ಶುಶ್ರೂಷೆಯಲ್ಲಿ ಪ್ರಗತಿ ಮಾಡುವುದು
1 ಪ್ರಗತಿಯ ಕುರಿತಾಗಿ ಹೀಗನ್ನುವ ಒಂದು ಹಳೇ ನಾಣ್ನುಡಿ ಇದೆ: “ನೀವಿರುವಲ್ಲಿಂದಲೇ ಪ್ರಾರಂಭಿಸಿರಿ ಆದರೆ, ಅಲ್ಲಿಯೇ ಉಳಿಯಬೇಡಿರಿ.” ಶುಶ್ರೂಷೆಯಲ್ಲಿ ಪ್ರಗತಿ ಮಾಡುವುದಕ್ಕೆ ಈ ಗಾದೆಯು ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ! ಶುಶ್ರೂಷೆಯನ್ನು ನೀವು ಪ್ರಾರಂಭಿಸಿದಾಗ, ರಾಜ್ಯ ಸಂದೇಶದ ಒಂದು ಚಿಕ್ಕ ಪ್ರಸಂಗವನ್ನು ಮಾತ್ರವೇ ಕೊಡಶಕ್ತರಾಗಿದಿರ್ದಿ. ಆದರೆ ಕೆಲವು ವರ್ಷಗಳು ದಾಟಿದರೂ ನೀವಿನ್ನೂ ಆ ಮಟ್ಟದಿಂದ ಮುಂದಕ್ಕೆ ಚಲಿಸದೆ, ಇದ್ದಲ್ಲಿಯೇ ಇದ್ದಲ್ಲಿ, ಆಗೇನು ಮಾಡಬೇಕು?
2 ಒಂದನೇ ಹೆಜ್ಜೆಯು ಕುಶಲತೆಯಿಂದ ಕಲಿಸುವಂತೆ ಬೇಕಾದ ಜ್ಞಾನಕ್ಕಾಗಿ ಯೆಹೋವನನ್ನು ಪ್ರಾರ್ಥಿಸುವುದೇ. (ಜ್ಞಾನೋ. 15:14; ಯಾಕೋ. 1:5) ಎರಡನೆಯ ಹೆಜ್ಜೆಯು ನಿಮ್ಮ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಕೆಲಸ ಮಾಡುವುದೇ. ರೀಸನಿಂಗ್ ಪುಸ್ತಕದಲ್ಲಿನ ಪ್ರಸಂಗಗಳನ್ನು ಕಲಿಯಲು ಸ್ವಲ್ಪ ಸಮಯವನ್ನು ಬದಿಗಿಡಿರಿ. ನೀವು ಪರಿಣಾಮಕಾರಿಯಾಗಿ ಉಪಯೋಗಿಸಬಲ್ಲ ಒಂದನ್ನು ಹುಡುಕಿರಿ, ಮತ್ತು ಅದು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿ ಉಳಿಯುವ ತನಕ ಪ್ರಸಂಗವನ್ನು ಪುನಃ ಪುನಃ ಅಭ್ಯಸಿಸಿರಿ. ಮೂರನೆಯ ಹೆಜ್ಜೆಯು ನಿಮ್ಮ ಸಹೋದರರೊಂದಿಗೆ ಕ್ಷೇತ್ರಕ್ಕೆ ಹೋಗಿ ನೀವು ತಯಾರಿಸಿದ ಪ್ರಸಂಗವನ್ನು ಕೊಡುವುದೇ.
ನಿಮ್ಮ ಸಹಾಯಕ್ಕಾಗಿ ಮಿತ್ರರು
3 ‘ಹಾಗೆ ಹೇಳುವುದು ಸುಲಭ, ಮಾಡುವುದು ಕಷ್ಟ’ ಎಂದು ನೀವು ಹೇಳಬಹುದು. ನಿಜ, ಆದರೆ ಆ ಕಾರಣಕ್ಕಾಗಿಯೇ ನಿಮ್ಮ ಸಹಾಯಕ್ಕಾಗಿ ಮಿತ್ರರಿದ್ದಾರೆ. ಎಳೆಯರು ನೀವಾಗಿದ್ದರೆ ನಿಮ್ಮ ಹೆತ್ತವರೊಂದಿಗೆ ಅಥವಾ ಫಲಕಾರಿ ಶುಶ್ರೂಷಕರಾದ ಅನುಭವಸ್ಥ ಪ್ರಚಾರಕರೊಂದಿಗೆ ಮಾತಾಡಿರಿ. ಮನೆಮನೆಯಲ್ಲಿ ಜನರೊಂದಿಗೆ ಸಂಭಾಷಿಸುವ ವಿಧಾನಗಳ ಕುರಿತು ಸಲಹೆಗಳನ್ನು ಕೇಳಿರಿ. ನಿಮ್ಮ ಪ್ರಸಂಗವನ್ನು ಪ್ರಯೋಗಿಸಿ ನೋಡುವ ಪ್ರ್ಯಾಕ್ಟಿಸ್ ಸೆಶ್ಯನನ್ನು ಒಂದುವೇಳೆ ಅವರು ಸೂಚಿಸಬಹುದು. ಅವರು ಮನೆಯವನ ಪಾತ್ರ ವಹಿಸಿ, ಮನೆಗಳಲ್ಲಿ ಬರುವ ಸಾಮಾನ್ಯ ಅಡಿಗ್ಡಳನ್ನು ಮುಂತರಬಹುದು. ಇಂಥ ಪ್ರ್ಯಾಕ್ಟಿಸಿನಿಂದ ಜನರೊಂದಿಗೆ ಕುಶಲತೆಯಿಂದ ಮಾತಾಡುವ ವಿಧವನ್ನು ನೀವು ಕಲಿಯಬಲ್ಲಿರಿ.
