ಜ್ಞಾನಿಯಾಗಿರು—ನೀನು ಕಲಿತ ವಿಷಯಗಳನ್ನು ಅನ್ವಯಿಸಿಕೋ
1 ಒಂದು ಸಂತೋಷದ, ಶಾಂತಿಯುಕ್ತ ಜೀವಿತವನ್ನು ಜೀವಿಸುವುದೇ ಹೆಚ್ಚಿನ ಮಾನವರ ಗುರಿಯಾಗಿರುತ್ತದೆ. ಜನರು ಸಂತೋಷವನ್ನು ಗಳಿಸುವಂತೆ ಸಾಫಲ್ಯ ವಿವಾಹ ಹೇಗೆ ಸಾಧ್ಯ, ಮಕ್ಕಳನ್ನು ಬೆಳೆಸುವುದು ಹೇಗೆ, ಆರ್ಥಿಕ ಯಶಸ್ಸನ್ನು ಹೇಗೆ ಗಳಿಸುವುದು ಮತ್ತು ಒಳ್ಳೇ ಆರೋಗ್ಯವನ್ನು ಪಡೆಯುವದೂ ಕಾಪಾಡಿಕೊಳ್ಳುವುದೂ ಹೇಗೆ ಮುಂತಾದ ಹಲವಾರು ವಿಷಯಗಳ ಕುರಿತು ಸಾವಿರಾರು ಪುಸ್ತಕಗಳು ಮತ್ತು ಲೇಖನಗಳು ಸಲಹೆಯನ್ನು ಕೊಡುತ್ತವೆ. ಲೌಕಿಕ ಪ್ರಕಾಶನಗಳಲ್ಲಿ ಸ್ವಲ್ಪ ವ್ಯಾವಹಾರ್ಯ ಜ್ಞಾನವು ಇರುತ್ತದಾದರೂ, ಲೋಕದ ಹೆಚ್ಚಿನ ಜನರಿಗೆ ಸಂತೋಷ, ಸಮಾಧಾನವಿರುವುದು ತೀರಾ ಕಡಿಮೆ. ಇದು ಹೀಗೇಕೆ?
2 ಉತ್ತರವು ಬೈಬಲಿನ ಜ್ಞಾನೋಕ್ತಿ 1:7 ರಲ್ಲಿ ಹೀಗೆ ಕೊಡಲ್ಪಟ್ಟಿದೆ: “ಯೆಹೋವನ ಭಯವೇ ತಿಳುವಳಿಕೆಗೆ ಮೂಲವು. ಮೂರ್ಖರಾದರೋ ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆ ಮಾಡುವರು.” ನಿಜ ಜ್ಞಾನ ಮತ್ತು ತಿಳುವಳಿಕೆಯ ಮೂಲನಾದ ಯೆಹೋವ ದೇವರನ್ನು ಅಂಗೀಕರಿಸದೆ, ಗೌರವಿಸದೆ ಹೋದಲ್ಲಿ ವ್ಯಕ್ತಿಯೊಬ್ಬನು ಶಾಂತಿ ಮತ್ತು ಸಂತೋಷವನ್ನು ಅಪೇಕ್ಷಿಸ ಸಾಧ್ಯವಿಲ್ಲ.
