ? ಮನೆ ಬೈಬಲ್ ಅಭ್ಯಾಸಗಳಿಗೆ ತಯಾರಿಸುವದರಲ್ಲಿ ಮತ್ತು ನಡಿಸುವದರಲ್ಲಿ ನಮ್ಮ ಅತ್ಯುತ್ತಮವಾದುದ್ದನ್ನು ನಾವು ಮಾಡಲೇಬೇಕಾಗಿದೆ.—1 ತಿಮೊ. 4:15, 16.