ದೇವರ ವಾಕ್ಯವನ್ನು ಸ್ವೀಕರಿಸುವುದು, ಅನ್ವಯಿಸುವುದು, ಮತ್ತು ಪ್ರಯೋಜನ ಪಡೆಯುವುದು
1 ಲಕ್ಷಗಟ್ಟಲೆ ಜನರ ಹತ್ತಿರ ಬೈಬಲಿನ ಒಂದು ಪ್ರತಿ ಇರುವುದಾದರೂ, ಅನೇಕರು ಅದನ್ನು ದೇವರ ವಾಕ್ಯವೆಂದು ಸ್ವೀಕರಿಸುವುದಿಲ್ಲ, ಹೆಚ್ಚಿನವರು ಅದರ ವಿವೇಕಭರಿತ ಬುದ್ಧಿವಾದವನ್ನು ಅನ್ವಯಿಸುವುದಿಲ್ಲ, ಮತ್ತು ಈ ರೀತಿ ಅದರಿಂದ ಪ್ರಯೋಜನ ಪಡೆಯುವುದಿಲ್ಲ. ಆದಾಗ್ಯೂ, ಯೆಹೋವನ ಜನರು ಇದು ದೇವರ ವಾಕ್ಯವೆಂದು ಮತ್ತು ಎಲ್ಲಾ ಸಂಗತಿಗಳಿಗೆ ಅದು ಪ್ರಯೋಜನಕಾರಿಯೆಂದು ನಿಜವಾಗಿಯೂ ನಂಬುತ್ತಾರೆ. (2 ತಿಮೊ. 3:16, 17) ಆದ್ದರಿಂದ, 1993 ರ ಸೇವಾ ವರ್ಷದ ಸರ್ಕೀಟ್ ಸಮ್ಮೇಳನದ ಕಾರ್ಯಕ್ರಮದ ಮೇಲಿಷ್ವಯವು “ದೇವರ ವಾಕ್ಯವನ್ನು ಸ್ವೀಕರಿಸುವುದು, ಅನ್ವಯಿಸುವುದು, ಮತ್ತು ಪ್ರಯೋಜನ ಪಡೆಯುವುದು” ಎಂದಾಗಿರುತ್ತದೆ.
2 ನಮ್ಮನ್ನು ಉತ್ತೇಜಿಸಲು, ದೇವರ ವಾಕ್ಯದೆಡೆಗೆ ನಮ್ಮ ಗಣ್ಯತೆಯನ್ನು ಗಾಢಗೊಳಿಸಲು ಮತ್ತು ನಮ್ಮ ಜೀವಿತದ ಪ್ರತಿಯೊಂದು ವಿಭಾಗಗಳಲ್ಲಿ ಅದನ್ನು ಹೆಚ್ಚು ಪೂರ್ಣವಾಗಿ ಅನ್ವಯಿಸಲು ನಮಗೆ ಸಹಾಯ ಮಾಡಲು ಅಲ್ಲಿ ಭಾಷಣಗಳು, ಪ್ರತ್ಯಕ್ಷಾಭಿನಯಗಳು (ಡೆಮಾನ್ಸ್ಟ್ರೇಶನ್ಸ್), ಪ್ರಹಸನಗಳು (ಸ್ಕಿಟ್ಸ್), ಅನುಭವಗಳು, ಮತ್ತು ಮುಖಾಮುಖಿ ಭೇಟಿಗಳು (ಇಂಟರ್ವ್ಯೂಸ್) ಇರುವುವು. ಮನೋರಂಜನೆ, ಸಹವಾಸ, ಮತ್ತು ಪ್ರಾಪಂಚಿಕತೆಗಳ ಸಂಬಂಧದಲ್ಲಿ ಕುಟುಂಬವೃತ್ತದೊಳಗೆ ಬುದ್ಧಿವಾದ ಮತ್ತು ಶಿಸ್ತುಪಾಲನೆಯನ್ನು ಶನಿವಾರದ ಮಧ್ಯಾಹ್ನದ ಕಾರ್ಯಕ್ರಮವು ಗಮನಿಸುವುದು. ನಾವು ಲೋಕದಿಂದ ಹೇಗೆ ಭಿನ್ನವಾಗಿರಬೇಕು ಮತ್ತು ಅದರ ಕೆಟ್ಟ ನಡಾವಳಿಯನ್ನು ಮತ್ತು ಅನಾದರದ ಯಾ ಹೊಲಸಾದ ಭಾಷೆಯನ್ನು ಅನುಸರಿಸಬಾರದು ಎಂಬುದನ್ನು ಅದು ತೋರಿಸುವುದು. ಇದಕ್ಕೆ ಕೂಡಿಸಿ, ಏಕ ಹೆತ್ತವರಿಗೆ ಮತ್ತು ತಂದೆಗಳಿಲ್ಲದ ಮಕ್ಕಳಿಗೆ ಪ್ರಯೋಜನವಾಗುವಂಥ ಪ್ರೋತ್ಸಾಹನೆಯನ್ನು ಒದಗಿಸಲಾಗುವುದು.