4 ನಿಮಗೆ ಸಹಾಯ ಮಾಡಬಲ್ಲ ಇತರ ಮಿತ್ರರೂ ಇದ್ದಾರೆ. ಅನುಭವದ ಮೂಲಕ ಹಾಗೂ ಪಯನೀಯರ ಸರ್ವಿಸ್ ಸ್ಕೂಲಿಗೆ ಹಾಜರಾದ ಮೂಲಕ ಸಾರುವ ಕುಶಲತೆಯನ್ನು ಕಲಿತಿರುವ ಪಯನೀಯರರೂ ಅಲ್ಲಿದ್ದಾರೆ. ನಿಮ್ಮ ಪುಸ್ತಕಭ್ಯಾಸ ಚಾಲಕ ಅಥವಾ ಸೇವಾ ಮೇಲ್ವಿಚಾರಕನು ಸಹಾ ನಿಮ್ಮೊಂದಿಗೆ ಮನೆಮನೆಯ ಸೇವೆ ಮಾಡುವ ಸ್ಥಾನದಲ್ಲಿದ್ದಾರೆ ಮತ್ತು ಜನರೊಂದಿಗೆ ಮಾತಾಡುವ ಮತ್ತು ವಿವೇಚಿಸುವ ವಿಧಾನವನ್ನು ಇನ್ನಷ್ಟು ಹೇಳಿ ಕೊಡುವರು.
ಅಭಿರುಚಿ ತೋರಿಸಿದವರನ್ನು ಪುನಃಸಂದರ್ಶಿಸುವುದು
5 ನಮ್ಮ ಸಾಹಿತ್ಯವನ್ನು ತಕ್ಕೊಳ್ಳುವ ಜನರಿಗೆ ಇನ್ನೂ ಹೆಚ್ಚು ಆತ್ಮಿಕ ಸಹಾಯವನ್ನು ಕೊಡುವುದರಲ್ಲಿ ನಾವು ಆಸಕ್ತರಿದ್ದೇವೆ. ಅಧಿಕ ಅಭಿರುಚಿಯನ್ನು ಚೇತರಿಸಲು ನಾವು ಪುನಃಸಂದರ್ಶಿಸಬೇಕೆಂದೇ ಇದರ ಅರ್ಥ. ಪುನಃ ಸಂದರ್ಶಿಸುವ ಮೊದಲು ಮೊದಲನೆ ಭೇಟಿಯಲ್ಲಿ ನೀವಂದ ವಿಷಯಗಳನ್ನು ನೆನಪಿಗೆ ತನ್ನಿರಿ, ಹೀಗೆ ಮನೆಯವನ ಅಭಿರುಚಿಯನ್ನು ಆಕರ್ಷಿಸಿದ ವಿಷಯವನ್ನು ಹೆಚ್ಚು ಪರಿಣಾಮಕಾರಿಯಾಗಿ ವಿಕಾಸಮಾಡಲು ಶಕ್ತರಾಗುವಿರಿ. ನಾವು ನೆಡುತ್ತೇವೆ ಮತ್ತು ನೀರು ಹೊಯ್ಯುತ್ತೇವಾದರೂ, ಬೆಳೆಸುವಾತನು ಯೆಹೋವನು ಎಂಬದನ್ನು ನಾವು ಮನಸ್ಸಿನಲ್ಲಿಡಬೇಕು. ಭೇಟಿಯನ್ನು ಮಾಡುವ ಮೊದಲು ಆತನ ಮಾರ್ಗದರ್ಶನೆಗಾಗಿ ಕೇಳಿರಿ. (1 ಕೊರಿ. 3:6; 2 ಕೊರಿ. 9:10) ಇತರರು ಕಲಿಯುವಂತೆ ನಾವು ಸಹಾಯ ಮಾಡುವಾಗ, ಸ್ವತಃ ನಾವು ವೈಯಕ್ತಿಕವಾಗಿ ಪ್ರಯೋಜನ ಹೊಂದುತ್ತೇವೆ.
