ಮನೆ ಬೈಬಲ್ ಅಧ್ಯಯನವೊಂದನ್ನು ನಡೆಸುವುದು
1 ಒಂದು ಪ್ರಭಾವಕಾರಿ ಮನೆ ಬೈಬಲ್ ಅಧ್ಯಯನವು ಹೇಗೆ ನಡೆಸಲ್ಪಡುತ್ತದೆ? ಯಾವ ಮೂಲಭೂತ ಉದಾಹರಣೆ ನಮಗಿದೆ? ಅಧ್ಯಯನ ವಿಷಯದಲ್ಲಿರುವ ವಚನಗಳನ್ನು ಹೇಗೆ ಪರಿಗಣಿಸಸಾಧ್ಯವಿದೆ? ಪ್ಯಾರಗ್ರಾಫ್ಗಳನ್ನು ಯಾರು ಓದಬೇಕು? ಅಧ್ಯಯನವೊಂದನ್ನು ನಡೆಸುವುದಕ್ಕೆ ಇರುವ ಮೂಲಭೂತ ವಿಧಾನದ ಜೊತೆಗೆ, ಸತ್ಯವನ್ನು ತನ್ನ ಸ್ವಂತದ್ದಾಗಿ ಮಾಡುವಂತೆ ವಿದ್ಯಾರ್ಥಿಗೆ ಸಹಾಯಮಾಡಲು ಯಾವ ಹೆಚ್ಚಿನ ವಿಷಯವು ಬೇಕಾಗಿದೆ? ತೋರದ ಯಾವ ಅಪಾಯಗಳು ತೊರೆಯಲ್ಪಡಬೇಕು?
2 ಅಧ್ಯಯನವೊಂದನ್ನು ನಡೆಸುವ ವಿಧ: ಸಾಮಾನ್ಯವಾಗಿ ಮಾತಾಡುವುದಾದರೆ, ಒಂದು ಮನೆ ಬೈಬಲ್ ಅಧ್ಯಯನವು ಕಾವಲಿನಬುರುಜು ಅಭ್ಯಾಸದ ನಮೂನೆಯನ್ನು ಅನುಸರಿಸುತ್ತದೆ. ಮೊದಲು, ಪರಿಗಣಿಸಲಿಕ್ಕಿರುವ ಪ್ಯಾರಗ್ರಾಫ್ನ್ನು ಓದಲಾಗುತ್ತದೆ. ತರುವಾಯ ಅಧ್ಯಯನವನ್ನು ನಡೆಸುತ್ತಿರುವ ವ್ಯಕ್ತಿಯು ಆ ಪ್ಯಾರಗ್ರಾಫ್ನ ಮೇಲೆ ಇರುವ ಮುದ್ರಿತ ಪ್ರಶ್ನೆಯನ್ನು ಕೇಳುತ್ತಾನೆ ಮತ್ತು ಉತ್ತರಿಸುವಂತೆ ವಿದ್ಯಾರ್ಥಿಗೆ ಅನುಮತಿ ನೀಡುತ್ತಾನೆ. ವಿದ್ಯಾರ್ಥಿಯು ಹಿಂಜರಿಯುವುದಾದರೆ, ವಿಷಯ ವಸ್ತುವಿನ ಮೇಲೆ ವಿದ್ಯಾರ್ಥಿಯು ವಿವೇಚಿಸುವಂತೆ ಮತ್ತು ಸರಿಯಾದ ಸಮಾಪ್ತಿಗೆ ಬರುವಂತೆ ಮಾಡುವ ಪ್ರಶ್ನೆಗಳನ್ನು ಕೇಳಲು ಚಾಲಕನು ಸಿದ್ಧನಾಗಿರಬೇಕು.