3 ಲೋಕವು ಆತ್ಮಿಕವಾಗಿ ಬಡಕಲಾಗಿದೆ, ಕೃಶವಾಗಿ ಹೋಗಿದೆ. ಅಣಕವಾಗಿ, ಈ ವಿಷಾದಕರ ಸ್ಥಿತಿಯನ್ನು ಅದು ತನ್ನ ಮೇಲೆ ತಾನೇ ತಂದಿರುತ್ತದೆ, ಯಾಕೆಂದರೆ ಭೂಮಿಯಲ್ಲೆಲ್ಲೂ ಆತ್ಮಿಕ ಆಹಾರವು ಹೇರಳವಾಗಿ ದೊರೆಯುತ್ತದೆ, ಅದೂ ಧರ್ಮಾರ್ಥವಾಗಿ. (ಜ್ಞಾನೋ. 1:20, 21; ಪ್ರಕ. 22:17) ಲೋಕದ ಜನರು ಯೆಹೋವನ ಜ್ಞಾನವನ್ನು ತಿರಸ್ಕರಿಸುತ್ತಾರಾದರ್ದಿಂದ, ಅವರು ಆತ್ಮಿಕ ಅಂಧಕಾರದಲ್ಲಿ ಮುಗ್ಗರಿಸುತ್ತಾ ಇದ್ದಾರೆ. (ಜ್ಞಾನೋ. 1:22-32) ಆದರೆ ಯೆಹೋವನ ಜನರಾದ ನಾವಾದರೋ ಆತನ ನಿಯಮಗಳನ್ನು ಗೌರವಿಸುತ್ತೇವೆ ಮತ್ತು ಆಜ್ನೆಗಳನ್ನು ಪಾಲಿಸುತ್ತೇವಾದ್ದರಿಂದ ಆತ್ಮಿಕವಾಗಿ ಉಂಡು, ತೃಪ್ತರೂ ಸಂತೋಷಿತರೂ ಆಗಿದ್ದೇವೆ. (ಯೆಶಾ. 65:13, 14) ಅದಲ್ಲದೆ, ದೇವರ ಸಂಸ್ಥೆಯಲ್ಲಿ ತುಂಬಿರುವ ಪ್ರೀತಿಯು ನಮ್ಮನ್ನು ಕ್ರಿಸ್ತನ ನಿಜ ಶಿಷ್ಯರಾಗಿ ಗುರುತಿಸುತ್ತದೆ. (ಯೋಹಾ. 13:35) ಹೌದು, ಯೆಹೋವನ ಸಾಕ್ಷಿಗಳ ಲೋಕ ವ್ಯಾಪಕ ಭಾಂದವ್ಯವು, ಬೈಬಲ್ ಭೋದನೆಗಳನ್ನು ಪಾಲಿಸುವುದು ಜ್ಞಾನದ ಮಾರ್ಗವೆಂಬದಕ್ಕೆ ಸಜೀವ ರುಜುವಾತನ್ನು ಕೊಡುತ್ತದೆ.
4 ಆದರೂ, ಯೆಹೋವನ ಸಂಸ್ಥೆಯಲ್ಲಿ ಸಹವಸಿಸುವ ಕೆಲವರು ತಮ್ಮದಾಗ ಸಾಧ್ಯವಿರುವ ಆ ಸಂತೋಷವನ್ನು ಅನುಭವಿಸದೇ ಇರಬಹುದು. ತಾವು ಹೇಳುವ ಮತ್ತು ಮಾಡುವ ವಿಷಯಗಳಿಂದ ಅವರು ತಮ್ಮ ಸುತ್ತಲಿರುವ ಇತರರ ಸಂತೋಷವನ್ನು ಪ್ರತಿಕೂಲವಾಗಿ ಪ್ರಭಾವಿಸಲೂ ಬಹುದು. ಹಾಗೆ ಹೇಗೆ? ಹೇಗೆಂದರೆ ದೇವರ ಜ್ಞಾನವನ್ನು ಅವರು ಅನ್ವಯಿಸದೆ ಇರುವುದೇ. ಅವರು ಸಭಾಕೂಟಗಳಿಗೆ, ಸರ್ಕಿಟ್ ಸಮ್ಮೇಲನಗಳಿಗೆ, ಜಿಲ್ಲಾ ಅಧಿವೇಶನಗಳಿಗೆ ಹಾಜರಾಗಬಹುದು. ಸೊಸೈಟಿಯ ಪ್ರಕಾಶನಗಳಲ್ಲಿರುವ ಹೊಸಹೊಸ ವಿಷಯಗಳ ಪರಿಚಯ ಅವರಿಗಿದೆ ಆದರೂ, ಅವರ ಜೀವನಕ್ರಮ ಮತ್ತು ಇತರರೊಂದಿಗೆ ಹಾಗೂ ಜತೆ ಕ್ರೈಸ್ತರೊಂದಿಗೆ ಅವರು ವ್ಯವಹರಿಸುವ ರೀತಿ ತಾವು ಕಲಿತ ಸತ್ಯದ ಅನ್ವಯವನ್ನು ಪ್ರತಿಬಿಂಬಿಸುವುದಿಲ್ಲ. ಏನು ಮಾಡುವ ಅಗತ್ಯವಿದೆ? ಅಂತಹ ವ್ಯಕ್ತಿಗಳು “ಆತ್ಮ ಭಾವವನ್ನು ಕುರಿತು ಬಿತ್ತುವ” ವಿಷಯದಲ್ಲಿ ಮನಸ್ಸಿಡುವ ಅಗತ್ಯವಿದೆ. ಈ ಮೂಲಕ ಅವರು ತಮ್ಮ ಸ್ವಂತ ಜೀವಿತಕ್ಕೆ ನಿಜ ಶಾಂತಿಯನ್ನು ಮತ್ತು ತಮ್ಮ ಸುತ್ತಲಿರುವವರ ಸಂತೋಷಕ್ಕೆ ನೆರವಾಗುವರು.—ಗಲಾ. 6:7, 8.
ಅನ್ವಯಿಸುವುದೇನನ್ನು
5 ನಾವು ವೈಯಕ್ತಿವಾಗಿ ಉದಾಸೀನ ತಾಳಿದರೆ, ನಮ್ಮ ಎಚ್ಚರಿಕೆಯನ್ನು ಕಳಕೊಂಡರೆ, ಸೈತಾನನಿಗೂ ಅವನ ಲೋಕಕ್ಕೂ ಮತ್ತು ನಮ್ಮ ಅಸಂಪೂರ್ಣ ಮಾಂಸಿಕ ಇಚ್ಛೆಗೂ ಬಿಟ್ಟುಕೊಟ್ಟರೆ, ಯೆಹೋವನೊಂದಿಗಿನ ನಮ್ಮ ಹತ್ತಿರದ ಸಂಬಂಧದಿಂದ ಬರುವ ಸಂತೋಷವನ್ನು ಕಳಕೊಳ್ಳುವೆವು. ಸಭಾಕೂಟಗಳಲ್ಲಿ ಮತ್ತು ಸಮ್ಮೇಲನಗಳಲ್ಲಿ ಹಾಗೂ ಸಂಸ್ಥೆಯ ಇತರ ಒದಗಿಸುವಿಕೆಗಳ ಮೂಲಕ ನಾವೇನನ್ನು ಕಲಿಯತ್ತೇವೋ ಅವನ್ನು ಅನ್ವಯಿಸಲು ಎಚ್ಚರಿರುವ ಅಗತ್ಯವು ನಮಗೆ ಇಂದು ಎಂದಿಗಿಂತಲೂ ಹೆಚ್ಚಾಗಿದೆ. ನಾವು ಜೀವಿಸುತ್ತಿರುವ ಲೋಕವು ಸದಾ ಬದಲಾಗುತ್ತಿರುವ ಒಂದು ಅಪಾಯಕರ ಜಾಗವಾಗಿದೆ. ಯೆಹೋವನು “ನಂಬಿಗಸ್ತನೂ ವಿವೇಕಿಯೂ ಆದ ಆಳಿನ” ಮೂಲಕ ಪ್ರೀತಿಯಿಂದ ಒದಗಿಸುತ್ತಿರುವ ಸೂಚನೆಯನ್ನು, ಹೊತ್ತಿಗೆ ಸರಿಯಾದ ಆಹಾರವೆಂದು ನಾವು ಅಂಗೀಕರಿಸಿ, ಅನ್ವಯಿಸಿಕೊಳ್ಳಲು ಎಚ್ಚರವಿರುವ ಅಗತ್ಯವಿದೆ.—ಮತ್ತಾ. 24:45-47.
