ಜವಾಬ್ದಾರಿಕೆಯ ನಮ್ಮ ಸ್ವಂತ ಹೊರೆಯನ್ನು ಹೊತ್ತುಕೊಳ್ಳುವುದು
1 ಜವಾಬ್ದಾರಿಕೆ ಎಂಬ ವಿಚಾರವೇ ಇಂದಿನ ಜನರಿಗೆ ಒಂದು ಹೊರೆಯಾಗಿ ತೋರುತ್ತದೆ. ಅನೇಕರು ಅದರಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಾರೆ. ಫಲಿತಾಂಶವಾಗಿ, ಗಂಡಂದಿರು ಹೆಂಡತಿಯರನ್ನು ತ್ಯಜಿಸುತ್ತಾರೆ, ತಾಯಂದಿರು ಮಕ್ಕಳನ್ನು ತೊರೆಯುತ್ತಾರೆ, ಯುವಕರು ಶಾಲೆಯಿಂದ ಹೊರಬೀಳುತ್ತಾರೆ, ಮತ್ತು ನಾಗರಿಕರು ತೆರಿಗೆಗಳನ್ನು ತಪ್ಪಿಸಿಕೊಳ್ಳುತ್ತಾರೆ. ಬೇಜವಾಬ್ದಾರಿಯ ಕೃತ್ಯಗಳ ಪಟ್ಟಿಗೆ ಕೊನೆಯೇ ಇಲ್ಲ. ಜವಾಬ್ದಾರಿ ವ್ಯಕ್ತಿಯು ಭರವಸ ಯೋಗ್ಯನು, ತನ್ನ ನಡವಳಿಕೆಗಾಗಿ ಉತ್ತರಕೊಡಲು ಸಿದ್ಧಮನಸ್ಕನು ಮತ್ತು ಶಕ್ತನು. ಆದುದರಿಂದ, ದೇವರ ವಾಕ್ಯವು ಕ್ರೈಸ್ತರ ವಿಷಯದಲ್ಲಿ ಸ್ಪಷ್ಟವಾಗಿಗಿ, “ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಎಂದು ಹೇಳುತ್ತದೆ. (ಗಲಾ. 6:5) 1992ರ ಸೇವಾ ವರ್ಷದ ನಮ್ಮ ಸರ್ಕಿಟ್ ಸಮ್ಮೇಳನದ ಮುಖ್ಯ ವಿಷಯವು ಸಹಾ, “ಜವಾಬ್ದಾರಿಕೆಯ ನಮ್ಮ ಸ್ವಂತ ಹೊರೆಯನ್ನು ಹೊತ್ತುಕೊಳ್ಳುವದು” ಎಂದಿರುವುದು ಅದೆಷ್ಟು ಯಥೋಚಿತವು! ಈ ಸಮ್ಮೇಳನ ಮಾಲೆಯು 1992ರ ಜನವರಿಯಿಂದ ಪ್ರಾರಂಭಿಸುವುದು. ನಾವೆಲ್ಲರೂ ಅದಕ್ಕೆ ಹಾಜರಾಗಲು ನಿಶ್ಚಿತ ಏರ್ಪಾಡುಗಳನ್ನು ಮಾಡಬೇಕು.
