ದೇವಪ್ರಭುತ್ವ ವಾರ್ತೆಗಳು
◆ ಬಾರ್ಬಡಸ್ ಸಪ್ಟಂಬರದಲ್ಲಿ 1,800 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಪಡೆಯಿತು.
◆ ಕಾಟ್ ಡಿವೋರ್ ಸಪ್ಟಂಬರದಲ್ಲಿ ಹೊಸ ಸೇವಾ ವರ್ಷವನ್ನು 3,465 ಪ್ರಚಾರಕರೊಂದಿಗೆ ಆರಂಭಿಸಿತು. ಇದು ಅವರ 12ನೇ ಅನುಕ್ರಮ ಉನ್ನತ ಸಂಖ್ಯೆ. ಯುದ್ಧಭಗ್ನ ದೇಶವಾದ ಲೈಬೀರಿಯದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸುವ ಕಾರಣ ಅಲ್ಲಿಂದ ಬರುತ್ತಿರುವ ಅನೇಕ ನಿರಾಶ್ರಿತ ಸಹೋದರ ಮತ್ತು ಸಹೋದರಿಯರಿಗೂ ಇಲ್ಲಿನ ಸಹೋದರರು ನೆರವಾಗುತ್ತಿದ್ದಾರೆ.
◆ ಜಪಾನಿನ ಸಪ್ಟಂಬರದ ಪ್ರಚಾರಕ ಉನ್ನತ ಸಂಖ್ಯೆ 1,48,452. ಸಪ್ಟಂಬರದ ಆರಂಭದಲ್ಲಿ 3,582 ಹೊಸ ಕ್ರಮದ ಪಯನೀಯರರು ಸೇವೆಗಿಳಿದರು. ಸಪ್ಟಂಬರದಲ್ಲಿ 111 ಸರ್ಕಿಟುಗಳಲ್ಲಿ 165 ಪಯನೀಯರ ಶಾಲೆಯ ವರ್ಗಗಳು ನಡೆದವು, ಮತ್ತು 3,920 ಕ್ರಮದ ಪಯನೀಯರರು ಆ ವರ್ಗದಲ್ಲಿ ಆನಂದಿಸಿದರು.
◆ ಕೆನ್ಯ ಸಪ್ಟಂಬರದಲ್ಲಿ 5,610 ಪ್ರಚಾರಕ ಹೊಸ ಉನ್ನತ ಸಂಖ್ಯೆಯಲ್ಲಿ ಆನಂದಿಸಿತು. ವಿಶೇಷ ಸಮ್ಮೇಲನದಿನ ಮಾಲೆಯು ಒಟ್ಟು 11,027 ಹಾಜರಿ ಮತ್ತು 172 ದೀಕ್ಷಾಸ್ನಾನದೊಂದಿಗೆ ಕೊನೆಗೊಂಡಿತು.
◆ ಲಿಸೊತೋ ಸಪ್ಟಂಬರದಲ್ಲಿ 1,347 ಪ್ರಚಾರಕರ ಹೊಸ ಉಚ್ಛಾಂಕವನ್ನು ಪಡೆಯಿತು. ಸಭಾ ಪ್ರಚಾರಕರ ಸರಾಸರಿ 13.1 ತಾಸುಗಳು, ಯೆಹೋವನ ಸೇವೆಯಲ್ಲಿ ಅವರು ಪರಿಶ್ರಮಪಡುತ್ತಿದ್ದಾರೆಂಬದನ್ನು ತೋರಿಸುತ್ತದೆ.
◆ ಮರೀಶಿಯಸ್ ಸಪ್ಟಂಬರದಲ್ಲಿ 907 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಪಡೆದದೆ.
◆ ನೈಜೀರಿಯ ಸಪ್ಟಂಬರದಲ್ಲಿ 1,46,703 ಪ್ರಚಾರಕರ ಉಚ್ಛಾಂಕವನ್ನು ಪಡೆಯಿತು. ಇದು ಅಗೋಸ್ತ್ ಉಚ್ಛಾಂಕಕ್ಕಿಂತ 4,600 ಹೆಚ್ಚು ವೃದ್ಧಿ.
◆ ರ್ಯೂನಿಯನ್ ಸಪ್ಟಂಬರದಲ್ಲಿ 1,854 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಪಡೆಯಿತು. ಅವರ ಅಧಿವೇಶನಕ್ಕೆ 3,591 ಹಾಜರಿ ಮತ್ತು 114 ದೀಕ್ಷಾಸ್ನಾನಗಳಾದವು.
◆ ಸೈಂಟ್ ವಿನ್ಸೆಂಟ್ ಸಪ್ಟಂಬರದಲ್ಲಿ 208 ಪ್ರಚಾರಕರ ಉನ್ನತ ಸಂಖ್ಯೆಯನ್ನು ಪಡೆಯಿತು. ಇದು 14 ಸೇಕಡಾ ವೃದ್ಧಿಯು. ಸಭಾ ಪ್ರಚಾರಕರು ಸರಾಸರಿ 14.2 ತಾಸುಗಳನ್ನು ವರದಿ ಮಾಡಿದ್ದಾರೆ.