6 ನಮ್ಮ ವಿಶೇಷ ಸಮ್ಮೇಲನ ದಿನದ ಮುಂದಿನ ಕಾರ್ಯಕ್ರಮದಲ್ಲಿ, ಒಂದೇ ಹಿಂಡಾಗಿ ದೃಢರಾಗಿ ನಿಲ್ಲುವುದು ಹೇಗೆಂಬದರ ಮೇಲೆ ಒಳ್ಳೇ ಸಮಾಚಾರವು ನೀಡಲ್ಪಡುವುದು. ನಿರಾಶೆಯ ಸ್ಥಿತಿಗತಿಗಳು, ಲೋಕದಾತ್ಮದ ಸ್ವೇಚ್ಛಾವರ್ತನೆ, ಸಮಯ-ದುಂದಿನ ಅಪಕರ್ಶಣೆಗಳು ಮುಂತಾದ ನಿರ್ಬಲಗೊಳಿಸುವ ಪ್ರಭಾವಗಳನ್ನು ಹೋರಾಡಲು ವ್ಯಾವಹಾರ್ಯ ಸಲಹೆಗಳು ಕೊಡಲ್ಪಡುವವು. ಯೆಹೋವನಲ್ಲಿ ಮತ್ತು ಆತನ ಮಾರ್ಗದಲ್ಲಿ ಪೂರ್ಣವಾಗಿ ಭರವಸವಿಡಲು, ದೇವಪ್ರಭುತ್ವ ಅಧಿಕಾರವನ್ನು ಅಂಗೀಕರಿಸಿ ಅಧೀನರಾಗಿರಲು, ದೀನರೂ ಸಭ್ಯರೂ ಆಗಿರಲು ಮತ್ತು ದೇವಪ್ರಭುತ್ವ ಬೆನ್ನಟ್ಟುವಿಕೆಗಳಿಗಾಗಿ ಸಮಯವನ್ನು ಖರೀದಿಸಲು ಕೊಡಲ್ಪಟ್ಟ ಒಳ್ಳೇ ಸೂಚನೆಗಳನ್ನು ನಾವು ಕಾರ್ಯರೂಪಕ್ಕೆ ಹಾಕುತ್ತಿದ್ದೇವೋ? (ಮೀಕ 6:8; ಎಫೆ. 5:15, 16; ಇಬ್ರಿ. 6:10; 13:17) ಕ್ರೈಸ್ತ ಜೀವಿತಕ್ರಮಕ್ಕೆ ಹೊಂದಿಕೆಯಾಗಲು ಕುಟುಂಬ ಸದಸ್ಯರು ಒಬ್ಬರಿಗೊಬ್ಬರು ಸಹಾಯಮಾಡುತ್ತಾರೋ? ನಮ್ಮ ಮನೋರಂಜನೆಯ ಆಯ್ಕೆ, ಹವ್ಯಾಸಗಳು, ದಿನಚರ್ಯೆಗಳು ಶಾಸ್ತ್ರದಿಂದ ನಾವು ಪಡೆಯುವ ಸೂಚನೆಗಳಿಂದ ಪ್ರಭಾವಿಸಲ್ಪಡಬೇಕು. ಕಲಿತ ವಿಷಯಗಳನ್ನು ಅನ್ವಯಿಸಲು ಎಡೆಬಿಡದ ಪ್ರಯತ್ನವು ಇಲ್ಲದಿದ್ದರೆ, ಕೊಂಚ ಅಥವಾ ಏನೂ ಶಾಸ್ತ್ರೀಯ ಪ್ರಗತಿ ಅಲ್ಲಿರದು, ಮತ್ತು ನಮ್ಮ ಮನೋಶಾಂತಿ ಮತ್ತು ಸಂತೋಷವೂ ಕೆಡುವುದು.—ಫಿಲಿ. 4:7-9; ಯಾಕೋ. 1:22-25.
