ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/91 ಪು. 1
  • ಮನಗುಂದದೆ ಇರ್ರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮನಗುಂದದೆ ಇರ್ರಿ
  • 1991 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹಳೇ ಪುಸ್ತಕಗಳನ್ನು ನೀಡಿರಿ
  • ಬಲಗೊಳ್ಳುವಂತೆ ಇತರರನ್ನು ಪ್ರೋತ್ಸಾಹಿಸಿರಿ
  • ಒಳ್ಳೇದನ್ನು ಮಾಡುವುದರಲ್ಲಿ ದಣಿಯದಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಟೈರುಗಳು ನಿಮ್ಮ ಜೀವ ಅವುಗಳ ಮೇಲೆ ಹೊಂದಿಕೊಂಡಿರಸಾಧ್ಯವಿದೆ!
    ಎಚ್ಚರ!—2004
  • ಈ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ
    2017-2018​ರ ಸಮ್ಮೇಳನದ ಕಾರ್ಯಕ್ರಮ—ಸಂಚರಣ ಮೇಲ್ವಿಚಾರಕನೊಂದಿಗೆ
  • ನೆರವು ನೀಡಿದ ನೆರೆಯವರು
    ಅನುಭವಗಳು
ಇನ್ನಷ್ಟು
1991 ನಮ್ಮ ರಾಜ್ಯದ ಸೇವೆ
km 2/91 ಪು. 1

ಮನಗುಂದದೆ ಇರ್ರಿ

1 1991 ರ ವರ್ಷಪುಸ್ತಕ ಲೋಕವ್ಯಾಪಕವಾಗಿ ನಡಿಯುತ್ತಿರುವ ರೋಮಾಂಚಕರ ವಿಸ್ತಾರ್ಯದ ಕುರಿತು ತಿಳಿಸುತ್ತದೆ. ದೇಶಗಳಲ್ಲಿ ಒಂದರ ಹಿಂದೊಂದರಂತೆ ಪ್ರಚಾರಕರಲ್ಲಿ ಉನ್ನತ ಸಂಖ್ಯೆಗಳು ದೊರಕಿವೆ.

2 ಆದರೆ ನಿಮ್ಮ ಕ್ಷೇತ್ರದಲ್ಲಿ ವಿಷಯಗಳು ಹೇಗಿವೆ? ಉದಾಸೀನ ಭಾವವನ್ನು ನೀವು ಎದುರಿಸುತ್ತೀರೋ? ರಾಜ್ಯದ ಸಂದೇಶಕ್ಕೆ ಜನರು ಅಸಡ್ಡೆಯನ್ನು ತೋರಿಸುತ್ತಾರೋ? ಮನೆಗಳಲ್ಲಿ ಕೊಂಚವೇ ಜನರು ಸಿಗುತ್ತಾರೋ? ಒಳ್ಳೆಯ ಪ್ರತಿಕ್ರಿಯೆ ತೋರಿಸುವ ಜನರು ಕೆಲವರು ಮಾತ್ರವೆಯೋ? ಹಾಗಿದ್ದರೆ, ಪೌಲನು ಗಲಾತ್ಯದವರಿಗೆ 6:9ರಲ್ಲಿ ಕೊಟ್ಟ ಸೂಚನೆಯಿಂದ ನೀವು ಪ್ರೋತ್ಸಾಹನೆ ಪಡೆಯಬಹುದು: “ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.” ಒಳ್ಳೇದನ್ನು ಮಾಡುವುದರಲ್ಲಿ ನಿಶ್ಚಯವಾಗಿ, ರಾಜ್ಯದ ಸುವಾರ್ತೆಯನ್ನು ಮನೆಯಿಂದ ಮನೆಗೆ ಸಾರುವುದು ಸೇರಿದೆ. ಯೆಹೋವನು ಸಾಕು ಎಂದು ಹೇಳುವ ತನಕ ನಾವು ಜರೂರಿಯಿಂದ ಸಾರುತ್ತಾ ಮುಂದರಿಯಬೇಕು. (ಯೆಶಾಯ 6:8) ಕಷ್ಟದ ಕ್ಷೇತ್ರಗಳಲ್ಲೂ, ಕುರಿಸದೃಶ ಜನರು ಇನ್ನೂ ಸಿಗುತ್ತಲಿದ್ದಾರೆ.