6 ಇನ್ನೊಂದು ಮಹತ್ತಾದ ಹೆಜ್ಜೆಯು ಒಂದು ಬೈಬಲಭ್ಯಾಸವನ್ನು ಆರಂಭಿಸುವುದು ಮತ್ತು ನಡಿಸುವುದೇ. ನಿಮ್ಮ ಶುಶ್ರೂಷೆಯ ವಿಕಾಸದಲ್ಲಿ ನೀವಿನ್ನೂ ಆ ಮಟ್ಟನ್ನು ಮುಟ್ಟದಿದ್ದರೆ, ಯೆಹೋವನನ್ನು ಪ್ರಾರ್ಥನೆಯಲ್ಲಿ ಗೋಚರಿಸುವುದನ್ನು ಮುಂದರಿಸಿರಿ ಮತ್ತು ಕುರಿ ಸದೃಶ್ಯರನ್ನು ಕಂಡು ಹಿಡಿದು, ಉಣಿಸುವಂತೆ ನಿಮಗೆ ಸಹಾಯ ಮಾಡಲು ಬೇಡಿಕೊಳ್ಳಿರಿ. ಒಬ್ಬ ಪರಿಣಾಮಕಾರಿ ಶಿಕ್ಷಕನು ಬೈಬಲಭ್ಯಾಸ ನಡಿಸುವ ವಿಧಾನವನ್ನು ನೋಡಿ ಅನಂತರ, ಅವನ ಶಿಕ್ಷಣಾ ವಿಧಾನವನ್ನು ಅನುಕರಿಸುವುದೂ ನಿಮಗೆ ಸಹಾಯವಾಗಬಹುದು. ಹಾಗೂ, ಕಲಿಸುವ ವಿಷಯದಲ್ಲಿ ಆಗಸ್ಟ್ 1, 1984ರ ವಾಚ್ಟವರ್ ಪುಟ 8-17 ರಲ್ಲಿರುವ ಸಮಾಚಾರವನ್ನೂ ಪುನರಾವರ್ತಿಸಿರಿ. ಹೀಗೆ ನಿಮ್ಮನ್ನು ತಯಾರಿಸಿಕೊಳ್ಳುವ ಮೂಲಕ, ಪ್ರಾರ್ಥನೆಗಳಿಗೆ ಉತ್ತರ ದೊರಕುವಾಗ ಒಂದು ಅಭ್ಯಾಸವನ್ನು ನಡಿಸಲು ನೀವು ಸಿದ್ಧರಾಗಿರುವಿರಿ.
ಗುರಿಗಳನ್ನು ಇಡಿರಿ ಮತ್ತು ಮುಟ್ಟಿರಿ
7 ಅಧಿಕ ಪರಿಣಾಮಕಾರಿ ಕಲಿಸುವಿಕೆ, ಪುನಃಸಂದರ್ಶನೆಗಳು ಮತ್ತು ಬೈಬಲಭ್ಯಾಸಗಳೇ ಮುಂತಾದ ಗುರಿಗಳನ್ನು ಮುಟ್ಟುವುದಕ್ಕೆ ಸಮಯ ತಗಲುತ್ತದೆ. ಸಹಾಯ ಅಥವಾ ಕ್ರಮದ ಪಯನೀಯರರಾಗುವ ಇನ್ನೊಂದು ಗುರಿಯನ್ನು ನೀವು ಇಡಬಲ್ಲಿರೋ? ಶುಶ್ರೂಷೆಯಲ್ಲಿ ಪ್ರಗತಿಯನ್ನು ಮಾಡಿದಷ್ಟಕ್ಕೆ ನೀವು, ಇತರರಿಗೆ ಒಂದು ಉತ್ತೇಜನದ ಮೂಲವಾಗಬಲ್ಲಿರಿ. ನಿಂತಲ್ಲಿಯೇ ನಿಲ್ಲದೆ, ಏಕಪ್ರಕಾರವಾಗಿ ಪ್ರಗತಿ ಮಾಡುತ್ತಾ ಹೋಗುವುದಾದರೆ, ಯೆಹೋವನಿಂದ ಅನೇಕ ಆಶೀರ್ವಾದಗಳು ನಿಮ್ಮದಾಗುವವು.