7 ವೈಯಕ್ತಿಕ ಮತ್ತು ಕುಟುಂಬ ಅಭ್ಯಾಸದಲ್ಲಿ ಹೊಂದಿಕೆಯಾದ ಪ್ರಯತ್ನವು ಮಾಡಲ್ಪಡಬೇಕು. ಬೈಬಲ್ ತತ್ವಗಳ ಅನ್ವಯದ ಕುರಿತು ಸವಿವರ ಸಮಾಚಾರವನ್ನು ವಾಚ್ಟವರ್ ಪಬ್ಲಿಕೇಶನ್ ಇಂಡೆಕ್ಸ್ ನಮಗೆ ತಿಳಿಸುವುದು. ದಿ ಯಂಗ್ ಪೀಪಲ್ ಆಸ್ಕ್ ಪುಸ್ತಕವು ಇಂದಿನ ಜಟಿಲವಾದ ಪೈಶಾಚಿಕ ಲೋಕದ ಸಮಸ್ಯೆಗಳನ್ನು ಮಕ್ಕಳು ನಿಭಾಯಿಸುವಂತೆ ಸಹಾಯಕೊಡುವುದರಲ್ಲಿ ಬಳಸಲು ಹೆತ್ತವರಿಗೆ ಅತ್ಯುತ್ತಮ ಸಹಾಯಕವು. ಅಂತಹ ಸಮಾಚಾರಕ್ಕೆ ನಿರ್ದೇಶಿಸುವ ಮೂಲಕ, ವಿಷಯದ ಮೇಲೆ ಯೆಹೋವನ ದೃಷ್ಟಿಕೋನವು ನಮಗೆ ಸಿಕ್ಕುತ್ತದೆ ಮತ್ತು ನೀತಿಯ ತತ್ವಗಳಿಂದ ನಾವು ಮಾರ್ಗದರ್ಶಿಸಲ್ಪಸುವೆವು. ಇದನ್ನು ಮಾಡಲು ತಪ್ಪುವದು ಕಾಯಿಲೆಗಾಗಿ ಮದ್ದಿದ್ದೂ ಅದನ್ನು ಸೇವಿಸದೇ ಇರುವುದಕ್ಕೆ ಸಮಾನವು, ನಮಗೆ ಹತ್ತಿರುವ ಬೇನೆಯನ್ನು ಅದು ಶಮನ ಮಾಡುವದೆಂದು ತಿಳಿದಿದ್ದರೂ ಸಹಾ. ಕ್ರಮದ ವೈಯಕ್ತಿಕ ಮತ್ತು ಕುಟುಂಬ ಅಭ್ಯಾಸ ನಮ್ಮ ನಂಬಿಕೆಯನ್ನು ಬೆಳೆಸುವುದು ಮತ್ತು ತಾಳಿಕೊಳ್ಳುವಂತೆ ಬಲವನ್ನು ಕೊಡುವುದು. ಶೋಧನೆಯ ಸಮಯದಲ್ಲಿ ನಮ್ಮ ನಂಬಿಕೆಯು ಬತ್ತಿಹೋಗದಂತೆ ಮತ್ತು ನಾವು ಬಿದ್ದುಹೋಗದಂತೆ ಅದು ತಡೆಯುವುದು.—ಮತ್ತಾ. 13:6; ಲೂಕ 8:13; ಇಬ್ರಿ. 2:1.
