ದೇವಪ್ರಭುತ್ವ ವಾರ್ತೆಗಳು
◆ ಅಲಾಸ್ಕ ಜುಲೈ ತಿಂಗಳಲ್ಲಿ 2,053 ಪ್ರಚಾರಕರ ಹೊಸ ಉಚ್ಛಾಂಕವನ್ನು ಮುಟ್ಟಿತು. ಇದು ಕಳೆದ ವರ್ಷದ ಸರಾಸರಿಗಿಂತ 12 ಶೇಕಡಾ ವೃದ್ಧಿ. ಜುಲೈ “ಶುದ್ಧ ಭಾಷೆ” ಜಿಲ್ಲಾ ಅಧಿವೇಶನದಲ್ಲಿ ಉನ್ನತ ಹಾಜರಿ 2,929 ಮತ್ತು 50 ಮಂದಿಗೆ ದೀಕ್ಷಾಸ್ನಾನವಾಯಿತು.
◆ ಬ್ರಾಜಿಲ್ ಜುಲೈ ತಿಂಗಳಲ್ಲಿ ಪ್ರಚಾರಕರ ಅತ್ಯುನ್ನತ ಸಂಖ್ಯೆಯಾದ 2,93,466ನ್ನು ಮುಟ್ಟಿತು, ಇದು ಸೇವಾ ವರ್ಷದ ಒಂಭತ್ತನೆಯ ಉಚ್ಛಾಂಕ. 3,69,999 ಬೈಬಲಭ್ಯಾಸಗಳ ಒಂದು ಹೊಸ ಉನ್ನತ ಸಂಖ್ಯೆಯೂ ವರದಿಯಾಗಿದೆ.
◆ ಫೀಜಿ ಜುಲೈ ತಿಂಗಳಲ್ಲಿ ತನ್ನ 67ನೇ ಅನುಕ್ರಮ ಪ್ರಚಾರಕ ಉಚ್ಚಾಂಕವಾದ 1,534 ಪ್ರಚಾರಕರ ವರದಿಮಾಡಿದೆ. ಬೈಬಲಭ್ಯಾಸಗಳು 2,605ಕ್ಕೆ ಏರಿವೆ.
◆ ಸಪ್ಟಂಬರ 1990ರಿಂದ, ದಕ್ಷಿಣ ಅಮೆರಿಕದ ಉತ್ತರದಲ್ಲಿರುವ ಫ್ರೆಂಚ್ ಗಿಯಾನದಲ್ಲಿ ವಾಚ್‌ಟವರ್ ಸೊಸೈಟಿಯ ಒಂದು ಶಾಖಾ ಆಫೀಸು ತರೆಯಲ್ಪಟ್ಟಿದೆ. ಜುಲೈಯಲ್ಲಿ ಅವರಿಗೆ 660 ಪ್ರಚಾರಕರ ಹೊಸ ಉನ್ನತ ಸಂಖ್ಯೆ ಸಿಕ್ಕಿತು ಮತ್ತು ಅವರ ಜಿಲ್ಲಾ ಅಧಿವೇಶನದಲ್ಲಿ 1,479 ಹಾಜರಿ ಮತ್ತು 41 ದೀಕ್ಷಾಸ್ನಾನಗಳಾದವು.
◆ ಗಾಡ್ವೆಲಾಪ್‌ನ ನಾಲ್ಕು ಜಿಲ್ಲಾ ಅಧಿವೇಶನಗಳಿಗೆ 13,021 ಹಾಜರಾದರು ಮತ್ತು 259 ದೀಕ್ಷಾಸ್ನಾನಗಳು. ಅವರ ಪ್ರಚಾರಕ ಉಚ್ಛಾಂಕ 6,233.