ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಎಪ್ರಿಲ್ 8ರ ವಾರ
ಸಂಗೀತ 4 (19)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಈ ವಾರಾಂತ್ಯಕ್ಕಾಗಿ ಸೇವಾ ಏರ್ಪಾಡುಗಳನ್ನು ತಿಳಿಸಿರಿ.
23 ನಿ: “ಸಮೀಪಿಸುತ್ತಿರುವ ಒಳ್ಳೇ ಪರಿಸ್ಥಿತಿಗಳ ಸುವಾರ್ತೆಯನ್ನು ಸಾರಿರಿ.” ಪ್ರಶ್ನೋತ್ತರಗಳು. ಪಾರಾ 6ನ್ನು ಚರ್ಚಿಸುವಾಗ, ಕ್ಷೇತ್ರ ಸೇವೆಯಲ್ಲಿ ಪ್ರಚಾರಕರು ಉಪಯೋಗಿಸಬಹುದಾದ ಮಾತಾಡುವ ವಿಷಯಗಳ ಮೇಲೆ ವಿಶಿಷ್ಟ ಸಲಹೆಗಳನ್ನು ಮತ್ತು ಹೇಳಿಕೆಗಳನ್ನು ಪರಿಣಾಮಕಾರಿ ಸಭಾ ಪ್ರಚಾರಕರು ಕೊಡಲಿ. ಹೇಳಿಕೆಗಳನ್ನು ಮುಂಚಿತವಾಗಿ ತಯಾರು ಮಾಡಿಸಿರಿ.
12 ನಿ: ಹೆಚ್ಚು ಅಭಿರುಚಿಯನ್ನು ಚೇತರಿಸಲು ಪುನಃಸಂದರ್ಶನೆ ಮಾಡಿರಿ. ಲಿವ್ವ್ ಫಾರೆವರ್ ಪುಸ್ತಕದಲ್ಲಿ ಆಸಕ್ತಿ ತೋರಿಸಿದ ಎಲ್ಲರನ್ನು ತಡವಿಲ್ಲದೆ ಪುನಃ ಸಂದರ್ಶಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿರಿ. ಅಗತ್ಯದ ಚರ್ಚೆಯ ನಂತರ ಮತ್ತು ಅಭಿರುಚಿ ತೋರಿಸಿದವರನ್ನು ಪುನಃಸಂದರ್ಶಿಸಲು ಎಲ್ಲರಿಗೆ ಬೆಚ್ಚನೆಯ ಪ್ರೋತ್ಸಾಹನೆ ಕೊಟ್ಟಮೇಲೆ, ಪುಸ್ತಕ ನೀಡಿದಲ್ಲಿ ಪುನಃ ಸಂದರ್ಶನೆ ಹೇಗೆ ಮಾಡಬಹುದೆಂಬದನ್ನು ತೋರಿಸುವ ಒಂದು ದೃಶ್ಯವನ್ನು ಮಾಡಿರಿ.
ಸಂಗೀತ 6 (4) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 15ರ ವಾರ
ಸಂಗೀತ 87 (47)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಎಕೌಂಟ್ಸ್ ರಿಪೋರ್ಟ್. ದಾನಸ್ವೀಕಾರಗಳಿದ್ದರೆ ತಿಳಿಸಿರಿ.
15 ನಿ: ಸ್ಥಳೀಕ ಅಗತ್ಯತೆಗಳು ಅಥವಾ “ಕಂಟಿನ್ಯೂ ಟು ಬಿ ರೀಎಜಸ್ಟೆಡ್,” ವಾಚ್ಟವರ್ ನವಂಬರ 1, 1990 ರಲ್ಲಾಧರಿತ ಭಾಷಣ. (ದೇಶಭಾಷೆ: ಕಾಬು. 90 11⁄1 “ದೇವರಿಗೆ ಕಿವಿಗೊಡಲು ನೀವು ಸಿದ್ಧರೋ?”