3 ಪ್ಯಾರಗ್ರಾಫ್ನಲ್ಲಿರುವ ವಿಷಯಕ್ಕೆ ವಚನಗಳು ಹೇಗೆ ಅನ್ವಯಿಸುತ್ತವೆ ಎಂಬುದನ್ನು ಪರಿಗಣಿಸಿರಿ. ಉದ್ಧರಿಸಲಾದ ವಚನಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗೆ ತೋರಿಸಿರಿ, ಮತ್ತು ಅವು ಹೇಗೆ ಅನ್ವಯವಾಗುತ್ತವೆ ಎಂದು ಅವನೊಂದಿಗೆ ವಿವೇಚಿಸಿರಿ. ವಚನಗಳು ನಮೂದಿಸಲಾಗಿದ್ದು ಉದ್ಧರಿಸಲಾಗಿರದಿದ್ದರೆ, ಅವು ಬಹಳ ದೀರ್ಘವಾಗಿರದಿದ್ದಲ್ಲಿ ಅವುಗಳನ್ನು ಬೈಬಲಿನಿಂದ ತೆಗೆದು ನೋಡುವುದು ಉತ್ತಮವಾದ ಸಂಗತಿ. ವಿದ್ಯಾರ್ಥಿಯು ಅವುಗಳನ್ನು ಓದುವಂತೆ ಮತ್ತು ಪ್ಯಾರಗ್ರಾಫ್ನಲ್ಲಿ ಏನು ತಿಳಿಸಲಾಗಿದೆಯೊ ಅದಕ್ಕೆ ಅವು ಹೇಗೆ ಬೆಂಬಲ ಕೊಡುತ್ತವೆ ಯಾ ಸ್ಪಷ್ಟೀಕರಿಸುತ್ತವೆ ಎಂಬುದರ ಮೇಲೆ ಹೇಳಿಕೆಯನ್ನು ಕೊಡುವಂತೆ ಅನುಮತಿಸಿರಿ.
4 ಸತ್ಯವನ್ನು ತನ್ನ ಸ್ವಂತದ್ದಾಗಿ ಮಾಡುವಂತೆ ವಿದ್ಯಾರ್ಥಿಗೆ ಸಹಾಯ ಮಾಡಿರಿ: ಅಧ್ಯಯನಕ್ಕಾಗಿ ಸರಿಯಾಗಿ ತಯಾರಿಸುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿರಿ. ಓದುವಿಕೆ ಕಲಿಕೆಗೆ ಪ್ರಾಮುಖ್ಯವೆಂಬ ವಿಷಯವನ್ನು ಒತ್ತಿಹೇಳಿರಿ. ಅಧ್ಯಯನ ವಿಷಯವನ್ನು ವಿದ್ಯಾರ್ಥಿಯು ಹೆಚ್ಚಾಗಿ ಓದಿ ಮನನ ಮಾಡಿದಷ್ಟು ಒಳ್ಳೆಯದು. ಕೆಲವು ಚಾಲಕರು ಬೈಬಲ್ ಅಧ್ಯಯನದ ಸಮಯದಲ್ಲಿ ಪ್ಯಾರಗ್ರಾಫ್ಗಳ ಎಲ್ಲಾ ಓದುವಿಕೆಯನ್ನು ವಿದ್ಯಾರ್ಥಿಯಿಂದ ಮಾಡಿಸುತ್ತಾರೆ. ಪ್ಯಾರಗ್ರಾಫ್ಗಳನ್ನು ಓದುವುದರಲ್ಲಿ ಕೆಲವರು ವಿದ್ಯಾರ್ಥಿಗಳೊಂದಿಗೆ ಪರಸ್ಪರವಾಗಿ ವಿನಿಮಯಿಸುತ್ತಾರೆ. ವಿದ್ಯಾರ್ಥಿಯ ಆತ್ಮಿಕ ಏಳಿಗೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾ, ಸರಿಯಾದ ತೀರ್ಮಾನವನ್ನು ಉಪಯೋಗಿಸತಕ್ಕದ್ದು.
5 ಅಧ್ಯಯನದ ವಿಷಯವನ್ನು ವ್ಯಾಸಂಗಿಕ ರೀತಿಯಲ್ಲಿ ಆವರಿಸುವುದು ವಿದ್ಯಾರ್ಥಿಗೆ ಜ್ಞಾನವನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡಬಹುದು, ಆದರೆ ಅವನು ಏನನ್ನು ಕಲಿಯುತ್ತಿದ್ದಾನೊ ಅದನ್ನು ನಂಬುತ್ತಾನೊ? ಸತ್ಯವನ್ನು ತನ್ನ ಸ್ವಂತದ್ದಾಗಿ ಅವನು ಮಾಡಬೇಕಾದರೆ, ವಿಷಯವು ಅವನನ್ನು ವೈಯಕ್ತಿಕವಾಗಿ ಹೇಗೆ ಪ್ರಭಾವಿಸುತ್ತದೆ ಎಂದು ಅವನು ನೋಡಬೇಕು. ಅವನು ಏನನ್ನು ಕಲಿಯುತ್ತಿದ್ದಾನೋ ಅದರ ಕುರಿತು ಅವನಿಗೆ ಹೇಗೆ ಅನಿಸುತ್ತದೆ? ಅವನು ಏನನ್ನು ಕಲಿಯುತ್ತಿದ್ದಾನೋ ಅದನ್ನು ಅವನು ಹೇಗೆ ಉಪಯೋಗಿಸಬಲ್ಲನು? ವಿದ್ಯಾರ್ಥಿಯ ಹೃದಯವನ್ನು ಮುಟ್ಟಲು ಅನ್ವೇಷಕ ಪ್ರಶ್ನೆಗಳನ್ನು ಉಪಯೋಗಿಸಿರಿ.
