ದೇವ ಪ್ರಭುತ್ವ ವಾರ್ತೆಗಳು
ಚಿಲಿ: ಎಪ್ರಿಲ್‌ನಲ್ಲಿ ವರದಿ ಸಲ್ಲಿಸಿದ 42,778 ಪ್ರಚಾರಕರಲ್ಲಿ, 8,680 ವ್ಯಕ್ತಿಗಳು ಪಯನೀಯರರಾಗಿದ್ದರು. ಕ್ರಮದ ಪಯನೀಯರರ ಒಂದು ಹೊಸ ಉಚ್ಚಾಂಕ—2,820ನ್ನು ಮುಟ್ಟಲಾಯಿತು. ಎಪ್ರಿಲ್‌ಗಾಗಿ ವರದಿಸಲಾದ ಒಟ್ಟು ತಾಸುಗಳು 10,09,001 ಆಗಿದ್ದವು.
ಲಿಸಾತೊ: ಎಪ್ರಿಲ್‌ನಲ್ಲಿ ವರದಿ ಮಾಡಿದ ಪ್ರಚಾರಕರ ಮೊತ್ತವು 1,895 ಆಗಿತ್ತು, ಅದು ಕಳೆದ ವರ್ಷದ ಸರಾಸರಿಗೆ ಹೋಲಿಸಿದಾಗ 19 ಪ್ರತಿಶತ ಹೆಚ್ಚಳವಾಗಿತ್ತು.
ಪೋರ್ಚುಗಲ್: ಎಪ್ರಿಲ್‌ನಲ್ಲಿ 41,472 ಪ್ರಚಾರಕರ ಒಂದು ಹೊಸ ಉಚ್ಚಾಂಕವನ್ನು ಮುಟ್ಟಲಾಯಿತು. ಒಟ್ಟು ತಾಸುಗಳಲ್ಲಿ, ಪುನಃ ಭೇಟಿಗಳಲ್ಲಿ, ಮತ್ತು ಮನೆ ಬೈಬಲ್ ಅಧ್ಯಯನಗಳಲ್ಲಿ ಕೂಡ ಹೊಸ ಉಚ್ಚಾಂಕಗಳಿವೆ.
ವೆನಿಸ್ವೇಲ: ಎಪ್ರಿಲ್‌ನಲ್ಲಿ 62,074 ಪ್ರಚಾರಕರ ಕಠಿನ ಕೆಲಸವು ತಾಸುಗಳಲ್ಲಿ, ಪುನಃ ಭೇಟಿಗಳಲ್ಲಿ, ಮತ್ತು ಮನೆ ಬೈಬಲ್ ಅಧ್ಯಯನಗಳ ಹೊಸ ಉಚ್ಚಾಂಕಗಳಲ್ಲಿ ಫಲಿಸಿತು.