20 ನಿ: ಪರಿಣಾಮಕಾರಿ ಪೀಠಿಕೆಗಳನ್ನು ತಯಾರಿಸಿರಿ. ಕ್ಷೇತ್ರ ಸೇವೆಯಲ್ಲಿ ಪರಿಣಾಮಕಾರಿಯಾಗಿರುವ ಹಿರಿಯನು ಸ್ಥಳೀಕ ಕ್ಷೇತ್ರಕ್ಕೆ ತಕ್ಕದಾದ ಪೀಠಿಕೆಗಳನ್ನು ತಯಾರಿಸಲು ಪ್ರಚಾರಕರಿಗೆ ಸಹಾಯ ಮಾಡುತ್ತಾನೆ. ಸಲಹೆಗಳು ರೀಸನಿಂಗ್ ಪುಸ್ತಕದ 9-15 ಪುಟಗಳಲ್ಲಿ ಆಧರಿಸಿರಲಿ. ಸದ್ಯದ ಸಂಭಾಷಣಾ ವಿಷಯದೊಂದಿಗೆ ಅಥವಾ ಬೇರೆ ಕಾಲೋಚಿತ ವಿಷಯದೊಂದಿಗೆ ಉಪಯೋಗಿಸಬಹುದಾದ ಎರಡು ಯಾ ಮೂರು ಪೀಠಿಕೆಗಳನ್ನು ಚರ್ಚಿಸಿರಿ. ಎರಡು ಮನೆಮನೆಯ ಪ್ರಸಂಗಗಳನ್ನು ಅನುಭವಸ್ಥ ಪ್ರಚಾರಕನು ದೃಶ್ಯಮಾಡಲಿ. ಸಮಯವಿದ್ದ ಹಾಗೆ, ಮನೆಯವನ ಅಭಿರುಚಿಯನ್ನು ಆಕರ್ಷಿಸಿದ್ದ ಪೀಠಿಕೆಗಳ ಮೂಲ್ಯತೆಯನ್ನು ತೋರಿಸುವ ಸ್ಥಳೀಕ ಅನುಭವಗಳಿದ್ದರೆ ಸಂಕ್ಷೇಪವಾಗಿ ತಿಳಿಸಿರಿ.
ಸಂಗೀತ 129 (66) ಮತ್ತು ಸಮಾಪ್ತಿ ಪ್ರಾರ್ಥನೆ.
ಎಪ್ರಿಲ್ 22ರ ವಾರ
ಸಂಗೀತ 135 (72)
10 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆ. ಸೇವಾ ಏರ್ಪಾಡುಗಳನ್ನು ತಿಳಿಸಿರಿ. ಪತ್ರಿಕಾ ಸೇವೆಯಲ್ಲಿ ಉಪಯೋಗಿಸಬಹುದಾದ ಹೊಸ ಪತ್ರಿಕೆಗಳ ವಿಷಯವನ್ನು ಎತ್ತಿಹೇಳಿರಿ. ಸದ್ಯದ ನೀಡುವಿಕೆಯನ್ನು ಮಾಡಿದ್ದರಲ್ಲಿ ಅನುಭವಗಳಿದ್ದರೆ ತಿಳಿಸಬಹುದು. ಮೇ ತಿಂಗಳಲ್ಲಿ ಸಹಾಯಕ ಪಯನೀಯರ ಚಟುವಟಿಕೆಗಾಗಿ ಉತ್ತೇಜನ ಕೊಡಿರಿ.
15 ನಿ: “ಮೇ ತಿಂಗಳಿಗಾಗಿ ನಿಮ್ಮ ಯೋಜನೆಗಳೇನು?” ಸೇವಾ ಮೇಲ್ವಿಚಾರಕನಿಂದ ಭಾಷಣ. ಈ ವಿಶೇಷ ತಿಂಗಳ ಚಟುವಟಿಕೆಯನ್ನು ವೃದ್ಧಿಸುವ ವಿಧಾನಗಳನ್ನು—ವಾರ-ಮಧ್ಯೆಯ ಅಥವಾ ಸಂಜೆಯ ಸೇವೆಯನ್ನು—ಸೂಚಿಸಬಹುದು. ಪಯನೀಯರರು ಮತ್ತು ಬಲಿತ ಪ್ರಚಾರಕರು ಸ್ವಲ್ಪ ಅಳವಡಿಸುವಿಕೆಗಳನ್ನು ಮಾಡಿ, ಏರ್ಪಡಿಸಲ್ಪಟ್ಟ ಗುಂಪು-ಚಟುವಟಿಕೆಗೆ ಹೆಚ್ಚು ಬೆಂಬಲವನ್ನು ಕೊಡಬಲ್ಲರೋ?
20 ನಿ: “ಸುವಾರ್ತೆಯನ್ನು ನೀಡುವುದು—ಸಂತೋಷದಿಂದ.” ಪ್ರಶ್ನೋತ್ತರ ಚರ್ಚೆ. ಪಾರಾ 3ನ್ನು ಚರ್ಚಿಸುವಾಗ, ಬಲಿತ ಪ್ರಚಾರಕನು ಸಂಭಾಷಣೆಗಾಗಿ ವಿಷಯ ಅಥವಾ ರೀಸನಿಂಗ್ ಪುಸ್ತಕವನ್ನುಪಯೋಗಿಸಿ, ಹೊಸಬನಿಗೆ ಪ್ರಸಂಗ ತಯಾರಿಸಲು ಸಹಾಯ ಮಾಡುವುದನ್ನು ದೃಶ್ಯವನ್ನಾಗಿ ಮಾಡಲಿ.