3 ಶುಶ್ರೂಷೆಯಲ್ಲಿ ಮನಗುಂದದೆ ಇರುವಂತೆ ನಾವೇನು ಮಾಡ ಸಾಧ್ಯವಿದೆ? ನಮ್ಮ ಗೋಚರವನ್ನು ಅಥವಾ ನಮ್ಮ ಪ್ರಸಂಗದ ಪೀಠಿಕೆಗಳನ್ನು ಬದಲಾಯಿಸುವುದು ಸಹಾಯಕಾರಿಯಾದೀತು. ರೀಸನಿಂಗ್‌ ಪುಸ್ತಕದಲ್ಲಿ ಅತ್ಯುತ್ತಮ ಸಲಹೆಗಳು ಕಂಡು ಬರುತ್ತವೆ. ನೀವದನ್ನು ಪ್ರಯತ್ನಿಸಿ ನೋಡಿರುವಿರೋ? ಒಂದು ಅತಿ ಸಂಕ್ಷಿಪ್ತವಾದ ಆದರೆ ನೇರವಾದ ಗೋಚರವು, ಹೆಚ್ಚಿನ ಮನೆಯವರ ಗಮನವನ್ನು ಸೆಳೆಯಬಹುದು. ನೀವು ಅವರಲ್ಲಿ ಮತ್ತು ಅವರ ಹಿತಚಿಂತನೆಯಲ್ಲಿ ವೈಯಕ್ತಿಕವಾಗಿ ಆಸಕ್ತರಿದ್ದೀರಿ ಎಂದು ಜನರು ತಿಳಿಯುವಂತೆ ಮಾಡಿರಿ.

ಹಳೇ ಪುಸ್ತಕಗಳನ್ನು ನೀಡಿರಿ

4 ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ 192 ಪುಟದ ಹಳೇ ಪುಸ್ತಕಗಳನ್ನು ನೀಡುವ ಮೂಲಕ, ಇತರರಿಗಾಗಿ ಚಿಂತನೆಯನ್ನು ನಾವು ತೋರಿಸಬಹುದು. ಸುವಾರ್ತೆಯನ್ನು ಸಾರುವ ಮೂಲಕ ನಾವು ವೈಯಕ್ತಿಕವಾಗಿ ದೇವರ ರಾಜ್ಯವನ್ನು ಶಿಫಾರಸು ಮಾಡುತ್ತೇವೆ ಮತ್ತು ಬೆಂಬಲಿಸುತ್ತೇವೆ. ಅನೇಕರು ಪ್ರಾರ್ಥಿಸುತ್ತಿರುವ ಆದರೆ ಅದರ ಕುರಿತು ಕೊಂಚವೇ ತಿಳಿದಿರುವ ದೇವರಾಜ್ಯದ ಕುರಿತಾಗಿ ಹೆಚ್ಚನ್ನು ಕಲಿಯಲು, ದಿಸ್‌ ಲೈಫ್‌ ಪುಸ್ತಕವು ಅತ್ಯುತ್ತಮ ಸಾಧನವಾಗಿರುತ್ತದೆ.

5 ಈ ಪುಸ್ತಕದ ಪ್ರತಿಯೊಂದು ಅಧ್ಯಾಯದಲ್ಲಿ ಮಾತಾಡಲಿಕ್ಕೆ ಅತ್ಯುತ್ತಮ ವಿಷಯಗಳಿವೆ. ಅಧ್ಯಾಯ 15, 16, 17 ಅಥವಾ 18ರ ಶೀರ್ಷಿಕೆಗೆ ನೀವು ಗಮನ ಸೆಳೆಯಬಹುದು. ಆರಿಸಿದ ಅಧ್ಯಾಯದಿಂದ ಮಾತಾಡಲು, ತಕ್ಕದ್ದಾದ ವಿಷಯವನ್ನು ಹೆಕ್ಕಿರಿ. 189ನೇ ಪುಟದ “ಟ್ರೂಲಿ ಬೆನಿಫೀಶಿಯಲ್‌ ವೇ” ಶೀರ್ಷಿಕೆಯ ಕೆಳಗೆ, ನಮ್ಮ ಸದ್ಯದ ಸಂಭಾಷಣೆಗಾಗಿ ವಿಷಯದೊಂದಿಗೆ ಚೆನ್ನಾಗಿ ಜೋಡಣೆಯಾಗುವ ಅತ್ಯುತ್ತಮ ಸಮಾಚಾರವಿದೆ.

6 ವಾರವಾರವೂ ರಾಜ್ಯದ ಸುವಾರ್ತೆಯನ್ನು ಸಾರುವ ಕಾರ್ಯದಲ್ಲಿ ಭಾಗವಹಿಸುವ ಮೂಲಕ ನಾವು ವೈಯಕ್ತಿಕವಾಗಿ ಉತ್ತೇಜನ ಮತ್ತು ಬಲವನ್ನು ನಿಶ್ಚಯವಾಗಿ ಹೊಂದ ಸಾಧ್ಯವಿದೆ. ಅದಲ್ಲದೆ, ದೇವರ ವಾಕ್ಯದ ಸುಸಂಗತ ಅಭ್ಯಾಸದಿಂದ ಮತ್ತು ಕೂಟಗಳಲ್ಲಿ ಪಾಲಿಗರಾಗುವದರಿಂದಲೂ ನಮ್ಮ ಆತ್ಮಿಕತೆಯಲ್ಲಿ ಉನ್ನತಿಮಾಡಬಹುದು.—ಇಬ್ರಿ. 10:23-25.