3 ಇದಲ್ಲದೆ, ವಿಷಯದ ಮೇಲೆ ಶಾಸ್ತ್ರೀಯ ಭಾಷಣವೊಂದನ್ನು ಕೇಳಿದ ನಂತರ, ಹೊಸತಾಗಿ ಸಮರ್ಪಿಸಿಕೊಂಡ ವ್ಯಕ್ತಿಗಳಿಗೆ ದೀಕ್ಷಾಸ್ನಾನ ಪಡೆಯುವ ಸಂದರ್ಭವು ಶನಿವಾರ ಇದೆ. ಸರ್ಕೀಟ್ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳಲು ಯೋಜಿಸುವವರು ಆದಷ್ಟು ಬೇಗನೆ ತಮ್ಮ ಇಚ್ಛೆಯನ್ನು ಸಭೆಯ ಅಧ್ಯಕ್ಷ ಮೇಲ್ವಿಚಾರಕರಿಗೆ ತಿಳಿಸುವುದರಿಂದ, ದೀಕ್ಷಾಸ್ನಾನದ ಅಭ್ಯರ್ಥಿಗಳಿಗಾಗಿ ಇರುವ ಪ್ರಶ್ನೆಗಳನ್ನು ಪರಾಮರ್ಶಿಸಲು ಇತರ ಹಿರಿಯರೊಂದಿಗೆ ಏರ್ಪಡಿಸಲು ಬೇಕಾಗುವಷ್ಟು ಸಮಯ ದೊರಕುವುದು.
4 ದೇವರ ವಾಕ್ಯಕ್ಕನುಸಾರ ನಮ್ಮನ್ನು ಸರಿಹೊಂದಿಸಿಕೊಳ್ಳುವುದರ ಮೂಲಕ ನಾವು ಸ್ವತಃ ಲೋಕದಿಂದ ಹೇಗೆ ವಿಶಿಷ್ಟವಾಗಿ ಭಿನ್ನರೆಂದು ತೋರಿಸಿಕೊಳ್ಳುವ ವಿಧಾನಗಳನ್ನು ಆದಿತ್ಯವಾರದ ಬೆಳಗ್ಗಿನ ಕಾರ್ಯಕ್ರಮವು ಪರೀಕ್ಷಿಸಲಿರುವುದು. ನಮ್ಮ ಬಾಹ್ಯತೋರಿಕೆಯ ಪ್ರಾಮುಖ್ಯತೆ ಮತ್ತು ನಮ್ಮ ಮನಸ್ಸನ್ನು ಭ್ರಷ್ಟಗೊಳಿಸುವುದನ್ನು ಹೇಗೆ ಹೋಗಲಾಡಿಸುವುದು ಎಂಬುದು ಪರೀಕ್ಷಿಸಲ್ಪಡುವ ವಿಷಯಗಳಲ್ಲಿ ಕೆಲವು ಆಗಿವೆ. ಅಪರಾಹ್ನದಲ್ಲಿ, ಜಿಲ್ಲಾ ಮೇಲ್ವಿಚಾರಕರು “ಬೈಬಲು ಅಧಿಕೃತವೆಂದು ಯಾವುದು ಗುರುತಿಸುತ್ತದೆ?” ಎಂಬ ಬಹಿರಂಗ ಭಾಷಣವನ್ನು ನೀಡಲಿರುವರು. ಈ ಉತ್ತಮ ಕಾರ್ಯಕ್ರಮಕ್ಕೆ ಎಲ್ಲಾ ಆಸಕ್ತ ಜನರನ್ನು ಆಮಂತ್ರಿಸಲು ನಾವು ಖಂಡಿತ ಮಾಡಿಕೊಂಡಿರಬೇಕು.
5 ಈ ಸರ್ಕೀಟ್ ಸಮ್ಮೇಳನದ ತಾರೀಕುಗಳು ಮತ್ತು ಸ್ಥಳವನ್ನು ನಿಮ್ಮ ಸರ್ಕೀಟ್ ಮೇಲ್ವಿಚಾರಕರು ನಿಮಗೆ ಒದಗಿಸುವರು ಮತ್ತು ದೇವರ ವಾಕ್ಯದ ಬುದ್ಧಿವಾದವನ್ನು ಸ್ವೀಕರಿಸುವಂತೆ, ಅನುಸರಿಸುವಂತೆ, ಮತ್ತು ಪ್ರಯೋಜನಪಡೆಯಲು ಸಾಧ್ಯವಾಗುವಂತೆ ಹಾಜರಾಗಲು ನಾವೆಲ್ಲರನ್ನು ಉತ್ತೇಜಿಸುತ್ತೇವೆ.—ಯಾಕೋ. 1:22-25.