ಸಂಗೀತ 126 (25) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 29ರ ವಾರ
ಸಂಗೀತ 168 (84)
10 ನಿ: ಸ್ಥಳೀಕ ತಿಳಿಸುವಿಕೆಗಳು. “ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ” ಇದರ ಮುಖ್ಯ ವಿಷಯಗಳನ್ನು ಎತ್ತಿಹೇಳಿರಿ. ಹಾಗೂ, ವಾರಾಂತ್ಯದ ಕ್ಷೇತ್ರ ಚಟುವಟಿಕೆಯಲ್ಲಿ ಪಾಲಿಗರಾಗಲು ಉತ್ತೇಜನ ಕೊಡಿರಿ.
15 ನಿ: “ಹೊಸ ಅಧಿವೇಶನ ಬಿಡುಗಡೆಗಳ ಪರಿಚಯ ಮಾಡಿಕೊಳ್ಳಿರಿ.” ಸಭೆಯೊಂದಿಗೆ ಚೂಪಾದ ಚರ್ಚೆ. ಪ್ರತೀ ಪ್ರಕಾಶನದಲ್ಲಿರುವ ಸ್ಥಳೀಕವಾಗಿ ಸಹಾಯಕಾರಿಯಾದ ಕೆಲವು ಮುಖ್ಯಾಂಶವನ್ನು ತಿಳಿಸಿರಿ. ಈ ಸಮಾಚಾರವನ್ನು ತಮ್ಮದಾಗಿ ಮಾಡಲು ಸಹೋದರರು ವಿಳಂಬಿಸಬಾರದು.
20 ನಿ: “ಶುಶ್ರೂಷೆಯಲ್ಲಿ ಪ್ರಗತಿ ಮಾಡುವುದು.” ಅನುಭವಸ್ಥ ಹಿರಿಯ ಮತ್ತು ಕೆಲವು ಸಮಯದಿಂದ ಸತ್ಯದಲ್ಲಿದ್ದರೂ ಪ್ರಗತಿಯನ್ನು ಮಾಡದ ಸಹೋದರನಾಗಿ ಅಭಿನಯಿಸುವವನ ನಡುವೆ ಚರ್ಚೆ. 3ನೇ ಪಾರಾದಲ್ಲಿ ಸೂಚಿತವಾದ ಪ್ರ್ಯಾಕ್ಟಿಸ್ ಸೆಶ್ಯನನ್ನು ಅವರು ಸಂಕ್ಷಿಪ್ತವಾಗಿ ದೃಶ್ಯಮಾಡಲಿ. ಪಾರಾ 4ನ್ನು ಚರ್ಚಿಸುವಾಗ, ಪಯನೀಯರ ಅಥವಾ ಬೇರೆ ಪರಿಣಾಮಕಾರಿ ಪ್ರಚಾರಕನು ಕಡಿಮೆ ಅನುಭವದ ಪ್ರಚಾರಕನಿಗೆ, ಸ್ಥಳೀಕ ಟೆರಿಟೆರಿಯಲ್ಲಿ ಆಗಿಂದಾಗ್ಯೆ ಬರುವ ಅಡಿಗ್ಡಳನ್ನು ಹೇಗೆ ನಿವಾರಿಸಬಹುದೆಂದು ತೋರಿಸಿಕೊಡುವುದನ್ನು ದೃಶ್ಯವಾಗಿ ಮಾಡಲಿ. ಚರ್ಚೆಯಲ್ಲಿ, ಆಗಸ್ಟ್ 1, 1985ರ ವಾಚ್ಟವರ್, ಪುಟ 15-20ರಲ್ಲಿ, ಹೃದಯವನ್ನು ತಲಪುವ ವಿಷಯವಾಗಿ ಕೊಡಲ್ಪಟ್ಟ ಸಲಹೆಗಳನ್ನು ಸೇರಿಸಿರಿ. ಜನರೊಂದಿಗೆ ಸಂಭಾಷಣೆ ಮಾಡುವುದರಲ್ಲಿ ಪ್ರಗತಿ ಮಾಡುವಂತೆ ಮತ್ತು ಅಭಿರುಚಿಯನ್ನು ಪುನಃಸಂದರ್ಶಿಸುವಂತೆ ನಿಶ್ಚಿತ ಯೋಜನೆ ಮಾಡುವರೇ ಎಲ್ಲರನ್ನು ಪ್ರೋತ್ಸಾಹಿಸುತ್ತಾ ಭಾಗವನ್ನು ಕೊನೆಗೊಳಿಸಿರಿ.
ಸಂಗೀತ 123 (63) ಮತ್ತು ಸಮಾಪ್ತಿ ಪ್ರಾರ್ಥನೆ.