ಬಲಗೊಳ್ಳುವಂತೆ ಇತರರನ್ನು ಪ್ರೋತ್ಸಾಹಿಸಿರಿ

7 ಕ್ಷೇತ್ರ ಶುಶ್ರೂಷೆಯಲ್ಲಿ ಬೇರೆಯವರೊಂದಿಗೆ ಸೇವೆ ಮಾಡುವ ಮೂಲಕ ನೀವು ನಿಮಗೆ ಮತ್ತು ಇತರರಿಗೆ ಸಹಾಯ ಮತ್ತು ಉತ್ತೇಜನ ಕೊಡಬಲ್ಲಿರಿ. (ಗಲಾ. 6:10) ನೀವು ಅವರೊಂದಿಗೆ ಸೇವೆ ಮಾಡಬಹುದೋ ಎಂದು ಪಯನೀಯರರನ್ನು ಮತ್ತು ಹಿರಿಯರನ್ನು ಯಾಕೆ ಕೇಳಬಾರದು? ಅಲ್ಲದೆ, ಅಕ್ರಮ ಅಥವಾ ಅಕ್ರಿಯ ಪ್ರಚಾರಕರು ಅಲ್ಲಿದ್ದರೆ, ಅವರ ಆತ್ಮಿಕ ಹಿತಚಿಂತನೆಯಲ್ಲಿ ನೀವು ತೋರಿಸುವ ಆಸಕ್ತಿಯಿಂದ ಉತ್ತೇಜನ ಪಡೆಯಬಹುದು.

8 ನಾವೆಲ್ಲರೂ ಯೆಹೋವನ ಸೇವೆಯಲ್ಲಿ ತಾಳಿಕೊಂಡಿರುವ ಅಗತ್ಯವಿದೆ ಮತ್ತು ಈ ಕಡೇ ಕಷ್ಟದ ದಿನಗಳಲ್ಲಿ ಮನಗುಂದದೆ ಇರಬೇಕು. ಅಂಥ ತಾಳ್ಮೆಯು, ಕಷ್ಟದ ನಡುವೆ ಮತ್ತು ಬೇರೆಯವರು ತೋರಿಸುವ ಅಸಡ್ಡೆಯ ನಡುವೆ ನಮ್ಮ ಕ್ರೈಸ್ತ ಹುರುಪನ್ನು ಕಾಪಾಡುವಂತೆ ಶಕ್ತರಾಗಿ ಮಾಡುವುದು. (ಇಬ್ರಿ. 10:36-39) ಬಲಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ. (ಯೆಶಾ. 40:29-31) ತಾಳ್ಮೆಯಿಂದಿರಲು ಸಹಾಯಕ್ಕಾಗಿ ಬೇಡಿಕೊಳ್ಳಿರಿ ಮತ್ತು ಒಂದು ಸಕಾರಾತ್ಮಕ ಮಾನಸಿಕ ಭಾವವನ್ನು ಇಡಿರಿ. ನಾವು ಆತನ ಕೆಲಸವನ್ನು ಮಾಡುತ್ತೇವೆಂಬದನ್ನು ನೆನಪಿಡಿರಿ. ನಾವಾತನ ಸೇವೆಯಲ್ಲಿ ಏನು ಮಾಡುತ್ತೇವೋ ಅದನ್ನು ಆತನು ನೋಡುತ್ತಾನೆ, ಮತ್ತು ಮರೆಯುವುದಿಲ್ಲ. (ಇಬ್ರಿ. 6:10) ಆದ್ದರಿಂದ ನಾವು, ಮನಗುಂದದೆ ಇರೋಣ! ಬದಲಿಗೆ, ‘ಸತ್ಕಾರ್ಯ’ ಕ್ಕಾಗಿ ನಮ್ಮನ್ನು ಬಲಗೊಳಿಸಲು ಯೆಹೋವನಲ್ಲಿ ಆತುಕೊಳ್ಳುತ್ತಾ, “ಕರ್ತನ ಕೆಲಸದಲ್ಲಿ ಯಾವಾಗಲೂ ಹೆಚ್ಚನ್ನು ಅತ್ಯಾಸಕಿಯ್ತಿಂದ ಮಾಡುವವ”ರಾಗೋಣ.—1 ಕೊರಿ. 15:58; ಗಲಾ. 6:9.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