6 ತೋರದ ಅಪಾಯಗಳನ್ನು ತೊರೆಯಿರಿ: ಒಂದು ಬೈಬಲ್ ಅಧ್ಯಯನವನ್ನು ನಡೆಸುವಾಗ ತೊರೆಯಲು ಅಪಾಯಗಳು ಇವೆ. ಪರಿಗಣಿಸಲಾಗುತ್ತಿರುವ ವಿಷಯಕ್ಕೆ ಸಂಬಂಧಿಸದೆ ಇರುವ ವಿಷಯಗಳು ಏಳುವಾಗ, ಅವುಗಳನ್ನು ಅಧ್ಯಯನದ ಸಮಾಪ್ತಿಯಲ್ಲಿ ಯಾ ಇನ್ನೊಂದು ಸಂದರ್ಭದಲ್ಲಿ ಚರ್ಚಿಸುವುದು ಸಾಮಾನ್ಯವಾಗಿ ಉತ್ತಮವಾಗಿರುವುದು. ವಿದ್ಯಾರ್ಥಿಯು ಉತ್ತರಗಳನ್ನು ಪುಸ್ತಕದಿಂದ ಓದುವ ಬದಲು ತನ್ನ ಸ್ವಂತ ಮಾತುಗಳಲ್ಲಿ ಉತ್ತರಿಸುವಂತೆ ಮಾಡುವುದು ಕೂಡ ಪ್ರಾಮುಖ್ಯವಾಗಿದೆ. ಚಾಲಕನೋಪಾದಿ, ವಿಷಯವನ್ನು ವಿದ್ಯಾರ್ಥಿಯು ತಿಳಿದುಕೊಳ್ಳುತ್ತಾ ಇದ್ದಾನೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಇದು ನಿಮಗೆ ಸಹಾಯ ಮಾಡುವುದು.
7 ಕಡಿಮೆ ಪಕ್ಷ ಒಂದು ಬೈಬಲ್ ಅಧ್ಯಯನವನ್ನಾದರೂ ನಡೆಸುವುದನ್ನು ನಿಮ್ಮ ಗುರಿಯನ್ನಾಗಿ ಯಾಕೆ ಮಾಡಬಾರದು? ನೀವು ಯೆಹೋವನ ಮೇಲೆ ಆತುಕೊಂಡು ಕಾವಲಿನಬುರುಜು ಅಭ್ಯಾಸದ ಮೂಲ ವಿಧಾನವನ್ನು ಅನುಸರಿಸುವುದಾದರೆ ಅದೊಂದು ಕಠಿನ ಕೆಲಸವಲ್ಲ. ಇತರರಿಗೆ ಸತ್ಯವನ್ನು ಕಲಿಸಿ ಮತ್ತು ಶಿಷ್ಯರನ್ನಾಗಿ ಮಾಡುವ ಅತ್ಯಂತ ಪ್ರಭಾವಕಾರಿ ವಿಧವು ಒಂದು ಮನೆ ಬೈಬಲ್ ಅಧ್ಯಯನವನ್ನು ನಡೆಸುವ ಮೂಲಕವೇ ಆಗಿದೆ. ಇದನ್ನು ಮಾಡುವ ಮೂಲಕ, ಮತ್ತಾಯ 28:19, 20 ರಲ್ಲಿರುವ ಯೇಸುವಿನ ಆಜ್ಞೆಯನ್ನು ನೆರವೇರಿಸುವುದರಲ್ಲಿ ಒಂದು ಪೂರ್ಣ ಪಾಲನ್ನು ಹೊಂದಿರುವುದರಿಂದ ಬರುವ ಆನಂದವನ್ನು ನೀವು ಕೂಡ ಅನುಭವಿಸಬಲ್ಲಿರಿ.