8 ಹಿರಿಯರು ಮತ್ತು ಶುಶ್ರೂಷೆ ಸೇವಕರು ತಮ್ಮ ಮನೆವಾರ್ತೆಯನ್ನು ನಡಿಸುವುದರಲ್ಲಿ ಮಾದರಿಯನ್ನಿಡಬೇಕು. ಇದರಲ್ಲಿ ತಮ್ಮ ಪತ್ನಿಯರು ಮತ್ತು ಮಕ್ಕಳು ಆತ್ಮಿಕವಾಗಿ ದೃಢರಾಗಿರಲು ದೇವರ ವಾಕ್ಯದಿಂದ ಮತ್ತು ಸಂಸ್ಥೆಯಿಂದ ಕಲಿತ ವಿಷಯಗಳನ್ನು ಅನ್ವಯಿಸಲು ಸಹಾಯ ಕೊಡುವುದೂ ಸೇರಿದೆ. ಈ ರೀತಿಯಲ್ಲಿ ಇಡೀ ಕುಟುಂಬವೇ ಕ್ರಿಸ್ತೀಯ ಜೀವಿತದಲ್ಲಿ ಮಾದರಿಯಾಗಬಲ್ಲದು ಮತ್ತು ಸಭೆಯ ಒಳಗೆ ಮತ್ತು ಹೊರಗಿನ ಇತರರಿಗೆ ಪ್ರೋತ್ಸಾಹನೆಯಾಗಿರಬಲ್ಲದು.—ಎಫೆ. 6:4; 1 ತಿಮೋ. 3:4, 12, 13.
ಯಾರಿಗೆ ಸಹಾಯ
9 ಪ್ರತಿ ವರ್ಷ ಜ್ಞಾಪಕಾಚರಣೆಗೆ ಹಾಜರಾಗುವವರಲ್ಲಿ ಅನೇಕರಿಗೆ ಕಲಿತ ವಿಷಯಗಳನ್ನು ಅನ್ವಯಿಸಲು ಮತ್ತು ಸಂಸ್ಥೆಯೊಂದಿಗೆ ಕ್ರಿಯಾಶೀಲರಾಗಿ ಸಹವಸಿಸಲು ಅಧಿಕ ಉತ್ತೇಜನದ ಅಗತ್ಯವಿದೆ. ನಮ್ಮ ಬೈಬಲ್ ವಿದ್ಯಾರ್ಥಿಗಳಿಗೂ ತಾವು ಕಲಿತ ಬೈಬಲ್ ತತ್ವಗಳನ್ನು ಜೀವಿತದಲ್ಲಿ ಅನ್ವಯಿಸುವುದು ಹೇಗೆ ಮತ್ತು ದೇವರ ನೀತಿಯುಳ್ಳ ಆಜ್ನೆಗಳನ್ನು ನಡಿಸುವುದು ಹೇಗೆಂದು ಕಲಿಸುವ ಮೂಲಕ ಪ್ರೀತಿಯ ಗಮನವನ್ನು ತೋರಿಸ ಸಾಧ್ಯವಿದೆ. ಯಾರು ನಂಬಿಕೆಯಲ್ಲಿ ನಮ್ಮ ಸಹೋದರ ಮತ್ತು ಸಹೋದರಿಯರಾಗಲು ಪ್ರಗತಿ ಮಾಡುತ್ತಾರೋ ಅವರ ಕಡೆಗೆ ಚಿಂತೆಯನ್ನು ನಾವು ತೋರಿಸಬೇಕು.
