ದೇವಪ್ರಭುತ್ವ ವಾರ್ತೆಗಳು
◆ ಚಿಲಿ ಜೂನ್ ತಿಂಗಳಲ್ಲಿ 36,968 ಪ್ರಚಾರಕರ ಹೊಸ ಅತ್ಯುನ್ನತ ಸಂಖ್ಯೆಯನ್ನು ಪಡೆಯಿತು, ಇದು ಕಳೆದ ವರ್ಷದ ಸರಾಸರಿಗಿಂತ 12 ಶೇಕಡಾ ವೃದ್ಧಿ. ಮನೆ ಬೈಬಲಭ್ಯಾಸದಲ್ಲಿಯೂ ಒಂದು ಹೊಸ ಉನ್ನತ ಸಂಖ್ಯೆಯಾದ 53,967 ವರದಿಯಾಗಿದೆ.
◆ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಜೂನ್ ತಿಂಗಳ ಪ್ರಚಾರಕರ ವರದಿ ಕಳೆದ ವರ್ಷದ ಸರಾಸರಿಗಿಂತ 4 ಶೇಕಡಾ ವೃದ್ಧಿಯನ್ನು ತೋರಿಸುತ್ತದೆ. 1,31,106 ವರದಿ ಮಾಡಿದ್ದಾರೆ.
◆ ಭಾರತ ಜೂನ್ ತಿಂಗಳಲ್ಲಿ 10,272 ಪ್ರಚಾರಕರ ವರದಿ ಮಾಡಿತು. ಇದು ಕಳೆದ ವರ್ಷದ ಸರಾಸರಿಗಿಂತ 17 ಶೇಕಡಾ ಹೆಚ್ಚು. ಕ್ರಮದ ಪಯನೀಯರರಲ್ಲಿ, ಪುನರ್ಭೇಟಿಗಳಲ್ಲಿ ಮತ್ತು ಬೈಬಲಭ್ಯಾಸಗಳಲ್ಲಿ ಸಹಾ ಹೊಸ ಉನ್ನತ ಸಂಖ್ಯೆಗಳು ಸಿಕ್ಕಿವೆ.