2 ಭಾಷಣಗಳು, ಪ್ರಹಸನಗಳು, ದೃಶ್ಯಗಳು, ಅನುಭವಗಳು ಮತ್ತು ಇಂಟರ್ವ್ಯೂಗಳ ಮೂಲಕ ಈ ಉತ್ತಮ ಸರ್ಕಿಟ್ ಸಮ್ಮೇಳನವು, ಕ್ರೈಸ್ತರಾದ ನಮ್ಮೆಲ್ಲರಿಗೆ ಇರುವ ಹಲವಾರು ಜವಾಬ್ದಾರಿಕೆಗಳನ್ನು ನಮೂದಿಸುತ್ತದೆ. ಶನಿವಾರ ಅಪರಾಹ್ನ, ನಾಲ್ಕು-ಭಾಗದ ಒಂದು ಭಾಷಣಮಾಲೆಯು ನಾವೆಲ್ಲರೂ ನಮ್ಮ ಜವಾಬ್ದಾರಿಕೆಗಳನ್ನು ಸಂತೋಷದಿಂದ ಹೇಗೆ ನಿರ್ವಹಿಸಬಹುದೆಂದು ವಿವರಿಸುವದು. ನಮ್ಮ ಯುವ ಜನರಿಗೂ ಒಂದು ಜವಾಬ್ದಾರಿಕೆಯನ್ನು ಹೊರಲಿದೆ, ಮತ್ತು ಶನಿವಾರ ಮಧಾಹ್ನದಲ್ಲಿ ಸರ್ಕಿಟ್ ಮೇಲ್ವಿಚಾರಕರು ಕೊಡುವ ಭಾಷಣವು ವಿಶೇಷವಾಗಿ ಅವರಿಗೆ ಉದ್ದೇಶಿತವಾಗಿದೆ. ಶನಿವಾರದಂದು, ಹೊಸತಾಗಿ ಸಮರ್ಪಿತರಾದವರಿಗೆ ದೀಕ್ಷಾಸ್ನಾನ ಪಡೆಯುವ ಸಂದರ್ಭವೂ ಅಲ್ಲಿದೆ. ಸರ್ಕಿಟ್ ಸಮ್ಮೇಳನದಲ್ಲಿ ದೀಕ್ಷಾಸ್ನಾನವಾಗಲು ಯೋಜಿಸುವವರೆಲ್ಲರೂ ತಮ್ಮ ಅಧ್ಯಕ್ಷ ಮೇಲ್ವಿಚಾರಕನಿಗೆ ಇದನ್ನು ಸಾಕಷ್ಟು ಮುಂಚಿತವಾಗಿಯೇ ತಿಳಿಸುವುದಾದರೆ ಇದಕ್ಕಾಗಿ ತಯಾರಿಯನ್ನು ಮಾಡಲು ಸಾಧ್ಯವಾಗುವುದು.
3 ಭಾನುವಾರ ಬೆಳಿಗ್ಗೆ ಇನ್ನೊಂದು ನಾಲ್ಕು-ಭಾಗದ ಭಾಷಣ ಮಾಲೆಯು ಸಾರುವ ನಮ್ಮ ಕ್ರೈಸ್ತ ಜವಾಬ್ದಾರಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸುವುದು. ಅನಂತರ, ಭಾನುವಾರ ಮಧ್ಯಾಹ್ನ, “ದೇವರ ಹೊಸ ಲೋಕ—ಪ್ರವೇಶಿಸಲು ಯಾರು ಯೋಗ್ಯತೆ ಪಡೆಯುವರು?” ಎಂಬ ಶೀರ್ಷಿಕೆಯ ಬಹಿರಂಗ ಭಾಷಣವು ಜಿಲ್ಲಾ ಮೇಲ್ವಿಚಾರಕರಿಂದ ಕೊಡಲ್ಪಡುವುದು. ಈ ಭಾಷಣವನ್ನು ಕೇಳಲು ಎಲ್ಲಾ ಹೊಸಾಸಕರ್ತನ್ನು ಆಮಂತ್ರಿಸಲು ಎಚ್ಚರದಿಂದಿರ್ರಿ.
4 ಇದಕ್ಕೆ ಹಾಜರಾಗಲು ನಮ್ಮ ಕಾರ್ಯಾಧಿಗಳನ್ನು ಏರ್ಪಡಿಸಿಕೊಳ್ಳಲು ಮತ್ತು ಈ ಭರ್ಜರಿ ಎರಡು-ದಿನದ ಕಾರ್ಯಕ್ರಮದಿಂದ ಪೂರ್ಣವಾಗಿ ಪ್ರಯೋಜನ ಪಡೆಯಲು ನಾವೆಲ್ಲರೂ ಬಯಸುವೆವು. ನಿಮ್ಮ ಸಭೆಗಾಗಿ ನೇಮಿತವಾದ ಸಮ್ಮೇಳನ ಸ್ಥಳವನ್ನು ಮತ್ತು ತಾರೀಕನ್ನು ನಿಮ್ಮ ಸರ್ಕಿಟ್ ಮೇಲ್ವಿಚಾರಕರು ನಿಮಗೆ ತಿಳಿಸುವರು.