10 ಅಕ್ರಮ ಯಾ ಅಕ್ರಿಯ ಪ್ರಚಾರಕರು ಯಾರಾದರೂ ಇದ್ದರೆ ಸಂಸ್ಥೆಯೊಂದಿಗೆ ಕ್ರಮದ ಸೇವೆಯಲ್ಲಿ ಪಾಲಿಗರಾಗುವ ಅಗತ್ಯವನ್ನು ಕಾಣುವಂತೆ ಅವರಿಗೆ ಸಹಾಯ ಕೊಡಬೇಕು. ಹಿಂದೆ ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸುವಾಗ ಆನಂದಿಸಲ್ಪಟ್ಟ ಶಾಂತಿ ಮತ್ತು ಸಂತೋಷವನ್ನು ಪುನ: ಗಳಿಸುವ ಅಗತ್ಯ ಅವರಿಗಿದೆ. (ಯೋಹಾ. 13:17) ಸತ್ಯಕ್ಕಾಗಿ ಅವರ ಗಣ್ಯತೆಯನ್ನು ಪುನ: ಚೇತರಿಸಲು ಮತ್ತು “ದೇವರಿಗೆ ಸ್ತುತಿಯಜ್ನವನ್ನು ಅರ್ಪಿಸಲು” ದಯೆಯಿಂದ ಸಹಾಯ ನೀಡುವ ಮೂಲಕ, ಅವರು ತಾವು ಕಲಿತ ವಿಷಯಗಳನ್ನು ಅನ್ವಯಿಸಲು ಶಕ್ತರಾಗುವರು ಮತ್ತು ಜೀವದ ಹಾದಿಯಲ್ಲಿ ಉಳಿಯುವರು.—ಇಬ್ರಿ. 13:15; ನಮ್ಮ ರಾಜ್ಯದ ಸೇವೆ, ಅಗೋಸ್ತ್ 1979, ಪುಟ 3, ಮತ್ತು ಎಪ್ರಿಲ್ 1977, ಪುಟ 3 ನೋಡಿ.
11 ಯೆಹೋವನ ತೀವ್ರ-ಗತಿಯ ಸಂಸ್ಥೆಯೊಂದಿಗೆ ಸಮಗತಿಯಲ್ಲಿ ಚಲಿಸುವ ಅಗತ್ಯವು ದೇವಜನರೆಲ್ಲರಿಗೆ ಅದೆ. ಔದಾಸೀನ್ಯತೆಯ ಪಾಶದೊಳಗೆ ನಮ್ಮನ್ನು ಬೀಳಗೊಳಿಸಬಾರದು. ನಾವು ಯಾವಾಗಲೂ ನಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳಬೇಕು, ದೇವರ ಸಂಸ್ಥೆಯಿಂದ ಬರುವ ಹೊಸ ಸಮಾಚಾರಕ್ಕೆ ಸರಿಯೆದೆಯಾಗಿದ್ದು ಅವನ್ನು ಬೇಗನೇ ಅನ್ವಯಿಸಿಕೊಳ್ಳಬೇಕು. ಇದಕ್ಕೆ ಪರಿಶ್ರಮದ ಪ್ರಯತ್ನ ಮತ್ತು ಆಗಾಗ್ಯೆ ವೈಯಕ್ತಿಕ ತ್ಯಾಗವೂ ಅಗತ್ಯ. ಆದರೆ ನಾವೇನನ್ನು ಮಾಡಶಕ್ತರಲ್ಲವೋ ಅದನ್ನು ಯೆಹೋವನು ನಮ್ಮಿಂದ ಕೇಳಲಾರನು. ಆತನು ನಮ್ಮ ನಿರ್ಮಾಣಿಕನು, ನಮಗೇನು ಹಿತಕರವೆಂದು ಆತನಿಗೆ ತಿಳಿದದೆ. ಆದ್ದರಿಂದ, ಯೆಹೋವನಿಂದ ಶಿಕ್ಷಿತರಾಗುವುದನ್ನು ಮುಂದರಿಸುತ್ತಾ ಮತ್ತು ನಾವು ಕಲಿತ ವಿಷಯಗಳನ್ನು ಅನ್ವಯಿಸುತ್ತಾ ನಮ್ಮನ್ನು ಜ್ಞಾನಿಗಳಾಗಿ ರುಜುಪಡಿಸುವ. ಇದು ಆತನಿಗೆ ಸ್ತುತಿಯನ್ನು ತರುವುದು ಮತ್ತು ನಮ್ಮ ನಿತ್ಯ ಪ್ರಯೋಜನದಲ್ಲಿ ಪರಿಣಮಿಸುವುದು.—ಯೆಶಾ. 48:17; 54:13.